‘ಸಿದ್ದರಾಮಯ್ಯ ಸ್ಪರ್ಧೆಗೆ ಪಾಕಿಸ್ತಾನವೇ ಸೇಫ್’ – ಸಿ.ಟಿ ರವಿ ವಾಗ್ದಾಳಿ..!
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾದಂತೆಲ್ಲಾ ನಾಯಕರ ಟಾಕ್ ವಾರ್ ಹೆಚ್ಚಾಗುತ್ತಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಸಮರ ಮತ್ತೊಂದು ಹಂತ ತಲುಪಿದೆ. ಅದ್ರಲ್ಲೂ ವಿಪಕ್ಷನಾಯಕ ಸಿದ್ದರಾಮಯ್ಯರನ್ನ ಸಿದ್ದರಾಮುಲ್ಲಾ ಖಾನ್ ಎಂದು ಕರೆಯುವ ಮೂಲಕ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದ ಸಿ.ಟಿ ರವಿ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯಗೆ ಪಾಕಿಸ್ತಾನವೇ ಸೇಫ್ ಜಾಗ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ :ಸಿದ್ದು ಸರ್ಕಾರದಲ್ಲಿ 35 ಸಾವಿರ ಕೋಟಿ ಅವ್ಯವಹಾರ – ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್..!
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ ಬಳಿಕ ಸಾಕಷ್ಟು ಲೆಕ್ಕಾಚಾರಗಳು ನಡೆಯುತ್ತಿವೆ. ಬಿಜೆಪಿಯವರಂತೂ ವಿಪಕ್ಷನಾಯಕರಿಗೇ ಸ್ಪರ್ಧೆಮಾಡಲು ಕ್ಷೇತ್ರ ಇಲ್ಲ ಎಂದು ಟೀಕಿಸಿದ್ದರು. ಇದೇ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ಮತ್ತೊಂದು ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಕೋಲಾರಕ್ಕಿಂತ ಪಾಕಿಸ್ತಾನ ಸೇಫ್ ಜಾಗ. ಯಾಕಂದ್ರೆ ಪಾಕಿಸ್ತಾನದಲ್ಲಿ ಅವರಿಗೆ ಯಾರ ಕಾಟವೂ ಇರಲ್ಲ. ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಯವರು ಇಲ್ಲ. ಯಡಿಯೂರಪ್ಪನವರೂ ಇಲ್ಲ. ಬೊಮ್ಮಾಯಿಯವರೂ ಕೂಡಾ ಇಲ್ಲ. ಪಾಕಿಸ್ತಾನದಲ್ಲಿ ಕಾಟ ಕೊಡಲು ಡಿ.ಕೆ ಶಿವಕುಮಾರ್ ಕೂಡಾ ಇರಲ್ಲ. ಖರ್ಗೆ ಕೂಡಾ ಇರಲ್ಲ. ಅವರ ಮನಸ್ಥಿತಿಗೆ ಸೇಫ್ ಆಗಿರೋದು ಪಾಕಿಸ್ತಾನ ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆ ವಿರುದ್ಧವೂ ಕಿಡಿ ಕಾರಿದ ಸಿ.ಟಿ ರವಿ, ಪ್ರಜಾಧ್ವನಿ ಎಂದರೆ ಜನ ಮಾತನಾಡೋದು. ಆರೇಳು ಸಾವಿರ ಜನ ಸೇರಿಸಿದರೆ ಪ್ರಜಾಧ್ವನಿ ಹೇಗಾಗುತ್ತೆ? ಎಂದು ಪ್ರಶ್ನಿಸಿದರು. ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್ ಧ್ವನಿ ಮಾತ್ರ. ಕಾಂಗ್ರೆಸ್ ನವರು ನಮ್ಮನ್ನು ಬೈಯೋಕೆ ಇರೋದು ಎಂದು ವಾಗ್ದಾಳಿ ನಡೆಸಿದ್ರು. ಹಾಗೇ ನರೇಂದ್ರ ಮೋದಿಯವರು ಅವರಪ್ಪನಾಣೆ ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು. ಮೋದಿ ಎರಡು ಬಾರಿ ಪ್ರಧಾನಿ ಆಗಲಿಲ್ಲವಾ. ಈಗ ಅಪ್ಪನ ಬಗ್ಗೆ ನಾನು ಏನು ಹೇಳಲಿ ಎಂದು ಸಿದ್ದರಾಮಯ್ಯನವರ ಅಪ್ಪನ ಮೇಲಾಣೆ ಎಂಬ ಹೇಳಿಕೆಗೆ ತಿರುಗೇಟು ಕೊಟ್ಟರು.