ಪಾಕಿಸ್ತಾನ ಮತ್ತು ಫೀಲ್ಡಿಂಗ್ ಎಂದಿಗೂ ಮುಗಿಯದ ಪ್ರೇಮಕಥೆ – ಶಿಖರ್ ಧವನ್ ಹೀಗೆ ಹೇಳಿದ್ಯಾಕೆ?

ಪಾಕಿಸ್ತಾನ ಮತ್ತು ಫೀಲ್ಡಿಂಗ್ ಎಂದಿಗೂ ಮುಗಿಯದ ಪ್ರೇಮಕಥೆ – ಶಿಖರ್ ಧವನ್ ಹೀಗೆ ಹೇಳಿದ್ಯಾಕೆ?

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ. ಈಗಾಗಲೇ ಭಾರತದ ಆತಿಥ್ಯದಲ್ಲಿರುವ ಪಾಕಿಸ್ತಾನ ಟೀಮ್ ಕೂಡಾ ಜೋಶ್‌ನಲ್ಲೇ ಅಭ್ಯಾಸ ಪಂದ್ಯಕ್ಕಿಳಿದಿವೆ. ಮತ್ತು ಏಕದಿನ ವಿಶ್ವಕಪ್ ಗೆಲ್ಲುವ ಪ್ರಮುಖ ತಂಡಗಳಲ್ಲಿ ಪಾಕಿಸ್ತಾನ ತಂಡವೂ ಒಂದು ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಅಭ್ಯಾಸ ಪಂದ್ಯ ನೋಡಿದವರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳಬೇಕಾಗುತ್ತದೆ ಎಂಬ ಪೋಸ್ಟ್‌ಗಳು ಈಗ ವೈರಲ್ ಆಗ್ತಿದೆ. ಅದರಲ್ಲೂ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಶಿಖರ್ ಧವನ್ ಮಾಡಿರುವ ಪೋಸ್ಟ್ ವೊಂದನ್ನು ಅಭಿಮಾನಿಗಳು ಈಗ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಜೈಸ್ವಾಲ್ ಭರ್ಜರಿ ಶತಕ – ಏಷ್ಯನ್ ಗೇಮ್ಸ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ ಸೋಲನುಭವಿಸಿದೆ. ಹಾಗಾಗಿ ಏಕದಿನ ವಿಶ್ವಕಪ್ ಪ್ರಶಸ್ತಿಯ ಪಯಣ ಪಾಕಿಸ್ತಾನಕ್ಕೆ ಸುಲಭವಲ್ಲ ಎಂಬುದೂ ಅಷ್ಟೇ ಸತ್ಯ. ಇದೆಲ್ಲದರ ನಡುವೆ ತನ್ನ ಕಳಪೆ ಫೀಲ್ಡಿಂಗ್‌ನಿಂದ ಭಾರಿ ಬೆಲೆ ತೆತ್ತುವ ಪಾಕ್ ತಂಡ ಈ ಬಾರಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ತನ್ನ ಕಳಪೆ ಫೀಲ್ಡಿಂಗ್‌ನಿಂದ ನಗೆಪಾಟಲಿಗೀಡಾಗಿದೆ. ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಕೊನೆಯ ಅಭ್ಯಾಸ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 351 ರನ್ ಗಳಿಸಿ ಗೆಲುವಿಗೆ 352 ರನ್ ಗಳ ಗುರಿ ನೀಡಿತು. ಆದರೆ ಪಾಕಿಸ್ತಾನ ತಂಡ 47.4 ಓವರ್‌ಗಳಲ್ಲಿ ತನ್ನಲ್ಲಾ ವಿಕೆಟ್ ಕಳೆದುಕೊಂಡು 337 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ಪಾಕ್ ತಂಡ ಸೊತಿದ್ದಕ್ಕೆ ಹೆಚ್ಚು ಸುದ್ದಿಯಾಗುವ ಬದಲು ತನ್ನ ಕಳಪೆ ಫೀಲ್ಡಿಂಗ್‌ನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಪಾಕ್ ತಂಡದ ಕಳಪೆ ಫೀಲ್ಡಿಂಗ್‌ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಟೀಂ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಧವನ್ “ಪಾಕಿಸ್ತಾನ ಮತ್ತು ಫೀಲ್ಡಿಂಗ್ ಎಂದಿಗೂ ಮುಗಿಯದ ಪ್ರೇಮಕಥೆ” ಎಂದು ಟ್ವೀಟ್ ಮಾಡಿದ್ದಾರೆ. ಧವನ್ ಮಾಡಿರುವ ಈ ಟ್ವೀಟ್ ಇದೀಗ ಬಾರಿ ವೈರಲ್ ಆಗುತ್ತಿದೆ.

Sulekha