ಬ್ಯಾಟಿಂಗ್‌ನಲ್ಲಿ ಪ್ಲಾಫ್ ಶೋ, ಸಹಆಟಗಾರನಿಗೆ ಕಪಾಳಮೋಕ್ಷ – ಪಾಕ್ ಕ್ಯಾಪ್ಟನ್ ಬಾಬರ್ ಆಝಂ ಯಡವಟ್ಟು

ಬ್ಯಾಟಿಂಗ್‌ನಲ್ಲಿ ಪ್ಲಾಫ್ ಶೋ, ಸಹಆಟಗಾರನಿಗೆ ಕಪಾಳಮೋಕ್ಷ – ಪಾಕ್ ಕ್ಯಾಪ್ಟನ್ ಬಾಬರ್ ಆಝಂ ಯಡವಟ್ಟು

7 ವರ್ಷಗಳ ಬಳಿಕ ಭಾರತಕ್ಕೆ ಎಂಟ್ರಿ ಕೊಟ್ಟ ಪಾಕಿಸ್ತಾನ ತಂಡ, ವಿಶ್ವಕಪ್‌ನ ತನ್ನ ಮೊದಲ ಪಂದ್ಯವನ್ನ ಗೆಲುವಿನ ಮೂಲಕ ಆರಂಭಿಸಿದೆ. ಆದರೆ, ಪಾಕ್ ನಾಯಕ ಬಾಬರ್ ಆಝಂ ತನ್ನ ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಬೌಂಡರಿ ಗೆರೆಯನ್ನು ಹಿಂದೆ ಸರಿಸಿ ಪಾಕ್ ತಂಡ ಡಚ್ಚರ ವಿರುದ್ಧ ಕಳ್ಳಾಟ ಆಡಿದ್ಯಾ ಎಂಬ ಸಂಶವೂ ಬಂದಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ 100 ಪದಕ ಗೆದ್ದು ಇತಿಹಾಸ ಬರೆದ ಭಾರತ – ಕ್ರೀಡಾಪಟುಗಳ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ

ಪಾಕಿಸ್ತಾನ ಮತ್ತು ನೆದರ್ಲೆಂಡ್ ನಡುವಿನ ಪಂದ್ಯದಲ್ಲಿ ಪಾಕ್ ಗೆದ್ದಿದೆ. ಡಚ್ಚರ ವಿರುದ್ಧ ಪಾಕ್ ತುಂಬಾ ಆಯಾಸಪಟ್ಟು ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 49ನೇ ಓವರ್‌ನಲ್ಲಿ ಆಲೌಟ್ ಆಗುವುದರೊಂದಿಗೆ 286 ರನ್ ಕಲೆಹಾಕಿತು. 287 ರನ್ ಗುರಿ ಬೆನ್ನಟ್ಟಿದ ನೆದರ್ಲೆಂಡ್ 205 ರನ್ ಗಳಿಸಲಷ್ಟೇ ಸಫಲವಾಗಿ 81 ರನ್‌ಗಳ ಸೋಲನುಭವಿಸಿತು. ಹೀಗಿರುವಾಗಲೇ ಪಾಕ್ ನಾಯಕ ಬಾಬರ್ ಆಝಂ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ. ಪಾಕ್ ತಂಡದ ನಾಯಕ ಬಾಬರ್ ಆಝಂ (Babar Azam), ತಂಡದ ಸಹ ಆಟಗಾರ ವೇಗಿ ಹ್ಯಾರಿಸ್ ರೌಫ್‌ಗೆ (Haris Rauf) ಕಪಾಳಮೋಕ್ಷ ಕೂಡ ಮಾಡಿದರು. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ, ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದಾಗ ನಾಯಕ ಬಾಬರ್ ಆಝಂ, ವೇಗಿ ಹ್ಯಾರಿಸ್ ರೌಫ್‌ಗೆ ತಮಾಷೆಯಾಗಿ ಕಪಾಳಮೋಕ್ಷ ಮಾಡಿದ್ದರು. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ನಾಯಕ ಬಾಬರ್ ಆಝಂ ಬ್ಯಾಟಿಂಗ್‌ನಲ್ಲಿ 18 ಎಸೆತಗಳನ್ನು ಎದುರಿಸಿದರು. ಆದರೆ ಹೊಡೆದಿದ್ದು ಕೇವಲ 5 ರನ್ ಗಳು. ಆದರೆ ಬೌಲಿಂಗ್‌ನಲ್ಲಿ ಮಿಂಚಿದ ವೇಗಿ ರೌಫ್, ತಮ್ಮ ಖೋಟಾದ ಒಂಬತ್ತು ಓವರ್ ಬೌಲ್ ಮಾಡಿ ಮೂರು ವಿಕೆಟ್‌ಗಳನ್ನು ಪಡೆದರು.

ಇನ್ನು ಪಾಕಿಸ್ತಾನ ಫೀಲ್ಡಿಂಗ್ ಮಾಡುವಾಗ ಬೌಂಡರಿ ಲೈನ್ ನನ್ನು ನಿಗದಿತ ಸ್ಥಳಕ್ಕಿಂತ ದೂರ ತಳ್ಳಿದ್ದು ಕಂಡುಬಂದಿದೆ. ನೆದರ್ಲೆಂಡ್ ತಂಡ ಬ್ಯಾಟಿಂಗ್ ಮಾಡುತ್ತಿರುವಾಗ ಬೌಂಡರಿ ರೋಪ್ ಕುಶನ್ ನಿಗದಿತ ಸ್ಥಳಕ್ಕಿಂತ ಹೊರಕ್ಕೆ ಬಂದಿತ್ತು. ಇದು ಎಂಸಿಸಿ ನಿಯಮಕ್ಕೆ ವಿರುದ್ಧವಾಗಿದೆ. ಬೌಂಡರಿ ರೋಪ್ ಹೊರಕ್ಕೆ ಹೋಗಿದ್ದು 21ನೇ ಓವರ್ ಆಗುವಾಗ ಅಧಿಕಾರಿಗಳು ಗಮನಿಸಿದರು. ಬಳಿಕ ಅದನ್ನು ಒಂದು ಅಡಿಗೂ ಹೆಚ್ಚು ಒಳಕ್ಕೆ ಎಳೆಯಲಾಯಿತು.

Sulekha