ಪಾಕ್‌ನಲ್ಲಿ ಉ*ಗ್ರರ ಅಟ್ಟಹಾಸ! ಸ್ಫೋಟಕ ತುಂಬಿದ ಕಾರಿನಿಂದ ಬ್ಲಾಸ್ಟ್!!
ಪುಲ್ವಾಮಾ ರೀತಿಯಲ್ಲೇ ಸೇನೆ ಟಾರ್ಗೆಟ್!!

ಪಾಕ್‌ನಲ್ಲಿ  ಉ*ಗ್ರರ ಅಟ್ಟಹಾಸ! ಸ್ಫೋಟಕ ತುಂಬಿದ ಕಾರಿನಿಂದ ಬ್ಲಾಸ್ಟ್!!ಪುಲ್ವಾಮಾ ರೀತಿಯಲ್ಲೇ ಸೇನೆ ಟಾರ್ಗೆಟ್!!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಉಗ್ರರು ದಾಳಿ ಮಾಡುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಪಂದ್ಯದ ವೇಳೆ ರಚಿನ್ ರವೀಂದ್ರರನ್ನ ಮೈದಾನದಲ್ಲೇ  ಉಗ್ರ ಸಂಘಟನೆ ಬೆಂಬಲಿಗ ತಂಬಿಕೊಂಡಿದ್ದ. ಹಾಗೇ ಬಯೋತ್ಪಾದಕರು ಪಾಕಿಸ್ತಾನದ ಪೇಶಾವರ ಸಮೀಪದ ಮಸೀದಿಯ ಹೊರಗೆ ಬಾಂಬ್ ಬ್ಲಾಸ್ಟ್ ಮಾಡಿದ್ರು.. ಇದ್ರಲ್ಲಿ  ಕನಿಷ್ಠ 5 ಮಂದಿ ಸಾವಿಗೀಡಾಗಿ 20 ಮಂದಿ ಗಾಯಗೊಂಡಿದ್ದರು.

ಕಾರಿನಲ್ಲಿ ಬಾಂಬ್ ತುಂಬಿಸಿ ಬ್ಲಾಸ್ಟ್ 

ಈ ಘಟನೆ ಹಸಿರಾಗಿರುವಂತೆಯೇ ಪಾಕಿಸ್ತಾನದಲ್ಲಿ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದೆ. ಈ ಬಾರಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಪಾಕಿಸ್ತಾನದ ಮಿಲಿಟರಿ ಕಾಂಪೌಂಡ್‌ಗೆ ಎರಡು ಸ್ಫೋಟಕ ತುಂಬಿದ ಕಾರುಗಳು ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ಈ ಬಾರಿ 6 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

 ಪಾಕ್ ಮಿಲಿಟರಿ ಕ್ಯಾಂಪ್ ಟಾರ್ಗೆಟ್

ಮಂಗಳವಾರ ಸಂಜೆ ಸೇನಾ ಕಾಂಪೌಂಡ್‌ಗೆ ಎರಡು ಸ್ಫೋಟಕ ತುಂಬಿದ ಕಾರುಗಳನ್ನು ನುಗ್ಗಿಸಿದ ಉಗ್ರರು ಪಾಕ್ ಮಿಲಿಟರಿ ಮೇಲೆ ಆತ್ಮಾಹುತಿ ದಾಳಿಗೆ ಪ್ರಯತ್ನಿಸಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ ಆರು ಪಾಕಿಸ್ತಾನಿ ನಾಗರಿಕರು ಸಾವನ್ನಪ್ಪಿದ್ದಾರೆ  ಎನ್ನಲಾಗಿದೆ. ಇಲ್ಲಿಯವರೆಗೆ ಎರಡೂ ದಾಳಿಗಳಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಆರು ನಾಗರಿಕರು ಸಾವನ್ನಪ್ಪಿದ್ದಾರೆ” ಎಂದು  ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಸೇನಾ ಕ್ಯಾಂಪ್ ಪ್ರವೇಶಕ್ಕೆ ಯತ್ನಿಸಿದ ಉಗ್ರರ  

ಆತ್ಮಾಹುತಿ ಬಾಂಬರ್‌ಗಳು ಬನ್ನು ಕಂಟೋನ್ಮೆಂಟ್‌ನ ಪ್ರವೇಶ ದ್ವಾರಕ್ಕೆ ಎರಡು ಸ್ಫೋಟಕ ತುಂಬಿದ ವಾಹನಗಳನ್ನು ಡಿಕ್ಕಿ ಹೊಡೆಸಿ ಬಾಂಬ್ ಸ್ಫೋಟಿಸಿದ್ದಾರೆ. ಇದರಿಂದಾಗಿ ಭಾರಿ ಸ್ಫೋಟಗಳು ಸಂಭವಿಸಿದ್ದು, ನಂತರ ಹಲವಾರು ಉಗ್ರರು ಕಾಂಪೌಂಡ್‌ಗೆ ನುಗ್ಗಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ  ಅಲ್ಲೇ ಇದ್ದ ಭದ್ರತಾ ಪಡೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ 4 ರಿಂದ 6 ಭಯೋತ್ಪಾದಕರ ಹೆಣ ಬಿದ್ದಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಒಂದು ಜಿಲ್ಲೆಯಾದ ಬನ್ನು, ಅಫ್ಘಾನಿಸ್ತಾನಕ್ಕೆ ಹತ್ತಿರದಲ್ಲಿದೆ. 2001 ರಿಂದ ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಅಫ್ಘಾನ್ ತಾಲಿಬಾನ್ ಅನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದ ಹಫೀಜ್ ಗುಲ್ ಬಹದ್ದೂರ್ ಸಶಸ್ತ್ರ ಗುಂಪು ಈ ದಾಳಿಯ ಹೊಣೆ ಹೊತ್ತಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಉಗ್ರಗಾಮಿ ಗುಂಪು, “ನಮ್ಮ ಹೋರಾಟಗಾರರು ಪ್ರಮುಖ ಗುರಿಯನ್ನು ತಲುಪಿದರು ಮತ್ತು ನಿಯಂತ್ರಣವನ್ನು ಪಡೆದರು” ಎಂದು ಹೇಳಿಕೆಯಲ್ಲಿ ತಿಳಿಸಿದೆ. ಒಟ್ನಲ್ಲಿ ಯಾರನ್ನ ಪಾಕಿಸ್ತಾನ ಹಾಲೆರದು ಬೆಳೆಸಿತ್ತೋ? ಯಾರನ್ನ ಭಾರತ ಮೇಲೆ ಛೂ ಬಿಡುತಿತ್ತೋ?ಅವರೇ ಈಗ ಪಾಕ್‌ಗೆ ಕಂಟಕವಾಗಿದ್ದಾರೆ. ಬಯೋತ್ಪಾದಕರನ್ನ ಎದುರಿಸೋಕೆ ಆಗದ ಪಾಕಿಸ್ತಾನ ಹೆಣಗಾಡುತ್ತಿದೆ..

Kishor KV

Leave a Reply

Your email address will not be published. Required fields are marked *