ಐಸಿಸಿ ಚಾಟಿ ಬೆನ್ನಲ್ಲೇ ಬಾಂಗ್ಲಾ ಕತ್ತು ಕೊ*ಯ್ದ ಪಾಕಿಸ್ತಾನ – ಟಿ-20 ವಿಶ್ವಕಪ್ ಆಡಲು ರೆಡಿ!

ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡಿದ್ರಂತೆ ಅನ್ನೋ ಹಾಗೇ ಬಾಂಗ್ಲಾದೇಶವನ್ನ ಛೂ ಬಿಟ್ಟು ಬಿಟ್ಟಿಯಾಗಿ ಬಿಲ್ಡಪ್ ಕೊಟ್ಟಿದ್ದ ಪಾಕಿಸ್ತಾನ ಈಗ ತನ್ನ ನರಿ ಬುದ್ಧಿ ತೋರಿಸಿದೆ. ಕೊನೆಗೆ ನೌಟಂಕಿ ಆಟ ಆಡೋಕೆ ಹೋಗಿ ಐಸಿಸಿ ಬಳಿ ಸರಿಯಾಗೇ ಮಂಗಳಾರತಿ ಮಾಡಿಸ್ಕೊಂಡಿದೆ. ಟಿ-20 ವಿಶ್ವಕಪ್ ಆಡಲು ಬಾಂಗ್ಲಾದೇಶ ಭಾರತಕ್ಕೆ ಕಾಲಿಡಲ್ಲ ಅಂದಾಗ ಅವ್ರನ್ನ ಅರ್ಧ ಹಾಳು ಮಾಡಿದ್ದೇ ಪಾಕಿಸ್ತಾನ. ನಿಮ್ಮ ನಿರ್ಧಾರ ಕರೆಕ್ಟ್ ಆಗಿದೆ. ನಿಮಗೆ ಕಂಪ್ಲೀಟ್ ನಮ್ಮ ಸಪೋರ್ಟ್ ಇದೆ. ಬೇಕಿದ್ರೆ ನಿಮಗೋಸ್ಕರ ನಾವೂ ಟಿ-20 ವಿಶ್ವಕಪ್ನಿಂದ ಹೊರಬರ್ತೀವಿ ಅಂತಾ ಬೇಜಾನ್ ಬಿಲ್ಡಪ್ ಕೊಟ್ರು. ಅಯ್ಯೋ ನಮ್ಮ ಬೆನ್ನಿಗೆ ಪಾಕಿಸ್ತಾನ ಇದೆ ಅಂತಾ ಬಾಂಗ್ಲಾ ಕೂಡ ಬೇಜಾನ್ ಹಾರಾಡಿತ್ತು. ಅಲ್ಲಿನ ಕ್ರಿಕೆಟಿಗರು ವಿಶ್ವಕಪ್ ಆಡೋಣ ಅಂದ್ರೂ ಅವ್ರ ಮಾತಿಗೆ ಕಿಮ್ಮತ್ತು ಕೊಡದೇ ಟಿ-20 ವಿಶ್ವಕಪ್ನಿಂದಲೇ ಹೊರಬಿದ್ರು. ಆದ್ರೆ ಪಾಕ್ ಮಾತ್ರ ಈಗ ನೈಸಾಗಿ ಟೀಂ ಅನೌನ್ಸ್ ಮಾಡಿ ಟಿ-20 ವಿಶ್ವಕಪ್ಗೆ ರೆಡಿಯಾಗಿದೆ.
ಇದನ್ನೂ ಓದಿ : ಅಭಿಷೇಕ್ ಹಾಗೂ ಸೂರ್ಯಕುಮಾರ್ ಆರ್ಭಟ – ನ್ಯೂಜಿಲ್ಯಾಂಡ್ ವಿರುದ್ಧ ಟಿ20I ಸರಣಿ ಗೆದ್ದ ಟೀಂ IND
ಐಸಿಸಿ ಚಾಟಿಗೆ ಉಲ್ಟಾ ಹೊಡೆದ ಪಾಕಿಸ್ತಾನ!
ಌಕ್ಚುಲಿ ಬಾಂಗ್ಲಾದೇಶದಂತೆ ಪಾಕಿಸ್ತಾನ ಕೂಡ ನಾವು ವಿಶ್ವಕಪ್ ಆಡಲ್ಲ ಅನ್ನೋ ಥರ ರಾಗ ಎಳೀತಿದ್ರು. ಆದ್ರೆ ಐಸಿಸಿ ಮತದಾನದ ಮೂಲಕ, ವಿಶ್ವಕಪ್ ನಿಗದಿಯಂತೆ ನಡೆಯಲಿದೆ. ಯಾವ ಪಂದ್ಯಗಳನ್ನೂ ಶಿಫ್ಟ್ ಮಾಡಲ್ಲ ಅಂತಾ ಕ್ಲಿಯರ್ ಆಗೇ ಹೇಳಿತ್ತು. ಹಾಗೇ ಬಾಂಗ್ಲಾದೇಶದಂತೆ ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವುದರಿಂದ ಆರ್ಥಿಕ ದಂಡ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಮಾನತು ಸೇರಿದಂತೆ ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಅಂತಾ ವಾರ್ನಿಂಗ್ ಕೊಟ್ಟಿತ್ತು. ಹೀಗಾಗಿ ಐಸಿಸಿ ಮತ್ತು ಬಿಸಿಸಿಐ ಮುಂದೆ ನಮ್ದೇನು ನಡೆಯಲ್ಲ ಅಂತಾ ಗೊತ್ತಾದ್ಮೇಲೆ ಪಾಕ್ ಸೈಲೆಂಟ್ ಆಗಿದೆ. ಟೀಮ್ನೂ ಅನೌನ್ಸ್ ಮಾಡಿದೆ.
ಟಿ-20 ವಿಶ್ವಕಪ್ ಗೆ ಟೀಂ ಅನೌನ್ಸ್ ಮಾಡಿ ರೆಡಿಯಾದ ಪಾಕ್!
ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಗಾಗಿ ಪಾಕಿಸ್ತಾನ ಕೂಡ ಟೀಂ ಅನೌನ್ಸ್ ಮಾಡಿದೆ. ಈ ಬಾರಿ ಸಲ್ಮಾನ್ ಅಲಿ ಅಘಾ ತಂಡವನ್ನ ಲೀಡ್ ಮಾಡಲಿದ್ದಾರೆ. ಕಳೆದ ವಿಶ್ವಕಪ್ ತಂಡಕ್ಕೆ ಹೋಲಿಸಿದರೆ ಈ ಬಾರಿ ಪಾಕಿಸ್ತಾನ ತಂಡದಲ್ಲಿ 7 ಬದಲಾವಣೆಗಳನ್ನು ಮಾಡಲಾಗಿದೆ. ಕಳೆದ ಟಿ20 ವಿಶ್ವಕಪ್ ವೇಳೆ ಗುಂಪು ಹಂತದಲ್ಲಿ ಪಾಕಿಸ್ತಾನ ತಂಡ ಒಟ್ಟು 4 ಪಂದ್ಯಗಳನ್ನು ಆಡಿತ್ತು. ಇದ್ರಲ್ಲಿ 2 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಭಾರತ ಮತ್ತು ಅಮೆರಿಕ ತಂಡಗಳು ಪಾಕ್ಗೆ ಸೋಲಿನ ರುಚಿ ತೋರಿಸಿದ್ವು. ಹೀಗಾಗಿ ಈ ಸಲನಾದ್ರೂ ನಾಕೌಟ್ ಸುತ್ತಿಗೆ ಕಾಲಿಡೋಣ ಅಂತಾ ಪ್ಲ್ಯಾನ್ ಮಾಡಿದ್ದಾರೆ. ಆದ್ರೆ ಪಾಕಿಸ್ತಾನವನ್ನ ನಂಬಿ ಮುಂದೆ ಕಾಲಿಟ್ಟಿದ್ದ ಬಾಂಗ್ಲಾ ಟೂರ್ನಿಯಿಂದ ಹೊರ ಬೀಳೋದು ಅಲ್ದೇ ಕೋಟಿ ಕೋಟಿ ನಷ್ಟ ಅನುಭವಿಸಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ 240 ಕೋಟಿ ರೂ. ಫೈನಾನ್ಶಿಯಲ್ ಲಾಸ್ ಆಗಿದೆ. ಒಟ್ನಲ್ಲಿ ಪಾಕಿಸ್ತಾನವನ್ನ ನಂಬಿ ಬಾಂಗ್ಲಾದೇಶ ಈಗ ಇಂಗು ತಿಂದ ಮಂಗನಂತಾಗಿದೆ. ಆದ್ರೆ ಪಾಕ್ ಮಾತ್ರ ಟಿ-20 ವಿಶ್ವಕಪ್ಗೆ ರೆಡಿಯಾಗ್ತಿದ್ದು ಸರಿಯಾಗೇ ಚಮಕ್ ಕೊಟ್ಟಿದೆ.

ನೋಡಿರಿ

