ದುರ್ಬಲ ತಂಡಗಳ ವಿರುದ್ಧವಷ್ಟೇ ಪಾಕ್ ಆರ್ಭಟ – ನ್ಯೂಜಿಲೆಂಡ್ ವಿರುದ್ಧವೂ ಪ್ಲ್ಯಾಪ್ ಶೋ

ದುರ್ಬಲ ತಂಡಗಳ ವಿರುದ್ಧವಷ್ಟೇ ಪಾಕ್ ಆರ್ಭಟ – ನ್ಯೂಜಿಲೆಂಡ್ ವಿರುದ್ಧವೂ ಪ್ಲ್ಯಾಪ್ ಶೋ

ಪಾಕಿಸ್ತಾನ ಟೀಂ ಏನು ಕಳಪೆ ಆಗಿರಲಿಲ್ಲ. ಮೊದ್ಲೆಲ್ಲಾ ಬಲಿಷ್ಠ ಬ್ಯಾಟಿಂಗ್ ಹಾಗೇ ಬೌಲಿಂಗ್ ಪಡೆಯನ್ನೇ ಹೊಂದಿತ್ತು. ವಿಶ್ವಮಟ್ಟದ ಪ್ಲೇಯರ್ಸ್ ಇದ್ರು. ಬಟ್ ಈಗ ಪಾಕ್ ಟೀಂ ಗಲ್ಲಿ ಕ್ರಿಕೆಟರ್ಸ್​ಗಿಂತ ಕಡೆಯಾಗಿದೆ. ಮೂರು ಮೂರು ದಿನಕ್ಕೂ ಚೇಂಜ್ ಆಗೋ ಕೋಚ್ ಗಳು, ಮ್ಯಾನೇಜ್​ಮೆಂಟ್ ಸಿಬ್ಬಂದಿ ಹಾಗೇ ಕ್ಯಾಪ್ಟನ್ಸ್ ಹಾವು ಏಣಿ ಆಟದಿಂದಾಗಿ ಹೊಡೆತದ ಮೇಲೆ ಹೊಡೆತ ತಿಂತಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡದ ಅಟ್ಟರ್ ಫ್ಲ್ಯಾಪ್ ಪರ್ಫಾಮೆನ್ಸ್ ನೋಡಿ ನ್ಯೂಜಿಲೆಂಡ್ ವಿರುದ್ಧದ ಟಿ-20 ಸಿರೀಸ್​ಗೆ ಹೊಸ ಟೀಂ ಕಟ್ಟಿದ್ರು. ಬಟ್ ಆ ಟೀಂ ಇನ್ನೂ ಅಧ್ವಾನ ಆಗೋಗಿದೆ.

ಇದನ್ನೂ ಓದಿ : ಔರಂಗಜೇಬನ ಸಮಾಧಿಗಾಗಿ ಎರಡು ಗಂಪುಗಳ ನಡುವೆ ಗಲಾಟೆ – ಮಹಾರಾಷ್ಟ್ರದಲ್ಲಿ ಮಹಾ ಕಿಚ್ಚು

ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತ್ತೀಚೆಗಷ್ಟೇ ಮುಗ್ದಿದ್ದು ಪಾಕಿಸ್ತಾನ ತಂಡ ಅತ್ಯಂತ ಹೀನಾಯವಾಗಿ ಮನೆ ಸೇರಿತ್ತು. ತಾವೇ ಟೂರ್ನಿ ಹೋಸ್ಟ್ ಮಾಡಿದ್ರೂ ಒಂದೇ ಒಂದು ಮ್ಯಾಚ್ ಗೆಲ್ಲೋಕೆ ಆಗಿರಲಿಲ್ಲ. ಇದಾದ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿ ಆಡ್ತಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗ್ಲೇ 2 ಪಂದ್ಯಗಳು ಮುಗಿದಿದ್ದು ಎರಡರಲ್ಲೂ ಸೋಲು ಕಂಡಿದೆ. ಸರಣಿಯ ಮೊದಲ ಪಂದ್ಯದಲ್ಲಿ  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 18.4 ಓವರ್‌ಗಳಲ್ಲೇ ಕೇವಲ 91 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ ತಂಡ ಒಂದು ವಿಕೆಟ್ ಕಳೆದುಕೊಂಡು ಕೇವಲ 10.1 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಹಾಗೇ ಡ್ಯುನೆಡಿನ್​ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು. ಆದ್ರೆ ಮಳೆಯ ಕಾರಣ 15 ಓವರ್​ಗಳಿಗೆ ಸೀಮಿತಗೊಳಿಸಲಾಯ್ತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 9 ವಿಕೆಟ್ ಕಳೆದುಕೊಂಡು 135 ರನ್​ ಕಲೆಹಾಕಿತು. 15 ಓವರ್​ಗಳಲ್ಲಿ 136 ರನ್​ಗಳ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡಕ್ಕೆ ಟಿಮ್ ಸೀಫರ್ಟ್ ಹಾಗೂ ಫಿನ್ ಅಲೆನ್ ಸ್ಪೋಟಕ ಬ್ಯಾಟಿಂಗ್ ಮಾಡಿದ್ರು. 22 ಎಸೆತಗಳನ್ನು ಎದುರಿಸಿದ ಸೀಫರ್ಟ್ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 45 ರನ್ ಚಚ್ಚಿದರು. ಇನ್ನು ಫಿನ್ ಅಲೆನ್ 16 ಎಸೆತಗಳಲ್ಲಿ 5 ಸಿಕ್ಸ್​ನೊಂದಿಗೆ 38 ರನ್ ಬಾರಿಸಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು 13.1 ಓವರ್​ಗಳಲ್ಲಿ 137 ರನ್ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಅಷ್ಟಕ್ಕೂ ಇದು ಇದು ಪಾಕಿಸ್ತಾನ್ ತಂಡದ 12ನೇ ಸೋಲು ಅನ್ನೋದೇ ಅಚ್ಚರಿಯ ವಿಚಾರ.

ಪಾಕಿಸ್ತಾನದ ಇತ್ತೀಚಿನ ಪಂದ್ಯಗಳ ರಿಸಲ್ಟ್ ನೋಡಿದ್ರೆ ಅವ್ರ ಆಟ ಏನಿದ್ರೂ ವೀಕ್ ಟೀಮ್​ಗಳ ಎದುರು ಅನ್ನೋದು ಪ್ರೂವ್ ಆಗಿದೆ. ಕಳೆದ 16 ಟಿ20 ಪಂದ್ಯಗಳಲ್ಲಿ ಪಾಕ್ ಪಡೆ ಹನ್ನೆರಡು ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇನ್ನು 4 ಪಂದ್ಯಗಳನ್ನ ಗೆದ್ದಿರುವುದು ದುರ್ಬಲ ತಂಡಗಳ ವಿರುದ್ಧ ಮಾತ್ರ. ಕಳೆದ 16 ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಝಿಂಬಾಬ್ವೆ, ಐರ್ಲೆಂಡ್ ಮತ್ತು ಕೆನಡಾ ವಿರುದ್ಧ ಮಾತ್ರ ಗೆಲುವು ದಾಖಲಿಸಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ, ನ್ಯೂಝಿಲೆಂಡ್. ಭಾರತ ಸೇರಿದಂತೆ ಪ್ರಮುಖ ಟೀಮ್​ಗಳ ವಿರುದ್ಧ ಮುಗ್ಗರಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಸೋಲು ಕಂಡಿದ್ದ ಪಾಕ್ ಆ ನಂತ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೂ ಮ್ಯಾಚ್ ಗೆದ್ದಿರಲಿಲ್ಲ. ಇದೀಗ ನ್ಯೂಜಿಲೆಂಡ್ ವಿರುದ್ಧ 2 ಪಂದ್ಯಗಳನ್ನ ಕಳ್ಕೊಂಡಿದೆ. ನ್ಯೂಝಿಲೆಂಡ್ ವಿರುದ್ಧ ಕೂಡ ಸೋಲುವ ಮೂಲಕ ಪಾಕ್ ಪಡೆ ಸರಣಿ ಸೋಲಿನ ಸನಿಹಕ್ಕೆ ಬಂದು ನಿಂತಿದೆ. ಈಗಾಗ್ಲೇ ಎರಡು ಮ್ಯಾಚ್ ಸೋತಿದ್ದು ಉಳಿದಿರೋ ಮೂರು ಪಂದ್ಯಗಳಲ್ಲಿ ಒಂದನ್ನ ಕಳ್ಕೊಂಡ್ರೂ ಸರಣಿ ನ್ಯೂಜಿಲೆಂಡ್ ವಶವಾಗಲಿದೆ.

ಇನ್ನು ಈ ಸಾಲು ಸಾಲು ಸೋಲಿನ ಆಘಾತದ ನಡುವೆ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಮ್ಯಾಚ್ ಟೈಮಲ್ಲೇ ಪಾಕಿಸ್ತಾನ ಮೂಲದ ಕ್ರಿಕೆಟಿಗರೊಬ್ಬರು ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ಮೈದಾನದಲ್ಲಿ ಕುಸಿದು ಸಾವನ್ನಪ್ಪಿದ್ದಾರೆ. ತಾಪಮಾನ 41.7 ಡಿಗ್ರಿ ಸೆಲ್ಸಿಯಸ್‌ ನಷ್ಟಿಷ್ಟು ಬಿಸಿಲಿನ ತಾಪಕ್ಕೆ 40 ವರ್ಷದ ಜುನೈದ್ ಜಾಫರ್ ಖಾನ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿಗೂ ಮುನ್ನ ಮೊದಲ 40 ಓವರ್‌ಗಳು ಫೀಲ್ಡಿಂಗ್ ಮಾಡಿದ್ದರು ಮತ್ತು 7 ಓವರ್‌ ಬ್ಯಾಟಿಂಗ್ ಮಾಡಿದ್ದರು. ಕ್ಲಬ್​ವೊಂದರ ಪರ ಆಡ್ತಿದ್ದ ಜುನೈದ್ ರಂಜಾನ್ ಉಪವಾಸ ಆಚರಿಸುತ್ತಿದ್ದರು. ಪಂದ್ಯದ ಸಂದರ್ಭದಲ್ಲಿ ಅವರು ನೀರು ಮಾತ್ರ ಕುಡಿಯುತ್ತಿದ್ದರು ಎನ್ನಲಾಗಿದೆ. ಒಟ್ನಲ್ಲಿ ಪಾಕಿಸ್ತಾನ ಕ್ರಿಕೆಟ್​ನಲ್ಲೂ ಕೂಡ ಈಗ ಅದೋಗತಿಗೆ ತಲುಪ್ತಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸೋತ್ರು ಅಂತಾ ಹೊಸ ನಾಯಕ ಸಲ್ಮಾನ್ ಅಘ ಅಡಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಕಟ್ಟಿತ್ತು. ಸ್ಟಾರ್ ಆಟಗಾರರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ಕೊಟ್ಟಿತ್ತು. ಆದ್ರೆ ಪಿಸಿಬಿಯ ಪ್ಲ್ಯಾನ್ ಮತ್ತೊಮ್ಮೆ ಫೇಲ್ಯೂರ್ ಆಗಿದ್ದು ಪಾಕ್ ತಂಡಕ್ಕೆ ಸೋಲೋದು ಬಿಟ್ರೆ ಬೇರೆ ದಾರಿಯೇ ಇಲ್ಲ ಎನ್ನುವಂತಾಗಿದೆ.

Shantha Kumari

Leave a Reply

Your email address will not be published. Required fields are marked *