ಮತ್ತೆ ಪಾಕಿಸ್ತಾನವಾಗುತ್ತಾ ಬಾಂಗ್ಲಾ ?ವೀಸಾ ರಿಲೀಫ್ ಹಿಂದಿದ್ಯಾ ನರಿ ಲೆಕ್ಕ?
ಇಸ್ಲಾಂ ಬಿಟ್ಟು ಇನ್ನೇನು ಇದೆ ಹೊಂದಾಣಿಕೆ?
ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಕಡಲ ಸಂಬಂಧಗಳು ಬಲಗೊಳ್ಳುತ್ತಿರುವುದು ಭಾರತಕ್ಕೆ ಹೊಸ ಸವಾಲನ್ನು ತಂದೊಡ್ಡಿದೆ. ಭಾರತದ ವಿರುದ್ಧ ಕುಕೃತ್ಯಗಳಿಗೆ ತನ್ನ ನೆಲದಲ್ಲಿ ಪಾಕಿಸ್ತಾನಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದ ಬಾಂಗ್ಲಾದೇಶ, ಇದೀಗ ಆ ದೇಶದ ನಿವಾಸಿಗಳಿಗೆ ತನ್ನ ರಾಷ್ಟ್ರಕ್ಕೆ ಬರಲು ವೀಸಾ ಸೇವೆಯನ್ನು ಮತ್ತಷ್ಟು ಸರಳ ಮಾಡಿದೆ. ನೆರೆಯ ಮುಸ್ಲಿಂ ರಾಷ್ಟ್ರಗಳ ಈ ನಡೆಯು ಭಾರತಕ್ಕೆ ಆತಂಕದ ವಿಚಾರವಾಗಿದೆ. ಪಾಕಿಸ್ತಾನದೊಂದಿಗಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಉತ್ಸುಕವಾಗಿದೆ. ಹೀಗಾಗಿ, ಆ ದೇಶದ ಜನರಿಗೆ ವೀಸಾ ನೀಡುವ ಪ್ರಕ್ರಿಯೆ ಸರಳಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ಮೋದಿ ಸೋಲಿಸಲಷ್ಟೇ INDIA..?- ಉಳಿದಲೆಲ್ಲಾ ಛಿದ್ರ ಛಿದ್ರ..!
ಪಾಕಿಸ್ತಾನದ ರಾಯಭಾರ ಕಚೇರಿಗಳ ಮುಖ್ಯಸ್ಥರಿಗೆ ವೀಸಾ ನೀಡುವಾಗ ಸರ್ಕಾರದ ಅನುಮತಿ ಪಡೆಯುವ ಅಗತ್ಯವನ್ನು ತೆಗೆದುಹಾಕಲಾಗಿದೆ ಎಂದು ಪಾಕಿಸ್ತಾನಕ್ಕೆ ಬಾಂಗ್ಲಾದೇಶದ ಹೈಕಮಿಷನರ್ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ. ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಪ್ರಮುಖ ಆದ್ಯತೆಯಾಗಿದೆ. ಕಳೆದೊಂದು ದಶಕದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವು ವೃದ್ಧಿಯಾಗಿಲ್ಲ. ಇದಕ್ಕೆ ಇತಿಶ್ರೀ ಹಾಡಲು ಮೊಹಮದ್ ಯೂನುಸ್ ಸರ್ಕಾರ ಮುಂದಾಗಿದೆ ಎಂದು ಹುಸೇನ್ ಹೇಳಿದ್ದಾರೆ.
180 ಮಿಲಿಯನ್ ಜನಸಂಖ್ಯೆ ಹೊಂದಿರುವ ಬಾಂಗ್ಲಾದೇಶವು ಪಾಕಿಸ್ತಾನದ ಪ್ರಮುಖ ಮಾರುಕಟ್ಟೆಯಾಗಿದೆ. ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಸಾಮರ್ಥ್ಯ ಹೆಚ್ಚಾದಲ್ಲಿ ಅದರ ಲಾಭ ಪಾಕಿಸ್ತಾನಕ್ಕೆ ದೊರೆಯಲಿದೆ. ಹೀಗಾಗಿ, ದಕ್ಷಿಣ ಏಷ್ಯಾದ ದೇಶಗಳ ನಡುವೆ ಹೆಚ್ಚಿನ ಸಹಯೋಗಕ್ಕೆ ರಾಜತಾಂತ್ರಿಕ ಅಧಿಕಾರಿ ಕರೆ ನೀಡಿದ್ದಾರೆ. ಹಾಗಂತ ಇಲ್ಲಿ ಎರಡು ದೇಶಗಳ ತುಂಬಾ ಸ್ಟ್ರಾಂಗ್ ಇಲ್ಲ. ಎರಡು ದೇಶಗಳು ಕೂಡ ಅಭಿವೃದ್ಧಿಯನ್ನ ನೋಡದ ದೇಶಗಳು. ಬಾಂಗ್ಲಾ ಮತ್ತು ಪಾಕಿಸ್ಥಾನದಲ್ಲಿ ನಡುವೆ ಇರೋದು ಒಂದೇ ಒಂದು ಹೊಲಿಕೆ ಅಂದ್ರೆ ಧರ್ಮ ಮಾತ್ರ. ಇಸ್ಮಾಂ ಒಂದೇ.. ಈ ಎರಡು ದೇಶಗಳ ನಡುವೆ ಅಚಾರ, ವಿಚಾರ, ಬಾಷೆಯಾಗಲಿ, ಆಹಾರ ಪದ್ಧತಿಗಳಾಗಲಿ ಹೊಲಿಕೆ ಇಲ್ಲ. ಎರಡು ದೇಶಗಳು ಕೂಡ ಇಲ್ಲಿ ಡಿಫರೆಂಟ್.
ಆಗಸ್ಟ್‌ನಲ್ಲಿ ಬಾಂಗ್ಲಾದೇಶದ ಮಧ್ಯಂತರ ಆಡಳಿತದ ನಾಯಕರಾಗಿ ಮುಹಮ್ಮದ್ ಯೂನಸ್ ಅಧಿಕಾರ ವಹಿಸಿಕೊಂಡ ಮೇಲೆ ಬಾಂಗ್ಲಾ ಪಾಕ್‌ಗೆ ಹತ್ತಿರವಾಗುತ್ತಿದೆ. ಈ ಮೊದಲು ಇವೆರಡರ ಸಂಬಂಧ ಹಳಸಿ ಹೊಗಿತ್ತು. 1971 ರಲ್ಲಿ ತಮ್ಮ ಹಕ್ಕುಗಳಿಗಾಗಿ ಬಾಂಗ್ಲಾದೇಶ ಪಡೆಗಳು ದೊಡ್ಡ ಮಟದಲ್ಲಿ ಪಾಕ್ ವಿರುದ್ಧ ಹೋರಾಟ ನಡೆಸಿತ್ತು. ಬಾಂಗ್ಲಾ ವಿಮೋಚನೆಗೆ ಭಾರತ ಸಾಥ್ ನೀಡಿತ್ತು. ನಂತ್ರ ಪಾಕಿಸ್ತಾನ ಮಿಲಿಟರಿ ಬಾಂಗ್ಲಾ ಮತ್ತು ಭಾರತ ಪಡೆಗೆ ಶರಣಾಗಿತ್ತು. ಅಲ್ಲಿಂದ ಭಾರತ ಮತ್ತು ಬಾಂಗ್ಲಾ ದೇಶಗಳ ಸಂಬಂಧ ಚೆನ್ನಾಗಿಯೇ ಇತ್ತು. ಆದ್ರೆ ಈಗ ಪಾಕ್ ಬಾಂಗ್ಲಾಕ್ಕೆ ಹತ್ತಿರವಾಗುತ್ತಿದೆ. ಎರಡು ದೇಶದ ಒಂದಾಗಿ ಭಾರತದ ವಿರುದ್ಧ ಕತ್ತಿ ಮಸೆಯಲಾಗುತ್ತಿದೆ. ಇಲ್ಲಿ ಬಾಂಗ್ಲಾ ಪಾಕ್ ಮಾಡಿದ ಅನ್ಯಾಯ ಮತ್ತು ಭಾರತ ಮಾಡಿದ ಸಹಾಯವನ್ನ ಮರೆತಿದೆ. ಪಾಕ್ ಜೊತೆ ಈಗ ವ್ಯಾಪಾರ ಸಂಬಂಧ ಕುರಿಸುತ್ತಿರೋ ಬಾಂಗ್ಲಾ ಮತ್ತೊಂದು ದಿನ ಸಾಕಷ್ಟು ನಷ್ಟ ಅನುಭವಿಸೋದು ಪಕ್ಕಾ.. ಪಾಕ್ ಮಾತು ಕೇಳಿಕೊಂಡು ಬಾಂಗ್ಲಾ ಹಿಂದೂಗಳ ಮೇಲೆ ಹಲ್ಲೆ ಮಾಡಿದೆ. ದೇವಸ್ಥಾನಗಳನ್ನ ಧ್ವಂಸ ಮಾಡಿದೆ. ಹಾಗಂತ ಇವರಿಗೆ ಭಾರತ ಆರ್ಥಿಕತೆ ಮೇಲೆ ಪೆಟ್ಟು ಹೊಡುವುದಕ್ಕೆ ಆಗಲ್ಲ. ಭಯೋತ್ಪಾಧಕರಿಗೆ ಬೇಕಾದ್ರೆ ಬಾಂಗ್ಲಾ ಸಾಥ್ ನೀಡಬಹುದು.. ಆಹಾರದಲ್ಲಿ ಆಗಲಿ ಯಾವುದೇ ವಿಚಾರವಾಗ್ಲಿ ಇಲ್ಲಿ ಬಾಂಗ್ಲಾಕ್ಕೆ ಭಾರತದಿಂದ ಸಹಾಯ ಬೇಕೆ ಹೊರತು , ಭಾರತಕ್ಕೆ ಬಾಂಗ್ಲಾದಿಂದ ಯಾವುದೇ ಸಹಾಯ ಬೇಡ.