PAK ಪ್ಲೇಯರ್ಸ್ ಗೆ ದಂಡಂ ದಶಗುಣಂ – ಭಾರತದ ವಿರುದ್ದ ಸೋತಿದ್ದಕ್ಕೆ ಶಿಕ್ಷೆ
ದಂಡದ ನೆಪದಲ್ಲಿ PCB ವಸೂಲಿ

PAK ಪ್ಲೇಯರ್ಸ್ ಗೆ ದಂಡಂ ದಶಗುಣಂ – ಭಾರತದ ವಿರುದ್ದ ಸೋತಿದ್ದಕ್ಕೆ ಶಿಕ್ಷೆದಂಡದ ನೆಪದಲ್ಲಿ PCB ವಸೂಲಿ

ಪಾಕಿಸ್ತಾನದ ಕೆಲ ಹಾಲಿ ಮತ್ತು ಮಾಜಿ ಕ್ರಿಕೆಟಿಗರಿಗೆ ಪಾಕಿಸ್ತಾನ ಸೆಮಿಫೈನಲ್​ಗೆ ಸೆಲೆಕ್ಟ್ ಆಗ್ಲಿಲ್ಲ ಅನ್ನೋದಕ್ಕಿಂತ ಜಾಸ್ತಿ ಭಾರತ ಸೆಲೆಕ್ಟ್ ಆಗಿಬಿಡ್ತಲ್ಲ ಅನ್ನೋ ಉರಿನೇ ಜಾಸ್ತಿ ಇದೆ. ಯಾಕಂದ್ರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟಿವಿ ಶೋಗಳಲ್ಲಿ ಕುಳಿತು ಟೀಂ ಇಂಡಿಯಾ ಯಾವುದೇ ಕಾರಣಕ್ಕೂ ಪಂದ್ಯ ಗೆಲ್ಲಲ್ಲ ಸೆಮೀಸ್​ಗೆ ಹೋಗಲ್ಲ ಅಂತಾ ಉದ್ದುದ್ದ ಭಾಷಣ ಬಿಗೀತಿದ್ರು. ಬಟ್ ಭಾರತ ಸೆಲೆಕ್ಟ್ ಆದ್ಮೇಲೆ ಅವ್ರು ಪತ್ತೆನೇ ಇಲ್ಲ. ಈಗ ಇಂಗ್ಲೆಂಡ್ ವಿರುದ್ಧ ಗೆಲ್ಲಲ್ಲ ಅಂತಾ ಬೊಬ್ಬೆ ಹೊಡೀತಿದ್ದಾರೆ. ಇದು ಒಂದ್ಕಡೆಯಾದ್ರೆ ಟೂರ್ನಿಯಿಂದ ಹೊರಬಿದ್ದಿರೋ ಪಾಕ್ ಆಟಗಾರರ ಮೇಲೆ ಪಿಸಿಬಿ ದಂಡಾಸ್ತ್ರ ಪ್ರಯೋಗಿಸಿದೆ. ಒಬ್ಬೊಬ್ಬ ಆಟಗಾರನೂ ಈಗ ಫೈನ್ ಕಟ್ಬೇಕಾಗುತ್ತೆ.

ಮೊದ್ಲೆಲ್ಲಾ ಐಸಿಸಿ ಟೂರ್ನಮೆಂಟ್​ಗಳಲ್ಲಿ ಪಾಕಿಸ್ತಾನ ಅಂದ್ರೆ ಟ್ರೋಫಿ ವಿನ್ನಿಂಗ್ ಟೀಮ್ ಸಾಲಿನಲ್ಲಿ ನಿಲ್ತಿತ್ತು. ಬಟ್ ಈಗ ನಂಬರ್ಸ್ ಫಿಲ್ ಮಾಡೋಕೆ ಇರುವಂಥ ಟೀಮ್​ನಂತಾಗಿದೆ. ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ಆಗಿದ್ದೂ ಅದೇ. ಸೂಪರ್ 8 ಸುತ್ತಿನಲ್ಲೇ ಪಾಕಿಸ್ತಾನ ತಂಡ ಟೂರ್ನಿಯಿಂದ ಗಂಟು ಮೂಟೆ ಕಟ್ಟಿದೆ. ಅಯ್ಯೋ ಸೆಮಿಫೈನಲ್​ಗೆ ಕ್ವಾಲಿಫೈ ಆಗ್ಲಿಲ್ವಲ್ಲ ಅಂತಾ ಅಲ್ಲಿನ ಆಟಗಾರರು ಮನೆ ಕಡೆ ಮುಖ ಮಾಡ್ತಿದ್ರೆ ಪಿಸಿಬಿ ಮಾತ್ರ ದಂಡಂ ದಶಗುಣಂ ಅಂತಾ ಅವ್ರ ಜೇಬಿಗೇ ಕತ್ತರಿ ಹಾಕಿದೆ. ಆಟ ಅಂತೂ ಗೆಲ್ಲಲಿಲ್ಲ ದುಡ್ಡು ಆದ್ರೂ ಕಟ್ರಪ್ಪ ಅಂತಾ ಪೆನಾಲ್ಟಿ ಹಾಕಿದೆ.

ಪಾಕ್ ನ ಪ್ರತೀ ಪ್ಲೇಯರ್ ಗೆ 50 ಲಕ್ಷ ಪಿಕೆಆರ್ ಫೈನ್!

ವರಸೆ ಅಂದ್ರೆ ಇದಪ್ಪ. ಟಿ-20 ವಿಶ್ವಕಪ್​ಗೂ ಮುನ್ನ ನಾವು ಬಾಂಗ್ಲಾದೇಶವನ್ನ ಬಿಟ್ಟು ಟೂರ್ನಿ ಆಡಲ್ಲ ಅಂತಾ ಬೊಬ್ಬೆ ಹೊಡ್ಕೊಂಡು ಆಮೇಲೆ ಐಸಿಸಿ ಹತ್ರ ಜಾಸ್ತಿ ಕಾಸ್ ಕೊಡಿ ಅಂತಾ ಕೇಳ್ಕೊಂಡು ಮ್ಯಾಚ್ ಆಡೋಕೆ ಬಂದ್ರು. ಌಸ್ ಯೂಶುಯಲ್ ಈ ಸಲನೂ ಸೆಮೀಸ್​ಗೂ ಕಾಲಿಡ್ದೇ ಹೊರಬಿದ್ರು. ಆದ್ರೆ ಆಗಿರೋ ಅವಮಾನಕ್ಕೆ ಪ್ಯಾಚಪ್ ಅನ್ನೋ ಥರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರಿಂದಲೇ ವಸೂಲಿಗೆ ಇಳ್ದಿದೆ. ಈ ಸಲ ನಾವೇ ಟ್ರೋಫಿ ಗೆಲ್ಬೇಕಿತ್ತು. ಆದ್ರೆ ಆಟಗಾರರು ಈ ಸಲ ಹೀನಾಯವಾಗಿ ಪರ್ಫಾಮ್ ಮಾಡಿದ್ದಾರೆ ಅಂತಾ ಪಿಸಿಬಿ 50 ಲಕ್ಷ ಪಾಕಿಸ್ತಾನಿ ರೂಪಾಯಿಗಳ ದಂಡ ವಿಧಿಸಲು ಮುಂದಾಗಿದೆ. ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಹೇಳೋದಾದ್ರೆ 16 ಆಗುತ್ತೆ. ಹಾಗಂತ ಇದು ಒಬ್ರೋ ಇಬ್ರಿಗೋ ಅಲ್ಲ. ವಿಶ್ವಕಪ್‌ನಲ್ಲಿ ಭಾಗವಹಿಸಿದ ತಂಡದ ಎಲ್ಲಾ ಸದಸ್ಯರಿಗೆ ಅನ್ವಯಿಸಲಿದೆ. ಪಾಕಿಸ್ತಾನ್ ಟೀಂ ಈ ಸಲ ಎಲ್ಲಾ ಮ್ಯಾಚ್​ಗಳನ್ನೂ ಶ್ರೀಲಂಕಾದಲ್ಲೇ ಆಡಿತ್ತು. ಒಟ್ಟು 7 ಪಂದ್ಯಗಳ ಪೈಕಿ ನ್ಯೂಜಿಲೆಂಡ್ ವಿರುದ್ಧದ ಒಂದು ಸೂಪರ್ 8 ಮ್ಯಾಚ್ ಮಳೆ ಕಾರಣಕ್ಕೆ ರದ್ದಾಗಿತ್ತು. ಉಳಿದ 6 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದ್ದಾರೆ. ಅಷ್ಟೇ ಅಲ್ದೇ ಸೂಪರ್-8 ಸುತ್ತಿನಲ್ಲೇ ಹೊರ ಬಿದ್ದಿದ್ದಾರೆ. ಹೀಗಾಗಿ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳೋಕೆ ಪಿಸಿಬಿ ಮುಂದಾಗಿದೆ.  ದಂಡದ ಜೊತೆ ಆಟಗಾರರಿಗೆ ನೀಡಲಾಗುತ್ತಿದ್ದ ಹೆಚ್ಚಿನ ಫೆಸಿಲಿಟಿಗಳನ್ನೂ ಕಟ್ ಆಫ್ ಮಾಡಿದೆ. ಇನ್ಮುಂದೆ ಕೇವಲ ಪಂದ್ಯದ ವೇಳೆ ಮೈದಾನಗಳಲ್ಲಿ ನೀಡಿದ ಪ್ರದರ್ಶವನ್ನ ನೋಡ್ಕೊಂಡು ಹಣ ಕೊಡೋದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಅಂದ್ರೆ ಚೆನ್ನಾಗಿ ಪರ್ಫಾಮ್ ಮಾಡಿದ್ರೆ ದುಡ್ಡು ಇಲ್ದಿದ್ರೆ ಖಾಲಿ ಕೈಲಿ ಮನೆ ಸೇರಬೇಕು ಅಂತಾ ವಾರ್ನ್ ಮಾಡಿದ್ದಾರೆ.

ಲಂಕಾ ವಿರುದ್ಧದ ಪ್ರದರ್ಶನದ ಬಳಿಕ ಕೆರಳಿರುವ ಪಿಸಿಬಿ!

ಅಷ್ಟಕ್ಕೂ ಇಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ವಿರುದ್ಧ ಈ ಮಟ್ಟಿಗೆ ಉರಿದು ಬೀಳೋಕೆ ಕಾರಣ ಲಂಕಾ ವಿರುದ್ಧದ ಪ್ರದರ್ಶನ. ಆ ಪಂದ್ಯದಲ್ಲಿ ಪಾಕ್ ಗೆದ್ರೂ ಅದು ಕ್ಲೋಸ್ ಗೇಮ್ ಆಗಿತ್ತು. ಆ ಪಂದ್ಯವನ್ನ ಕ್ಯಾಲ್ಕುಲೇಟಿವ್ ಆಗಿ ಗೆದ್ದಿದ್ರೆ ಸೆಮೀಸ್​ಗೆ ಹೋಗೋ ಚಾನ್ಸಸ್ ಇತ್ತು. ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಶ್ರೀಲಂಕಾ ವಿರುದ್ಧ 65 ರನ್‌ಗಳಿಂದ ಗೆಲ್ಲುವ ಅನಿವಾರ್ಯತೆ ಇತ್ತು. ಈ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಪಾಕ್ 212 ರನ್​ಗಳನ್ನ ಸ್ಕೋರ್ ಮಾಡಿತ್ತು. ಹಾಗೇ ಸೆಮಿಸ್​ಗೆ ಕ್ವಾಲಿಫೈ ಆಗ್ಬೇಕು ಅಂತಿದ್ರೆ 147 ರನ್​ಗಳ ಒಳಗೆ ಲಂಕಾವನ್ನ ಕಟ್ಟಿ ಹಾಕ್ಬೇಕಿತ್ತು. ಬಟ್ ಲಂಕಾ ತಂಡ ಆರಂಭದಲ್ಲಿ ವಿಕೆಟ್ ಒಪ್ಪಿಸಿದ್ರೂ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆ ಹಾಕಿತ್ತು. ಆಲ್ಮೋಸ್ಟ್ ಲಂಕಾ ಗೆದ್ದೇಬಿಡ್ತಾರೆ ಅನ್ನೋ ಥರನೇ ಇತ್ತು. ಲಾಸ್ಟ್ ಎರಡು ಬಾಲ್​ಗಳನ್ನ ಡಾಟ್ ಮಾಡಿದ್ರಿಂದ ಪಾಕ್ ಗೆದ್ದಿತ್ತು. ಇದಾದ ಮೇಲೆ ಪಾಕ್ ಟೀಂ ತುಂಬಾನೇ ಟ್ರೋಲ್ ಆಗಿತ್ತು.

ಎಚ್ಚರಿಕೆ ಕೊಟ್ರೂ ಎಚ್ಚೆತ್ತುಕೊಳ್ಳದ ಆಟಗಾರರು!

ಪಾಕಿಸ್ತಾನದ ಆಟಗಾರರ ಈ ಗಲ್ಲಿ ಕ್ರಿಕೆಟ್ ಇದೇ ಮೊದಲೇನಲ್ಲ. ಸುಮಾರು ತಿಂಗಳುಗಳಿಂದಲೇ ಇದೇರಾಗ ಇದೇ ಹಾಡು. ಇದೇ ಕಳಪೆ ಫಾರ್ಮ್‌ನಿಂದಾಗಿ 2025-26ರ ಸೆಂಟ್ರಲ್ ಕಾಂಟ್ರ್ಯಾಕ್ಟ್ ವೇಳೆ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಝ್ವಾನ್​ ಅವರಂತಹ ಹಿರಿಯ ಆಟಗಾರರನ್ನು ‘A’ ಕೆಟಗರಿಯಿಂದ ‘B’ ಕೆಟಗರಿಗೆ ಡಿಪ್ರಮೋಟ್ ಮಾಡಿದ್ರು. ಹಾಗೇ ವಿದೇಶಿ ಲೀಗ್​ಗಳಲ್ಲಿ ಆಡೋಕೆ ನೀಡ್ತಿದ್ದ ಎನ್​ಒಸಿಗಳಿಗೂ ಬ್ರೇಕ್ ಹಾಕಿದ್ರು. ಹೀಗಿದ್ರೂ ಆಟಗಾರರು ನಾವ್ ಆಡೋದೇ ಹಿಂಗೆ ಅಂತಾ ಹೋದಲ್ಲೆಲ್ಲಾ ಸೋತು ಬರ್ತಿದ್ದಾರೆ. ಇದೇ ಕಾರಣಕ್ಕೆ ಈ ಸಲ ಪಿಸಿಬಿ ಹಣದ ಮೇಲೆಯೇ ಕಣ್ಣಾಕಿದೆ.

ಭಾರತದ ವಿರುದ್ಧ ಪದೇಪದೆ ಸೋಲಿಗೆ ಈ ಶಿಕ್ಷೆ!

ಅಷ್ಟಕ್ಕೂ ಇಲ್ಲಿ ಪಿಸಿಬಿ ಆಟಗಾರರ ಮೇಲೆ ಈ ಮಟ್ಟಿಗೆ ಕುದ್ದು ಹೋಗೋಕೆ ಕಾರಣ ಭಾರತದ ವಿರುದ್ಧ ಪದೇಪದೆ ಸೋಲ್ತಿರೋದು. ಕಳೆದ 10 ಮುಖಾಮುಖಿಗಳಲ್ಲಿ ಭಾರತದ ಎದುರು 9 ಪಂದ್ಯಗಳಲ್ಲಿ ಸೋತಿದ್ದಾರೆ. ಕಳೆದ ಏಷ್ಯಾಕಪ್​ನಲ್ಲಿ ಹ್ಯಾಕ್ಟ್ರಿಕ್ ಸೋಲು. ಫೈನಲ್​ನಲ್ಲೂ ಮುಗ್ಗರಿಸಿದ್ರು. ಈಗ ವಿಶ್ವಕಪ್​ನಲ್ಲಿ ಅತ್ಯಂತ ಹೀನಾಯವಾಗಿ ಸೋತಿದ್ದಾರೆ. ಇದೇ ಕಾರಣಕ್ಕೆ ಆಟಗಾರರಿಗೆ ಬುದ್ಧಿ ಕಲಿಸಲು ದಂಡಾಸ್ತ್ರದ ಮೊರೆ ಹೋಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಭಾರತದ ವಿರುದ್ಧ ಸೋತಾಗ್ಲೇ ಪಾಕಿಸ್ತಾನಿ ಆಟಗಾರರಿಗೆ 50 ಲಕ್ಷ ಪಾಕಿಸ್ತಾನಿ ರೂಪಾಯಿ ಪೆನಾಲ್ಟಿ ಹಾಕೋದಾಗಿ ವಾರ್ನ್ ಮಾಡಿದ್ರಂತೆ. ಌಂಡ್ ಈಗ ಈ ಪೆನಾಲ್ಟಿ ಇನ್ನೂ ಜಾಸ್ತಿ ಮಾಡಿರೋ ಸಾಧ್ಯತೆನೂ ಇದೆ.  ಒಟ್ನಲ್ಲಿ ಟಿ-20 ವಿಶ್ವಕಪ್​ನಲ್ಲಿ 4 ತಂಡಗಳು ಸೆಮಿಫೈನಲ್ ಚಿಂತೆಯಲ್ಲಿದ್ರೆ ಅತ್ತ ಪಾಕಿಸ್ತಾನ ಮಾತ್ರ ಆಟಗಾರರಿಂದಲೂ ದುಡ್ಡು ಪೀಕೋ ಪ್ಲ್ಯಾನ್​ನಲ್ಲಿದೆ.

Shantha Kumari

Leave a Reply

Your email address will not be published. Required fields are marked *