ಬೌಂಡರಿ ಗೆರೆ ವಿಚಾರದಲ್ಲಿ ಪಾಕಿಸ್ತಾನ ತಂಡದ ಕಳ್ಳಾಟ – ಎರಡೂ ಪಂದ್ಯಗಳಲ್ಲೂ ಪಾಕ್ ಮೋಸದಾಟ?

ಬೌಂಡರಿ ಗೆರೆ ವಿಚಾರದಲ್ಲಿ ಪಾಕಿಸ್ತಾನ ತಂಡದ ಕಳ್ಳಾಟ – ಎರಡೂ ಪಂದ್ಯಗಳಲ್ಲೂ ಪಾಕ್ ಮೋಸದಾಟ?

2023ರ ವಿಶ್ವಕಪ್‌ ಪಂದ್ಯಕ್ಕಿಂತ ಹೆಚ್ಚಾಗಿ ಬೇರೆ ವಿಚಾರದಲ್ಲಿ ಪಾಕಿಸ್ತಾನ ತಂಡ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.  ನೆದರ್ಲೆಂಡ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲಿನ ದವಡೆಯಿಂದ ಸ್ಪಲ್ಪದರಲ್ಲೇ ಪಾರಾಗಿತ್ತು. ಅಲ್ಲಿಂದ ಶ್ರೀಲಂಕಾ ವಿರುದ್ಧವೂ ಬಾಬರ್ ಆಝಂ ಪಡೆ ಗೆಲುವು ಸಾಧಿಸಿದೆ. ಇದರ ಜೊತೆಗೆ ವಿವಾದವೊಂದನ್ನು ತನ್ನ ಬೆನ್ನಿಗೆ ಅಂಟಿಸಿಕೊಂಡಿದೆ.

ಇದನ್ನೂ ಓದಿ: ಎರಡನೇ ಗೆಲುವಿಗೆ ಟೀಮ್ ಇಂಡಿಯಾ ಸಜ್ಜು – ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಲಿದೆ ಟೀಂ ಇಂಡಿಯಾ

ಪಾಕ್ ತಂಡದ ಆಟಗಾರರು ಬೌಂಡರಿ ಗೆರೆಯ ವಿಚಾರದಲ್ಲಿ ಕಳ್ಳಾಟವಾಡುತ್ತಿದ್ದಾರೆ ಎಂಬ ಚರ್ಚೆ ಇದೀಗ ಜೋರಾಗಿಯೇ ಕೇಳಿಬರುತ್ತಿದೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಿದೆ. ಲಂಕಾ ಇನ್ನಿಂಗ್ಸ್​ನ 29ನೇ ಓವರ್​ನಲ್ಲಿ ಹಸನ್ ಅಲಿ ಎಸೆತದಲ್ಲಿ ದೊಡ್ಡ ಶಾಟ್ ಆಡಿದ ಮೆಂಡಿಸ್ ಡೀಪ್ ಮಿಡ್ ವಿಕೆಟ್​ನ ಬೌಂಡರಿ ಲೈನ್ ಬಳಿ ಕ್ಯಾಚಿತ್ತು ಔಟಾದರು. ಇಮಾಮ್ ಉಲ್ ಹಕ್ ಈ ಕ್ಯಾಚ್ ಹಿಡಿದರು. ಆದರೆ ಇಮಾಮ್ ಕ್ಯಾಚ್ ಹಿಡಿದು ನೆಲಕ್ಕೆ ಉರುಳಿದ ವೇಳೆ ಕಂಡು ಬಂದ ದೃಶ್ಯ ಪಾಕ್ ಆಟಗಾರರು ಮೋಸದಾಟ ಆಡುತ್ತಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು. ವಾಸ್ತವವಾಗಿ, ಇಮಾಮ್ ಕ್ಯಾಚ್ ಹಿಡಿದು ನೆಲಕ್ಕುರುಳಿದಾಗ ಅವರು ಬೌಂಡರಿ ಹಗ್ಗದ ಗುರುತನ್ನು ಸ್ಪರ್ಶಿಸುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹೀಗಾಗಿ ಯಾರೋ ಬೌಂಡರಿ ಲೈನ್ ಅನ್ನು ಹಿಂದಕ್ಕೆ    ಸರಿಸಿದಂತೆ ತೋರುತ್ತಿತ್ತು. ಆ ಬಳಿಕ ಇಮಾಮ್ ಹಿಡಿದ ಕ್ಯಾಚ್​ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೀಲ್ಡಿಂಗ್‌ನಲ್ಲಿ ಪಾಕಿಸ್ತಾನ ತಂಡ ಕಳ್ಳಾಟ ಆಡುತ್ತಿದ್ದೆ ಎಂದು ಟ್ವಿಟರ್‌ನಲ್ಲಿ ಅನೇಕ ಬಳಕೆದಾರರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಪಂದ್ಯದಲ್ಲೂ ಇದೇ ಅನುಮಾನ ವ್ಯಕ್ತವಾಗಿತ್ತು. ಆ ಪಂದ್ಯದಲ್ಲೂ ಇದೇ ರೀತಿಯ ಫೋಟೋಗಳು ವೈರಲ್ ಆಗಿದ್ದವು. ಹೀಗಾಗಿ ಇದೀಗ ಪಾಕ್ ಆಟಗಾರರು ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದಾರೆಯೇ ಅಥವಾ ಐಸಿಸಿ ನಿಯಮವನ್ನು ಪಾಲಿಸುವ ಸುಲವಾಗಿ ಮೈದಾನದ ಸಿಬ್ಬಂದಿಯೇ ಬೌಂಡರಿ ಗೆರೆಯನ್ನು ಹಿಂದಕ್ಕೆ ಸರಿಸಿದರೆ ಅನ್ನೋ ಚರ್ಚೆ ಶುರುವಾಗಿದೆ.

Sulekha