ವಿಶ್ವಕಪ್ ನಲ್ಲೂ PAK ಪ್ಲೇಯರ್ಸ್ ಫೈಟ್ – ಆಟಗಾರ್ತಿಯ ರೂಮ್ ನಲ್ಲೇ ಇದ್ದ ಪತಿ!
ಸೋತು ಸೋತು ಕ್ರಿಕೆಟ್ ಖತಂ ಆಗುತ್ತಾ?

ವಿಶ್ವಕಪ್ ನಲ್ಲೂ PAK ಪ್ಲೇಯರ್ಸ್ ಫೈಟ್ – ಆಟಗಾರ್ತಿಯ ರೂಮ್ ನಲ್ಲೇ ಇದ್ದ ಪತಿ!ಸೋತು ಸೋತು ಕ್ರಿಕೆಟ್ ಖತಂ ಆಗುತ್ತಾ?

ಪಾಕಿಸ್ತಾನ ಕ್ರಿಕೆಟ್ ಅಂದ್ರೇನೇ ಹಾಗೇ. ಅದು ಮೆನ್ಸ್ ಇರ್ಲಿ ವುಮೆನ್ಸ್ ಇರ್ಲಿ. ಆನ್ ಫೀಲ್ಡ್ ಪರ್ಫಾಮೆನ್ಸ್​ಗಿಂತ ಆಫ್ ದಿ ಫೀಲ್ಡ್ ಫೈಟ್ ಜೋರಾಗಿರುತ್ತೆ. ಪಂದ್ಯಗಳನ್ನ ಗೆಲ್ಲೋಕೆ ಆಗದೆ ಕೊನೆಗೆ ನಾನಲ್ಲ ನೀನು ಅಂತಾ ಕೆಸರೆರಚಾಟ ಶುರು ಮಾಡಿಬಿಡ್ತಾರೆ. ಈಗ ಮಹಿಳಾ ಟಿ-20 ವಿಶ್ವಕಪ್​ನಲ್ಲೂ ಕೂಡ ಪಾಕಿಸ್ತಾನ ಆಟಗಾರ್ತಿಯರು ಸೋತು ಸೋತು ಸುಣ್ಣವಾಗಿದ್ದಾರೆ. ಸತತ ಸೋಲುಗಳ ಬಳಿಕ ಹೊಸ ರಗಳೆ ಶುರುವಾಗಿದೆ. ಒಂದಷ್ಟು ಹುಳುಕುಗಳೂ ಬಯಲಾಗಿದೆ.

ಇದನ್ನೂ ಓದಿ : ವರ್ಷದಲ್ಲಿ 1 ತಿಂಗಳು ಕ್ರಿಕೆಟ್ ಬಂದ್ – ಆಟಗಾರರಿಗೆ ರೆಸ್ಟ್ ಕೊಡುತ್ತಾ BCCI?

ಇಂಗ್ಲೆಂಡ್​ನಲ್ಲಿ ನಡೀತಾ ಇರೋ 10ನೇ ಆವೃತ್ತಿಯ ಮಹಿಳಾ ಟಿ-20 ವಿಶ್ವಕಪ್​ನಲ್ಲಿ ಆಲ್ರೆಡಿ ಸೆಮಿಫೈನಲ್ ಲೆಕ್ಕಾಚಾರಗಳು ನಡೀತಿವೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮೀಸ್ ಆಡೋದು ಪಕ್ಕಾ ಆಗಿದೆ. ಉಳಿದ ಒಂದಷ್ಟು ತಂಡಗಳಲ್ಲಿ ಸೋಲು ಗೆಲುವು, ಪಾಯಿಂಟ್ಸ್, ನೆಟ್ ರನ್ ರೇಟ್ ಲೆಕ್ಕಾಚಾರ ನಡೀತಿದೆ. ಆದ್ರೆ ಪಾಕಿಸ್ತಾನ ಮಹಿಳಾ ಟೀಂ ಮಾನ ಮಾತ್ರ ಮೂರು ಕಾಸಿಗೆ ಹರಾಜಾಕಿಕೊಳ್ತಿದ್ದಾರೆ.

ಒಂದು.. ಎರಡು.. ಮೂರು.. ನಾಲ್ಕು.. ಗೆಲುವನ್ನೇ ಕಾಣದ ಪಾಕಿಸ್ತಾನ!

ಟಿ-20 ವಿಶ್ವಕಪ್​ನಲ್ಲೂ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ಕಂಟಿನ್ಯೂ ಆಗಿದೆ. ಟೂರ್ನಿಯಲ್ಲಿ ಗ್ರೂಪ್ ಎ ನಲ್ಲಿರೋ ಪಾಕ್ ಟೀಂ ಈಗಾಗ್ಲೇ ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳನ್ನ ಆಡಿದ್ದು ನಾಲ್ಕರನ್ನೂ ಸೋಲನ್ನ ಕಂಡಿದ್ದಾರೆ. ಮೂರನೇ ಪಂದ್ಯ ಸೋತಾಗಲೇ ಟೂರ್ನಿಯಿಂದ ಹೊರಬಿದ್ದಿದ್ದ ಪಾಕ್ ಈಗ ಒಂದೇ ಒಂದು ಗೆಲುವನ್ನೂ ಕಾಣದೆ ಗುಡ್ ಬೈ ಹೇಳ್ತಾರಾ ಅನ್ನೋ ಚರ್ಚೆ ನಡೀತಿದೆ. ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್‌ ಪಂದ್ಯದಲ್ಲಿ ಸತತ ನಾಲ್ಕನೇ ಸೋಲನ್ನು ಕಂಡಿದೆ. ಈ ಟೂರ್ನಮೆಂಟ್​ಗೂ ಮುನ್ನ ಐರ್ಲೆಂಡ್‌ಗೆ ಬಂದಿಳಿದಿದ್ದ ಪಾಕಿಸ್ತಾನ ಮಹಿಳಾ ತಮಡ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಟೂರ್ನಮೆಂಟ್‌ಗೆ ಮೊದಲು ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ತ್ರಿಕೋನ ಸರಣಿಯಲ್ಲೂ ಗೆಲ್ಲೋಕೆ ಆಗಿರಲಿಲ್ಲ. ಅಷ್ಟೇ ಯಾಕೆ ಕಳೆದ ವರ್ಷವೂ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ತನ್ನೆಲ್ಲಾ ಪಂದ್ಯಗಳನ್ನ ಶ್ರೀಲಂಕಾದಲ್ಲೇ ಆಡಿದ್ರೂ ಸೋಲೋದನ್ನ ಮಾತ್ರ ಮರೆತಿರಲಿಲ್ಲ. ಈಗ ಟಿ-20 ವಿಶ್ವಕಪ್ ನಲ್ಲೂ ಅದೇ ಆಗಿದೆ. ಈ ಸತತ ಸೋಲುಗಳ ಬಳಿಕ ಹೊಸ ವಿವಾದವೊಂದು ಭುಗಿಲೆದ್ದಿದೆ.

ಪಾಕ್ ಮೆಂಟರ್ ಮತ್ತು ಕ್ಯಾಪ್ಟನ್ ನಡುವೆ ಕೋಲ್ಡ್ ವಾರ್!

ಇನ್ನು ಪಾಕಿಸ್ತಾನ ತಂಡದ ಹೀನಾಯ ಸೋಲುಗಳ ಬಳಿಕ ತಂಡದೊಳಗಿನ ಹುಳುಕೂ ಬಯಲಾಗಿದೆ. ತಂಡದ ಮೆಂಟರ್ ಮತ್ತು ಅನ್ ಅಫಿಶಿಯಲ್ ಕೋಚ್ ವಹಾಬ್ ರಿಯಾಜ್ ಮತ್ತು ನಾಯಕಿ ಫಾತಿಮಾ ಸನಾ ನಡುವೆ ಆಟಗಾರ್ತಿಯರ ಆಯ್ಕೆ ವಿಚಾರದಲ್ಲಿ ಕ್ಲಾಶ್ ಆಗಿತ್ತು. ಇಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ವು ಅನ್ನೋದು ಗೊತ್ತಾಗಿದೆ. ಇವ್ರಿಬ್ಬರ ನಡುವಿನ ಅಸಮಾಧಾನವೇ ತಂಡದ ಹೀನಾಯ ಪ್ರದರ್ಶನಕ್ಕೂ ಕಾರಣ ಎನ್ನಲಾಗಿದೆ. ಇದೆಲ್ಲದ್ರ ನಡುವೆ ಮತ್ತೊಂದು ಕಾಂಟ್ರವರ್ಸಿ ಬಾರೀ ಸದ್ದು ಮಾಡ್ತಿದೆ.

ಆಟಗಾರ್ತಿಯ ಕೋಣೆಯಲ್ಲೇ ಉಳಿದುಕೊಂಡಿದ್ದ ಪತಿ!

ಇನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯಕ್ಕೂ ಮುನ್ನ ತಂಡದ ಹಿರಿಯ ಆಟಗಾರ್ತಿ ಆಲಿಯಾ ರಿಯಾಜ್ ಅವರ ಪತಿ ತಂಡದ ಹೋಟೆಲ್‌ನಲ್ಲಿ ಅವರ ಕೋಣೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದು ನಾಯಕಿ ಫಾತಿಮಾ ಸನಾ ಆಕ್ಷೇಪ ವ್ಯಕ್ತಪಡಿಸಿದ್ದರು. ಸನಾ ಅವರ ಒತ್ತಾಯದ ಮೇರೆಗೆ ಅಲಿ ಯೂನಿಸ್ ಅವರನ್ನು ಆ ಕೊಠಡಿಯಿಂದ ಹೊರಕಳಿಸಲಾಗಿತ್ತು. ನಂತರ, ಬಾಂಗ್ಲಾದೇಶದ ವಿರುದ್ಧದ ಪಂದ್ಯಕ್ಕೆ ಮುನ್ನಾದಿನ, ತಂಡದ ಅಭ್ಯಾಸ ನಿಗದಿಯಾಗಿದ್ರೂ ಆಲಿಯಾ ಮತ್ತು ಅವರ ಪತಿ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹೊರಗೆ ಹೋಗಿದ್ದರು ಎನ್ನಲಾಗಿದೆ. ಇದ್ರಿಂದ ಸಿಟ್ಟಾಗಿದ್ದ ಸನಾ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಆಲಿಯಾ ಅವರನ್ನು ಹೊರಗಿಡಲು ಮುಂದಾಗಿದ್ರು. ಆದರೆ, ವಹಾಬ್ ಅವರ ಆಯ್ಕೆಗೆ ಒತ್ತಾಯಿಸಿದರು. ಪಾಕಿಸ್ತಾನ ಪಂದ್ಯವನ್ನು ಸೋತ ನಂತರ ಎಲ್ಲರ ಮುಂದೆ ಅಗತ್ಯ ಶಿಸ್ತಿನ ಶಿಷ್ಟಾಚಾರಗಳನ್ನು ಪಾಲಿಸದ ಕಾರಣ ಈ ಸೋಲಿಗೆ ವಹಾಬ್ ಕಾರಣ ಸನಾ ನೇರವಾಗೇ ಹೇಳಿದ್ರು. ಇದಾದ ಮೇಲೆ ತಂಡದೊಳಗಿನ  ಗ್ರೂಪಿಸಂ, ಕೆಲವು ಹಿರಿಯ ಆಟಗಾರ್ತಿಯರು ಹಾಗೇ ಕೋಚ್ ನಡುವಿನ ಮಿಸ್ ಅಂಡರ್​ಸ್ಟಾಂಡಿಂಗ್ ಬಗ್ಗೆಯೂ ಚರ್ಚೆಯಾಗ್ತಿದೆ. ಹಾಗಂತ ಈ ವಿವಾದ ಇದೇ ಮೊದಲೇನೂ ಅಲ್ಲ ಬಿಡಿ.

ಡ್ರೆಸ್ಸಿಂಗ್ ಕೋಣೆಯಲ್ಲಿನ ಕಿತ್ತಾಟಕ್ಕೆ ಕೋಚ್ ಗಳಿಗೆ ಗೇಟ್ ಪಾಸ್!

ಪಾಕಿಸ್ತಾನ ತಂಡದೊಳಗಿನ ಈ ಕಿತ್ತಾಟಗಳು ಇದೇ ಮೊದಲಲ್ಲ. ಪುರುಷರ ತಂಡವು 2023 ಮತ್ತು 2024ರ ಐಸಿಸಿ ವಿಶ್ವಕಪ್‌ಗಳಲ್ಲಿ ಪ್ರದರ್ಶನ ನೀಡಲು ವಿಫಲವಾದಾಗಲೂ ಡ್ರೆಸ್ಸಿಂಗ್ ರೂಂ ಕಿತ್ತಾಟಗಳು ರಿವೀಲ್ ಆಗಿದ್ವು.  ಕಳೆದ 3-4 ವರ್ಷಗಳಲ್ಲಿ ಇದು ಅತಿಯಾಗಿದೆ. ಪಿಸಿಬಿ ಮಹಿಳಾ ತಂಡದ ಮುಖ್ಯ ಕೋಚ್ ಅನ್ನು ನಿರಂತರವಾಗಿ ಬದಲಾಯಿಸಿದೆ. ಮಾರ್ಕ್ ಕೋಲ್ಸ್‌ರಂತಹ ವಿದೇಶಿ ತರಬೇತುದಾರರು, ಜುನೈದ್ ಖಾನ್, ಬಸಿತ್ ಅಲಿ, ಸಲೀಮ್ ಜಾಫರ್ ಮತ್ತು ಮೊಹ್ತಾಶಿಮ್ ರಶೀದ್ ಹೀಗೆ ಹಲವು ಸ್ಥಳೀಯ ತರಬೇತುದಾರರು ಮತ್ತು ಸಿಬ್ಬಂದಿ ಸೇರಿದಂತೆ ಹಲವರು ಬದಲಾಗಿದ್ದಾರೆ. ಹೀಗಿದ್ರೂ ಆನ್ ಫೀಲ್ಡ್​ನಲ್ಲಿ ಮಾತ್ರ ಪ್ರದರ್ಶನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಒಟ್ನಲ್ಲಿ ಪಾಕಿಸ್ತಾನ ಮಹಿಳಾ ಟೀಂ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರೋ ಟೀಂ ಚೇತರಿಸಿಕೊಳ್ಳೋದೂ ಕೂಡ ಕಷ್ಟವೇ.

Shantha Kumari

Leave a Reply

Your email address will not be published. Required fields are marked *