ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ – ಲಾಹೋರ್‌ನಲ್ಲಿ 55 ಸಾವಿರ ಮತಗಳಿಂದ ನವಾಜ್ ಷರೀಫ್‌ ಭರ್ಜರಿ ಗೆಲುವು

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ – ಲಾಹೋರ್‌ನಲ್ಲಿ 55 ಸಾವಿರ ಮತಗಳಿಂದ ನವಾಜ್ ಷರೀಫ್‌ ಭರ್ಜರಿ ಗೆಲುವು

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಗುರುವಾರ ನಡೆದಿದ್ದು, ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಲಾಹೋರ್ ಕ್ಷೇತ್ರದಲ್ಲಿ ಯಾಸ್ಮಿನ್ ರಶೀದ್ ವಿರುದ್ಧ 55,000 ಮತಗಳಿಂದ ಗೆದ್ದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ತೊಡೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ಪ್ರೇಮ ನಿವೇದನೆ – ವಿಭಿನ್ನ ಲವ್ ಪ್ರಪೋಸ್ ಗೆ ಪ್ರೇಯಸಿ ಮಾಡಿದ್ದೇನು?

ಫೆ.8 ರಂದು ಸಾಕಷ್ಟು ಹಿಂಸಾಚಾರದ ನಡುವೆಯೂ ಮತದಾನ ನಡೆದಿದೆ. ಗುರುವಾರ ರಾತ್ರಿಯಿಂದಲೇ ಮತ ಎಣಿಕೆ ನಡೆಯುತ್ತಿದೆ. ಸದ್ಯ ಮತ ಎಣಿಕೆ ನಡೆಯುತ್ತಿದ್ದು, ಇಲ್ಲಿಯವರೆಗೆ 265 ಸ್ಪರ್ಧಿಗಳ ಪೈಕಿ 13 ಸ್ಥಾನಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳು ಐದು ಸ್ಥಾನಗಳನ್ನು ಪಡೆದುಕೊಂಡಿದ್ದರೆ, ನಾಲ್ಕು ಸ್ಥಾನಗಳನ್ನು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ ಗೆದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹತ್ಯೆಗೀಡಾದ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಪುತ್ರ, ಜರ್ದಾರಿಯ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇತ್ತ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್  ಪುತ್ರ ತಲ್ಹಾ ಹಫೀಜ್ ಸಯೀದ್ ಲಾಹೋರ್ ಕ್ಷೇತ್ರದಿಂದ ಸೋತಿದ್ದಾರೆ.

Shwetha M