ಅವಮಾನಕ್ಕೆ ಹೆದರಿ ಪಾಕ್ ಬಾಬರ್ ಆಝಂ ಎಸ್ಕೇಪ್ – BBLಗೆ ಕೈಕೊಟ್ಟು ಓಡಿ ಹೋಗಿದ್ಯಾಕೆ?

ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ ಬಾಬರ್ ಆಝಂ ಸ್ಥಿತಿ ಅಯ್ಯೋ ಅನಿಸುವಂತಾಗಿದೆ. ಎಲ್ಲಿ ಹೋದರೂ ಬಾಬರ್ ಬರೀ ಫೇಲ್ಯೂರ್ ಆಗುತ್ತಿದ್ದಾರೆ. ಇದೀಗ ಬಿಗ್ ಬ್ಯಾಷ್ ಲೀಗ್ನಲ್ಲೂ ಇದೇ ಪರಿಸ್ಥಿತಿ. ಕಳಪೆ ಪ್ರದರ್ಶನ ತೋರಿದ ಬಾಬರ್, ತಂಡದವರು ಹೊರಗಿಡುವ ಮೊದಲೇ ತಾನೇ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ:ಮೊದಲ ಪಂದ್ಯದಲ್ಲಿ ಕಿವೀಸ್ ಕಿವಿ ಹಿಂಡಿದ ಭಾರತ – 48 ರನ್ಗಳಿಂದ ಗೆದ್ದು ಬೀಗಿದ ಇಂಡಿಯಾ
ಆಸ್ಟ್ರೇಲಿಯಾದ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್ನಲ್ಲಿ ಕಣಕ್ಕಿಳಿದಿದ್ದ ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಟೂರ್ನಿ ಮಧ್ಯೆಯೇ ಎಸ್ಕೇಪ್ ಆಗಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಂಡವು ನಾಕೌಟ್ ಹಂತಕ್ಕೇರಿದೆ. ಜೊತೆಗೆ ಬಿಬಿಎಲ್ನ ಕೊನೆಯ 2 ಪಂದ್ಯಗಳು ಮಾತ್ರ ಬಾಕಿ ಇರುವಾಗಲೇ ಬಾಬರ್ ಪಾಕಿಸ್ತಾನಕ್ಕೆ ವಾಪಾಸ್ಸಾಗಿದ್ದಾರೆ. ಬಾಬರ್ ಆಝಂ ಅವರ ಕಳಪೆ ಫಾರ್ಮ್ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಹೊರೆಯಾಗಿತ್ತು. ಬ್ಯಾಟಿಂಗ್ ಬಿಡಿ, ಫೀಲ್ಡಿಂಗ್ ಕೂಡಾ ನೆಟ್ಟಗೆ ಮಾಡಿರಲಿಲ್ಲ. ಇದ್ರಿಂದ ತಂಡದ ಆಟಗಾರರು ಬೇಸರ ಹೊರಹಾಕಿದ್ದರು. ಇದು ಬಾಬರ್ಗೆ ಒಂದು ರೀತಿ ಅವಮಾನವಾಗಿತ್ತು. ಮತ್ತಷ್ಟು ಅವಮಾನವಾಗುವ ಮೊದಲೇ ಬಾಬರ್ ತಂಡಕ್ಕೆ ಕೈಕೊಟ್ಟು ಎಸ್ಕೇಪ್ ಆಗಿದ್ದಾರೆ.
ಕಳೆದ 11 ಪಂದ್ಯಗಳಲ್ಲಿ ಬಾಬರ್ ಆಝಂ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ 11 ಪಂದ್ಯಗಳಿಂದ ಬಾಬರ್ ಆಝಂ ಕಲೆಹಾಕಿದ್ದು ಕೇವಲ 202 ರನ್ಗಳು. ಅಂದರೆ 22.44 ರ ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದರು. ಅದು ಕೂಡ 103 ರ ಸ್ಟ್ರೈಕ್ ರೇಟ್ನಲ್ಲಿ. ಹೀಗಾಗಿಯೇ ಬಾಬರ್ ಆಝಂ ಅವರನ್ನು ಚಾಲೆಂಜರ್ (ನಾಕೌಟ್) ಪಂದ್ಯದಿಂದ ಕೈ ಬಿಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಅಷ್ಟೇ ಅಲ್ಲದೆ ಬಾಬರ್ ಆಝಂ ಅವರ ಕಳಪೆ ಫೀಲ್ಡಿಂಗ್ ಕೂಡ ಸಿಡ್ನಿ ಸಿಕ್ಸರ್ಸ್ ಆಟಗಾರರಲ್ಲಿ ಅಸಮಾಧಾನವನ್ನು ಉಂಟು ಮಾಡಿತ್ತು. ಮುಂದಿನ ಪಂದ್ಯ ಸಿಡ್ನಿ ಸಿಕ್ಸರ್ಸ್ ತಂಡದ ಪಾಲಿಗೆ ನಿರ್ಣಾಯಕ. ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಫೈನಲ್ಗೇರುತ್ತದೆ. ಅತ್ತ ಪರ್ತ್ ಸ್ಕಾಚರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಬಾಬರ್ ಮೊದಲ ಓವರ್ನಲ್ಲೇ ಸ್ಟಂಪ್ ಔಟ್ ಆಗಿದ್ದರು. ಹೀಗಾಗಿಯೇ ಚಾಲೆಂಜರ್ ಪಂದ್ಯದಲ್ಲಿ ಬಾಬರ್ ಆಝಂ ಅವರ ಬದಲಿಗೆ ಬೇರೊಬ್ಬ ಆರಂಭಿಕನನ್ನು ಕಣಕ್ಕಿಳಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದರು. ಅತ್ತ ಸಿಡ್ನಿ ಸಿಕ್ಸರ್ಸ್ ಮ್ಯಾನೇಜ್ಮೆಂಟ್ ಕೂಡ ಬಾಬರ್ ಅವರನ್ನು ನಿರ್ಣಾಯಕ ಪಂದ್ಯದಿಂದ ಕೈ ಬಿಡಲು ಯೋಜನೆ ರೂಪಿಸಿದ್ದರು. ಈ ಸೂಚನೆ ಸಿಕ್ಕ ಬೆನ್ನಲ್ಲೇ ಬಾಬರ್ ಆಝಂ ಬಿಗ್ ಬ್ಯಾಷ್ ಲೀಗ್ನಿಂದ ಹೊರ ನಡೆದಿದ್ದಾರೆ. ಅದು ಕೂಡ ರಾಷ್ಟ್ರೀಯ ತಂಡದ ಪರ ಆಡುವ ನೆಪದೊಂದಿಗೆ. ಅಂದರೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗಲು ತವರಿಗೆ ಹಿಂತಿರುಗುತ್ತಿರುವುದಾಗಿ ಬಾಬರ್ ಆಝಂ ತಿಳಿಸಿದ್ದಾರೆ. ಆದರೆ ಇಂಟ್ರೆಸ್ಟಿಂಗ್ ವಿಷಯ ಎಂದರೆ, ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗುವುದು ಜನವರಿ 29 ರಿಂದ ಎಂಬುದು. ಅಂದರೆ ಮುಂದಿನ ಸರಣಿಗೆ ಇನ್ನೂ ಒಂದು ವಾರವಿದೆ. ಇತ್ತ ಬಿಗ್ ಬ್ಯಾಷ್ ಲೀಗ್ನಲ್ಲಿ ಉಳಿದಿರುವುದು ಕೇವಲ 2 ಮ್ಯಾಚ್ಗಳು ಮಾತ್ರ. ಅಂದರೆ ಜನವರಿ 23 ರಂದು ಸಿಡ್ನಿ ಸಿಕ್ಸರ್ಸ್ ಹಾಗೂ ಹೋಬಾರ್ಟ್ ಹರಿಕೇನ್ಸ್ ನಡುವೆ ಚಾಲೆಂಜರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಜನವರಿ 25 ರಂದು ಪರ್ತ್ ಸ್ಕಾಚರ್ಸ್ ವಿರುದ್ಧ ಫೈನಲ್ ಪಂದ್ಯವಾಡಲಿದೆ. ಆದರೆ ಬಿಗ್ ಬ್ಯಾಷ್ ಲೀಗ್ ಮುಗಿಯಲು ಕೇವಲ ಮೂರು ದಿನಗಳಿರುವಾಗ ಬಾಬರ್ ಆಝಂ ಟೂರ್ನಿಯಿಂದ ಹೊರ ನಡೆದಿದ್ದಾರೆ.

ನೋಡಿರಿ

