ಪಾಕಿಸ್ತಾನದ 2ನೇ ಅತಿದೊಡ್ಡ ವಾಯುನೆಲೆ ಮೇಲೆ ದಾಳಿ – 12 ಕ್ಕೂ ಅಧಿಕ ಮಂದಿ ಸಾವು

ಪಾಕಿಸ್ತಾನದ 2ನೇ ಅತಿದೊಡ್ಡ ವಾಯುನೆಲೆ ಮೇಲೆ ದಾಳಿ – 12 ಕ್ಕೂ ಅಧಿಕ ಮಂದಿ ಸಾವು

ಪಾಕಿಸ್ತಾನದ 2ನೇ ಅತಿದೊಡ್ಡ ಪಿಎನ್​ಎಸ್​ ಸಿದ್ದಿಕ್​ ನೌಕಾ ವಾಯುನೆಲೆ ಮೇಲೆ ದಾಳಿ ನಡೆದಿದೆ. ಟರ್ಬತ್​ನಲ್ಲಿರುವ ನೌಕೌ ವಾಯುನೆಲೆ ಎದುರಿಸಿದ ದಾಳಿಯಲ್ಲಿ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್? – ಮಂಗಳವಾರ ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ

ಸೋಮವಾರ ತಡರಾತ್ರಿ ಈ ದಾಳಿ ನಡೆದಿದೆ. ವಾಯುನೆಲೆ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ.  ಮೂರು ಗಂಟೆಗಳ ಸ್ಫೋಟ ಈ ಭಾಗದಲ್ಲಿ ನಡೆದಿದೆ. ಈ  ದಾಳಿಯಲ್ಲಿ ಪಾಕಿಸ್ತಾನಿ ಸಿಬ್ಬಂದಿಗಳನ್ನು ಕೊಂದಿರುವುದಾಗಿ ತಿಳಿಸಿದೆ. ಇದರ ಜೊತೆಗೆ ಪಾಕ್​ ಸೇನೆಯ ನಾಲ್ವರು ಉಗ್ರರನನ್ನು ಹೊಡೆದುರಿಳಿಸಿದೆ ಎಂದು ವರದಿಯಾಗಿದೆ. ನಿಷೇಧಿತ ಬಿಎಲ್​ಎ ಮಜೀದ್​ ಬ್ರಿಗೇಡ್​ (ಬಲೂಚಿಸ್ತಾನ್​ ಲಿಬರೇಶನ್​​ ಆರ್ಮಿ) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಮಜೀದ್​ ಬ್ರಿಗೇಡ್​ ಬಲೂಚಿಸ್ತಾನದಲ್ಲಿ ಚೀನಾ ಹೂಡಿಕೆಗಳನ್ನು ಟೀಕಿಸಿದ್ದು, ಚೀನಾ ಮತ್ತು ಪಾಕಿಸ್ತಾನ 2 ಪ್ರದೇಶ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದೆ. ಹೀಗಾಗಿ ತಮ್ಮ ಯೋಧರು ವಾಯುನೆಲೆಗೆ ನುಸುಳು ಗುಂಡಿನ ದಾಳಿಗೈದಿದ್ದಾರೆ ಎಂದು ಬಿಎಲ್​ಎ ತಿಳಿಸಿದೆ.

Shwetha M