ಬಿದ್ದ ಪಾಕಿಸ್ತಾನ, ಗೆದ್ದ ಅಫ್ಘಾನಿಸ್ತಾನ – ಪಾಕ್ ಟೀಮ್‌ ಕ್ಯಾಪ್ಟನ್ ಬಾಬರ್ ಆಜಂ ನಾಯಕ ಸ್ಥಾನಕ್ಕೂ ಬರುತ್ತಾ ಕುತ್ತು?

ಬಿದ್ದ ಪಾಕಿಸ್ತಾನ, ಗೆದ್ದ ಅಫ್ಘಾನಿಸ್ತಾನ – ಪಾಕ್ ಟೀಮ್‌ ಕ್ಯಾಪ್ಟನ್ ಬಾಬರ್ ಆಜಂ ನಾಯಕ ಸ್ಥಾನಕ್ಕೂ ಬರುತ್ತಾ ಕುತ್ತು?

ಪಾಕಿಸ್ತಾನ ತನ್ನ ಮತ್ತೊಂದು ನೆರೆ ದೇಶದ ಮುಂದೆಯೂ ಮಂಡಿಯೂರಿ..ಶರಣಾಗಿ..ಶಸ್ತ್ರ ತ್ಯಾಗ ಮಾಡಿದೆ. ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ನಮ್ಮ ಹಣೆಬರಹವೇ ಇಷ್ಟು ಅನ್ನೋದನ್ನ ಪಾಕ್​ ಕ್ರಿಕೆಟ್​ ಟೀಂ ಜಗತ್ತಿಗೆ ಸಾರಿ ಹೇಳಿದೆ. ಅಫ್ಘಾನಿಸ್ತಾನ ಟೀಮ್ ಮುಂದೆ ಮಂಡಿಯೂರಿದ ಪಾಕ್, ವಿಶ್ವಕಪ್‌ನಲ್ಲಿ ಪ್ರಯಾಣ ಮುಗಿಸುವ ಹಂತಕ್ಕೆ ತಲುಪಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ವಿರಾಟ್ ಕೊಹ್ಲಿ – ರನ್ ಮೆಷಿನ್ ಚೇಸಿಂಗ್ ಸ್ಟೈಲ್ ಹೇಗಿದೆ?

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಕೊಟ್ಟ ಹೊಡೆತಕ್ಕೆ ಪಾಕ್​ ಕ್ರಿಕೆಟಿಗರಿಗೆ ಗರ ಬಡಿದಂತಾಗಿತ್ತು. ಇದ್ರಿಂದ ಪಾಕಿಸ್ತಾನಿಗಳು ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಸದ್ಯಕ್ಕೆ ಚೇತರಿಸಿಕೊಳ್ಳುವ ಯಾವ ಲಕ್ಷಣಗಳು ಕೂಡ ಕಾಣ್ತಿಲ್ಲ. 282 ರನ್​ ಹೊಡೆದರೂ ಚೆನ್ನೈ ಪಿಚ್​ನಲ್ಲೂ ಅಫ್ಘಾನಿಸ್ತಾನ ತಂಡವನ್ನೇ ಡಿಫೆಂಡ್ ಮಾಡೋಕೆ ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಿಲ್ಲ. ಈ ಬಾರಿಯ ವರ್ಲ್ಡ್​​ಕಪ್​ನಲ್ಲಂತೂ ಒಂದು ತಂಡವಾಗಿ ಪಾಕಿಸ್ತಾನ ಪರ್ಫಾಮ್​ ಮಾಡುವಲ್ಲಿ ಕಂಪ್ಲೀಟ್ ಫೇಲ್ ಆಗಿದೆ. ಟೂರ್ನಿಯುದ್ದಕ್ಕೆ ಒಂದೇ ತಪ್ಪನ್ನ ಮೇಲಿಂದ ಮೇಲೆ ಮಾಡ್ತಿದ್ದಾರೆ. ತಮ್ಮ ಆಟವನ್ನ ಸುಧಾರಿಸಿಕೊಳ್ಳದೆ ಪಿಚ್​ನ್ನ ದೂರೋದ್ರಲ್ಲಿ ಯಾವ ಅರ್ಥವೂ ಇಲ್ಲ. ಈಗ ಅಫ್ಘಾನಿಸ್ತಾನ, ನೆದರ್​​ಲ್ಯಾಂಡ್​ನವರು ಇದೇ ಪಿಚ್​ಗಳಲ್ಲಿ ಆಡಿ ಗೆದ್ದಿದ್ದು ಹೇಗೆ ಎಂಬ ಅರಿವು ಪಾಕಿಸ್ತಾನ ಟೀಮ್ ಗೆ ಇಲ್ಲ. ಪಾಕಿಸ್ತಾನದ ಈ ಬಾರಿಯ ವರ್ಲ್ಡ್​ಕಪ್ ಜರ್ನಿ ಒಂದು ರೀತಿ ಮುಗಿದ ಹಾಗೆಯೇ ಆಗಿದೆ. ಸೆಮಿಫೈನಲ್​​ ಎಂಟ್ರಿ ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ ಬಾಬರ್ ಆಜಂ ಕ್ಯಾಪ್ಟನ್ಸಿ ಕೊನೆಗೊಂಡರೂ ಅಚ್ಚರಿಯಿಲ್ಲ.

ಆದರೆ, ಪಾಕಿಸ್ತಾನ ಟೀಮ್ ಎಷ್ಟು ಕುಗ್ಗುತ್ತಾ ಹೋಗುತ್ತಿದೆಯೋ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಅಷ್ಟೇ ಮಿಂಚುತ್ತಿದೆ. ಇದೇ ಮೊದಲ ಬಾರಿಗೆ ವರ್ಲ್ಡ್​​ಕಪ್​​ನಲ್ಲಿ ಅಫ್ಘಾನಿಸ್ತಾನ ಎರಡು ಪಂದ್ಯಗಳನ್ನ ಗೆದ್ದಿದೆ. ಮೊದಲಿಗೆ ಇಂಗ್ಲೆಂಡ್​.. ಈಗ ಪಾಕಿಸ್ತಾನ.. ಈ ಮೂಲಕ ಜಗತ್ತಿನ ಯಾವುದೇ ಟೀಂನ್ನ ಸೋಲಿಸುವ ಸಾಮರ್ಥ್ಯ ನಮಗಿದೆ ಅನ್ನೋದು ಆಫ್ಘನ್ನರು ಸಾಬೀತುಪಡಿಸಿದ್ದಾರೆ. ಆಫ್ಘನ್ ಕ್ರಿಕೆಟ್ ತಂಡಕ್ಕೆ ಭಾರತ ನೆರವು ನೀಡ್ತಿದೆ. ನಮ್ಮಲ್ಲೇ ಬಂದು ಆಫ್ಘಾನಿಸ್ತಾನ ತಂಡ ವರ್ಲ್ಡ್​​ಕ್ಲಾಸ್​ ತರಬೇತಿ ಪಡೆದುಕೊಳ್ತಿದೆ. ಅದ್ರ ಫಲಿತಾಂಶ ಈ ವರ್ಲ್ಡ್​​ಕಪ್​ನಲ್ಲಿ ಬಂದಿದೆ. ಚೆನ್ನೈನ ಪಿಚ್​​ನಲ್ಲಿ 283 ರನ್ ಚೇಸ್ ಮಾಡೋದು ಅಂದ್ರೆ ಅಷ್ಟೊಂದು ಸುಲಭ ಆಗಿರಲಿಲ್ಲ.. ಅದು ಸ್ಪಿನ್ ಪಿಚ್ ಬೇರೆ.. ಆದ್ರೂ ಅಫ್ಘಾನಿಸ್ತಾನ ಕೇವಲ 2 ವಿಕೆಟ್​ಗಳನ್ನಷ್ಟೇ ಕಳೆದುಕೊಂಡು ಟಾರ್ಗೆಟ್ ರೀಚ್ ಆಗಿದೆ.

Sulekha