ಬರ್ತ್ ಡೇ ಕೇಕ್ ನಲ್ಲಿ 2,000 ಚೇಂಜ್ ತನ್ನಿ ಎಂದು ಬರೆದ ಬೇಕರಿ ಸಿಬ್ಬಂದಿ – ಆಮೇಲೆ ಏನಾಯ್ತು ಗೊತ್ತಾ?  

ಬರ್ತ್ ಡೇ ಕೇಕ್ ನಲ್ಲಿ 2,000 ಚೇಂಜ್ ತನ್ನಿ ಎಂದು ಬರೆದ ಬೇಕರಿ ಸಿಬ್ಬಂದಿ – ಆಮೇಲೆ ಏನಾಯ್ತು ಗೊತ್ತಾ?  

ಕೊವಿಡ್ -19 ಕಾಲದಲ್ಲಿ ಜನರು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದರು. ಹಾಗಾಗಿ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲು ನಾನಾ ಮಾರ್ಗಗಳನ್ನು ಕಂಡುಕೊಳ್ಳಲಾಗಿತ್ತು. ಈ ವೇಳೆ ಜನರು ಹೆಚ್ಚಾಗಿ ಆನ್ ಲೈನ್ ಶಾಪಿಂಗ್ ಗೆ ಮೊರೆಹೋಗುತ್ತಿದ್ದರು. ತಾವು ಉಡೋ ಬಟ್ಟೆಯಿಂದ ಹಿಡಿದು, ತಿನ್ನೋ ಆಹಾರದವರೆಗೂ ಜನರು ಈಗ ಆನ್ ಲೈನ್ ಮುಖಾಂತರವೇ ಖರೀದಿಸುತ್ತಾರೆ. ಜನರಿಂದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಆನ್ ಲೈನ್ ಸೇವೆಯಲ್ಲೂ ಕೆಲವೊಂದು ಎಡವಟ್ಟುಗಳಾಗುತ್ತಿವೆ. ತಾವು ಆರ್ಡರ್ ಮಾಡಿದ ಆಹಾರದ ಬದಲು ಇನ್ಯಾವುದೋ ಆಹಾರ ಬಂದ ಹಲವು ಘಟನೆಗಳು ಇವೆ. ಇದೀಗ ಇವೆಲ್ಲವನ್ನೂ ಮೀರಿಸುವ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: ಐಸಿಯು ಬೆಡ್ ​ನಲ್ಲಿ ಅಮ್ಮ.. ಬಣ್ಣ ಬಳಿದು ಮಗಳ ಸಂಭ್ರಮ – ಜನ್ಮದಾತೆ ಜೊತೆ ಪುತ್ರಿಯ ಹೋಳಿಯಾಟ!

ಪಾಕಿಸ್ತಾನದ ಜಾವೇದ್ ಶಮಿ ಎಂಬಾತ ತನ್ನ ಕುಟುಂಬ ಸದಸ್ಯರ ಹುಟ್ಟು ಹಬ್ಬಕ್ಕೆ ಬೇಕರಿಗೆ ಕರೆ ಮಾಡಿ ಕೇಕ್ ಆರ್ಡರ್ ಮಾಡಿದ್ದಾರೆ. ಬರ್ತ್‌ಡೇ ಕೇಕ್‌ನಲ್ಲಿ ಯಾವುದು ಚೆನ್ನಾಗಿದೆ ಎಂದು ಕೇಳಿದ್ದಾರೆ. ಇದರಲ್ಲಿ ಹಲವು ಆಯ್ಕೆಗಳನ್ನು ನೀಡಿದ್ದಾರೆ. ಈ ಆಯ್ಕೆಯಲ್ಲಿ ಚಾಕೋಲೇಟ್ ಕೇಕ್ ಆರ್ಡರ್ ಮಾಡಿದ್ದಾರೆ. ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಯೂ ನೀಡಿದ್ದಾರೆ. ಫೋನ್ ಕರೆಯ ಕೊನೆಯಲ್ಲಿ ತನ್ನ ಬಳಿ 2,000 ರೂಪಾಯಿ ನೋಟು ಇದೆ.  ಬರುವಾಗ ಚಿಲ್ಲರೆ ತನ್ನಿ ಎಂದು ಮನವಿ ಮಾಡಿದ್ದಾರೆ.

ಆದರೆ ಬೇಕರಿ ಸಿಬ್ಬಂದಿ ಈ ವ್ಯಕ್ತಿಯ ಮಾತನ್ನು ಸಂಪೂರ್ಣವಾಗಿ ಕೇಳಿಸಿಕೊಂಡಿಲ್ಲ. 2,000 ರೂಪಾಯಿ ಚಿಲ್ಲರೆ ತನ್ನಿ ಅನ್ನೋದು ಮಾತ್ರ ಕೇಳಿಸಿಕೊಂಡಿದ್ದಾನೆ. ಬಳಿಕ ಗ್ರಾಹಕ ಆರ್ಡರ್ ಮಾಡಿದಂತೆ ಕೇಕ್ ಮನೆಗೆ ತಲುಪಿದೆ. ಆದರೆ ಕೇಕ್ ಅನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಕುಟುಂಬಸ್ಥರು ಕೇಕ್ ಬಂದ ಕೂಡಲೇ ಬಾಕ್ಸ್ ತೆರೆದು, ಕೇಕ್ ಕಟ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೇಕ್ ನಲ್ಲಿ ಬರೆದ ಪದಗಳನ್ನು ನೋಡಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ವ್ಯಕ್ತಿ ಆರ್ಡರ್ ಮಾಡಿದ ಕೇಕ್ ಮೇಲೆ ಬರ್ತ್ ಡೇ ವಿಶ್ ಬದಲು 2,000 ರೂಪಾಯಿ ಚಿಲ್ಲರೆ ತನ್ನಿ ಎಂದು ಬರೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ಯಾರಲ್ಲೂ ಹಣವಿಲ್ಲ. ಹೀಗಾಗಿ ಚಿಲ್ಲರೆ ಸಿಗೋದು ಕಷ್ಟ. ಕೇಕ್ ಡೆಲಿವರಿ ಮಾಡುವಾಗ ಚಿಲ್ಲರೆ ತನ್ನಿ ಇದರಿಂದ ಕ್ಯಾಶ್ ಆನ್ ಡೆಲಿವರಿ ವೇಳೆ ಸಮಸ್ಯೆ ಎದುರಾಗುವುದಿಲ್ಲ ಅನ್ನೋದು ಗ್ರಾಹಕನ ಸಲಹೆಯಾಗಿತ್ತು. ಆದರೆ ಆರ್ಡರ್ ಪಡೆದ ಬೇಕರಿ ಸಿಬ್ಬಂದಿ ಇದು ಬರ್ತ್‌ಡೆ ಕೇಕ್ ಅನ್ನೋದನ್ನೇ ಮರೆತಿದ್ದಾನೆ. ಗ್ರಾಹಕನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ. ಆದರೆ ಫೋನ್ ಕಾಲ್ ಅಂತ್ಯದಲ್ಲಿ ಒತ್ತಿ ಒತ್ತಿ ಹೇಳಿದ 2,000 ರೂಪಾಯಿಗೆ ಚಿಲ್ಲರೆ ತನ್ನಿ ಅನ್ನೋ ಮಾತು ಕೇಳಿಸಿಕೊಂಡಿದ್ದಾರೆ. ಬೇಕರಿ ಸಿಬ್ಬಂದಿ, ಒತ್ತಿ ಒತ್ತಿ ಹೇಳುತ್ತಿರುವ ಮಾತನ್ನೇ ಕೇಕ್‌ನಲ್ಲಿ ಬರೆಯಲು ಹೇಳಿದ್ದಾರೆ ಎಂದು ಭಾವಿಸಿದ್ದಾನೆ. ಇದರಿಂದಾಗಿ ಈ ಎಡವಟ್ಟು ಆಗಿದೆ ಅಂತಾ ಹೇಳಲಾಗುತ್ತಿದೆ.

suddiyaana