ಆರ್ಥಿಕವಾಗಿ ಪಾತಾಳ ಸೇರುತ್ತಿದೆ ಪಾಕಿಸ್ತಾನ – ಇನ್ನೆರಡು ತಿಂಗಳಲ್ಲಿ ಪಾಕ್ ಆಟ ಬಂದ್..!

ಆರ್ಥಿಕವಾಗಿ ಪಾತಾಳ ಸೇರುತ್ತಿದೆ ಪಾಕಿಸ್ತಾನ – ಇನ್ನೆರಡು ತಿಂಗಳಲ್ಲಿ ಪಾಕ್ ಆಟ ಬಂದ್..!

ಆರ್ಥಿಕವಾಗಿ ಪಾಕಿಸ್ತಾನ ಈಗಾಗ್ಲೇ ಪಾತಾಳ ಗರಡಿ ಸೇರಿಯಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಭಾರತದ ಒಂದು ಕಂಪನಿಯ ಮಾರ್ಕೆಟ್ ವ್ಯಾಲ್ಯೂನೇ ಪಾಕಿಸ್ತಾನದ ಟೋಟಲ್ ಜಿಡಿಪಿಗಿಂತ ಹೆಚ್ಚು ಮೌಲ್ಯ ಹೊಂದಿದೆ. ಹಾಗೆ ತಮಾಷೆಗೆ ಹೇಳೋದಾದ್ರೆ, ಮನಸ್ಸು ಮಾಡಿದ್ರೆ ಭಾರತದ ಕಂಪನಿಗೆ ಪಾಕಿಸ್ತಾನವನ್ನೇ ಖರೀದಿಸಬಹುದು.

ಇದನ್ನೂ ಓದಿ:ಪಾಕಿಸ್ತಾನದ ನೂತನ ಪ್ರಧಾನಿಯಾಗಿ ನವಾಜ್ ಷರೀಫ್ ಸಹೋದರ ಶಹಬಾಜ್ ಷರೀಫ್ ಆಯ್ಕೆ

ರಾಜಕೀಯ ಅರಾಜಕತೆಯ ಪರಿಣಾಮ ಈಗ ಪಾಕಿಸ್ತಾನದ ಆರ್ಥಿಕತೆಯ ಮೇಲಾಗ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ನಮ್ಮ ದೇಶದ ಹೆಮ್ಮೆಯ ಟಾಟಾ ಕಂಪನಿಯ ಮಾರ್ಕೆಟ್​​ ವ್ಯಾಲ್ಯೂ ಪಾಕಿಸ್ತಾನದ ಟೋಟಲ್​ ಜಿಡಿಪಿಯನ್ನೇ ಕ್ರಾಸ್ ಮಾಡಿದೆ. ಅಂದ್ರೆ ಆರ್ಥಿಕವಾಗಿ ಇಡೀ ಪಾಕಿಸ್ತಾನ ನಮ್ಮ ಟಾಟಾ ಕಂಪನಿಯಷ್ಟೂ ಶಕ್ತಿ ಹೊಂದಿಲ್ಲ. ರನ್ ಟಾಟಾ ಅವರ ಕಂಪನಿಯೇ ಪಾಕಿಸ್ತಾನ ಅನ್ನೋ ದೇಶಕ್ಕಿಂತಲೂ ಶ್ರೀಮಂತವಾಗಿದೆ. ಟಾಟಾ ಗ್ರೂಪ್​ನ ಮಾರ್ಕೆಟ್​ ವ್ಯಾಲ್ಯೂ ಈಗ 30 ಲಕ್ಷ ಕೋಟಿ ದಾಟಿದೆ. ಟಾಟಾ ಗ್ರೂಪ್​ನ ಮಾರ್ಕೆಟ್ ವ್ಯಾಲ್ಯೂ 365 ಬಿಲಿಯನ್ ಡಾಲರ್ ಆಗಿದ್ದು, ಅದೇ ಐಎಂಎಫ್ ಪ್ರಕಾರ ಪಾಕಿಸ್ತಾನದ ಜಿಡಿಪಿ 341 ಬಿಲಿಯನ್ ಡಾಲರ್. ಅಂದ್ರೆ ಟಾಟಾ ಗ್ರೂಪ್​​ಗಿಂತಲೂ ಕಡಿಮೆ. ಅದ್ರಲ್ಲೂ ಟಾಟಾ ಒಡೆತನದ ಟಿಸಿಎಸ್ ಕಂಪನಿಯೇ 170 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಪಾಕಿಸ್ತಾನ ಆರ್ಥಿಕತೆಯ ಅರ್ಧದಷ್ಟು ಮಾರ್ಕೆಟ್ ವ್ಯಾಲ್ಯೂ ಟಿಸಿಎಸ್​ಗೆ ಇದೆ. ಈ ಡೇಟಾದ ಅರ್ಥ ಇಷ್ಟೇ.. ಶೀಘ್ರವೇ ಪಾಕಿಸ್ತಾನ ಆರ್ಥಿಕವಾಗಿ ಸಂಪೂರ್ಣವಾಗಿ ಮಕಾಡೆ ಮಲಗುತ್ತೆ. ಯಾಕಂದ್ರೆ 125 ಬಿಲಿಯನ್ ಡಾಲರ್​ಗೂ ಹೆಚ್ಚು ಸಾಲ ಬೇರೆ ಮಾಡಿಕೊಂಡಿದೆ.

ಸದ್ಯ ಪಾಕಿಸ್ತಾನದ ಫಾರಿನ್ ಎಕ್ಸ್​​ಚೇಂಜ್​​ನಲ್ಲಿರೋ ಹಣ ಕೇವಲ 8 ಬಿಲಿಯನ್ ಡಾಲರ್. ಅಂದ್ರೆ ಮುಂದಿನ ಎರಡು ತಿಂಗಳುಗಳ ಕಾಲವಷ್ಟೇ ಪಾಕಿಸ್ತಾನ ವಿದೇಶಗಳಿಂದ ವಸ್ತುಗಳನ್ನ ಆಮದು ಮಾಡಿಕೊಳ್ಳಬಹುದು. ಆಮೇಲೆ ಆಮದು ಮಾಡಿಕೊಳ್ಳೋಕೂ ಪಾಕ್ ಬಳಿ ಕಾಸು ಇರೋದಿಲ್ಲ. ಟೋಟಲಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಬೀದಿ ಪಾಲಾಗಲಿದೆ. ಫುಲ್ ಫ್ಲೆಡ್ಜ್ ಸರ್ಕಾರ ಬೇರೆ ಅಧಿಕಾರಕ್ಕೆ ಬರ್ತಿಲ್ಲ. ಅಲ್ಲಿ ಖೇಲ್ ಖತಂ..ದುಖಾನ್ ಬಂದ್.. ಮಾನ ಮರ್ಯಾದೆ ಬಿಟ್ಟು ಮತ್ತದೇ ಚೀನಾ, ಅಮೆರಿಕ, ಸೌದಿ ಅರೇಬಿಯಾ ಬಳಿ ಭಿಕ್ಷೆ ಕೇಳೋಕೆ ಹೋಗುತ್ತೆ. ಅವರು ಕೊಡೋ ಜುಜುಬಿ ಕಾಸಿನಲ್ಲೂ ತನ್ನ ಸಾಕು ಉಗ್ರರಿಗೆ ಖರ್ಚು ಮಾಡಿ ಭಾರತದ ಛೂ ಬಿಡುತ್ತೆ. ಮುಂದೆಯೂ ಪಾಕಿಸ್ತಾನ ವಿಚಾರದಲ್ಲಿ ಆಗೋದಿಷ್ಟೇ. ಹೀಗಾಗಿ ಭಾರತ-ಪಾಕ್ ಸಂಬಂಧ ಸುಧಾರಣೆಯಾಗೋದಿಲ್ಲ ಅನ್ನೋದಂತೂ ಪಕ್ಕಾ. ಪಾಕಿಸ್ತಾನದ ಕಥೆ ಹೀಗೇ ಮುಂದುವರಿದ್ರೆ ಅಲ್ಲಿನ ಜನ ನಾವು ಭಾರತದ ಜೊತೆ ಸೇರ್ತೀವಿ ಅಂತಾ ಹೋರಾಟಕ್ಕಿಳಿದ್ರೂ ಆಶ್ಚರ್ಯ ಇಲ್ಲ.

 

Sulekha