ಸೂಪರ್-8ಗೂ ಬರಲ್ವಾ PAK – ನಮೀಬಿಯಾ ಗೆದ್ರೆ ಟಾಟಾ ಬೈಬೈ
ಹೇಗಿದೆ ಗ್ರೂಪ್ A ಲೆಕ್ಕಾಚಾರ?

ಸೂಪರ್-8ಗೂ ಬರಲ್ವಾ PAK – ನಮೀಬಿಯಾ ಗೆದ್ರೆ ಟಾಟಾ ಬೈಬೈಹೇಗಿದೆ ಗ್ರೂಪ್ A ಲೆಕ್ಕಾಚಾರ?

ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಆಲ್ರೆಡಿ 7 ತಂಡಗಳು ಸೂಪರ್ 8 ರೌಂಡ್​ಗೆ ಸೆಲೆಕ್ಟ್ ಆಗಿದ್ದಾರೆ. ಇನ್ನೇನಿದ್ರೂ 1 ಸ್ಥಾನವಷ್ಟೇ ಬಾಕಿ ಇದೆ. ಅದೂ ಕೂಡ ಗ್ರೂಪ್ ಎನಲ್ಲಿ ಯಾರಿಗೆ ಟಿಕೆಟ್ ಅನ್ನೋದು. ಇಂಟ್ರೆಸ್ಟಿಂಗ್ ಅಂದ್ರೆ ಗ್ರೂಪ್ ಎನಲ್ಲಿರೋ ಪಾಕಿಸ್ತಾನ ಗ್ರೂಪ್ ಸ್ಟೇಜ್​ನಲ್ಲೇ ಹೊರ ಬೀಳೋ ಚಾನ್ಸಸ್ ಕೂಡ ಇದೆ. ಹತ್ತನೇ ಆವೃತ್ತಿಯ ಟಿ-20 ವಿಶ್ವಕಪ್ ನಲ್ಲಿ ಒಂದೊಂದು ಪಂದ್ಯವೂ ರಣರೋಚಕವಾಗಿವೆ. ಆಲ್ರೆಡಿ ಸೂಪರ್ 8 ಹಂತದ ಲೆಕ್ಕಾಚಾರಗಳು ನಡೀತಿವೆ. ಪ್ರಸ್ತುತ 8 ಸ್ಥಾನಗಳ ಪೈಕಿ 7 ತಂಡಗಳು ಸೂಪರ್ 8ಗೆ ಲಗ್ಗೆ ಇಟ್ಟಾಗಿದೆ. ಹೀಗಿದ್ರೂ ಪಾಕ್​ನ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ.

ಇದನ್ನೂ ಓದಿ : 15 ವರ್ಷಗಳ ಬಳಿಕ ಕಾಂಗರೂ ಪಡೆಗೆ ಇದೆಂಥಾ ಅವಮಾನ? – ಮೊದಲ ಸುತ್ತಿನಲ್ಲೇ ಹೊರಬಿದ್ದ ಆಸ್ಟ್ರೇಲಿಯಾ

4 ಗುಂಪುಗಳು.. 7 ತಂಡಗಳು ಸೂಪರ್ 8ಗೆ ಸೆಲೆಕ್ಟ್!

20 ತಂಗಳು ಭಾಗಿಯಾಗಿದ್ದ ವಿಶ್ವಕಪ್​ನಲ್ಲಿ 4 ಗುಂಪುಗಳಿದ್ದು ಈಗ 7 ತಂಡಗಳು ಸೂಪರ್ 8ಗೆ ಲಗ್ಗೆ ಇಟ್ಟಿದ್ದಾರೆ. ಫೆಬ್ರವರಿ 21 ರಿಂದ ಮಾರ್ಚ್ 1 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಪ್ರಸ್ತುತ 7 ತಂಡಗಳು ಸೂಪರ್ 8ಗೆ ಸ್ಥಾನ ಪಡೆದಿದ್ದಾರೆ. ಗ್ರೂಪ್ ಬಿನಲ್ಲಿ ಜಿಂಬಾಂಬ್ವೆ ಸೋತ್ರೆ ಆಸ್ಟ್ರೇಲಿಯಾ ಸೂಪರ್ 8 ಚಾನ್ಸ್​ಗಾಗಿ ಕಾಯ್ತಿತ್ತು. ಆದ್ರೆ ಮಂಗಳವಾರ ಜಿಂಬಾಬ್ವೆ ಮತ್ತು ಐರ್ಲ್ಯಾಂಡ್ ಪಂದ್ಯ ಮಳೆಯಿಂದ ರದ್ದಾಗಿದ್ದು 5 ಅಂಕಗಳೊಂದಿಗೆ ಜಿಂಬಾಬ್ವೆಗೆ 5 ಅಂಕ ಸಿಕ್ಕು ಸೂಪರ್ 8ಗೆ ಕಾಲಿಟ್ಟಿದೆ. ಈ ಮೂಲಕ ಆಸೀಸ್ ಗ್ರೂಪ್ ಸ್ಟೇಜ್​ನಲ್ಲೇ ಹೊರಬಿದ್ದಿದೆ. ಎ ಗುಂಪಿನಲ್ಲಿ ಭಾರತ, ಹಾಗೇ ಬಿ ಗುಂಪಿನಿಂದ ಶ್ರೀಲಂಕಾ ಮತ್ತು ಜಿಂಬಾಂಬ್ವೆ, ಸಿ ಗ್ರೂಪ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್, ಗ್ರೂಪ್ ಡಿನಿಂದ ಸೌತ್ ಆಫ್ರಿಕಾ ನ್ಯೂಜಿಲೆಂಡ್ ಫೈನಲ್ ಆಗಿವೆ. ಇನ್ನೇನಿದ್ರೂ ಗ್ರೂಪ್​ನಲ್ಲಿ ಮತ್ತೊಬ್ರು ಯಾರು ಅನ್ನೋದೇ ಈಗಿರುವಂಥ ಕುತೂಹಲ.

ಮಾಡು ಇಲ್ಲವೇ ಮಡಿ ಸ್ಟೇಜ್ ನಲ್ಲಿದೆ ಪಾಕಿಸ್ತಾನ!

ಭಾರತದ ವಿರುದ್ಧ ಹೀನಾಯವಾಗಿ ಸೋತಿರೋ ಪಾಕ್​ ಈಗ ಗ್ರೂಪ್​ ಸ್ಟೇಜ್​ನಲ್ಲೇ ಹೊರ ಬೀಳೋ ಟೆನ್ಷನ್​ನಲ್ಲಿದೆ. ಪಾಕಿಸ್ತಾನ ತಂಡವು ಗ್ರೂಪ್ ಎಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, 2 ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ 4 ಅಂಕಗಳೊಂದಿಗೆ -0.403 ನೆಟ್​ ರನ್​ರೇಟ್ ಹೊಂದಿದೆ. ಭಾರತ 3 ಗೆಲುವುಗಳೊಂದಿಗೆ 6 ಅಂಕಗಳನ್ನು ಹೊಂದಿದ್ದು ಸೂಪರ್ 8ಕ್ಕೆ ಅರ್ಹತೆ ಪಡೆದಿದೆ (NRR +3.050). ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ, ಅದು ನಮೀಬಿಯಾ ವಿರುದ್ಧ ಇವತ್ತು ಕೊಲಂಬೋದಲ್ಲಿ  ಪಂದ್ಯ ನಡೆಯಲಿದೆ. ಸೂಪರ್ 8 ಅರ್ಹತೆ ಪಡೆಯಲು ಈ ಪಂದ್ಯವನ್ನು ಗೆಲ್ಲಲೇಬೇಕು, ಇಲ್ಲದಿದ್ದರೆ ಸೂಪರ್ 8ನಿಂದ ಹೊರಬೀಳಲಿದೆ. ಯಾಕಂದ್ರೆ ಯುಎಸ್​ಎ ಕೂಡ 4 ಅಂಕ ಹೊಂದಿದ್ದು, ಅದರ ರನ್​ರೇಟ್ +0.787 ಇದೆ. ಯಾಕಂದ್ರೆ ಪಾಕ್​ಗಿಂದ ಯುಎಸ್​ಎ ನೆಟ್ ರನ್​ರೇಟ್ ಪ್ಲಸ್ ಇರೋದ್ರಿಂದ ಅಮೆರಿಕಕ್ಕೆ ಸೂಪರ್ 8 ಟಿಕೆಟ್ ಸಿಗೋ ಚಾನ್ಸಸ್ ಇರುತ್ತೆ. ಒಟ್ನಲ್ಲಿ ಟಿ-20 ವಿಶ್ವಕಪ್​ ಈಗ ರೋಚಕ ಘಟ್ಟಕ್ಕೆ ಬಂದಿದೆ. ಈಗ ಪಾಕಿಸ್ತಾನ ಗ್ರೂಪ್​ ಸ್ಟೇಜ್ ಪಾಸ್ ಆಗುತ್ತಾ ಅಥವಾ ಫೇಲ್ ಆಗಿ ಟಾಟಾ ಬೈಬೈ ಹೇಳುತ್ತಾ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *