ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಬಿಗ್‌ ಶಾಕ್‌! – ನಾಮಪತ್ರ ತಿರಸ್ಕರಿಸಿದ ಚುನಾವಣಾ ಆಯೋಗ!

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಬಿಗ್‌ ಶಾಕ್‌! – ನಾಮಪತ್ರ ತಿರಸ್ಕರಿಸಿದ ಚುನಾವಣಾ ಆಯೋಗ!

ಮುಂಬರುವ ಸಂಸತ್‌ ಚುನಾವಣೆ ಸಂಬಂಧ ಎಲ್ಲಾ ರಾಜಕೀಯ ಪಕ್ಷಗಳು ಹೈವೋಲ್ಟೇಜ್ ಸ್ಪರ್ಧೆಗೆ ಸಜ್ಜಾಗುತ್ತಿವೆ. ಈಗಾಗಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಸರ್ಕಸ್‌ ಮಾಡ್ತಿವೆ. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ. ಚುನಾವಣೆ ಸಂಬಂಧ ಪಾಕಿಸ್ತಾನದ ಮಾಜಿ ಪ್ರಧಾನಿ ಮಂತ್ರಿ ಇಮ್ರಾನ್‌ ಖಾನ್‌ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಹಾವಳಿ – ಅಮೆರಿಕ ಪ್ರತಿ ದಾಳಿಗೆ 3 ಬೋಟ್‌ಗಳು ಮುಳುಗಡೆ, 10 ಬಂಡುಕೋರರು ಸಾವು

ಹೌದು, ಪಾಕಿಸ್ತಾನದಲ್ಲಿ ಫೆಬ್ರವರಿಯಲ್ಲಿ ಸಂಸತ್‌ ಚುನಾವಣೆ ನಡೆಯಲಿವೆ. ಮುಂಬರುವ ಸಂಸತ್‌ ಚುನಾವಣೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಮಂತ್ರಿ ಇಮ್ರಾನ್‌ ಖಾನ್‌ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ನಾಮಪತ್ರವನ್ನು ಸಲ್ಲಿದ್ದರು. ಆದರೆ ಇದೀಗ ಇಬ್ರಾನ್‌ ಖಾನ್‌  ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಹೀಗಾಗಿ ಅಧಿಕಾರಕ್ಕೆ ಮರಳುವ ಇಮ್ರಾನ್‌ ಖಾನ್ ಆಶಯಕ್ಕೆ ಭಾರೀ ಪೆಟ್ಟು ಬಿದ್ದಿದೆ.

ತೋಶಾಖಾನ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವುದು, ಲಾಹೋರ್‌ ಕ್ಷೇತ್ರದಲ್ಲಿ ಇಮ್ರಾನ್‌ರ ಪಿಟಿಐ ಪಕ್ಷದ ಸೂಚಕ, ಅನುಮೋದಕ ಇಲ್ಲದಿರುವುದು, ನಾಮಪತ್ರಕ್ಕೆ ಪಿಎಂಎನ್‌ಎಲ್‌ ಪಕ್ಷ ಸೇರಿ ಹಲವರಿಂದ ಆಕ್ಷೇಪಗಳು ಬಂದಿರುವುದರಿಂದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಜಿಯೋ ನ್ಯೂಸ್‌ ವರದಿ ಮಾಡಿದೆ. ಇಮ್ರಾನ್‌ ಜೊತೆಗೆ ಅವರ ಆಪ್ತ ಶಾ ಮಹ್ಮೂದ್‌ ಖುರೇಶಿ ಹಾಗೂ ಹಮ್ಮದ್‌ ಅಝರ್‌ ಅವರ ನಾಮಪತ್ರವನ್ನು ಪಾಕಿಸ್ತಾನ ಚುನಾವಣಾ ಆಯೋಗ ತಿರಸ್ಕರಿಸಿದೆ.

Shwetha M