ಪಾಕಿಸ್ತಾನ VS ಭಾರತ – ಮಹಾ ಪಂದ್ಯವೇ ರದ್ದು!

ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ಹಾಗೂ ಶಾಹಿದ್ ಅಫ್ರಿದಿ ಸಾರಥ್ಯದ ಪಾಕಿಸ್ತಾನ್ ಚಾಂಪಿಯನ್ಸ್ ನಡುವಿನ ಬಹುನಿರೀಕ್ಷಿತ ಮಹಾ ಮುಖಾಮುಖಿ ರದ್ದಾಗಿದೆ. ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಈ ಪಂದ್ಯಕ್ಕೆ ಕೊನೆಯ ಕ್ಷಣದಲ್ಲಿ ಬ್ರೇಕ್ ಬಿದ್ದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಟೂರ್ನಿ ಆಯೋಜಕರ ನಡುವಿನ ‘ಎನ್‌ಒಸಿ’ ಅಂದರೆ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ವಿವಾದವೇ ಪಂದ್ಯ ರದ್ದಾಗಲು ಪ್ರಮುಖ ಕಾರಣ ಎನ್ನಲಾಗಿದೆ. ಆಟಗಾರರ ಭಾಗವಹಿಸುವಿಕೆ ಹಾಗೂ ಮಂಡಳಿಯ ಅನುಮತಿ ವಿಚಾರದಲ್ಲಿ ಉಂಟಾದ ಗೊಂದಲದಿಂದಾಗಿ ಪಂದ್ಯವನ್ನು ನಡೆಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಭುವಿ & ಶಮಿ ODIಗೆ ವಾಪಸ್? – Experiment ಚೆಲ್ಲಾಟ ಮುಗಿಯಿತಾ?
ಯುವರಾಜ್ ಸಿಂಗ್, ಶಾಹಿದ್ ಅಫ್ರಿದಿ ಸೇರಿದಂತೆ ಹಲವು ಮಾಜಿ ಸ್ಟಾರ್ ಆಟಗಾರರು ಒಂದೇ ಮೈದಾನದಲ್ಲಿ ಕಾಣಿಸಿಕೊಳ್ಳಬೇಕಿದ್ದರಿಂದ ಈ ಪಂದ್ಯಕ್ಕೆ ಭಾರೀ ನಿರೀಕ್ಷೆ ಇತ್ತು. ಭಾರತ–ಪಾಕಿಸ್ತಾನ ಪಂದ್ಯ ಎಂದರೆ ಸಾಮಾನ್ಯ ಪಂದ್ಯಕ್ಕಿಂತಲೂ ಹೆಚ್ಚಿನ ಕುತೂಹಲ. ಹೀಗಾಗಿ ಈ ಪಂದ್ಯ ರದ್ದಾಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ವಿಶೇಷವಾಗಿ ಭಾರತ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ನಡುವಿನ ಹಳೆಯ ಕ್ರಿಕೆಟ್ ನೆನಪುಗಳನ್ನು ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದರು. ಆದರೆ ಎನ್‌ಒಸಿ ವಿವಾದದಿಂದಾಗಿ ಈ ನಿರೀಕ್ಷೆಗೆ ತಾತ್ಕಾಲಿಕ ತೆರೆ ಬಿದ್ದಿದೆ.
ಇದೀಗ ಆಯೋಜಕರು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವಿನ ಸಮಸ್ಯೆ ಬಗೆಹರಿಯುತ್ತದೆಯೇ? ಮುಂದಿನ ದಿನಗಳಲ್ಲಿ ಈ ಸ್ಟಾರ್ ಆಟಗಾರರು ಮತ್ತೆ ಮುಖಾಮುಖಿಯಾಗುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತ–ಪಾಕಿಸ್ತಾನ ಚಾಂಪಿಯನ್ಸ್ ಪಂದ್ಯ ರದ್ದಾಗಿರುವುದು ದೊಡ್ಡ ಶಾಕ್ ಆಗಿದೆ.

ನೋಡಿರಿ

