ಭಾರತಕ್ಕೆ ಮೋಸ.. PAKಗೆ ಟ್ರೋಫಿ – ಪಂದ್ಯ ರದ್ದಾದ್ರೂ ಅಡ್ಡದಾರಿಯಲ್ಲಿ ಕಪ್
ಸೇಡು ತೀರಿಸಿಕೊಳ್ತಾರಾ ರೈಸಿಂಗ್ ಸ್ಟಾರ್ಸ್?

ಭಾರತ ಮತ್ತು ಪಾಕಿಸ್ತಾನ ನಡುವಿನ ಮತ್ತೊಂದು ಹೈವೋಲ್ಟೇಜ್ ಫೈಟ್ಗೆ ವೇದಿಕೆ ಸಿದ್ಧವಾಗ್ತಿದೆ. ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್ನಲ್ಲಿ ಈಗಾಗ್ಲೇ ನೇಪಾಳ ತಂಡದ ಎದುರು ಐತಿಹಾಸಿಕ ಗೆಲುವನ್ನ ಕಂಡಿರೋ ಯಂಗ್ ಇಂಡಿಯಾ ಭಾನುವಾರ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಕತಾರ್ನ ವೆಸ್ಟ್ ಎಂಡ್ ಪಾರ್ಕ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರೋ ಈ ಪಂದ್ಯ ಭಾರತಕ್ಕೆ ತುಂಬಾನೇ ಮುಖ್ಯ. ಯಾಕಂದ್ರೆ ಭಾರತಕ್ಕೆ ಮೋಸ ಮಾಡಿ ಕಪ್ ಕದ್ದೊಯ್ದಿರೋ ಪಾಕ್ಗೆ ಬುದ್ಧಿ ಕಲಿಸಬೇಕಿದೆ.
ಇದನ್ನೂ ಓದಿ : RCB ಕೈ ಬಿಟ್ಟಿದ್ದಕ್ಕೆ ಬೆಥಲ್ ಬೇಜಾರು – BIG ಡೀಲ್, ಶಾರುಖ್ KKR ಸೇಲ್
ತಿಲಕ್ ವರ್ಮಾ ಕ್ಯಾಪ್ಟನ್ಸಿಯ ಭಾರತ ಎ ಟೀಂ ಹಾಗೇ ಅಬ್ದುಲ್ ಸಮದ್ ನಾಯಕತ್ವದ ಪಾಕಿಸ್ತಾನ ಶಾಹೀನ್ಸ್ ನಡುವೆ ಭಾನುವಾರ ಮಧ್ಯಾಹ್ನ 3.30ಕ್ಕೆ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಗ್ರೂಪ್ ಹಂತದ ಪಂದ್ಯ ನಡೆಯಲಿದೆ. ಕಳೆದ ಆವೃತ್ತಿಯ ಟೂರ್ನಮೆಂಟ್ನಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು ಈ ಸೋಲಿಗೆ ಸೇಡು ತೀರಿಸಿಕೊಳ್ಬೇಕಿದೆ. ಭಾರತ ತಂಡದಲ್ಲಿ ತಿಲಕ್ ವರ್ಮಾ ಅಭಿಷೇಕ್ ಶರ್ಮಾ ಮತ್ತು ಯುವ ಆಟಗಾರ ವೈಭವ್ ಸೂರ್ಯವಂಶಿ, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ರಿಂಕು ಸಿಂಗ್ರಂಥ ಸ್ಟಾರ್ ಪ್ಳೇಯರ್ಗಳಿದ್ದಾರೆ. ನೇಪಾಳದ ವಿರುದ್ಧದ ಮೊದಲ ಪಂದ್ಯದಲ್ಲಿ 306 ರನ್‌ಗಳ ಬೃಹತ್ ಗೆಲುವು ಸಾಧಿಸಿ ಭಾರತ ಭರ್ಜರಿ ಫಾರ್ಮ್‌ನಲ್ಲಿರೋ ಭಾರತ ಪಾಕ್ ವಿರುದ್ಧವೂ ಅಂಥದ್ದೇ ಗೆಲುವಿನ ಪ್ಲ್ಯಾನ್ನಲ್ಲಿದೆ. ಮತ್ತೊಂದೆಡೆ ಹಾಲಿ ಚಾಂಪಿಯನ್ ಆಗಿರುವ ಪಾಕಿಸ್ತಾನ ಎ ತಂಡ ಕೂಡ ನವೆಂಬರ್ 20 ರಂದು ನಡೆದ ತನ್ನ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ 61 ರನ್‌ಗಳ ಜಯ ದಾಖಲಿಸಿ ಶುಭಾರಂಭ ಮಾಡಿದೆ. ಬಿ ಗ್ರೂಪ್ನಲ್ಲಿ ಟಾಪ್-2ನಲ್ಲಿರೋ 2 ತಂಡಗಳು ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದರಿಂದ, ನಾಕ್‌ಔಟ್ ಹಂತಕ್ಕೆ ಮುನ್ನಡೆಯಲು ಎರಡೂ ತಂಡಗಳಿಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಒಂದ್ಕಡೆ ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್ಗೆ ಸಿದ್ಧತೆ ನಡೆಯುತ್ತಿರೋ ಹೊತ್ತಲ್ಲೇ ಅಂಧರ ಏಷ್ಯಾಕಪ್ ಫೈನಲ್‌ನಲ್ಲಿ ಹೈಡ್ರಾಮಾವೇ ನಡೆದಿದೆ.
ಅಂಧರ ಏಷ್ಯಾಕಪ್ ಫೈನಲ್ ಮಳೆಗೆ ರದ್ದು.. ಪಾಕಿಸ್ತಾನಕ್ಕೆ ಟ್ರೋಫಿ!
2026ರ ಮೆನ್ಸ್ Blind Cricket Asia Cup ಟೂರ್ನಮೆಂಟ್ನ ಫೈನಲ್ ಪಂದ್ಯ ಹೊಸ ವಿವಾದ ಸೃಷ್ಟಿಸಿದೆ. ಭಾರತ ಹಾಗೂ ಪಾಕ್ ನಡುವಿನ ಈ ಪಂದ್ಯ ಕ್ರಿಕೆಟ್ ಜಗತ್ತಿನಲ್ಲಿ ಕಿಚ್ಚು ಹಚ್ಚಿದೆ. ನವೆಂಬರ್ 15ರಿಂದ 20ರವರೆಗೆ ಅಂಧರ ಏಷ್ಯಾಕಪ್ ಟೂರ್ನಿ ನಡೆದಿದ್ದು ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಿದ್ದವು. ಭಾರತ ಮತ್ತು ಪಾಕ್ ತಂಡಗಳು ಫೈನಲ್ ಪ್ರವೇಶಿಸಿದ್ವು. T20 ಮಾದರಿಯ ಈ ಟೂರ್ನಮೆಂಟ್ನಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಪಂದ್ಯವೂ ರದ್ದಾಯ್ತು.. ಕೊನೆಗೆ ದೊಡ್ಡ ಹೈಡ್ರಾಮಾವೇ ನಡೆದಿದೆ.
ರೂಲ್ಸ್ ಮೀರಿ ಪಾಕಿಸ್ತಾನಕ್ಕೆ ಟ್ರೋಫಿ!
ಭಾರತ ಮತ್ತು ಪಾಕಿಸ್ತಾನ ಅಂಧರ ತಂಡಗಳ ನಡುವೆ ಏಷ್ಯಾಕಪ್ ಫೈನಲ್
ನಿರಂತರ ಮಳೆಯ ಕಾರಣಕ್ಕೆ ಟಾಸ್ ಕೂಡ ಕಾಣದೆ ಪಂದ್ಯ ರದ್ದು
ಫೈನಲ್ ಪಂದ್ಯ ರದ್ದಾದ್ರೆ ಎರಡೂ ತಂಡಗಳೂ ಜಂಟಿ ಚಾಂಪಿಯನ್ಸ್
ಉತ್ತಮ ನೆಟ್ ರನ್ ರೇಟ್ ಹೊಂದಿದ್ದ ಪಾಕಿಸ್ತಾನಕ್ಕೆ ಚಾಂಪಿಯನ್ ಪಟ್ಟ
ಪಂದ್ಯ ರದ್ದಾದ್ರೆ ನೆಟ್ ರನ್ ರೇಟ್ ಆಧಾರದಲ್ಲಿ ಫೈನಲ್ ವಿಜೇತರನ್ನು ನಿರ್ಧಾರ
ಪ್ಲೇಯಿಂಗ್ ಕಂಡೀಷನ್ಸ್ ನಲ್ಲಿ ಈ ನಿಯಮದ ಬಗ್ಗೆ ತಿಳಿಸಿಲ್ಲವೆಂದು ಭಾರತ ಆಕ್ಷೇಪ
ಪಂದ್ಯ ಟೈ ಆಗಿ ಸೂಪರ್ ಓವರ್ ಕೂಡ ಟೈ ಆದರೆ ಮಾತ್ರ ನೆಟ್ ರನ್ ರೇಟ್ ಆಧಾರ
ಭಾರತದ ಅಂಧರ ಕ್ರಿಕೆಟ್ ತಂಡದ ಮ್ಯಾನೇಜರ್ ಧೀರಜ್ ಸಿಕ್ವೇರಾ ಆಕ್ಷೇಪ
ಒಂದು ಎಸೆತವೂ ಕಾಣದ ಫೈನಲ್ ನಲ್ಲಿ ಲೀಗ್ ಹಂತದ ನೆಟ್ ರನ್ ರೇಟ್ ಯಾಕೆ?
ಜಂಟಿ ಚಾಂಪಿಯನ್ ಎಂದು ಘೋಷಿಸಿ ಅಥವಾ ಫೈನಲ್ ಗೆ ಮೀಸಲು ದಿನ ನಿಗದಿಗೆ ಪಟ್ಟು
WBCC ತಾಂತ್ರಿಕ ಸಮಿತಿಯು ಆರಂಭದಲ್ಲಿ ಜಂಟಿ ಚಾಂಪಿಯನ್ಸ್ ಘೋಷಣೆಗೆ ನಿರ್ಧಾರ
ನಂತ್ರ ನಿರ್ಧಾರ ಬದಲಾಗಿ ಪಾಕಿಸ್ತಾನವನ್ನು ಏಕೈಕ ಚಾಂಪಿಯನ್ ಎಂದು ಘೋಷಣೆ
ಪಾಕಿಸ್ತಾನಕ್ಕೆ ಚಾಂಪಿಯನ್ ಪಟ್ಟ ವಿರೋಧಿಸಿ ಪ್ರಶಸ್ತಿ ಪ್ರದಾನ ಸಮಾರಂಭ ಬಹಿಷ್ಕಾರ
ಭಾರತದ ಆಟಗಾರರು ಮತ್ತು ಅಧಿಕಾರಿಗಳು ನಿರ್ಧಾರ ಒಪ್ಪದೆ ಪ್ರತಿಭಟನೆ ದಾಖಲು
ಅಷ್ಟಕ್ಕೂ ಇಲ್ಲಿ ಜಂಟಿ ವಿಜೇತರನ್ನ ಘೊಷಣೆ ಮಾಡೋ ವೇಳೆ ಪಾಕಿಸ್ತಾನ ಮಧ್ಯೆ ಪ್ರವೇಶಿಸಿ ಕಳ್ಳಾಟವಾಡಿರೋದೇ ಭಾರತೀಯರ ಸಿಟ್ಟಿಗೆ ಕಾರಣ ಆಗಿರುವಂಥದ್ದು. ಯಾಕಂದ್ರೆ World Blind Cricket Council ಅಧ್ಯಕ್ಷ ಮತ್ತು ಪಾಕಿಸ್ತಾನ ಅಂಧರ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರೂ ಆಗಿರುವ ಸೈಯದ್ ಸುಲ್ತಾನ್ ಶಾ ಅವರ ಹಸ್ತಕ್ಷೇಪದಿಂದಾಗಿ ಜಂಟಿ ವಿಜೇತರ ಬದಲು ರನ್ ರೇಟ್ ಆಧಾರದಲ್ಲಿ ಪಾಕ್ಗೆ ಟ್ರೋಫಿ ಕೊಡಲು ಕೊನೇ ಕ್ಷಣದಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಇದೇ ಕಳ್ಳಾಟದಿಂದಳೇ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ ಅಧಿಕಾರಿಗಳು ರೊಚ್ಚಿಗೆದ್ದಿದ್ದಾರೆ. ಈ ಬಗ್ಗೆ ಭಾರತದ ಅಂಧರ ಕ್ರಿಕೆಟ್ ತಂಡದ ನಾಯಕ ಟಿ. ದುರ್ಗಾ ರಾವ್ ಕೂಡ ಈ ನಿರ್ಧಾರದಿಂದ ತಮಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿವಾದ ಬಗೆಹರಿಯುವವರೆಗೆ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವ ಸಾಧ್ಯತೆಯನ್ನೂ ಭಾರತ ತಂಡದ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್‌ನಲ್ಲಿ ಗೆಲುವು ಸೋಲು ನಿರ್ಧಾರವಾಗೋದು ಮೈದಾನದಲ್ಲಿ.. ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟದಲ್ಲಿ.. ಆದ್ರೆ ಭಾರತ ಮತ್ತು ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡಗಳ ನಡುವಿನ ಏಷ್ಯಾಕಪ್ ಫೈನಲ್‌ನಲ್ಲಿ ಆಗಿರೋದೇ ಬೇರೆ.. ಒಂದೇ ಒಂದು ಎಸೆತವನ್ನೂ ಎದುರಿಸದೆ ಪಾಕಿಸ್ತಾನ ಚಾಂಪಿಯನ್ ಆಗಿದೆ. ಇತ್ತ ಫೈನಲ್ ಪ್ರವೇಶಿಸಿ ಆಡದೆಯೇ ಭಾರತ ರನ್ನರ್ ಅಪ್ ಆಗಿದೆ. ಇದಕ್ಕೆಲ್ಲಾ ಪಾಕಿಸ್ತಾನದ ಟ್ರೋಫಿ ಮೋಹವೇ ಕಾರಣ ಅಂದ್ರೂ ತಪ್ಪಾಗಲ್ಲ. 2025ರಲ್ಲಿ ಮೆನ್ಸ್ ಏಷ್ಯಾಕಪ್ ಗೆದ್ದಾಗ ಟ್ರೋಫಿ ಹೊತ್ತೊಯ್ದಿದ್ದ ಪಾಕಿಸ್ತಾನದ ಬಣ್ಣ ಬಯಲಾಗಿತ್ತು. ಆ ನಂತ್ರ ಭಾರತ ಮಹಿಳಾ ತಂಡ ಏಷ್ಯಾಕಪ್ ಗೆದ್ರೂ ನಖ್ವಿ ಕೈಯಿಂದ ಟ್ರೋಫಿ ತಗೊಳ್ಳಲ್ಲ ಅಂತಾ ಬಿಟ್ಟು ಬಂದಿದ್ರು. ಇತ್ತೀಚೆಗೆ ಅಂಡರ್ 19 ಏಷ್ಯಾಕಪ್ ಫೈನಲ್ನಲ್ಲೂ ಭಾರತದ ಮರಿಹುಲಿಗಳು ಲಾಸ್ಟ್ ಬಾಲ್ ಶಾಕ್ ಕೊಟ್ಟು ಟ್ರೋಫಿ ಗೆದ್ದಿದ್ರು. ಅಟ್ಲೀಸ್ಟ್ ಅಂಧರ ಕ್ರಿಕೆಟ್‌ನಲ್ಲಿ ಅಡ್ಡದಾರಿಯಲ್ಲಾದ್ರೂ ಕಪ್ ಹೊತ್ತೋಯ್ಯೋಣ ಅಂತಾ ಪಂದ್ಯ ಆಡದೆಯೇ ವಿನ್ನರ್ಸ್ ಅಂತಾ ಬಡಾಯಿ ಕೊಚ್ಚಿಕೊಳ್ತಿದ್ದಾರೆ ಅಷ್ಟೇ.

ನೋಡಿರಿ

