ಭಾರತಕ್ಕೆ ಬಂದು ಬಿರಿಯಾನಿ ಬಾರಿಸಿದ್ದೇ ಪಾಕ್ ಟೀಮ್ ಸಾಧನೆ – ಸೋತಿದ್ದಕ್ಕೆ ಕಾರಣ ಕೇಳಿದರೆ ಬಾಲ್, ಪಿಚ್ ಎಲ್ಲಾ ಡೊಂಕು ಅಂತಾ ಪಾಕ್ ಕೊಂಕು..!
ಕುಣಿಯೋಕೆ ಬಾರದವರಿಗೆ ನೆಲ ಡೊಂಕಾದ್ರೆ, ಆಡೋಕೆ ಬಾರದ ಪಾಕಿಸ್ತಾನಿಗಳಿಗೆ ಬಾಲ್, ಪಿಚ್ ಎಲ್ಲವೂ ಡೊಂಕಾಗಿದೆ. ಪಾಕಿಸ್ತಾನದ ಕ್ರಿಕೆಟ್ ಯಾವ ಪರಿಸ್ಥಿತಿಗೆ ತಲುಪಿದೆ ಅನ್ನೋದಕ್ಕೆ ಅವರ ಸ್ಟೇಟ್ಮೆಂಟ್ಗಳೇ ಸಾಕ್ಷಿ. ಸೋತು ಸುಣ್ಣವಾದರೂ ಕೂಡಾ ಪಾಕಿಸ್ತಾನ ಕ್ರಿಕೆಟ್ ಟೀಮ್‌ಗೆ ಮಾತ್ರ ಇನ್ನೂ ಬುದ್ದಿ ಬಂದಿಲ್ಲ.
ಇದನ್ನೂ ಓದಿ: ಸೋತ ಪಾಕಿಸ್ತಾನ ಪರವಾಗಿ Sorry ಕೇಳಿದ ಅಬ್ದುಲ್ಲಾ ಶಫೀಕ್ – ಪಾಕ್ ತಂಡದ ಫಿಟ್‌ನೆಸ್ ಬಗ್ಗೆ ಮಾಜಿ ನಾಯಕ ವಾಸಿಂ ಅಕ್ರಮ್ ಟೀಕೆ
ಪಾಕಿಸ್ತಾನ ತಂಡ ಭಾರತಕ್ಕೆ ಬಂದಾಗಿನಿಂದಲೂ ಅವರ ಕೋಚ್ ಮತ್ತು ಅಲ್ಲಿನ ಮಾಜಿ ಕ್ರಿಕೆಟಿಗರು ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಭಾರತದ ವಿರುದ್ಧ ಹೀನಾಯವಾಗಿ ಸೋತಾಗ ಪಾಕ್ ಕೋಚ್ ಮಿಕ್ಕಿ ಆರ್ಥರ್, ಇದು ಐಸಿಸಿ ಟೂರ್ನಿಯಂತೆ ಕಾಣ್ತಿಲ್ಲ. ಬಿಸಿಸಿಯ ಟೂರ್ನಿಯಂತಿದೆ.. ಸ್ಟೇಡಿಯಂನಲ್ಲಿ ಪಾಕಿಸ್ತಾನದ ಹಾಡು ಹಾಕಿಲ್ಲ.. ಪಿಚ್ ಸರಿ ಇರಲಿಲ್ಲ ಅಂತೆಲ್ಲಾ ಪುಂಗಿ ಊದಿದ್ರು. ಅಷ್ಟೇ ಅಲ್ಲ, ಈಗ ಮತ್ತೊಂದು ಕಾರಣ ಕೂಡ ಕೊಟ್ಟಿದ್ದಾರೆ. ಪಾಕಿಸ್ತಾನದ ಕಳಪೆ ಆಟಕ್ಕೆ ಪಾಕ್ ಟೀಂಗೆ ನೀಡಲಾಗಿರುವ ಟೈಟ್ ಸೆಕ್ಯೂರಿಟಿ ಕಾರಣವಂತೆ. ಭಾರಿ ಭದ್ರತೆಯಿಂದಾಗಿ ಪಾಕಿಸ್ತಾನ ಕ್ರಿಕೆಟಿಗರಿಗೆ ಕೊರೊನಾ ಟೈಮ್ನಲ್ಲಿದ್ದೀವೊ ಅನ್ನೋ ಫೀಲ್ ಬಂದಿತ್ತಂತೆ. ಯಾಕಂದ್ರೆ ಪಾಕಿಸ್ತಾನ ಕ್ರಿಕೆಟಿಗರು ಮ್ಯಾಚ್ ಮುಗಿದ್ಲೇಲೆ ಹೋಟೆಲ್ ಸೇರಿದ್ದರು. ಆ ನಂತರ ಹೊರಗೆ ಸುತ್ತಾಡಲು ಅವಕಾಶವೇ ಸಿಕ್ಕಿಲ್ಲ. ಸಾಮಾನ್ಯವಾಗಿ ಪಾಕ್ ಕ್ರಿಕೆಟಿಗರು ಮ್ಯಾಚ್ ಇಲ್ಲದೇ ಇದ್ದಾಗ ಹೊರಗಡೆ ರೌಂಟ್ಸ್ ಹೊಡೀತಾರೆ. ಆದ್ರೆ ಭಾರತದಲ್ಲಿ ಎಲ್ಲೂ ಹೋಗೋಕೆ ಅವಕಾಶ ಸಿಕ್ಕಿಲ್ಲ. ಇದು ಪಾಕ್ ಪ್ಲೇಯರ್ಸ್ಗಳ ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗಿದೆ ಅಂತಾ ಪಾಕಿಸ್ತಾನದ ಕೋಚ್ ಮಿಕ್ಕ ಆರ್ಥರ್ ಹೇಳಿದ್ದಾರೆ.
ಪಾಕಿಸ್ತಾನ ಮಾತ್ರವಲ್ಲ. ಟೀಂ ಇಂಡಿಯಾ ಆಟಗಾರರು ಕೂಡ ಹೋಟೆಲ್ನಿಂದ ಹೊರಗೆ ಎಲ್ಲೂ ಹೋಗ್ತಿಲ್ಲ. ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಮ್ಯಾಚ್ ಬಳಿಕ ಮರುದಿನ ರಾಹುಲ್ ದ್ರಾವಿಡ್ ಸೇರಿದಂತೆ ಟೀಂ ಇಂಡಿಯಾದ ಕೋಚಿಂಗ್ ಸ್ಟಾಫ್ ಮೆಂಬರ್ಸ್ ಹಿಮಾಚಲದಲ್ಲಿರುವ ಬೆಟ್ಟವೊಂದಕ್ಕೆ ಟ್ರೆಕ್ಕಿಂಗ್ ಹೋಗಿದ್ರು. ಆದ್ರೆ, ಆಟಗಾರರಿಗೆ ಅವಕಾಶ ನೀಡಿರಲಿಲ್ಲ. ಎಲ್ಲರೂ ಹೋಟೆಲ್ ರೂಮ್ನಲ್ಲೇ ಇದ್ರು. ಮ್ಯಾಚ್ ಸೋತಿದ್ದಕ್ಕೆ ಹೊರಗೆ ಬಿಟ್ಟಿಲ್ಲ, ಸೆಕ್ಯೂರಿಟಿ ಜಾಸ್ತಿಯಾಯ್ತು ಅನ್ನೋದೆಲ್ಲಾ ಕಾರಣವಲ್ಲ. ಹೊರಗೆ ಬಿಟ್ಟಿಲ್ಲ ಅಂದ್ರೇನು. ಪಾಕ್ ಪ್ಲೇಯರ್ಸ್ಗಳು ಹೋದಲ್ಲೆಲ್ಲಾ ಹೊರಗಡೆಯಿಂದ ಬಿರಿಯಾನಿ ಆರ್ಡರ್ ಮಾಡಿ ಹೋಟೆಲ್ಗೆ ತರಿಸಿಕೊಂಡು ಬಾರಿಸ್ತಿದ್ದಾರೆ. ಪಾಕಿಸ್ತಾನಿಗಳ ಕಳಪೆ ಆಟಕ್ಕೆ ರಿಯಲ್ ರೀಸನ್ ಬಿರಿಯಾನಿ ತಿಂದಿದ್ದೇ ಜಾಸ್ತಿಯಾಗಿರ್ಬೇಕು.
ಇದಿಷ್ಟೇ ಅಲ್ಲ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜ ಹೊಸ ರಾಗ ಎಳೆದಿದ್ದಾರೆ. ಈ ಬಾರಿಯ ವರ್ಲ್ಡ್ಕಪ್ನಲ್ಲಿ ಟೀಂ ಇಂಡಿಯಾ ಬೌಲರ್ಸ್ ಯಾವ ರೀತಿ ಪರ್ಫಾಮೆನ್ಸ್ ನಿಡ್ತಾ ಇದ್ದಾರೆ ಅನ್ನೋದು ನಿಮಗೆ ಗೊತ್ತೇ ಇದೆ. ಇದೀಗ ನಮ್ಮ ಬೌಲರ್ಸ್ಗಳ ಬಗ್ಗೆಯೂ ಪಾಕಿಸ್ತಾನಿಗಳಿಗೆ ಡೌಟ್ ಶುರುವಾಗಿದೆ. ಐಸಿಸಿ ಮತ್ತು ಬಿಸಿಸಿಐ ಟೀಂ ಇಂಡಿಯಾಗೆ ಫೇವರ್ ಆಗಿದೆ. ಭಾರತದ ಬೌಲರ್ಸ್ಗಳಿಗೆ ಡಿಫರೆಂಟ್ ಬಾಲ್ಗಳನ್ನ ನೀಡಲಾಗ್ತಿದೆ. ಹೀಗಾಗಿ ಸಿರಾಜ್, ಶಮಿಯ ಬಾಲ್ಗಳು ಭಾರಿ ಸ್ವಿಂಗ್ ಆಗ್ತಿವೆ. ಅಷ್ಟೊಂದು ವಿಕೆಟ್ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಬೇಕು ಅಂತಾ ಪಾಕ್ ಮಾಜಿ ಕ್ರಿಕೆಟಿಗ ಹಸನ್ ರಾಜ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, 7-8 ಕ್ಲೋಸ್ ಡಿಆರ್ಎಸ್ ಕಾಲ್ಗಳು ಭಾರತದ ಫೇವರ್ ಆಗಿ ನೀಡಲಾಗಿದೆ ಅಂತಾನೂ ಹೇಳಿದ್ದಾರೆ. ಆದ್ರೆ ಪಾಕ್ ಮಾಜಿ ಕ್ರಿಕೆಟಿಗನ ಹೇಳಿಕೆಗೆ ಪಾಕಿಸ್ತಾನದವರೇ ಆದ ವಾಸಿಂ ಅಕ್ರಂ ಕಿಡಿ ಕಾರಿದ್ದಾರೆ. ಇಂಥಾ ಹೇಳಿಕೆಗಳನ್ನ ನೀಡಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮರ್ಯಾದೆ ತೆಗೆಯಬೇಡಿ ಅಂತಾ ಹಸನ್ ರಾಜಾಗೆ ಸಲಹೆ ನಿಡಿದ್ದಾರೆ. ಅಂತೂ ಪಾಕಿಸ್ತಾನದ ಕ್ರಿಕೆಟ್ ಯಾವ ಪರಿಸ್ಥಿತಿಗೆ ತಲುಪಿದೆ ಅನ್ನೋದಕ್ಕೆ ಅವರ ಸ್ಟೇಟ್ಮೆಂಟ್ಗಳೇ ಸಾಕ್ಷಿ. ಕುಣಿಯೋಕೆ ಬಾರದವರಿಗೆ ನೆಲ ಡೊಂಕಾದ್ರೆ, ಆಡೋಕೆ ಬಾರದ ಪಾಕಿಸ್ತಾನಿಗಳಿಗೆ ಬಾಲ್, ಪಿಚ್ ಎಲ್ಲವೂ ಡೊಂಕಾಗಿದೆ.