ಪಾಕ್​ಗೆ ಮುಂದೈತೆ ಮಾರಿಹಬ್ಬ – ಬಾಯ್ಕಾಟ್ ಯು-ಟರ್ನ್ ಪಕ್ಕಾ
ಟಾಸ್ ಟೈಮ್ ವರೆಗೂ ಕಳ್ಳಾಟ ಆಡ್ತಾರಾ?

ಪಾಕ್​ಗೆ ಮುಂದೈತೆ ಮಾರಿಹಬ್ಬ – ಬಾಯ್ಕಾಟ್ ಯು-ಟರ್ನ್ ಪಕ್ಕಾಟಾಸ್ ಟೈಮ್ ವರೆಗೂ ಕಳ್ಳಾಟ ಆಡ್ತಾರಾ?

ಹೇಳೋದೊಂದು ಮಾಡೋದೊಂದು ಅನ್ನೋ ಹಾಗೇ ಪಾಕಿಸ್ತಾನ ದಿನಕ್ಕೊಂದು ಬಣ್ಣ ಬದಲಾಯಿಸ್ತಾನೇ ಇದೆ. ಟಿ-20 ವಿಶ್ವಕಪ್ ಟೂರ್ನಿಯನ್ನೇ ಆಡಲ್ಲ ಅಂದವ್ರು ಕೊನೆಗೆ ಭಾರತ ವಿರುದ್ಧದ ಪಂದ್ಯ ಮಾತ್ರ ಬಾಯ್ಕಾಟ್ ಅಂದ್ರು. ಹಾಗಂತ ಪಾಕ್​ ಮಾತನ್ನ ಅಷ್ಟು ಸೀರಿಯಸ್ ಆಗಿ ತಗೊಳ್ಳೋಕೂ ಆಗಲ್ಲ. ಯಾವುದೇ ಟೈಮಲ್ಲೂ ಉಲ್ಟಾ ಹೊಡೆಯೋ ಜಾಯಮಾನ ಅವ್ರದ್ದು. ಌಂಡ್ ಫೆಬ್ರವರಿ 15ರ ಪಂದ್ಯದ ಟಾಸ್ ಟೈಮ್​ವರೆಗೂ ಏನ್ ಬೇಕಾದ್ರೂ ಆಗ್ಬೋದು.

ಇದನ್ನೂ ಓದಿ : ಕಿಶನ್ ರನ್.. ಕೀಪಿಂಗ್ ಟೆನ್ಷನ್ – ಸಂಜು ಆಡ್ಸಿದ್ರೂ ಕಷ್ಟ.. ಬಿಟ್ರೂ ಕಷ್ಟ

ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಆಡಲ್ಲ ಅಂತಾ ಪಾಕ್ ಸರ್ಕಾರ ನಿಷೇಧ ಹೇರಿದೆ. ಐಸಿಸಿ ಟೂರ್ನಿಯಿಂದ ಬಾಂಗ್ಲಾದೇಶ ಹೊರಗುಳಿದಿದ್ದಕ್ಕೆ ಬೆಂಬಲವಾಗಿ ಈ ನಿರ್ಧಾರ ತಗೊಂಡಿದ್ದೀವಿ ಅಂದಿದ್ದಾರೆ. ಆದ್ರೆ ಒಂದು ಪಂದ್ಯದಿಂದ ಹೊರಗೊಳಿಯುತ್ತೇವೆ ಅನ್ನೋದಕ್ಕೆ ಐಸಿಸಿ ಅನುಮತಿ ನೀಡಿದ್ಯಾ ಅಂದ್ರೆ ಇನ್ನೂ ಇಲ್ಲ. ಜೊತೆಗೆ ಪಾಕಿಸ್ತಾನ​ ಹೀಗೆ ಹೇಳಿದ್ರೂ ಕೂಡ ಪಂದ್ಯ ಆರಂಭವಾಗೋ ಅರ್ಧಗಂಟೆ ಮುಂಚಿನವರೆಗೂ ಯಾವಾಗ ಬೇಕಿದ್ರೂ ಯೂಟರ್ನ್ ಹೊಡೀಬೋದು. ಹೀಗಾಗಿ ಭಾರತ ನಾವು ಆಡಲು ಸಿದ್ಧ ಎಂದು ಮೈದಾನಕ್ಕೂ ಇಳೀಬೇಕಾಗುತ್ತೆ.

ಟಾಸ್ ಟೈಮ್ ವರೆಗೂ ಪಂದ್ಯ ನಡೆಯುವ ಸಾಧ್ಯತೆ!

ಇಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಆಡಲ್ಲ ಅಂತಿರೋದಕ್ಕೆ ಪಂದ್ಯವನ್ನ ಏಕಾಏಕಿ ಕ್ಯಾನ್ಸಲ್ ಮಾಡೋಕೂ ಆಗಲ್ಲ. ಐಸಿಸಿಯಿಂದಲೂ ತಪ್ಪಿಸೋಕೆ ಆಗಲ್ಲ. ಬಟ್ ಗಂಭೀರ ಪರಿಣಾಮಗಳನ್ನ ಪಾಕ್ ಎದುರಿಸಬಹುದು. ಐಸಿಸಿ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಬಹುದು.

ವಾಕ್ ಓವರ್ ನಿಯಮದ ಅನ್ವಯ ಭಾರತಕ್ಕೆ ಅಂಕ!

ಐಸಿಸಿ ನಿಯಮಗಳ ಪ್ರಕಾರ ಒಂದು ತಂಡವು ಮೈದಾನಕ್ಕೆ ಇಳಿಯಲು ನಿರಾಕರಿಸಿದರೆ, ಪಂದ್ಯವನ್ನು ಎದುರಾಳಿ ತಂಡಕ್ಕೆ ವಾಕ್ ಓವರ್ ಆಗಿ ನೀಡಲಾಗುತ್ತದೆ. ಭಾರತ ಆ ಪಂದ್ಯದ ಅಂಕಗಳನ್ನು ಪಡೆಯಬೇಕು ಅಂದ್ರೆ ಆ ಮೈದಾನದಲ್ಲಿ ಕಾಣಿಸಿಕೊಳ್ಳಬೇಕು. ಅಂದರೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್‌ಗಾಗಿ ಮೈದಾನದಕ್ಕಿಳಿಯಬೇಕು. ನಾವು ಪಂದ್ಯ ಆಡೋಕೆ ರೆಡಿ ಇದ್ದೇವೆ ಅನ್ನೋ ಮೆಸೇಜ್ ಕೊಡ್ಬೇಕು. ಸೋ ಈ ಟೈಮಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಮೈದಾನದಲ್ಲಿ ಇರದೇ ಇದ್ರೆ ಆ ಪಂದ್ಯದ ರೆಫರಿ ಅಧಿಕೃತವಾಗಿ ಪಂದ್ಯವನ್ನು ರದ್ದು ಮಾಡಿ  ಭಾರತಕ್ಕೆ 2 ಅಂಕಗಳನ್ನು ನೀಡುತ್ತಾರೆ. ಹಾಗೇ ಇದೇ ವೇಳೆ ಹಿಡ್ಡನ್ ಸ್ಪೋರ್ಟಿಂಗ್ ಪೆನಾಲ್ಟಿ ಕೂಡ ಹಾಕಬಹುದು. ಪಾಕಿಸ್ತಾನ ಪೂರ್ಣ 20-ಓವರ್ ಇನ್ನಿಂಗ್ಸ್ ಆಡಿದೆ ಆದರೆ 0 ರನ್ ಗಳಿಸಿದೆ ಎಂದು ಪರಿಗಣಿಸಲಾಗುತ್ತದೆ. ಇದ್ರಿಂದ ಪಾಕ್​ನ ರನ್​ ರೇಟ್​​ ಕುಸಿತವಾಗುತ್ತೆ. ಇತರ ಪಂದ್ಯಗಳನ್ನು ಗೆದ್ದರೂ ಸಹ ಸೂಪರ್ 8 ಗೆ ಅರ್ಹತೆ ಪಡೆಯುವುದು ಪಾಕ್​ಗೆ ಕಷ್ಟವಾಗುತ್ತೆ.

ಫೈನಾನ್ಶಿಯಲ್ ಮತ್ತು ಕಮರ್ಷಿಯಲ್ ಪೆನಾಲ್ಟಿ!

ಪಾಕಿಸ್ತಾನ ಪಂದ್ಯ ಆಡದಿದ್ರೆ ಅಂಕ ಕಳ್ಕೊಳ್ತಾರೆ. ರನ್ ರೇಟ್ ಕುಸಿಯುತ್ತೆ. ಇದು ಒಂದ್ಕಡೆಯಾದ್ರೆ ಪಾಕ್​ಗೆ ದೊಡ್ಡ ಬರೆ ಬೀಳೋದೇ ಫೈನಾನ್ಶಿಯಲ್ ಮೇಲೆ. ಭಾರತ-ಪಾಕಿಸ್ತಾನ ಪಂದ್ಯ ಅಂದ್ರೆ ಪಂದ್ಯಾವಳಿಯಷ್ಟೇ ಅಲ್ಲ, ಇದು ಎಂಟೈರ್ ಕ್ರಿಕೆಟಿಂಗ್ ಎಕೋ ಸಿಸ್ಟಮ್​ನ ಕ್ಯಾಶ್ ಕೌ ಆಗಿದೆ. ಪಂದ್ಯ ರದ್ದಾಗಿದ್ರೆ ಆದ್ರೆ ಜಿಯೋಸ್ಟಾರ್‌ನಂತಹ ಪ್ರಸಾರಕರು ಏನಿಲ್ಲ ಅಂದ್ರೂ $25 ಮಿಲಿಯನ್‌ನಿಂದ $30 ಮಿಲಿಯನ್ ಜಾಹೀರಾತು ಆದಾಯ  ಕಳೆದುಕೊಳ್ಳುತ್ತಾರೆ. ಇಂಥಾ ಟೈಮಲ್ಲಿ ಪ್ರಸಾರಕರು ಐಸಿಸಿಯಿಂದ ರಿಯಾಯಿತಿ ಕೇಳಬೇಕಾಗುತ್ತದೆ. ಆಗ ಐಸಿಇಸ ಏನ್ ಮಾಡುತ್ತೆ ಅಂದ್ರೆ ಸಿಂಪಲ್. ಲೀಗಲ್ ಕ್ಲೇಮ್ಸ್ ಹಾಗೇ ಫೈನಾನ್ಶಿಯಲ್ ಲಾಸ್​ಗಳನ್ನೆಲ್ಲಾ ನೇರವಾಗಿ ಪಿಸಿಬಿಗೆ ವರ್ಗಾಯಿಸೋ ರೈಟ್ಸ್ ಹೊಂದಿದೆ. ಪಾಕಿಸ್ತಾನ ಕ್ರಿಕೆಟ್ ಬಜೆಟ್‌ನ ಸರಿಸುಮಾರು 70-80% ರಷ್ಟಿರುವ ಪಿಸಿಬಿಯ ವಾರ್ಷಿಕ ಆದಾಯದ ಪಾಲನ್ನು ಐಸಿಸಿ ತಡೆಹಿಡಿಯಬಹುದು. ಐಸಿಸಿ ಕಡೆಯಿಂದ ಬರೋ ದುಡ್ಡು ಬರ್ಲಿಲ್ಲ ಅಂದ್ರೆ ಪಿಸಿಬಿ ಗತಿ ಅಧೋಗತಿಯಾಗುತ್ತೆ.

ಸರ್ಕಾರದ ಹಸ್ತಕ್ಷೇಪ ಷರತ್ತು ಇದ್ರೂ ಉಲ್ಲಂಘನೆ!

ಐಸಿಸಿ ಸಂವಿಧಾನದ ಆರ್ಟಿಕಲ್ 2.4 ಡಿ ಪ್ರಕಾರ ಸದಸ್ಯ ಮಂಡಳಿಗಳು ಸರ್ಕಾರದ ಹಸ್ತಕ್ಷೇಪವನ್ನು ತಪ್ಪಿಸಿ, ತಮ್ಮ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸಬೇಕಾಗುತ್ತದೆ. ಪಿಸಿಬಿಯ ಮಾಜಿ ಅಧ್ಯಕ್ಷ ಎಹ್ಸಾನ್ ಮಣಿ, ಸರ್ಕಾರಿ ಆದೇಶಗಳನ್ನು ಪಾಲಿಸುವುದರಿಂದ ಪಾಕಿಸ್ತಾನವನ್ನು ಐಸಿಸಿ ನಿರ್ಬಂಧಗಳಿಂದ ರಕ್ಷಿಸಬೇಕು ಅಂತಾ ವಾದ ಮಾಡಿದ್ರೂ ಕೂಡ ಸೆಲೆಕ್ಟೀವ್ ಪಾರ್ಟಿಸಿಪೇಷನ್  ಪಂದ್ಯಾವಳಿಯ ಸಮಗ್ರತೆಯ ಉಲ್ಲಂಘನೆ ಅಂತಾನೇ ನೋಡಲಾಗುತ್ತೆ. ಈ ಹಿಂದೆ 1996 ಮತ್ತು 2003  ಭದ್ರತಾ ಕಾರಣಗಳಿಗಾಗಿ ತಂಡಗಳು ಪಂದ್ಯಗಳನ್ನು ಬಹಿಷ್ಕರಿಸಿದ್ದವು. ಫಾರ್ ಎಕ್ಸಾಂಪಲ್ ಆಸ್ಟ್ರೇಲಿಯಾ ಶ್ರೀಲಂಕಾಗೆ ಹೋಗದೆ ಪಂದ್ಯದಿಂದ ಹಿಂದೆ ಸರಿದಿತ್ತು. ಆದ್ರೆ ಪಾಕಿಸ್ತಾನವು ತಟಸ್ಥ ಸ್ಥಳವಾದ ಶ್ರೀಲಂಕಾದಲ್ಲಿ ಪಂದ್ಯವನ್ನು ಬಹಿಷ್ಕರಿಸುತ್ತಿರುವುದರಿಂದ, ಸರ್ಕಾರದ ಹಸ್ತಕ್ಷೇಪಕ್ಕೆ ಯಾವುದೇ ಕಾರಣವಿಲ್ಲ. ಆದ್ದರಿಂದ, ಈ ಕ್ರಮವು ಐಸಿಸಿ ಸಂವಿಧಾನದ ನೇರ ಉಲ್ಲಂಘನೆಯಾಗಿದೆ. ಹೀಗಾಗಿ ಪಿಸಿಬಿ ಮೇಲೆ ಕ್ರಮ ಕೈಗೊಳ್ಳೋಕೆ ಐಸಿಸಿಗೆ ಎಲ್ಲಾ ರೈಟ್ಸ್ ಇದೆ. ಈಗೇನೋ ಪಾಕಿಸ್ತಾನ ಜಗತ್ತಿನ ಎದುರು ನಾವು ಭಾರತದ ವಿರುದ್ಧ ಆಡಲ್ಲ ಅಂತಾ ಬೇಜಾನ್ ಮೆರೀತಿದ್ದಾರೆ. ಆದ್ರೆ ಮಾರಿಹಬ್ಬ ಮುಂದೈತೆ ಅನ್ನೋದನ್ನೇ ಮರೆತಿದ್ದಾರೆ. ಯಾಕಂದ್ರೆ ಸದ್ಯಕ್ಕೇನೋ ಐಸಿಸಿ ಕೂಲ್ ಆಗೇ ಹ್ಯಾಂಡಲ್ ಮಾಡ್ತಿದೆ. ಆದ್ರೆ ಮುಂದಿನ ದಿನಗಳಲ್ಲಿ ಬೇರೆಯದ್ದೇ ರೀತಿಯಲ್ಲೂ ಪಾಠ ಕಲಿಸಲೂಬಹುದು. ಯಾಕಂದ್ರೆ ಭಾರತದ ವಿರುದ್ಧ ಗ್ರೂಪ್ ಸ್ಟೇಜ್​ನ ಪಂದ್ಯ ಅಂದ್ರೆ ಫೆಬ್ರವರಿ 15ರ ಪಂದ್ಯ ಮಾತ್ರ ಬಹಿಷ್ಕಾರ ಮಾಡ್ತೀವಿ ಅಂದಿದ್ದಾರೆ. ಆದ್ರೆ ನಾಕೌಟ್ ಅಥವಾ ಫೈನಲ್ ಹಂತದಲ್ಲಿ ಮುಖಾಮುಖಿಯಾದರೆ ಪಾಕಿಸ್ತಾನ ಆಡಲಿದೆಯೇ ಎಂಬ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಪಾಕಿಸ್ತಾನ ಅಂದುಕೊಂಡಂತೆ ಏನೂ ಆಗಲ್ಲ. ಕೊನೆಗೆ ಗಾಳಿ ಬಂದ ಕಡೆ ತೂರಿಕೋ ಅನ್ನೋ ಥರ ಯಾವ ಟೈಮಲ್ಲಿ ಬೇಕಿದ್ರೂ ಬದಲಾಗಬಹುದು.

Shantha Kumari