T20 ವಿಶ್ವಕಪ್‌ನಲ್ಲಿ ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ನೆದರ್ಲ್ಯಾಂಡ್ ವಿರುದ್ಧ ಗೆದ್ದ PAK

T20 ವಿಶ್ವಕಪ್‌ನಲ್ಲಿ ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ನೆದರ್ಲ್ಯಾಂಡ್ ವಿರುದ್ಧ ಗೆದ್ದ PAK

ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್​ ವಿರುದ್ಧ ಪಾಕಿಸ್ತಾನ 3 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ನೆದರ್ಲ್ಯಾಂಡ್ಸ್​ 147 ರನ್​ಗಳಿಗೆ ಆಲೌಟ್​ ಆಯ್ತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 3 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ.

ನೆದರ್ಲ್ಯಾಂಡ್ಸ್‌ ಸಣ್ಣ ಮೊತ್ತವನ್ನು ಕಲೆ ಹಾಕಿದ್ದರೂ ಅದ್ಭುತ ಬೌಲಿಂಗ್​ ಮೂಲಕ ಪಂದ್ಯವನ್ನು ಕೊನೆಯ ಓವರ್‌ ವರೆಗೆ ಕೊಂಡೊಯ್ತು. ಒಂದು ಹಂತದಲ್ಲಿ, ನೆದರ್ಲ್ಯಾಂಡ್ಸ್‌ ವಿರುದ್ಧ ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ಸೋಲುತ್ತದೆ ಎಂದು ತೋರುತ್ತಿತ್ತು, ಆದರೆ ಕೊನೆಯಲ್ಲಿ, ಫಹೀಮ್ ಅಶ್ರಫ್ ಮತ್ತು ಶಾಹೀನ್ ಅಫ್ರಿದಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಪಾಕಿಸ್ತಾನ ಪರ ಸಾಹಿಬ್‌ಜಾದಾ ಫರ್ಹಾನ್ 47 ರನ್ ಗಳಿಸಿದರೆ, ಸ್ಯಾಮ್ ಅಯೂಬ್ 24 ರನ್ ಕಲೆಹಾಕಿದರು. ಆದಾಗ್ಯೂ, ನೆದರ್ಲ್ಯಾಂಡ್ಸ್ ಬೌಲರ್‌ಗಳು ಮಾರಕ ಬೌಲಿಂಗ್ ದಾಳಿಯ ಮೂಲಕ ಪಾಕಿಸ್ತಾನ ತಂಡವನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸಿದರು.

ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಕೊನೆಯ 2 ಓವರ್​ನಲ್ಲಿ ಪಾಕ್​ ಗೆಲುವಿಗೆ 29 ರನ್​ಗಳು ಬೇಕಾಗಿದ್ದವು. ಈ ವೇಳೆ ವ್ಯಾನ್​ ಬೀಕ್​ ಎಸೆದ 18ನೇ ಓವರ್​ನ ಮೊದಲ ಎಸೆತದಲ್ಲಿ ಫಹಿಮ್​ ಅಶ್ರಫ್​ ಸಿಕ್ಸರ್​ ಬಾರಿಸಿದರು. ನಂತರ ಎರಡನೇ ಎಸೆತದಲ್ಲಿ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಅಶ್ರಫ್ ಕ್ಯಾಚ್​ ನೀಡಿದ್ದರು. ಆದರೆ ಮ್ಯಾಕ್ಸ್​ ಒದೊವುದ್​ ಕ್ಯಾಚ್​ ಪಡೆಯುವಲ್ಲಿ ವಿಫಲರಾದರು. ಇದು ಪಾಕಿಸ್ತಾನಕ್ಕೆ ವರವಾಯ್ತು. ನಂತರ ಅಶ್ರಫ್​ ಎರಡು ಸಿಕ್ಸರ್​ ಎರಡು ಬೌಂಡರಿ ಬಾರಿಸಿ ಇನ್ನೂ 3 ಎಸೆತಗಳು ಬಾಕಿ ಇರುವುಗಾಲೇ ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ನೆದರ್ಲ್ಯಾಂಡ್ಸ್​ ಪರ ಆರ್ಯನ್​ ದತ್​, ಮಿಕೆರೆನ್ ತಲಾ 2 ವಿಕೆಟ್​​ ಪಡೆದುಕೊಂಡರು.

ಇದಕ್ಕೂ ಮೊದಲ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ನೆದರ್ಲ್ಯಾಂಡ್ಸ್ ತಂಡವು ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. 19.5 ಓವರ್​ಗಳಲ್ಲಿ ಆಲೌಟ್​ ಆಯ್ತು. ತಂಡದ ಪರ ಸ್ಕಾಟ್​ ಎಡ್ವರ್ಡ್​ 37 ರನ್ ಗಳಿಸಿ ಅತ್ಯಧಿಕ ಇನ್ನಿಂಗ್ಸ್​ ಆಡಿದರು. ಇದಲ್ಲದೇ ಬಸ್ ದೆ ಲೀಡೆ​ (30), ಮೈಕೆಲ್​ ಲೆವಿತ್ (24), ಕಾಲಿನ್​ ಅಕ್ರಮ್ (20), ಆರ್ಯನ್​ ದತ್ತ್​ (13) ಅಲ್ಪೊತ್ತದ ಕಾಣಿಕೆ ನೀಡಿದರು.

Kishor KV

Leave a Reply

Your email address will not be published. Required fields are marked *