ಫರ್ಹಾನ್ ಗೆ ಪಟ್ಟ ಕಟ್ಟಿದ PAK – AK 47* ಸೆಲೆಬ್ರೇಷನ್ ಗೆ ಕ್ಯಾಪ್ಟನ್ಸಿ ಗಿಫ್ಟ್?
ಶ್ರೇಯಸ್ ಪಡೆ ಎದುರು ನಿಲ್ಲೋಕಾಗುತ್ತಾ?

ಫರ್ಹಾನ್ ಗೆ ಪಟ್ಟ ಕಟ್ಟಿದ PAK – AK 47* ಸೆಲೆಬ್ರೇಷನ್ ಗೆ ಕ್ಯಾಪ್ಟನ್ಸಿ ಗಿಫ್ಟ್?ಶ್ರೇಯಸ್ ಪಡೆ ಎದುರು ನಿಲ್ಲೋಕಾಗುತ್ತಾ?

ಪಾಕಿಸ್ತಾನ ಕ್ರಿಕೆಟ್​​ನಲ್ಲಿ ಕ್ಯಾಪ್ಟನ್ಸ್ ಹಾಗೇ ಕೋಚ್​ಗಳಿಗೆ ಗೇಟ್​ಪಾಸ್ ಕೊಡೋದು ಹೊಸಬರನ್ನ ಅಪಾಯಿಂಟ್ ಮಾಡಿಕೊಳ್ಳೋದು ಹೊಸದೇನೂ ಅಲ್ಲ. ಈಗ ವೈಟ್ ಬಾಲ್ ಫಾರ್ಮೆಟ್​ನಲ್ಲಿ ಮೇಜರ್ ಸರ್ಜರಿ ಮಾಡಿದ್ದಾರೆ. ಏಷ್ಯನ್ ಗೇಮ್ಸ್​​ಗೆ ಅನೌನ್ಸ್ ಮಾಡಿರೋ ಟೀಮ್​ನಲ್ಲಿ ಸ್ಟಾರ್ಸ್ ಗೆ ಕೊಕ್ ಕೊಟ್ಟು ಯಂಗ್​ಸ್ಟರ್ಸ್​ಗೆ ಮಣೆ ಹಾಕಿದ್ದಾರೆ. ಅದಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ ಫಾರ್ ದಿ ಫಸ್ಟ್ ಟೈಂ ಸಾಹಿಬ್ಜಾದಾ ಫರ್ಹಾನ್​ಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ.

ಇದನ್ನೂ ಓದಿ : ಬೆನ್ ಸ್ಟೋಕ್ಸ್ SHAPE OUT – ಕ್ಯಾಪ್ಟನ್ಸಿ ಜೊತೆ ಕರಿಯರ್ ಖತಂ?

ಜಪಾನ್‌ನ ಐಚಿ – ನಗೋಯಾದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ 2026ರ ಏಷ್ಯನ್ ಗೇಮ್ಸ್ ನಡೆಯಲಿದೆ. ಈ ಕ್ರೀಡಾಕೂಟಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ 15 ಸದಸ್ಯರ ಮೆನ್ಸ್ ಟೀಂ ಅನೌನ್ಸ್ ಮಾಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಕ್ರೀಡಾಕೂಟಕ್ಕೆ ಪಾಕಿಸ್ತಾನ ತಂಡವನ್ನ ಸಾಹಿಬ್​ಜಾದಾ ಫರ್ಹಾನ್ ಲೀಡ್ ಮಾಡಲಿದ್ದಾರೆ. ಅಬ್ದುಲ್ ಸಮದ್​ಗೆ ವೈಸ್ ಕ್ಯಾಪ್ಟನ್ಸಿ ನೀಡಲಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇಲ್ಲಿ ಸ್ಟಾರ್ ಪ್ಲೇಯರ್​ಗಳಿಗೇ ಕೊಕ್ ಕೊಟ್ಟಿದ್ದಾರೆ.

ಬಿಗ್ ಸ್ಟಾರ್ಸ್ ಬಿಟ್ಟು ಏಷ್ಯನ್ ಗೇಮ್ಸ್ ಗೆ ಪಾಕ್ ಟೀಂ ಅನೌನ್ಸ್!

ಏಷ್ಯನ್ ಗೇಮ್ಸ್​ಗೆ ಅನೌನ್ಸ್ ಆಗಿರೋ ಪಾಕ್ ಟೀಮ್​ನಲ್ಲಿ ಎಕ್ಸ್​ಪೀರಿಯನ್ಸ್​ಡ್ ಪ್ಲೇಯರ್ಸ್ ಆಗಿರೋ ಬಾಬರ್ ಅಜಮ್, ಶಾಹೀನ್ ಅಫ್ರಿದಿ, ಶಾದಾಬ್ ಖಾನ್, ಸಲ್ಮಾನ್ ಅಲಿ ಆಘಾ, ಮೊಹಮ್ಮದ್ ರಿಜ್ವಾನ್ ಮತ್ತು ನಸೀಮ್ ಶಾ ಅವರಿಗೆ ಗೇಟ್​ಪಾಸ್ ಕೊಡಲಾಗಿದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್​ಗೂ ತಲುಪಿರಲಿಲ್ಲ. ಹಾಗೇ ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಸೋತ ನಂತರ ತಂಡದಲ್ಲಿ ಸ್ಟಾರ್ ಪ್ಲೇಯರ್ಸ್ ಕಿಕ್ ಔಟ್ ಆಗಿದ್ದಾರೆ. ಹಾಗೇ ಈ ಟೀಮ್​ನಲ್ಲಿ ನಾಲ್ವರು ಅನ್‌ಕ್ಯಾಪ್ಡ್ ಆಟಗಾರರು ಇದ್ದಾರೆ. ಅಕಿಫ್ ಜಾವೇದ್, ಅಲಿ ರಜಾ, ಮಾಜ್ ಸದಾಕತ್ ಮತ್ತು ಸಾದ್ ಮಸೂದ್​ಗೆ ಅವಕಾಶ ನೀಡಿದ್ದಾರೆ.  ಇಲ್ಲಿ ಟೀಮ್​ಗಿಂತ ಜಾಸ್ತಿ ಸದ್ದು ಮಾಡ್ತಿರೋ ಸಾಹಿಬ್ಜಾದಾ ಫರ್ಹಾನ್ ಕ್ಯಾಪ್ಟನ್ಸಿ.

ಕ್ಯಾಪ್ಟನ್ಸಿ ಜವಾಬ್ದಾರಿ ನಿಭಾಯಿಸ್ತಾರಾ ಫರ್ಹಾನ್?

30 ವರ್ಷದ ಸಾಹಿಬ್ಜಾದಾ ಫರ್ಹಾನ್ ಇದುವರೆಗೆ ಪಾಕ್ ಪರ 46 ಟಿ20ಐ ಪಂದ್ಯಗಳನ್ನ ಆಡಿದ್ದಾರೆ. 1,305 ರನ್‌ಗಳು, ಎರಡು ಶತಕಗಳು ಮತ್ತು ಹತ್ತು ಅರ್ಧಶತಕಗಳನ್ನು ಬಾರಿಸಿದ್ದಾರೆ. 2026 ರ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ. ಹೀಗಿದ್ರೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಮುನ್ನಡೆಸುವುದು ಇದೇ ಮೊದಲು. ಇನ್ನು ಐದು ಟಿ20ಐ ಪಂದ್ಯಗಳಲ್ಲಿ ಆಡಿರುವ ಅಬ್ದುಲ್ ಸಮದ್, ಕಳೆದ ವರ್ಷ ಮಾರ್ಚ್‌ನಿಂದ ಚುಟುಕು ಮಾದರಿಯಲ್ಲಿ ಆಡಿರಲಿಲ್ಲ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ರು. ಹೀಗಿದ್ರೂ ಉಪನಾಯಕನ ಪಟ್ಟ ಕಟ್ಟಿರೋದು ಅಚ್ಚರಿಗೆ ಕಾರಣವಾಗಿದೆ.

ಭಾರತದ ವಿರುದ್ಧ ಎಕೆ-47 ರೀತಿ ಬ್ಯಾಟ್ ಹಿಡಿದಿದ್ದ ಫರ್ಹಾನ್!

ಸಾಹಿಬ್ಜಾದಾ ಫರ್ಹಾನ್ 2025ರ ಏಷ್ಯಾಕಪ್​ನಲ್ಲಿ ಪ್ರಚೋದನಾಕಾರಿ ಸೆಲೆಬ್ರೇಷನ್ ಮಾಡಿ ವಿವಾದ ಮಾಡ್ಕೊಂಡಿದ್ರು. ಸೂಪರ್ 4 ಹಂತದ ಮ್ಯಾಚಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿದ್ವು. ಈ ಪಂದ್ಯದಲ್ಲಿ ಭಾರತದ ಎದುರು ಅರ್ಧಶತಕ ಬಾರಿಸಿದ್ದ ಸಾಹಿಬ್ಜಾದಾ ಫರ್ಹಾನ್ ತಮ್ಮ ಬ್ಯಾಟ್​ನ ಎಕೆ-47 ಗನ್ ರೀತಿಯಲ್ಲಿ ಹಿಡಿದು ಮೈದಾನದಲ್ಲೇ ಸೆಲೆಬ್ರೇಷನ್ ಮಾಡಿದ್ದರು. ಟ್ರಿಗರ್ ಒತ್ತಿ ಫೈರ್ ಮಾಡೋ ಥರದಲ್ಲಿ  ಬ್ಯಾಟನ್ನು ಗನ್‌ನಂತೆ ತೋರಿಸಿ ಸಂಭ್ರಮಿಸಿದರು. ಫರ್ಹಾನ್​ರ ಈ ಹುಚ್ಚಾಟದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ವು. ಹೀಗಿದ್ರೂ ಈ ಮ್ಯಾಚ್​ನ ಭಾರತ 6 ವಿಕೆಟ್​ಗಳಿಂದ ಗೆದ್ದಿತ್ತು. ಹಾಗೇ ಫೈನಲ್​ನಲ್ಲೂ ಪಾಕ್ ತಂಡವನ್ನ ಸೋಲಿಸಿ ಚಾಂಪಿಯನ್ ಪಟ್ಟಕ್ಕೂ ಏರಿದ್ರು. ಇನ್ನು ಶ್ರೀಲಂಕಾ ವಿರುದ್ಧದ ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಪ್ರೆಸ್​​ಮೀಟ್​ನಲ್ಲಿ ಫರ್ಹಾನ್ ಅವರನ್ನು ಭಾರತದ ವಿರುದ್ಧದ ವಿವಾದಾತ್ಮಕ ಸಂಭ್ರಮಾಚರಣೆಯ ಬಗ್ಗೆ ಕೇಳಲಾಯಿತು. ಈ ವೇಳೆ ಫರ್ಹಾನ್, ‘ಇದರ ಬಗ್ಗೆ ಯಾರೂ ಏನು ಯೋಚಿಸುತ್ತಾರೆ ಎಂಬುದು ನನಗೆ ಬೇಕಿಲ್ಲ.. ಐ ಡೋಂಟ್ ಕೇರ್… ನಾನು ಬಯಸಿದ ರೀತಿಯಲ್ಲಿ ಸಂಭ್ರಮಿಸಿದೆ ಅನ್ನೋ ಮೂಲಕ ಉದ್ಧಟತನ ಮೆರೆದಿದ್ರು. ಆದ್ರೀಗ ಇದೇ ಫರ್ಹಾನ್ ಕ್ಯಾಪ್ಟನ್ಸಿಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತಕ್ಕೆ ಎದುರಾಳಿಯಾಗೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ ಭಾರತ ಈಗ ಇನ್ನೂ ಸ್ಟ್ರಾಂಗ್!

ಕಳೆದ ಏಷ್ಯಾಕಪ್​ನಲ್ಲಿ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಸೋಲಿಸಿ ಚಾಂಪಿಯನ್ ಆಗಿದ್ರು. ಈ ಸಲ ಏಷ್ಯಾಕಪ್​ನಲ್ಲೂ ಭಾರತ ಡಾಮಿನೇಟ್ ಮಾಡೋದು ಪಕ್ಕಾ. ಯಾಕಂದ್ರೆ ಭಾರತ ತಂಡದಲ್ಲಿ ಕ್ಯಾಪ್ಟನ್ ಬದಲಾಗಿದ್ದಾರೆ. ಶ್ರೇಯಸ್ ಅಯ್ಯರ್ ಲೀಡ್ ಮಾಡ್ತಾರೆ. ಹಾಗೇ ಸಿಡಿಲಮರಿ ವೈಭವ್ ಸೂರ್ಯವಂಶಿ ತಂಡದಲ್ಲಿದ್ದಾರೆ. ಏಷ್ಯಾಕಪ್​ನಲ್ಲೇ ಚಳಿ ಬಿಡಿಸಿದ್ದ ಅಭಿಷೇಕ್ ಶರ್ಮಾ ಕೂಡ ಕಾಯ್ತಿದ್ದಾರೆ. ಹೀಗಾಗಿ ಏಷ್ಯನ್ ಗೇಮ್ಸ್​ನಲ್ಲಿ ಮತ್ತೊಮ್ಮೆ ಪಾಕಿಸ್ತಾನ ಪಂಕ್ಚರ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಒಟ್ನಲ್ಲಿ ಭಾರತ-ಪಾಕ್ ಪಂದ್ಯಗಳು ಅಂದ್ರೇನೆ ಕ್ರಿಕೆಟ್ ಜಗತ್ತಿನ ಗ್ರೇಟೆಸ್ಟ್ ರೈವಲ್ರಿ. ಅದ್ರಲ್ಲೂ ಭಾರತ ಈಗ ಇನ್ನೂ ಸ್ಟ್ರಾಂಗ್ ಆಗಿದೆ. ಹೀಗಾಗಿ ಏಷ್ಯನ್ ಗೇಮ್ಸ್​ನಲ್ಲೂ ಮತ್ತೊಂದು ಹೈವೋಲ್ಟೇಜ್ ಫೈಟ್ ಇರೋದಂತೂ ಪಕ್ಕಾ.

Shantha Kumari

Leave a Reply

Your email address will not be published. Required fields are marked *