ಹೀರೋ ಬದಲು ಝೀರೋ ಆದ ಪಾಕ್ – ಬಾಂಗ್ಲಾ ಮುಂದೆ ಹ್ಯಾಟ್ರಿಕ್ ಸೋಲು
ICC ಟ್ರೋಫಿ ಕದಿತಾರಾ?

ಟಿ-20 ವಿಶ್ವಕಪ್ ಟೈಮಲ್ಲಿ ಬಾಂಗ್ಲಾದೇಶದ ಜೊತೆ ನಾವಿದ್ದೇವೆ ಅಂತಾ ಹೀರೋ ಆಗಲು ಹೋಗಿದ್ದ ಪಾಕಿಸ್ತಾನ ಈಗ ಅವ್ರ ಮುಂದೆಯೇ ಝೀರೋ ಆಗಿದ್ದಾರೆ. ವಿಶ್ವಕಪ್ ಬೆನ್ನಲ್ಲೇ ಏಕದಿನ ಸರಣಿ ಫಿಕ್ಸ್ ಮಾಡಿದ್ದ ಪಾಕ್ ಈಗ ಬಾಂಗ್ಲಾ ನೆಲದಲ್ಲೇ ಸೋತು ಸುಣ್ಣವಾಗಿದೆ. ಸೋತ ಮೇಲೂ ಮೋಸ ಆಗಿದೆ ಅಂತಾ ಕಂಪ್ಲೇಂಟ್ ಫೈಲ್ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಬಾಂಗ್ಲಾ ತಂಡ 2-1 ಅಂತರದಿಂದ ಗೆದ್ದಿದೆ. ಮೊದಲ ಪಂದ್ಯದಿಂದಲೂ ಎರಡೂ ತಂಡಗಳ ನಡುವೆ ದೊಡ್ಡ ಹೈಡ್ರಾಮಾವೇ ನಡೆದು ಕೊನೆಗೂ ಪಾಕಿಸ್ತಾನ ಸೋತು ಸುಣ್ಣವಾಗಿದೆ. ಆದ್ರೆ ಆ ಸೋಲನ್ನೂ ಸುಲಭಕ್ಕೆ ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ಮೋಸದ ಡ್ರಾಮಾ ಶುರು ಮಾಡಿದ್ದಾರೆ.
ಇದನ್ನೂ ಓದಿ : ಗಂಭೀರ್ 13 ವರ್ಷದ ಸಿಟ್ಟು – ಸಚಿನ್ ಗೆ ಕೊಟ್ಟ ಶಾಕ್ ಹೇಗಿತ್ತು?
ಬಾಂಗ್ಲಾ ವಿರುದ್ಧವೂ ಸೋತು ಸುಣ್ಣವಾದ ಪಾಕಿಸ್ತಾನ!
ಭಾನುವಾರ ಮಿರ್ಪುರ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290 ರನ್ಗಳನ್ನ ಕಲೆ ಹಾಕಿತ್ತು. ತಂಜಿದ್ ಹಸನ್ 107 ರನ್‌ಗಳ ಇನ್ನಿಂಗ್ಸ್ ಆಡಿದ್ರು. ಈ ಟಾರ್ಗೆಟ್ ಬೆನ್ನತ್ತಿದ್ದ ಪಾಕಿಸ್ತಾನ ಪರ ಸಲ್ಮಾನ್ ಅಲಿ ಆಘಾ ಕೂಡ 106 ರನ್‌ಗಳ ಇನ್ನಿಂಗ್ಸ್ ಆಡಿದ್ರು. ಆದ್ರೆ ಪಾಕಿಸ್ತಾನ 50 ಓವರ್ಗಳಲ್ಲಿ ಆಲೌಟ್ ಆಗೋ ಮೂಲಕ 279 ರನ್ಗಳನ್ನ ಕಲೆ ಹಾಕಲಷ್ಟೇ ಸಾಧವಾಯ್ತು. ಈ ಮೂಲಕ 11 ರನ್ಗಳಿಂದ ಪಾಕಿಸ್ತಾನ ಸೋಲೊಪ್ಪಿಕೊಳ್ತು. ಇಂಟ್ರೆಸ್ಟಿಂಗ್ ಅಂದ್ರೆ ಬಾಂಗ್ಲಾದೇಶದ ಗೆಲುವಿಗೆ ಪಾಕಿಸ್ತಾನದ ಬೌಲರ್ಸ್ ನೀಡಿದ ಹೆಚ್ಚುವರಿ ರನ್ಗಳೂ ಕಾರಣ ಆಯ್ತು. 26 ಎಕ್ಸ್ಟ್ರಾ ನೀಡಿದ್ರು. ಆದ್ರೆ ಬಾಂಗ್ಲಾ ಬೌಲರ್ಸ್ ಹೆಚ್ಚುವರಿ 9 ರನ್ಗಳನ್ನಷ್ಟೇ ನೀಡಿದ್ರು. ಹೀಗೆ ಬ್ಯಾಟಿಂಗ್, ಬೌಲಿಂಗ್ನಲ್ಲೂ ಇಂಪ್ಯಾಕ್ಟ್ ಮಾಡಿದ ಬಾಂಗ್ಲಾ ಪ್ಲೇಯರ್ಸ್ ಹೊರ ಇತಿಹಾಸವನ್ನೇ ಬರೆದಿದ್ದಾರೆ.
ಪಾಕ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಾಂಗ್ಲಾ!
ಬಾಂಗ್ಲಾದೇಶ ಈಗ ಪಾಕಿಸ್ತಾನ ಕ್ರಿಕೆಟ್ಗಿಂತ ಬೆಸ್ಟ್ ಅನ್ನೋ ಥರನೇ ಇದೆ. ಓಡಿಐ ರ್ಯಾಂಕಿಂಗ್ನಲ್ಲಿ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದ್ರೆ ಬಾಂಗ್ಲಾದೇಶ 10ನೇ ಸ್ಥಾನದಲ್ಲಿದೆ. ಬಟ್ ಪರ್ಫಾಮೆನ್ಸ್ ಅಂತಾ ಬಂದಾಗ ಪಾಕ್ಗಿಂದ ಬಾಂಗ್ಲಾ ಎಷ್ಟೋ ಬೆಟರ್ ಇದೆ. ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶವು ಪಾಕಿಸ್ತಾನ್ ವಿರುದ್ಧ ಅದ್ಭುತ ಪ್ರದರ್ಶನ ನೀಡ್ತಾನೇ ಬರ್ತಿದೆ. ಌಂಡ್ ಬ್ಯಾಕ್ ಟು ಬ್ಯಾಕ್ ಸರಣಿ ಗೆಲ್ಲುತ್ತಿದೆ.
ಪಾಕ್ ವಿರುದ್ಧ ಹ್ಯಾಟ್ರಿಕ್ ಗೆಲುವು!
2024ರಲ್ಲಿ ಪಾಕಿಸ್ತಾನದಲ್ಲೇ 2-0ಯಿಂದ ಟೆಸ್ಟ್ ನಲ್ಲಿ ಮೊದಲ ಗೆಲುವು
2025ರಲ್ಲಿ ಟಿ-20ಐ ಸರಣಿಯಲ್ಲಿ 2-1 ಅಂತರದಿಂದ ಸೋಲಿಸಿದ ಬಾಂಗ್ಲಾ
2026ರಲ್ಲಿ ಏಕದಿನ ಸರಣಿ 2-1 ಅಂತರದಿಂದ ಸೋಲಿಸಿದ ಪಾಕಿಸ್ತಾನ
ಹೀಗೆ ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾ ವಿರುದ್ಧ ಕಂಪ್ಲೀಟ್ ಆಗಿ ಸರೆಂಡರ್ ಆಗಿದೆ. ಅಷ್ಟೇ ಅಲ್ಲದೆ ಬಾಂಗ್ಲಾದೇಶ್ ತಂಡವು ಪಾಕಿಸ್ತಾನದ ವಿರುದ್ಧ 11 ವರ್ಷಗಳ ನಂತರ ಮೊದಲ ಬಾರಿಗೆ ಏಕದಿನ ಸರಣಿಯನ್ನು (2-1 ರಿಂದ) ಗೆದ್ದುಕೊಂಡಿದೆ. 2015 ರ ಬಳಿಕ ಪಾಕ್ ವಿರುದ್ಧ ಒಮ್ಮೆಯೂ ಬಾಂಗ್ಲಾ ತಂಡ ಗೆದ್ದಿರಲಿಲ್ಲ. ಆದ್ರೂ ಈ ಸೋಲನ್ನ ಪಾಕಿಸ್ತಾನ ಒಪ್ಪಿಕೊಳ್ಳೋಕೆ ರೆಡಿ ಇಲ್ಲ.
ಶಿಷ್ಟಾಚಾರ ಪಾಲಿಸಿಲ್ಲ ಎಂದು ಅಂಪೈರ್, ರೆಫರಿ ವಿರುದ್ಧ ದೂರು!
ಕೊನೇ ಓವರ್ವರೆಗೂ ಪಾಕಿಸ್ತಾನ ಗೆಲುವಿನ ರೇಸ್ನಲ್ಲೇ ಇತ್ತು. ರಿಷದ್ ಹೊಸೈನ್ ಎಸೆದ ಕೊನೆಯ ಓವರ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ 14 ರನ್‌ಗಳು ಬೇಕಾಗಿದ್ದವು. ಮೊದಲ ನಾಲ್ಕು ಎಸೆತಗಳಲ್ಲಿ 2 ರನ್‌ಗಳು ಬಂದವು, ಕೊನೆಯ ಎರಡು ಎಸೆತಗಳಲ್ಲಿ ಪಾಕಿಸ್ತಾನಕ್ಕೆ 12 ರನ್‌ಗಳು ಬೇಕಾಗಿದ್ದವು. ರಿಷದ್ ಹೊಸೈನ್ ಅವರು ಸ್ಟ್ರೈಕ್ನಲ್ಲಿದ್ದ ಶಾಹೀನ್ ಅಫ್ರಿದಿಗೆ ಎಸೆದ 5ನೇ ಚೆಂಡನ್ನು ಅಂಪೈರ್ ಕುಮಾರ್ ಧರ್ಮಸೇನ ಅವರು ವೈಡ್ ಎಂದು ಘೋಷಿಸಿದ್ರು. ಆದರೆ, ರಿಷದ್ ಹೊಸೈನ್ ಮತ್ತು ಲಿಟ್ಟನ್ ದಾಸ್ ರಿವ್ಯೂ ತೆಗೆದುಕೊಂಡರು. ಆಗ ಚೆಂಡು ಬ್ಯಾಟ್‌ಗೆ ಎಡ್ಜ್ ಆಗಿರುವುದು ಗೊತ್ತಾಯ್ತು. ಸೋ ವೈಡ್ ಕೊಡ್ಲಿಲ್ಲ. ಅಂತಿಮವಾಗಿ ಕೊನೇ ಎಸೆತದಲ್ಲಿ ಆಫ್ರಿದಿ ಕ್ಲೀನ್ ಬೌಲ್ಡ್ ಆದ್ರು. ಆದ್ರೆ ರಿವ್ಯೂ ತೆಗೆದುಕೊಳ್ಳಲು ಬಾಂಗ್ಲಾದೇಶಕ್ಕೆ ಧರ್ಮಸೇನ ಅವಕಾಶ ನೀಡಿದ ನಿರ್ಧಾರದ ಬಗ್ಗೆ ಪಾಕಿಸ್ತಾನ ಮ್ಯಾಚ್ ರೆಫರಿ ನೀಯಮೂರ್ ರಶೀದ್‌ಗೆ ದೂರು ನೀಡಿದೆ. ಆನ್ಸ್ಕ್ರೀನ್ನಲ್ಲಿ ಬಾಲ್ ರಿಪ್ಲೇ ತೋರಿಸಿದ ಮೇಲೆ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿದೆ ಎಂಬ ಆಧಾರದ ಮೇಲೆ ಪಾಕಿಸ್ತಾನ ಆಡಳಿತ ಮಂಡಳಿ ತಮ್ಮ ದೂರನ್ನು ದಾಖಲಿಸಿದೆ. ಯಾವುದೇ ರೀಪ್ಲೇ ತೋರಿಸುವ ಮೊದಲು ರಿವ್ಯೂ ತೆಗೆದುಕೊಳ್ಳಬೇಕು. ‘ಆ ಸಾಮಾನ್ಯ ಶಿಷ್ಟಾಚಾರಗಳನ್ನು ಪಾಲಿಸಿಲ್ಲ ಎಂದು ಪಾಕಿಸ್ತಾನ ವಾದಿಸಿದೆ. ರಿವ್ಯೂವನ್ನು 15 ಸೆಕೆಂಡ್‌ಗಳ ಒಳಗೆ ತೆಗೆದುಕೊಳ್ಳಬೇಕು. ಆದರೆ, ಬಾಂಗ್ಲಾದೇಶ ತಡ ಮಾಡಿದೆ. ಯಾವುದೇ ಟೈಮರ್ ಕೂಡ ತೋರಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದೆ.
ಟ್ರೋಫಿಗಳನ್ನ ಕದ್ದು ಮನೆಗೆ ತರುತ್ತೀರಾ ಎಂದ ಅಕ್ಮಲ್!
ಪಾಕಿಸ್ತಾನಿ ಆಟಗಾರರ ಫ್ಲ್ಯಾಪ್ ಶೋ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಸಿಡಿಮಿಡಿಗೊಂಡಿದ್ದಾರೆ. ಈಗ ನೆದರ್ಲ್ಯಾಂಡ್ಸ್ ಕೂಡ ನಮ್ಮ ವಿರುದ್ಧ ಸರಣಿ ಆಡಲು ಬಯಸುತ್ತದೆ. ನಂತರ ನಮ್ಮನ್ನು ಸೋಲಿಸಿ ಟೆಸ್ಟ್ ಸ್ಥಾನಮಾನವನ್ನು ಪಡ್ಕೊಳ್ತಾರೆ. ಪಾಕಿಸ್ತಾನ ಕ್ರಿಕೆಟ್‌ನ ಇಂದಿನ ಸ್ಥಿತಿ ಇದು ಎಂದಿದ್ದಾರೆ. ಹಾಗೇ ನೀವು ಪಂದ್ಯಗಳಲ್ಲಿ ತಂಡಗಳನ್ನು ಸೋಲಿಸದಿದ್ದರೆ, ಐಸಿಸಿ ಟ್ರೋಫಿಗಳನ್ನು ಕದ್ದು ಮನೆಗೆ ತರುತ್ತೀರಾ? ಅನ್ನೋ ಮೂಲಕ ಮೊಹ್ಸಿನ್ ನಖ್ವಿಗೂ ಟಾಂಟ್ ಕೊಟ್ಟಿದ್ದಾರೆ. 2025ರ ಏಷ್ಯಾ ಕಪ್ ಟ್ರೋಫಿಯನ್ನು ಗೆದ್ದಿದ್ದ ಭಾರತಕ್ಕೆ ಟ್ರೋಫಿ ಕೊಡದೆ ನಖ್ವಿ ಹೊತ್ತೊಯ್ದಿದ್ದರು. ಇನ್ನು ಪಾಕಿಸ್ತಾನ ಹೀಗೆ ಸಾಲು ಸಾಲು ಪಂದ್ಯಗಳನ್ನ ಸೋಲ್ತದ್ರೆ ಕ್ಯಾಪ್ಟನ್ ಶಾಹಿನ್ ಅಫ್ರಿದಿ ಮಾತ್ರ ನಾವು ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದೇವೆ. ನಮ್ಮ ಯಂಗ್ಸ್ಟರ್ಸ್ ಅದ್ಭುತ ಪ್ರದರ್ಶನ ನೀಡಿದ್ರು ಎಂದಿದ್ದಾರೆ.

ನೋಡಿರಿ

