PSLನಲ್ಲೂ ಮಾನ ಕಳ್ಕೊಂಡ PAK – ಬಾಲ್ ಟ್ಯಾಂಪರಿಂಗ್ ಮಾಡಿ ಬ್ಯಾನ್
ಚೀಪ್ ಜೆರ್ಸಿ.. ಪಿಂಕ್ ಬಾಲ್.. ಫ್ಯಾನ್ಸ್ ಇಲ್ಲ!

ವರ್ಲ್ಡ್ ಕ್ರಿಕೆಟ್ನಲ್ಲಿ ನಂಬರ್ 1 ಲೀಗ್ ಆಗ್ತೀವಿ ಅಂತಾ ಬಿಲ್ಡಪ್ ಕೊಟ್ಟು ಸ್ಟಾರ್ಟ್ ಮಾಡಿದ್ದ ಪಾಕಿಸ್ತಾನ ಸೂಪರ್ ಲೀಗ್ ಈ ಸೀಸನ್ನಲ್ಲಿ ಪಾಕಿಸ್ತಾನ್ ಶೇಪ್ ಔಟ್ ಲೀಗ್ ಆಗಿ ಬದ್ಲಾಗಿದೆ. ಟೂರ್ನಿ ಸ್ಟಾರ್ಟ್ ಆದ ಫಸ್ಟ್ ಡೇನಿಂದ ಹಿಡ್ದು ಸ್ಟಿಲ್ ಈವರೆಗೂ ಒಂದಿಲ್ಲೊಂದು ಕಾಂಟ್ರವರ್ಸಿಗಳೇ. ಸೋಶಿಯಲ್ ಮೀಡಿಯಾದಲ್ಲಂತೂ ಫುಲ್ ಟ್ರೋಲ್. ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸ್ತಿರೋ ಪಿಸಿಬಿ ವಿಶ್ವಮಟ್ಟದಲ್ಲಿ ಮಾನ ಕಳ್ಕೊಂಡಿದೆ.
ಇದನ್ನೂ ಓದಿ : RCB ಗೇಮ್ ಚೇಂಜರ್ ಡಫಿ – ಡೆಬ್ಯೂ ಮ್ಯಾಚಲ್ಲೇ ಡೆಡ್ಲಿ ಬೌಲಿಂಗ್
ಐಪಿಎಲ್ಗೂ ಎರಡು ದಿನ ಮೊದಲೇ ಕ್ರಿಕೆಟ್ ಫ್ಯಾನ್ಸ್ನ ಪಿಎಸ್ಎಲ್ನಲ್ಲಿ ಎಂಗೇಜ್ ಮಾಡ್ತೀವಿ ಅಂತಾ ಮಾರ್ಚ್ 26ಕ್ಕೆ ಟೂರ್ನಿ ಸ್ಟಾರ್ಟ್ ಮಾಡಿದ್ರು. ಗಲ್ಫ್ ರಾಷ್ಟ್ರಗಳ ಯುದ್ಧ, ಇಂಧನ ಕೊರತೆ ಹಾಗೇ ಆಫ್ಘನ್ ದೇಶದ ಎಚ್ಚರಿಕೆಯಿಂದಾಗಿ ಪಂದ್ಯಗಳ ವೇಳೆ ಅಭಿಮಾನಿಗಳೇ ಇಲ್ಲದೆ ಖಾಲಿ ಸ್ಟೇಡಿಯಮ್ಲ್ಲಿ ಆರಂಭಿಸಿದ್ರು. ಆದ್ರೆ ಪಿಸಿಬಿ ಎಷ್ಟೇ ಸೇಫ್ ಗೇಮ್ ಆಡೋಕೆ ಹೋದ್ರೂ ಅಲ್ಲಿನ ಆಟಗಾರರೇ ಅವ್ರ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಾಕಿದ್ದಾರೆ. ಲೀಗ್ ಆಡೋಕೆ ಬಂದ ವಿದೇಶಿ ಆಟಗಾರರಂತೂ ಯಾಕಾದ್ರೂ ಬಂದ್ವೋ ಅಂತಿದ್ದಾರೆ.
ನಂಬರ್ 1
ಪ್ರೆಸ್ ಮೀಟ್ ನಲ್ಲೇ ಪಾಕ್ ಆಟಗಾರರಿಗೆ ವಾರ್ನರ್ ಕ್ಲಾಸ್!
ಪಿಎಸ್ಎಲ್ ಆರಂಭವಾಗುವ ಮೊದ್ಲೇ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ ಪಾಕಿಸ್ತಾನ ಆಟಗಾರರಿಗೆ ಕ್ಲಾಸ್ ತಗೊಂಡಿದ್ರು. ಡೇವಿಡ್ ವಾರ್ನರ್ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡ್ತಿದ್ರು. ಈ ವೇಳೆ ಅಲ್ಲೇ ಇದ್ದ ಇತರೆ ತಂಡಗಳ ಪಾಕಿಸ್ತಾನಿ ನಾಯಕರು ಜೋಕ್ ಮಾಡಿಕೊಂಡು ನಗ್ತಿದ್ರು. ಪ್ರೆಸ್ಮೀಟ್ನ ಮಹತ್ವ ಗೊತ್ತಿಲ್ಲದವ್ರಂತೆ ಬಿಹೇವ್ ಮಾಡ್ತಿದ್ರು. ಇದ್ರಿಂದ ಸಿಟ್ಟಾದ ವಾರ್ನರ್ ಎಲ್ಲರ ಮುಂದೆಯೇ ಕ್ಲಾಸ್ ತಗೊಂಡಿದ್ರು. ವಾಟ್ ಹ್ಯಾಪೆಂಡ್ ಜೆಂಟಲ್ಮೆನ್ಸ್.. ಇಲ್ಲಿ ಕೆಲವರು ಶಾಲಾ ಮಕ್ಕಳಂತೆ ವರ್ತಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹೇಗೆ ವರ್ತಿಸಬೇಕೆಂದು ಅವರಿಗೆ ತಿಳಿದಿಲ್ಲವೇ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ವಾರ್ನರ್ ಮಾತುಗಳಿಂದ ಪಾಕಿಸ್ತಾನಿ ಪ್ಲೇಯರ್ಸ್ ಬೆಪ್ಪಾಗಿ ಕುಳಿತಿದ್ರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ನಂಬರ್ 2
ಪೈಸಾ ಶಾರ್ಟೇಜ್ ಲೀಗ್ ನಲ್ಲಿ ಬಣ್ಣ ಕಳಚಿದ ಜೆರ್ಸಿ.. ಪಿಂಕ್ ಬಾಲ್ ಅಚ್ಚರಿ!
ಗಲ್ಲಿ ಕ್ರಿಕೆಟರ್ಸ್ ಕೂಡ ಮ್ಯಾಚ್ ಆಡುವಾಗ ತಾವೇ ದುಡ್ಡು ಹಾಕಿ ಒಳ್ಳೊಳ್ಳೆ ಜೆರ್ಸಿ ತಗೊಳ್ತಾರೆ. ಆದ್ರೆ ಪಾಕಿಸ್ತಾನಿ ಸೂಪರ್ ಲೀಗ್ನಲ್ಲಿ ವರ್ಲ್ಡ್ಕ್ಲಾಸ್ ಆಟಗಾರರು ಬಳಸೋ ಜರ್ಸಿ ಬಣ್ಣ ಬಟಾಬಯಲಾಗಿತ್ತು. ಶಾಹೀನ್ ಅಫ್ರಿದಿ ನೇತೃತ್ವದ ಲಾಹೋರ್ ಖಲಂದರ್ಸ್ ಹಾಗೇ ಮಾರ್ನಸ್ ಲ್ಯಾಬುಶೇನ್ ನೇತೃತ್ವದ ಹೈದರಾಬಾದ್ ಕಿಂಗ್ಸ್‌ಮೆನ್ ತಂಡದ ನಡುವಿನ ಮ್ಯಾಚ್ನಲ್ಲಿ ವೈಟ್ ಬಾಲ್ ಪಿಂಕ್ ಬಾಲ್ ಆಗಿ ಕನ್ವರ್ಟ್ ಆಗಿತ್ತು. ಅದಕ್ಕೆ ಕಾರಣ ಹೈದ್ರಾಬಾದ್ ತಂಡದ ಆಟಗಾರರು ಹಾಕಿದ್ದ ಜೆರ್ಸಿ. ಲೋ ಕ್ವಾಲಿಟಿ ಜೆರ್ಸಿ ಆಗಿದ್ರಿಂದ ಬೌಲರ್ಗಳು ಬಾಲ್ನ ತಮ್ಮ ಬಟ್ಟೆಗೆ ಉಜ್ಜಿಕೊಳ್ತಿದ್ದರಿಂದ ಬಾಲ್ ಪಿಂಕ್ ಬಣ್ಣಕ್ಕೆ ತಿರುಗಿತ್ತು.
ವೈಟ್ ಬಾಲ್ ಹೋಗಿ ಪಿಂಕ್ ಆಗಿದ್ದನ್ನ ನೋಡಿ ಶಾಕ್ ಆದ ಆಸ್ಟ್ರೇಲಿಯಾ ಮೂಲದ ಲ್ಯಾಬುಶೇನ್ ಅಂಪೈರ್ ಬಳಿ ತೆರಳಿ ದೂರು ನೀಡಿದ್ರು. ಹಾಗೇ ಬೇರೆ ಬಾಲ್ ತಗೊಂಡಿದ್ರು. ಪಂದ್ಯದ ಬಳಿಕ ಮಾತ್ನಾಡಿದ್ದ ಲ್ಯಾಬುಶೇನ್ ನನ್ನ ಕ್ರಿಕೆಟ್ ಕರಿಯರ್ನಲ್ಲೇ ಇಂಥಾದ್ದೊಂದು ಘಟನೆ ನೋಡೇ ಇರ್ಲಿಲ್ಲ ಅನ್ನೋ ಮೂಲಕ ಪಿಎಸ್ಎಲ್ ಮಾನ ಕಳೆದಿದ್ರು. ಸೋಶಿಯಲ್ ಮೀಡಿಯಾಗಳಲ್ಲೂ ಪಾಕಿಸ್ತಾನಕ್ಕೆ ಜೆರ್ಸಿಗೂ ದುಡ್ಡಿಲ್ಲ. ಪೆಟ್ರೋಲ್ ಶಾರ್ಟೇಜ್ ಲೀಗ್, ಪೈಸಾ ಶಾರ್ಟೆಜ್ ಲೀಗ್ ಅಂತೆಲ್ಲಾ ಟ್ರೋಲ್ ಮಾಡಿದ್ರು.
ನಂಬರ್ 3
ಬಾಲ್ ಟ್ಯಾಂಪರಿಂಗ್ ಮಾಡಿ ಆನ್ ಫೀಲ್ಡ್ ನಲ್ಲೇ ಸಿಕ್ಕಿಬಿದ್ದ!
ಇನ್ನು ಪಾಕಿಸ್ತಾನ ಸೂಪರ್ ಲೀಗ್ನ ಮತ್ತೊಂದು ಶೇಮ್ಫುಲ್ ಇನ್ಸಿಡೆಂಟ್ ಅಂದ್ರೆ ಬಾಲ್ ಟ್ಯಾಂಪರಿಂಗ್. ಅದೂ ಕೂಡ ಪಾಕಿಸ್ತಾನದ ರಾಷ್ಟ್ರೀಯ ತಂಡದ ಆಟಗಾರನಿಂದಲೇ ನಡೆದಿರೋ ಕಳ್ಳಾಟ. ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡದ ಪರ ಆಡ್ತಿದ್ದ ಫಖರ್ ಜಮಾನ್ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದಾನೆ. ಕೊನೇ ಓವರ್ನಲ್ಲಿ ಕರಾಚಿ ಕಿಂಗ್ಸ್ ತಂಡದ ಗೆಲುವಿಗೆ 14 ರನ್ಸ್ ಬೇಕಿತ್ತು. ಈ ವೇಳೆ ಬೌಲರ್ ರೌಫ್, ನಾಯಕ ಆಫ್ರಿದಿ ಮತ್ತು ಫಖರ್ ಚರ್ಚೆ ಮಾಡ್ತಿದ್ರು. ಆಗ ಚೆಂಡನ್ನ ಉಗುರಿನಿಂದ ಪರಚಿರೋದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೆಂಡನ್ನ ಪರಿಶೀಲಿಸಿದ ಅಂಪೈರ್ 5 ರನ್ಗಳ ಪೆನಾಲ್ಟಿ ಹಾಕಿದ್ರು. ಪರಿಣಾಮ ಗೆಲುವಿಗೆ 14 ರನ್ಸ್ ಬದಲು 9 ರನ್ಸ್ಗೆ ಇಳಿಯಿತು. ಅಂತಿಮವಾಗಿ ಕರಾಚಿ ಕಿಂಗ್ಸ್ ತಂಡ ಪಂದ್ಯವನ್ನ ಗೆದ್ದಿದೆ. ಇನ್ನು ಬಾಲ್ ಟ್ಯಾಂಪರಿಂಗ್ ಆರೋಪ ಕನ್ಫರ್ಮ್ ಆಗಿದ್ದು ಫಖರ್ ಜಮಾನ್ಗೆ ಪಿಎಸ್ಎಲ್ನ ಮುಂದಿನ ಎರಡು ಪಂದ್ಯಗಳಿಂದ ಬ್ಯಾನ್ ಮಾಡಲಾಗಿದೆ.
ನಂಬರ್ 4
ಶಾಹೀನ್ ಆಫ್ರಿದಿ ಮತ್ತು ಸಿಕಂದರ್ ರಾಜಾ ವಿರುದ್ಧ ತನಿಖೆ!
ಇನ್ನು ಲಾಹೋರ್ ಖಲಂದರ್ಸ್ ಪರ ಆಡ್ತಿರೋ ಶಾಹೀನ್ ಅಫ್ರಿದಿ ಮತ್ತು ಸಿಕಂದರ್ ರಜಾ ಭದ್ರತಾ ಉಲ್ಲಂಘನೆ ಆರೋಪ ಎದುರಿಸ್ತಿದ್ದಾರೆ. Serious violation of established security protocols ಅಂತಾ ಭದ್ರತಾ ಸಿಬ್ಬಂದಿ ಫುಲ್ ಗರಂ ಆಗಿದ್ದಾರೆ. ವಿಷ್ಯ ಏನಂದ್ರೆ ಪಾಕಿಸ್ತಾನ ಸೂಪರ್ ಲೀಗ್ಗೆ ದಾಳಿಯ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ 8 ತಂಡಗಳ ಆಟಗಾರರನ್ನ ಒಂದು ಹೋಟೆಲ್ನಲ್ಲಿರಿಸಿ ಬಿಗಿ ಭದ್ರತೆ ನೀಡಲಾಗ್ತಿದೆ. ಸೋ ಆಟಗಾರರ ಹೊರತುಪಡಿಸಿ ಬೇರೆ ಯಾರೂ ಕೂಡ ಹೋಟೆಲ್ಗೆ ಪ್ರವೇಶಿಸುವಂತಿಲ್ಲ. ಹೀಗಿದ್ರೂ ಶಾಹೀನ್ ಆಫ್ರಿದಿ ಮತ್ತು ಸಿಕಂದರ್ ರಾಜಾ ನಾಲ್ವರು ವಿಸಿಟರ್ಗಳನ್ನ ಬಲವಂತವಾಗಿ ಹೋಟೆಲ್ ರೂಮ್ ಒಳಗೆ ಕರೆದೊಯ್ದಿದ್ದಾರೆ ಅಂತಾ ಡೆಪ್ಯೂಟಿ ಪೊಲೀಸ್ ಇನ್ಸ್ಪೆಕ್ಟರ್ವೊಬ್ಬರು ಪಿಎಸ್ಎಲ್ ಸಿಇಒ ಸಲ್ಮಾನ್ ನಾಸೀರ್ಗೆ ಪತ್ರ ಬರೆದಿದ್ದಾರೆ. ಭದ್ರತಾ ವ್ಯವಸ್ಥೆಯನ್ನ ಉಲ್ಲಂಘನೆ ಮಾಡಿದ್ದಕ್ಕೆ ಸಿಟ್ಟಾಗಿರೋ ಪಿಸಿಬಿ ಅಧ್ಯಕ್ಷ ನಖ್ವಿ ತನಿಖೆಗೆ ಆದೇಶಿಸಿದ್ದಾರೆ.
ನಂಬರ್ 5
ಮುಖ್ಯಮಂತ್ರಿಯನ್ನೇ ಹೀಯಾಳಿಸಿ ಪೋಸ್ಟ್ ಹಾಕಿದ ಪಾಕ್ ಪ್ಲೇಯರ್!
ಇನ್ನು ಪಾಕಿಸ್ತಾನದ ರಾಷ್ಟ್ರೀಯ ತಂಡದ ಆಟಗಾರ ಹಾಗೇ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ರಾವಲ್ಪಿಂಡಿಸ್ ತಂಡದ ಪರ ಕಣಕ್ಕಿಳಿಯುತ್ತಿರೋ ನಸೀಮ್ ಶಾ ತಮ್ಮದೇ ದೇಶದ ಮುಖ್ಯಮಂತ್ರಿ ಬಗ್ಗೆ ನಾಲಗೆ ಹರಿಬಿಟ್ಟಿದ್ರು. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಝ್ ಪಿಎಸ್ಎಲ್ ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ತೆರಳಿದ್ರು. ಈ ವೇಳೆ ತಂಡಗಳ ನಾಯಕರನ್ನ ಪರಿಚಯಿಸಿಕೊಡಲಾಗಿತ್ತು. ಆದ್ರೆ ನಸೀಮ್ ಶಾ ಮರಿಯಮ್ರನ್ನ ಟೀಕಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿದ್ರು.ಅವರಿಗೆ ನೀಡಲಾಗಿದ್ದ ವಿಶೇಷ ಗೌರವವನ್ನು ಪ್ರಶ್ನಿಸಿ, ಅವರನ್ನು ಲಾರ್ಡ್ಸ್ ಮೈದಾನದ ರಾಣಿಯಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ? ಎಂದು ವ್ಯಂಗ್ಯವಾಡಿದ್ದರು. ಪೋಸ್ಟ್ ಹಾಕಿ ಐದು ನಿಮಿಷದಲ್ಲೇ ಡಿಲೀಟ್ ಮಾಡಿದ್ರು. ಅಷ್ಟ್ರಲ್ಲಾಗ್ಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ನಸೀಮ್ ಶಾ ಅವರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸುಮಾರು 2 ಕೋಟಿ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಿದೆ. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಇದು ಒಬ್ಬ ಆಟಗಾರನಿಗೆ ವಿಧಿಸಲಾದ ಅತಿ ದೊಡ್ಡ ಮೊತ್ತದ ದಂಡವಾಗಿದೆ.
ನಂಬರ್ 6
ಫ್ಯಾನ್ಸ್ ಇಲ್ಲದಿದ್ರೂ ಪಂದ್ಯ ಪ್ರಸಾರದ ವೇಳೆ ಕೂಗಾಟ, ಚೀರಾಟದ ಸದ್ದು!
ಇನ್ನು ಪಿಎಸ್ಎಲ್ನ ಮತ್ತೊಂದು ಬ್ಲಂಡರ್ ಅಂದ್ರೆ ಇದೇ ನೋಡಿ. ಸೆಫ್ಟಿ ಪರ್ಪಸ್ನಿಂದ ನಾವು ಅಭಿಮಾನಿಗಳೇ ಇಲ್ಲದೆ ಖಾಲಿ ಕ್ರೀಡಾಂಗಣಗಳಲ್ಲಿ ಮ್ಯಾಚ್ ನಡೆಸ್ತೇವೆ ಅಂದಿದ್ರು. ಹಾಗೇ ಪ್ಷೇಕ್ಷಕರೇ ಇಲ್ಲದೆ ಪಂದ್ಯಗಳು ನಡೀತಿವೆ. ಆದ್ರೆ ಟಿವಿಯಲ್ಲಿ ಪ್ರಸಾರವಾದ ಪಿಎಸ್ ಎಲ್ ಪಂದ್ಯದ ವೇಳೆ ಬೌಂಡರಿ, ಸಿಕ್ಸರ್ ಹಾಗೇ ವಿಕೆಟ್ ಗಳು ಬಿದ್ದಾಗ ಪ್ರೇಕ್ಷಕರು ಕೂಗುವ ಶಬ್ದ ಬಳಸಲಾಗ್ತಿದೆ. ಅಂದ್ರೆ ಆರ್ಟಿಫಿಶಿಯಲ್ ಕ್ರೌಂಡ್ ಸೌಂಡ್ ಹಾಕಿದ್ದಾರೆ. ಇದು ಪಾಕಿಸ್ತಾನಿ ಅಭಿಮಾನಿಗಳನ್ನೇ ಕೆರಳಿಸಿದೆ. ಪ್ರೇಕ್ಷಕರೇ ಇಲ್ಲದ ಮೈದಾನದಲ್ಲಿ ಕೂಗಾಟದ ಶಬ್ದ ಎಲ್ಲಿಂದ ಬರುತ್ತೆ ಅಂತಾ ಕಿಡಿ ಕಾರಿದ್ದಾರೆ. ಇನ್ನೂ ಕೆಲವ್ರು ಟ್ರೋಲ್ ಮಾಡಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ ಪಾಕಿಸ್ತಾನ ಕ್ರಿಕೆಟ್ನ ಮರ್ಯಾದೆಯನ್ನೇ ತೆಗೀತಿದೆ. ಒಂದ್ಕಡೆ ಪಿಎಸ್ಎಲ್ ಜೊತೆ ಒಪ್ಪಂದ ಮಾಡ್ಕೊಂಡಿದ್ದ ಸಾಕಷ್ಟು ವಿದೇಶಿ ಆಟಗಾರರು ಐಪಿಎಲ್ ಆಫರ್ ಸಿಗ್ತಿದ್ದಂತೆ ಟಾಟಾ ಬೈಬೈ ಅಂತಾ ಹೇಳಿ ಜೂಟ್ ಆಗಿದ್ರು. ಹೋಗ್ಲಿ ಮಾಜಿ ಆಟಗಾರರನ್ನೇ ತಗೊಂಡು ಆಡ್ಸೋಣ ಅಂತಾ ಈಗ ಮಾಜಿ ಕ್ರಿಕೆಟಿಗರನ್ನ ತಗೊಳ್ತಿದ್ದಾರೆ. ಆದ್ರೆ ಪಿಸಿಬಿ ಎಷ್ಟೇ ಪ್ಯಾಚ್ಅಪ್ ಮಾಡೋಕೆ ನೊಡಿದ್ರೂ ಅಲ್ಲಿನ ಆಟಗಾರರೇ ಅವ್ರ ಮರ್ಯಾದೆಯನ್ನ ಜಗತ್ತಿನ ಮುಂದೆ ಬಟಾಬಯಲು ಮಾಡ್ತಿದ್ದಾರೆ.

ನೋಡಿರಿ

