ಪಾಕಿಸ್ತಾನದಲ್ಲಿ ಕುಳಿತು ಪಂಜಾಬ್​ ನಲ್ಲಿ ಕಿಡಿಗೇಡಿ ಕೃತ್ಯ – ಖಲಿಸ್ತಾನಿಗಳಿಗೆ ಧನಸಹಾಯ ಮಾಡ್ತಿರೋದ್ಯಾರು?

ಪಾಕಿಸ್ತಾನದಲ್ಲಿ ಕುಳಿತು ಪಂಜಾಬ್​ ನಲ್ಲಿ ಕಿಡಿಗೇಡಿ ಕೃತ್ಯ – ಖಲಿಸ್ತಾನಿಗಳಿಗೆ ಧನಸಹಾಯ ಮಾಡ್ತಿರೋದ್ಯಾರು?

ಖಲಿಸ್ತಾನ್ ಬೆಂಬಲಿಗರ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಗಂಭೀರ ಆರೋಪ ಮಾಡಿದ್ದಾರೆ. ಖಲಿಸ್ತಾನ್ ಬೆಂಬಲಿಗರಿಗೆ ಪಾಕಿಸ್ತಾನ ಮತ್ತು ಇತರೆ ದೇಶಗಳು ಧನಸಹಾಯ ಮಾಡುತ್ತಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಪ್ರಕ್ಷುಬ್ದ ಘಟನೆಗಳ ಸುತ್ತ ಅಮೃತ್ ಪಾಲ್ ಸಿಂಗ್ ಮತ್ತು ಖಲಿಸ್ತಾನಿಗಳಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಮಾತು ಕೊಟ್ಟು ತಪ್ಪಿದ ಜಗತ್ತಿನ ಶ್ರೀಮಂತ ಎಲಾನ್ ಮಸ್ಕ್ – ಟ್ವಿಟರ್ ಉದ್ಯೋಗಿಗಳಿಗೆ ಇದೆಂಥಾ ಶಿಕ್ಷೆ..?

ಒಂದು ಸಾವಿರ ಜನ ಖಲಿಸ್ತಾಸ್ ಪರ ಘೋಷಣೆಗಳನ್ನ ಕೂಗುತ್ತಿರುವುದನ್ನ ನೋಡಿ ಇಡೀ ಪಂಜಾಬ್ ಇದನ್ನ ಪ್ರತಿನಿಧಿಸುತ್ತಿದೆ ಎಂದು ಭಾವಿಸುತ್ತೀರಾ. ಆದ್ರೆ ನೀವೇ ಪಂಜಾಬ್​ಗೆ ಬಂದು ಅಂತಹ ಘೋಷಣೆಗಳನ್ನು ಕೂಗುತ್ತಿರುವುದನ್ನು ನೋಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಇದರ ಹಿಂದೆ ಇದ್ದಾರೆ. ಮತ್ತು ಅವರು ಪಾಕಿಸ್ತಾನ ಮತ್ತು ಇತರೆ ದೇಶಗಳಿಂದ ಧನಸಹಾಯ ಪಡೆಯುತ್ತಿದ್ದಾರೆ.

ರಾಜಸ್ಥಾನವು ಪಾಕಿಸ್ತಾನದೊಂದಿಗೆ ಹೆಚ್ಚು ಗಡಿ ಹಂಚಿಕೊಂಡಿದ್ದರೂ ಡ್ರೋನ್​ಗಳು ಪಂಜಾಬ್​ನಲ್ಲಿ ಏಕೆ ಇಳಿಯುತ್ತಿವೆ ಗೊತ್ತಾ. ಖಲಿಸ್ತಾನಿಗಳ ಯಜಮಾನರು ಪಾಕಿಸ್ತಾನದಲ್ಲಿ ಕುಳಿತಿದ್ದು ಪಂಜಾಬ್​ಗೆ ತೊಂದರೆ ನೀಡಲು ಬಯಸುತ್ತಾರೆ. ಆದರೆ ಅದನ್ನ ನಾವು ಯಶಸ್ವಿಯಾಗಲು ಬಿಡುವುದಿಲ್ಲ ಎಂದಿದ್ದಾರೆ.

suddiyaana