ಫಸ್ಟ್ ಬಿಲ್ಡಪ್.. ಈಗ ಶೇಪ್ ಔಟ್ – PAK ಸೋಲ್ತಿದ್ದಂತೆ ಕಾಲ್ಕಿತ್ತ ನಖ್ವಿ
ಪಾಕಿಸ್ತಾನ ಈಗ ಫುಲ್ ಟ್ರೋಲ್!

ಕ್ರಿಕೆಟ್ ಲೋಕದ ಗ್ರೇಟೆಸ್ಟ್ ರೈವಲ್ರಿ ಅಂದ್ರೆ ಇಂಡಿಯಾ ವರ್ಸಸ್ ಪಾಕಿಸ್ತಾನ ಮ್ಯಾಚ್ ಅಂತಾರೆ. ಆದ್ರೆ ಪಾಕಿಸ್ತಾನಿಯರು ಆಡೋ ರೀತಿ ನೋಡಿದ್ರೆ ಗಲ್ಲಿ ಕ್ರಿಕೆಟರ್ಸ್ಗಿಂತ ಕಡೆಯಾಗಿದೆ. ಗೆಲ್ಲೋದ್ ಇರ್ಲಿ ಅಟ್ಲೀಸ್ಟ್ ಫೈಟ್ ಆದ್ರೂ ಕೊಡ್ತಾರಾ ಅಂದ್ರೆ ಅದೂ ಇಲ್ಲ. ಪಂದ್ಯಕ್ಕೂ ಮುನ್ನ ಬೇಜಾನ್ ಬಿಲ್ಡಪ್ ಕೊಡ್ತಿದ್ದ ಪಾಕಿಸ್ತಾನ ಈಗ ಫುಲ್ ಟ್ರೋಲ್ ಆಗ್ತಿದೆ. ಒಂದ್ಕಡೆ ಪಿಸಿಬಿ ಅಧ್ಯಕ್ಷ ಸ್ಟೇಡಿಯಮ್ನಿಂದ ಓಡಿ ಹೋದ್ರೆ ಅತ್ತ ಫ್ಯಾನ್ಸ್ ಅಂತೂ ಗೊಳೋ ಅಂತಾ ಅಳ್ತಿದ್ದಾರೆ.
ಇದನ್ನೂ ಓದಿ : ದ್ವಿಶತಕ ಸಿಡಿಸಿದ ದೇವದತ್ ಪಡಿಕ್ಕಲ್ – ಸೆಂಚುರಿ ಹೊಡೆದು ಅಬ್ಬರಿಸಿದ ಕೆ.ಎಲ್ ರಾಹುಲ್
ಭಾನುವಾರ ನಡೆದ ಇಂಡೋ-ಪಾಕ್ ಮ್ಯಾಚ್ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಯಾಕಂದ್ರೆ ಪಾಕಿಸ್ತಾನ ಬಾಯ್ಕಾಟ್ ನಾಟಕ ಮಾಡಿ ಆಮೇಲೆ ಐಸಿಸಿ ಹತ್ರ ಹಣ ಕೇಳಿ ಮತ್ತೆ ಮ್ಯಾಚ್ ಆಡ್ತೀವಿ ಅಂತಾ ಬಂದಿದ್ರು. ಜೊತೆಗೆ ಭಾರತಕ್ಕೆ ಈ ಸಲ ಸೋಲಿನ ರುಚಿ ತೋರಿಸ್ತೀವಿ ಅಂತೆಲ್ಲಾ ಬಡಾಯಿ ಕೊಚ್ಕೊಂಡಿತ್ತು. ಆದ್ರೆ ಮೈದಾನದದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಹಿಗ್ಗಾಮುಗ್ಗಾ ಹೊಡೆಸ್ಕೊಂಡ್ರು. ಪವರ್ಪ್ಲೇನಲ್ಲೇ ಪವರ್ ಕಳ್ಕೊಂಡ್ರು.
ಭಾರತದ ವಿರುದ್ಧ ಹೀನಾಯ ಸೋಲು.. ಪಾಕಿಸ್ತಾನ ಫುಲ್ ಟ್ರೋಲ್!
ಕೊಲೊಂಬೊದಾ ಪ್ರೇಮದಾಸ ಸ್ಟೇಡಿಯಮ್ನಲ್ಲಿ ನಡೆದ ಇಂಡೋಪಾಕ್ ಫೈಟ್ನಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಬರೋಬ್ಬರಿ 61 ರನ್‌ಗಳ ಬಿಗ್ ಮಾರ್ಜಿನ್ನಿಂದ ಗೆದ್ದು ಬೀಗಿದೆ. ಭಾರತ ನೀಡಿದ 176 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಪಾಕ್ ಕೇವಲ 114 ರನ್ಗಳಿಗೆ ಆಲೌಟ್ ಆಯ್ತು. ಇಷ್ಟೊಂದು ಕೆಟ್ಟದಾಗಿ ಸೋಲೋ ಬದ್ಲು ಬಾಯ್ಕಾಟ್ ಮಾಡಿದ್ರೇ ಒಳ್ಳೇದಿತ್ತು ಅಂತಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ಟೀಸ್ ಮಾಡಿದ್ದಾರೆ. ಌಂಡ್ ಗೇಮ್ ಆರಂಭವಾದಾಗ ಫುಲ್ ಜೋಶ್ನಲ್ಲಿದ್ದ ಪಾಕ್ ಫ್ಯಾನ್ಸ್ ಸೋಲೋ ಹಂತಕ್ಕೆ ಬಂದಾಗ ಗೋಳಾಡಿದ್ದಾರೆ. ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲೋ ನೋ ಶೇಕ್ ಹ್ಯಾಂಡ್ ಪಾಲಿಸಿ ಕಂಟಿನ್ಯೂ ಆಯ್ತು. ಟಾಸ್ ಆದ್ಮೇಲೆ ಕ್ಯಾಪ್ಟನ್ಸ್ ಕೈಕುಲುಕಲಿಲ್ಲ. ಆಫ್ಟರ್ ಮ್ಯಾಚ್ ಕೂಡ ಉಭಯ ಆಟಗಾರರ ನಡುವೆ ಶೇಕ್ ಹ್ಯಾಂಡ್ ನಡೀಲಿಲ್ಲ.
ಒಂದ್ಕಡೆ ಆನ್ ಫೀಲ್ಡ್ನಲ್ಲಿ ಆಟಗಾರರು ಕೈಕುಲುಕದೇ ಮ್ಯಾಚ್ ಹೀಟಪ್ ಆಗ್ತಿದ್ರೆ ಇತ್ತ ಫ್ಯಾನ್ಸ್ ಕೂಡ ಫುಲ್ ಜೋಶ್ನಲ್ಲೇ ತಮ್ಮ ತಮ್ಮ ಟೀಮ್ಗಳಿಗೆ ಸಪೋರ್ಟ್ ಮಾಡ್ತಿದ್ರು. ಅದ್ರಲ್ಲೂ ಫಸ್ಟ್ ಭಾರತ ಬ್ಯಾಟಿಂಗ್ ಮಾಡಿ ವಿಕೆಟ್ಸ್ ಬೀಳ್ತಿದ್ರೆ ಆಲ್ರೆಡಿ ಮ್ಯಾಚ್ ಗೆದ್ದೇ ಬಿಟ್ವಿ ಅನ್ನೋ ಥರ ಬೇಜಾನ್ ಹಾರಾಡ್ತಿದ್ರು. ಏಷ್ಯಾಕಪ್ನಲ್ಲಿ ಪಾಕಿಗಳಿಗೆ ಅಟ್ಟಾಡಿಸಿ ಹೊಡೆದಿದ್ದ ಅಭಿಷೇಕ್ ಶರ್ಮಾ ಈ ಸಲ ವಿಶ್ವಕಪ್ನಲ್ಲಿ ಡಕ್ಔಟ್ ಆದ್ರು.
ಪಾಕಿಸ್ತಾನಿಯರಿಗೆ ಸ್ವಲ್ಪ ಖುಷಿ ಪಡೋಕೆ ಕಾರಣ ಆಗಿದ್ದು ಅಭಿಷೇಕ್ ಶರ್ಮಾ ಔಟ್ ಆಗಿದ್ದು. ಆಮೇಲೆ ಅವ್ರಿಗೆ ಖುಷಿಯಾಗೋ ಮೂಮೆಂಟ್ಸ್ ಸಿಗ್ಲೇ ಇಲ್ಲ. ಯಾಕಂದ್ರೆ ಭಾರತ ಬ್ಯಾಟಿಂಗ್ನಲ್ಲೂ ಹಿಗ್ಗಾಮುಗ್ಗಾ ಚಚ್ಚಿತ್ತು. ಬೌಲಿಂಗ್ನಲ್ಲೂ ಪೆವಿಲಿಯನ್ ಪರೇಡ್ ನಡ್ಸಿದ್ರು. ಸೋಲುವಂಥ ಅವ್ರಿಗೆ ಅಷ್ಟು ಸೊಕ್ಕು ಇರ್ಬೇಕಾದ್ರೆ ಪ್ರತೀ ಸಲ ಗೆಲ್ಲೋ ನಮಗೆ ಇನ್ನೆಷ್ಟು ಇರ್ಬೇಡ. ಹೀಗಾಗೇ ನೆಕ್ಸ್ಟ್ ಇಂಡಿಯನ್ಸ್ ರೋಸ್ಟಿಂಗ್ ಸ್ಟಾರ್ಟ್ ಮಾಡಿದ್ರು ನೋಡಿ. ಪಾಕಿಸ್ತಾನಿ ಆಟಗಾರರ ಪ್ರಾಕ್ಟೀಸ್ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಅದೇ ರೀತಿಯಲ್ಲೇ ಭಾರತೀಯ ಅಭಿಮಾನಿಗಳು ಪಾಕ್ ಅಭಿಮಾನಿಗಳ ಮುಂದೆ ಮಿಮಿಕ್ ಮಾಡಿ ಟಾಂಟ್ ಕೊಟ್ರು.
ಇಷ್ಟಕ್ಕೆ ಸುಮ್ನಾಗ್ತಾರಾ ಚಾನ್ಸೇ ಇಲ್ಲ. ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಗ್ಯಾಲರಿಯಲ್ಲಿ ಕುಣಿಯುತ್ತಾ ಪಾಕ್ ಅಭಿಮಾನಿಗಳಿಗೆ ತಿರುಗೇಟು ಕೊಟ್ರು. ಜೊತೆಗೆ ಮ್ಯಾಚ್ ಮುಗೀತು ಹೋಗಿ ಮಲ್ಕೊಳಿ ಅನ್ನೋ ಥರ ಸಹ್ನೆ ಮಾಡಿದ್ರು. ಒಂದ್ಕಡೆ ಮ್ಯಾಚ್ ಸೋಲ್ತಿದ್ದ ಪಾಕಿಗಳಿಗೆ ಭಾರತೀಯರ ಸೆಲೆಬ್ರೇಷನ್ ಇನ್ನೂ ಉರಿಸಿದಂತಿತ್ತು. ಮೈದಾನದಲ್ಲಿ ಪಾಕಿಸ್ತಾನಿ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸ್ತಿದ್ರೆ ಇತ್ತ ಮ್ಯಾಚ್ ನೋಡ್ತಿದ್ದ ಪಾಕ್ ಫ್ಯಾನ್ಸ್ ಫುಲ್ ಪ್ರೆಸ್ಟೇಟ್ ಆಗ್ತಿದ್ರು. ನಗೋಕ್ ಆಗ್ದೇ ಅಳೋಕ್ ಆಗ್ದೇ ಒದ್ದಾಡ್ತಿದ್ರು.
ಇನ್ನು ಭಾರತೀಯರ ಟ್ರೋಲ್ ಇಷ್ಟಕ್ಕೇ ನಿಂತಿಲ್ಲ. ಪಾಕಿಸ್ತಾನದ ಓಪನರ್ ಸಾಹಿಬ್ದಾದಾ ಫರ್ಹಾನ್ ಲಾಸ್ಟ್ ಯುಎಸ್ಎ ವಿರುದ್ಧ ಮ್ಯಾಚ್ ಆಡ್ಬೇಕಾದ್ರೆ ಪಾಕ್ ಅಭಿಮಾನಿಯೊಬ್ಬ ಫರ್ಹಾನ್ ಭಾಯ್ ನೆಕ್ಸ್ಟ್ ಭಾರತದ ವಿರುದ್ಧದ ಮ್ಯಾಚಲ್ಲಿ ಬುಮ್ರಾ ಬೌಲಿಂಗ್ನಲ್ಲಿ ಸಿಕ್ಸ್ ಬಾರಿಸಿ ಅಂತಾ ಜೋರಾಗಿ ಕೂಗಿಕೊಂಡಿದ್ದ. ಈ ವೇಳೆ ಫರ್ಹಾನ್ ಕೂಡ ಓಕೆ ಎನ್ನುವಂತೆ ರಿಯಾಕ್ಟ್ ಮಾಡಿದ್ದ. ಬಟ್ ಫಸ್ಟ್ ಓವರ್ನಲ್ಲೇ ಫರ್ಹಾನ್ ಡಕ್ಔಟ್ ಆಗಿದ್ದು ಕೂಡ ಟ್ರೋಲ್ ಆಗಿದೆ.
ಇನ್ನು ಐಸಿಸಿ ಟಿ-20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 9 ಸಲ ಮುಖಾಮುಖಿ ಆಗಿದ್ದಾರೆ. ಇದ್ರಲ್ಲಿ ಭಾರತ 8 ಸಲ ವಿನ್ ಆಗಿದ್ರೆ ಪಾಕಿಸ್ತಾನ ಒಂದು ಪಂದ್ಯ ಗೆದ್ದಿರೋದೇ ಅವ್ರ ದೊಡ್ಡ ಸಾಧನೆಯಾಗಿದೆ. ಭಾರತದ ಎದುರು ಬಂದಾಗ್ಲೆಲ್ಲಾ ಹೇಗೆ ಒದೆ ಬಿದ್ದಿದೆ ಅನ್ನೋದನ್ನ ನೀವೇ ನೋಡಿ.
ಭಾರತ-ಪಾಕ್ ಮ್ಯಾಚ್ ಅಂದಾಗ ಭಾರತವೇ ಗೆಲ್ಲೋದು ಅಂತಾ ಪಾಕ್ಗೂ ಗೊತ್ತು ಅಲ್ಲಿನ ಅಭಿಮಾನಿಗಳಿಗೂ ಗೊತ್ತು. ಅಟ್ಲೀಸ್ಟ್ ಫೈಟ್ ಆದ್ರೂ ಕೊಟ್ಟು ಗೆಲ್ಬೋದು ಅನ್ನೋದು ಅವ್ರ ನಿರೀಕ್ಷೆ ಆಗಿತ್ತು. ಆದ್ರೆ ಪಾಕಿಸ್ತಾನ ನಾವು ಗಲ್ಲಿ ಕ್ರಿಕೆಟರ್ಸ್ಗಿಂತ ಕಡೆ ಅನ್ನೋ ಥರ ಆಡಿದ್ದಾರೆ. ಸೋಲೋದ್ ಸೋಲಲಿ ಆದ್ರೆ ಇಷ್ಟು ಕೆಟ್ಟದಾಗಿ ಯಾಕೆ ಸೋಲ್ಬೇಕು ಅಂತಾ ಪಾಕ್ ಅಭಿಮಾನಿಯೊಬ್ಬ ಕಣ್ಣೀರಿಟ್ಟಿದ್ದಾನೆ.
ಇನ್ನು ಇದೆಲ್ಲದ್ರ ನಡುವೆ ಏಷ್ಯಾಕಪ್ ಟ್ರೋಫಿ ಕಳ್ಳ ಪಿಸಿಬಿ ಅಧ್ಯಕ್ಷನಾಗಿರೋ ಮೊಹ್ಸಿನ್ ನಖ್ವಿ ಭಾರತದ ವಿರುದ್ಧ ಮತ್ತೆ ಸೋಲೋದು ಗೊತ್ತಾಗ್ತಿದ್ದಂತೆ ಸ್ಟೇಡಿಯಂನಿಂದ ಕಾಲ್ಕಿತ್ತಿದ್ದಾನೆ. ಪಂದ್ಯ ನಡೆಯುತ್ತಿರವ ಹೊತ್ತಿನಲ್ಲೇ ಮೊಹ್ಸಿನ್ ನಖ್ವಿ, ಪ್ರೇಮದಾಸ ಸ್ಟೇಡಿಯಂನಿಂದ ಹೊರ ನಡೆದಿದ್ದಾರೆ. ಅರ್ಜೆಂಟ್ ಅರ್ಜೆಂಟ್ ಆಗೇ ಮೈದಾನದಿಂದ ಹೋಗ್ತಿರೋ ವಿಡಿಯೋ ಕೂಡ ಫುಲ್ ವೈರಲ್ ಆಗಿದೆ. ಇನ್ನು ಇದಿಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ಮೀಮ್ಸ್ ಕೂಡ ಟ್ರೆಂಡಿಂಗ್ನಲ್ಲಿದೆ. ಅಷ್ಟೇ ಯಾಕೆ ಭಾರತದ ಗೆಲುವನ್ನ ಬಲೂಚಿಸ್ಥಾನದ ನಿವಾಸಿಗಳೂ ಸೆಲೆಬ್ರೇಟ್ ಮಾಡಿದ್ದಾರೆ. ಭಾರತ ಗೆದ್ದಿದ್ದಕ್ಕೆ ಖುಷಿ ಪಟ್ಟಿದ್ದಾರೆ.

ನೋಡಿರಿ

