ಭಾರತದ ವಿರುದ್ಧ ಪಾಕ್-ಚೀನಾ ಕುತಂತ್ರ – ರಾಮ ಮಂದಿರ ಸೇರಿ ದೇಶದ 264 ವೆಬ್‌ಸೈಟ್ ಹ್ಯಾಕ್‌ಗೆ ಯತ್ನ!

ಭಾರತದ ವಿರುದ್ಧ ಪಾಕ್-ಚೀನಾ ಕುತಂತ್ರ – ರಾಮ ಮಂದಿರ ಸೇರಿ ದೇಶದ 264 ವೆಬ್‌ಸೈಟ್ ಹ್ಯಾಕ್‌ಗೆ ಯತ್ನ!

ಪಾಕ್‌ ಹಾಗೂ ಚೀನಾ ಭಾರತದ ವಿರುದ್ಧ ತನ್ನ ನರಿ ಬುದ್ಧ ತೋರಿಸುತ್ತಲೇ ಇದೆ. ಭಾರತ ವಿರುದ್ಧ ಸದಾ ಒಂದಲ್ಲ ಒಂದು ದುಷ್ಕೃತ್ಯ ನಡೆಸುತ್ತಲೇ ಇದೆ. ಇದೀಗ ಪಾಕ್‌ ಹಾಗೂ ಚೀನಾದ ಮತ್ತೊಂದು ಕೃತ್ಯ ಭಯಲಾಗಿದೆ. ರಾಮ ಮಂದಿರ ಸೇರಿದಂತೆ ಭಾರತದ 264 ವೆಬ್‌ಸೈಟ್ ಹ್ಯಾಕ್ ಮಾಡಲು ಪಾಕಿಸ್ತಾನ ಹಾಗೂ ಚೀನಾದ ಹ್ಯಾಕರ್ಸ್ ಪ್ರಯತ್ನಿಸಿದ್ದರು ಎಂಬ ಆತಂಕಕಾರಿ ವಿಚಾರವೊಂದು ಬಯಲಾಗಿದೆ.

ಇದನ್ನೂ ಓದಿ: ಭಾರತೀಯ ಯುವಕರನ್ನು ಉಕ್ರೇನ್‌ ವಿರುದ್ಧ ಹೋರಾಡಲು ಬಳಸಿದ ರಷ್ಯಾ – ಹೈದರಾಬಾದ್​​ನ ಯುವಕ ಗುಂಡೇಟಿಗೆ ಬಲಿ

ಭಾರತದ ಮೇಲೆ ನೇರವಾಗಿ ದಾಳಿ ಮಾಡಲು ಸಾಧ್ಯವಿಲ್ಲ ಅಂತಾ ಅರಿತ ಪಾಕ್‌ ಹಾಗೂ ಚೀನಾ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದೆ. ದೇಶದಲ್ಲಿ ಅಸ್ಥಿರತೆ, ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ಇದೀಗ ಭಾರತದ 264 ವೆಬ್‌ಸೈಟ್ ಹ್ಯಾಕ್ ಮಾಡಲು ಪಾಕಿಸ್ತಾನ ಹಾಗೂ ಚೀನಾದ ಹ್ಯಾಕರ್ಸ್ ಪ್ರಯತ್ನಿಸಿದ್ದರು. ಅದರಲ್ಲೂ ರಾಮ ಮಂದಿರ ಉದ್ಘಾಟನೆ ದಿನ ಈ ಪ್ರಯತ್ನ ಉತ್ತುಂಗಕ್ಕೆ ತಲುಪಿತ್ತು ಭಾರತದ ಸೈಬರ್ ಸೆಕ್ಯೂರಿಟಿ ದಳ ಈ ಮಾಹಿತಿ ಬಹಿರಂಗಪಡಿಸಿದೆ.

ಈ ರೀತಿಯ ದಾಳಿಯನ್ನು ಮೊದಲೇ ನಿರೀಕ್ಷಿಸಿದ್ದ ಭಾರತ ಸರ್ಕಾರವು ಹ್ಯಾಕರ್‌ಗಳ 1244 ಐಪಿ ವಿಳಾಸಗಳನ್ನು ನಿರ್ಬಂಧಿಸಿ ದಾಳಿಗಳನ್ನು ತಡೆಗಟ್ಟಿದೆ. ‘ರಾಮಮಂದಿರ ಉದ್ಘಾಟನೆಗೂ ಮುನ್ನ ಪ್ರಸಾರ ಭಾರತಿ, ರಾಮಮಂದಿರ ವೆಬ್, ಅಯೋಧ್ಯೆ ವಿಮಾನ ನಿಲ್ದಾಣ, ಯುಪಿ ಪೊಲೀಸ್, ಯುಪಿ ಪ್ರವಾಸೋದ್ಯಮ ಮತ್ತು ಪವರ್‌ಗ್ರಿಡ್ ಸೇರಿದಂತೆ 264 ವೆಬ್‌ಸೈಟ್‌ಗಳ ಮೇಲೆ ಚೀನಾ-ಪಾಕ್ ಹ್ಯಾಕರ್ ಗಳು ಕಣ್ಣಿಟ್ಟಿದ್ದರು.

ಇದನ್ನರಿತ ಸರ್ಕಾರ ಮೊದಲು ಹ್ಯಾಕಿಂಗ್‌ಗೆ ಯತ್ನಿಸುತ್ತಿದ್ದ140 ಐಪಿ ಅಡ್ರೆಸ್‌ಗಳಿಗೆ ಇಂಟರ್ನೆಟ್ ಸೌಲಭ್ಯ ನಿಲ್ಲಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ಆದರೂ ಹ್ಯಾಕಿಂಗ್‌ ಯತ್ನ ಹೆಚ್ಚಾದಾಗ 1244 ಐಪಿ ವಿಳಾಸಗಳನ್ನು ನಿರ್ಬಂಧಿಸಲಾಯಿತು. ಆಗ ದಾಳಿ ನಿಂತಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Shwetha M