ಸೋಲಿನಲ್ಲೂ ದಾಖಲೆ ಬರೆದ ಪಾಕಿಸ್ತಾನ ಟೀಮ್ – ಟಿ20 ಪಂದ್ಯ ಸೋತ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನವೇ ನಂಬರ್ ಒನ್

ಸೋಲಿನಲ್ಲೂ ದಾಖಲೆ ಬರೆದ ಪಾಕಿಸ್ತಾನ ಟೀಮ್ – ಟಿ20 ಪಂದ್ಯ ಸೋತ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನವೇ ನಂಬರ್ ಒನ್

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ್ ಹ್ಯಾಟ್ರಿಕ್ ಸೋಲು ಕಂಡಿದೆ. ಜೊತೆಗೆ ಈ ವರ್ಷ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ತಂಡ ಎಂಬ ಕೆಟ್ಟ ದಾಖಲೆಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದೆ. 2024 ರಲ್ಲಿ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ ಈಗ ನಂಬರ್ ಒನ್ ಪ್ಲೇಸ್‌ನಲ್ಲಿದೆ.

ಇದನ್ನೂ ಓದಿ: RCB ಪ್ಲೇಯಿಂಗ್ 11 ಸ್ಲಾಟ್ ಫಿಕ್ಸ್ – ಓಪನರ್ TO ಡೆತ್ ಓವರ್ ಬೌಲರ್

ಈ ವರ್ಷ ಪಾಕಿಸ್ತಾನ ತಂಡ ಒಟ್ಟು 22 ಟಿ20 ಪಂದ್ಯಗಳನ್ನಾಡಿದೆ. ಗೆದ್ದಿರುವುದು ಮಾತ್ರ 7 ಮ್ಯಾಚ್​ಗಳು. ಇನ್ನು 2 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿವೆ. ಇನ್ನುಳಿದ 13 ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಪಾಕ್ ಪಡೆ ಈ ವರ್ಷ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ಪೂರ್ಣ ಸದಸ್ಯ ತಂಡ ಎನಿಸಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಪಾಕಿಸ್ತಾನ ಸೋತರೂ, ತಂಡದ ಮಾಜಿ ನಾಯಕ ಬಾಬರ್ ಆಝಂ, ವಿರಾಟ್ ಕೊಹ್ಲಿಯ ಅಂತರರಾಷ್ಟ್ರೀಯ ಟಿ20 ರನ್ ದಾಖಲೆಯನ್ನು ಮುರಿದರು. ಆಸೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 41 ರನ್‌ಗಳ ಇನ್ನಿಂಗ್ಸ್‌ ಆಡಿದ ಬಾಬರ್, ಇದೀಗ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪದಲ್ಲಿ ಬಾಬರ್ ಇದುವರೆಗೆ 4192 ರನ್ ಆಗಿದ್ದು, ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದೆ ಹಾಕಿದ್ದಾರೆ. ಕೊಹ್ಲಿ ಟಿ20ಯಲ್ಲಿ ಒಟ್ಟು 4188 ರನ್ ಗಳಿಸಿದ್ದಾರೆ.

suddiyaana