ಬ್ಯಾಟಿಂಗ್ ಕಷ್ಟ.. ಚೇಸಿಂಗ್ ಇನ್ನೂ ಕಷ್ಟ.. ಫೇಲ್ ಆಗುತ್ತಾ ಪಾಕಿಸ್ತಾನ? – ಲಂಕಾ ಜೊತೆ ಅಘಾ ಟೀಂ ಔಟ್?

ಬ್ಯಾಟಿಂಗ್ ಕಷ್ಟ.. ಚೇಸಿಂಗ್ ಇನ್ನೂ ಕಷ್ಟ.. ಫೇಲ್ ಆಗುತ್ತಾ ಪಾಕಿಸ್ತಾನ? – ಲಂಕಾ ಜೊತೆ ಅಘಾ ಟೀಂ ಔಟ್?

ಟಿ-20 ವಿಶ್ವಕಪ್​ನ ಸೂಪರ್ 8 ಮ್ಯಾಚ್​ಗಳು ಈಗ ಕ್ಲೈಮ್ಯಾಕ್ಸ್ ಸ್ಟೇಜ್​ನಲ್ಲಿವೆ. ಗ್ರೂಪ್ 1ನಲ್ಲಿ ಸೌತ್ ಆಫ್ರಿಕಾ ಸೆಮಿಫೈನಲ್ ಟಿಕೆಟ್ ಕನ್ಫರ್ಮ್ ಆಗಿದೆ. ಭಾನುವಾರ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವಿನ ಪಂದ್ಯದಲ್ಲಿ ಗೆದ್ದವ್ರು ಸೆಮೀಸ್​ಗೆ ಸೆಲೆಕ್ಟ್ ಆಗ್ತಾರೆ. ಈಗ ಗ್ರೂಪ್ 2ನಲ್ಲಿ 2ನೇ ಕ್ವಾಲಿಫೈಯರ್ ಯಾರು ಅನ್ನೋ ಪ್ರಶ್ನೆಗೆ ಇವತ್ತಿನ ಪಂದ್ಯದಲ್ಲಿ ಉತ್ತರ ಸಿಗ್ಲಿದೆ. ಲಂಕಾ ವಿರುದ್ಧ ಗೆದ್ರೆ ಪಾಕಿಸ್ತಾನಕ್ಕೆ ಇಂಥಾದ್ದೊಂದು ಚಾನ್ಸ್ ಇದೆ. ಆದ್ರೆ ಬರೀ ಗೆದ್ರಷ್ಟೇ ಸಾಕಾಗಲ್ಲ. ಬಿಗ್ ಮಾರ್ಜಿನ್ ವಿಕ್ಟರಿ ಬೇಕು.

ಇದನ್ನೂ ಓದಿ: ಮತ್ತೆ ಯಶ್‌ ಬೋಲ್ಡ್‌ ಅವತಾರ! – ಟಾಕ್ಸಿಕ್‌ ಮೊದಲ ಹಾಡು ರಿಲೀಸ್‌ಗೆ ಡೇಟ್‌ ಫಿಕ್ಸ್!

ಶುಕ್ರವಾರ ಕೊಲಂಬೊದಲ್ಲಿ ನಡೆದಂಥ ಸೂಪರ್ 8 ಮ್ಯಾಚಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲೋ ಮೂಲಕ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಸೆಮೀಸ್ ಆಸೆಯನ್ನ ಜೀವಂತವಾಗಿರಿಸಿದೆ. ಇಂಗ್ಲೆಂಡ್ ತಂಡ ಮೂರಕ್ಕೆ ಮೂರೂ ಪಂದ್ಯ ಗೆದ್ದು 6 ಅಂಕಗಳೊಂದಿಗೆ ಸೆಮಿಫೈನಲ್ ಸೇರಿದೆ. ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್​ಗಳಲ್ಲಿ 159 ರನ್ಸ್ ಅಷ್ಟೇ ಕಲೆ ಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ್ದ ಇಂಗ್ಲೆಂಡ್ ಕೊನೇ ಓವರ್​ವರೆಗೂ ಆಡಿ ಇನ್ನೂ ಮೂರು ಎಸೆತ ಬಾಕಿ ಇರುವಂತೆ ಪಂದ್ಯವನ್ನ ಗೆದ್ಕೊಳ್ತು. ಌಂಡ್ ಇಂಗ್ಲೆಂಡ್ ಪರ ವಿಲ್ ಜಾಕ್ಸ್ ಮತ್ತೊಮ್ಮೆ ಆಲ್​ರೌಂಡ್ ಪ್ರದರ್ಶನ ನೀಡಿ ಕಳೆದ 7 ಇನ್ನಿಂಗ್ಸ್​ಗಳಲ್ಲಿ 4ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡ್ಕೊಂಡ್ರು. ಸೋ ಇದೆಲ್ಲಾ ನಿನ್ನೆ ಮ್ಯಾಚ್ ಹೈಲೈಟ್ಸ್. ಬಟ್ ಇದೇ ಮ್ಯಾಚ್ ಈಗ ಪಾಕಿಸ್ತಾನಕ್ಕೆ ಸೆಮೀಸ್ ಆಸೆಯನ್ನ ಇಟ್ಕೊಳ್ಳೋ ಹಾಗೆ ಮಾಡಿ. ಹಾಗಂತ ಟಿಕೆಟ್ ಸಿಗೋಕೆ ಪವಾಡನೇ ಆಗ್ಬೇಕು.

ಪಾಕಿಸ್ತಾನ ಗೆದ್ರೂ ನೆಟ್ ರನ್ ರೇಟ್ ಮೇಲೆ ಡಿಪೆಂಡ್!

ಶ್ರೀಲಂಕಾ ವಿರುದ್ಧ ಇವತ್ತು ತನ್ನ ಕೊನೇ ಮ್ಯಾಚಲ್ಲಿ ಗೆದ್ರೂ ನೆಟ್ ರನ್ ರೇಟ್ ಮುಖ್ಯ ಆಗುತ್ತೆ. ಅಂದರೆ ಗ್ರೂಪ್-2 ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೇರಿದೆ. ಇತ್ತ ದ್ವಿತೀಯ ಸ್ಥಾನದಲ್ಲಿರುವ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್​ಗೇರಬೇಕಿದ್ದರೆ ಪಾಕಿಸ್ತಾನ್ ತಂಡವು ಶ್ರೀಲಂಕಾ ವಿರುದ್ಧ ಭಾರೀ ಅಂತರದಿಂದ ಗೆಲ್ಲಬೇಕು.

ಫೇಲ್ ಆಗುತ್ತಾ ಪಾಕಿಸ್ತಾನ?

  • ಪಾಕಿಸ್ತಾನ ಫಸ್ಟ್ ಬ್ಯಾಟ್ ಮಾಡಿ 200 ರನ್ ​ಗಳಿಸಿದರೆ
  • ಶ್ರೀಲಂಕಾ ತಂಡವನ್ನು 135 ರನ್​ ಗಳ ಒಳಗೆ ಆಲೌಟ್
  • 180 ರನ್​ ಕಲೆಹಾಕಿದರೆ ಲಂಕಾ ಪಡೆಯನ್ನು 115 ರನ್​
  • 150 ರನ್​ ಗಳಿಸಿದರೆ, ಶ್ರೀಲಂಕಾ ತಂಡವನ್ನು ಕೇವಲ 85 ರನ್
  • ಕನಿಷ್ಠ 64 ರನ್ ​ಗಿಂತ ಹೆಚ್ಚಿನ ರನ್ ಗಳಿಂದ ಗೆದ್ರೆ ಚಾನ್ಸ್
  • ಪಾಕಿಸ್ತಾನ ಚೇಸಿಂಗ್ ಮಾಡಿದ್ರೆ ಓವರ್ ಗಳ ಮೇಲೆ ಡಿಪೆಂಡ್
  • ಶ್ರೀಲಂಕಾ  200 ರನ್​ ಗಳಿಸಿದರೆ ಪಾಕಿಸ್ತಾನ್ 13.5 ಓವರ್ ​ಗಳಲ್ಲಿ ಚೇಸ್
  • 181 ರನ್​ಗಳ ಗುರಿ ನೀಡಿದರೆ  13.4 ಓವರ್ ​ಗಳಲ್ಲಿ ಟಾರ್ಗೆಟ್ ರೀಚ್
  • 150 ರನ್ ​ಗಳಿಸಿದರೆ  12.4 ಓವರ್​ಗಳಲ್ಲಿ 151 ರನ್​ಗಳಿಸಲೇಬೇಕು.
  • 160 ಕ್ಕಿಂತ ಅಧಿಕ ರನ್ ​ಗಳ ಗುರಿ ನೀಡಿದರೆ 38+ ಎಸೆತಗಳನ್ನು ಬಾಕಿ

ಸೋ ಇದಿಷ್ಟು ಲೆಕ್ಕಾಚಾರ. ಇದನ್ನೆಲ್ಲಾ ನೋಡಿದ್ರೆ ಪಾಕಿಸ್ತಾನ ಗೆಲ್ಲೋದೇ ಡೌಟಿದೆ. ಇತ್ತ ಟೂರ್ನಿ ಹೋಸ್ಟರ್ ಆಗಿರೋ ಲಂಕಾ ಪಡೆ ಕೊನೇ ಮ್ಯಾಚ್​ನಾದ್ರೂ ಗೆಲ್ಲೋ ಟಾರ್ಗೆಟ್​ನಲ್ಲಿದ್ದಾರೆ. ಹೀಗಾಗಿ ಶ್ರೀಲಂಕಾ ಸೋತ್ರೂ ಗೆದ್ರೂ ತನ್ನ ಜೊತೆ ಸಲ್ಮಾನ್ ಅಲಿ ಅಘಾ ನಾಯಕತ್ವದ ಪಾಕಿಸ್ತಾನವನ್ನೂ ಟೂರ್ನಿಯಿಂದ ಕರ್ಕೊಂಡು ಹೋಗೋದು ಪಕ್ಕಾ ಅನ್ಸುತ್ತೆ.

Shwetha M