ಪಾಕಿಸ್ತಾನ- ಅಫ್ಘಾನಿಸ್ತಾನ ಯುದ್ಧ – ಗಡಿಯಲ್ಲಿ ನೆತ್ತರು! ಪಾಕ್ ಇಬ್ಭಾಗ?
ತಾಲಿಬಾನ್‌ಗೆ ತಲೆತಗ್ಗಿಸಿದ ಪಾಕ್!

ಪಾಕಿಸ್ತಾನ- ಅಫ್ಘಾನಿಸ್ತಾನ ಯುದ್ಧ – ಗಡಿಯಲ್ಲಿ ನೆತ್ತರು! ಪಾಕ್ ಇಬ್ಭಾಗ?ತಾಲಿಬಾನ್‌ಗೆ ತಲೆತಗ್ಗಿಸಿದ ಪಾಕ್!

ಅಫ್ಘಾನ್ ಡಿಚ್ಚಿಗೆ ಭಾರತದ ಶತ್ರು ಪಾಕ್ ಪಂಚರ್ ಆಗಿದೆ. ಇರಲಾರದೇ ಇರವೆ ಬಿಟ್ಕೊಂಡು ತನ್ನ ಅಂತ್ಯವನ್ನ ತಾನೇ ಬರೆದುಕೊಳ್ಳುತ್ತಿದೆ.. ಎಲ್ಲರ ಮುಂದೆ ಶೋ ಕೊಡೋಕೆ ಹೋದ ಪಾಕ್, ತಾಲಿಬಾನಿಗಳ ಕೈಯಲ್ಲಿ ತಗ್ಲಾಕ್ಕೊಂಡಿದೆ. ತಾಲಿಬಾನಿಗಳು ಮತ್ತು ಪಾಕಿಸ್ತಾನ  ನಡುವೆ ಯುದ್ಧ ನಡೆಯುತ್ತಿದ್ದು, ಕೇವಲ48 ಗಂಟೆಯಲ್ಲಿ ಪಾಕಿಸ್ತಾನವನ್ನ ಇಬ್ಭಾಗ ಮಾಡೋದಾಗಿ ತಾಲಿಬಾನ್ ಷೋಷಣೆ  ಮಾಡಿದೆ. ಅಫ್ಘಾನ್‌ನಲ್ಲಿ ತಾಲಿಬಾನ್ ಆಡಳಿತ ಶುರುವಾದಾಗ ಪಾಕ್ ಖುಷಿಯಲ್ಲಿ ಕೇಕೆ ಹಾಕಿತ್ತು.. ಆದ್ರೆ ಈಗ ಪಾಕ್‌ಗೆ ತಾಲಿಬಾನ್‌  ನಂಗಲಾರದ ಬಿಸಿ ತುಪ್ಪ ಆಗಿದೆ. ಉಗ್ರರನ್ನ ಮನೆ ಮಕ್ಕಳಂತೆ ಸಾಕೋ ಪಾಕಿಸ್ತಾನ ಹಾಗೂ ಅಫ್ಘಾನ್‌ನಲ್ಲಿ ಆಡಳಿತ ನಡೆಸುತ್ತಿರೋ ತಾಲಿಬಾನ್‌ ನಡುವೆ ಘೋರ ಯುದ್ಧ ಶುರುವಾಗಿದೆ. ಮಾರ್ಚ್‌ನಿಂದ ಶುರವಾದ ಕಚ್ಚಾಟ, ಈಗ ದೊಡ್ಡದಾಗಿದೆ. ಗಡಿಯಲ್ಲಿ ರಕ್ತದೊಕುಳಿ ಹರಿಯುತ್ತಿದೆ.

ಅಫ್ಘಾನ್ ಜೊತೆ ಪಾಕ್ ಕಿರಿಕ್‌

ಪಾಕ್‌ನಲ್ಲಿ ಅದೆಷ್ಟೋ ಜನ ಹೊಟ್ಟೆಗೆ ಇಲ್ಲದ ನರಳಾಡುತ್ತಿದ್ದಾರೆ.. ಆದ್ರೆ ಅದ್ರ ಬಗ್ಗೆ ಚೂರೇ ಚೂರು ಯೋಚನೆ ಪಾಕ್‌ಗಿಲ್ಲ. ಹೇಗೆ ಭಾರತದ ಜೊತೆ ಗಡಿ ಕಿರಿಕ್ ಮಾಡ್ಕೊಂಡು ಇದ್ಯೋ.. ಹಾಗೇ ಅಫ್ಘಾನ್ ಜೊತೆ ಕೂಡ ಪಾಕ್ ಗಡಿ ಕಿರಿಕ್ ಮಾಡಿಕೊಂಡಿದೆ. ಗಡಿ ತಂಟೆಗೆ ಬಾರದಂತೆ ತಾಲಿಬಾನಿಗಳು ಎಷ್ಟೇ ಎಚ್ಚರಿಕೆ ನೀಡಿದ್ರು, ಪಾಕ್ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗ್ತಾನೆ ಇದೆ.  ಈ ಬಗ್ಗೆ ಎಷ್ಟೇ ಶಾಂತಿ ಮಾತುಕತೆ ನಡೆಿದ್ರು ಫಲ ನೀಡುತ್ತಿಲ್ಲ . ಈ ನಡುವೆ ಮೊನ್ನೆ ಮೊನ್ನೆ ಉಗ್ರರ ಹೆಸರಲ್ಲಿ ಪಾಕ್ ಅಫ್ಘಾನಿಸ್ತಾನದ ಮೇಲೆ ಏರ್‌ಸ್ಟೈಕ್‌ ಮಾಡಿತ್ತು.. ಇದ್ರಲ್ಲಿ ತಾಲಿಬಾನಿಗಳು, ನಾಗರಿಕರು ಸೇರಿದಂತೆ ಸಾಕಷ್ಟು ಜನ ಪ್ರಾಣವನ್ನ ಬಿಟ್ಟಿದ್ರು.. ಇದು ಅಫ್ಘಾನ್‌ನಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನಿಗಳ ರಕ್ತ ಕುದಿಯುವಂತೆ ಮಾಡಿದ್ದು, ಪಾಕ್ ಮೇಲೆ ತಿರುಗಿ ಬಿದ್ದಿದೆ.. ಹೀಗಾಗಿ ಪಾಕ್ ಗಡಿ ಪ್ರದೇಶದಲ್ಲಿ ದಾಳಿ ನಡೆಸುತ್ತಿವೆ.

48 ಗಂಟೆಯಲ್ಲಿ ಪಾಕ್ ಇಬ್ಭಾಗ

ಕೇವಲ 48 ಗಂಟೆಯಲ್ಲಿ ಪಾಕ್‌ನ ಇಬ್ಭಾಗ ಮಾಡುತ್ತೇವೆ ಅಂತಾ ತಾಲಿಬಾನಿಗಳು ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. ಕಳೆದು ಒಂದು ವಾರದಿಂದ ಪಾಕಿಸ್ತಾನದ ಗಡಿ ಚೆಕ್‌ಪೋಸ್ಟ್‌ ಗಳ ಮೇಲೆ ತಾಲಿಬಾನ್‌ ದಾಳಿ ಮಾಡುತ್ತಿದ್ದು, ಪಾಕ್ ಸೈನಿಕರು ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಮುಂದಿನ 48 ಗಂಟೆಯಲ್ಲಿ ಪಾಕಿಸ್ತಾನವನ್ನ ಇಬ್ಭಾಗ ಮಾಡುತ್ತೇವೆ ಅಂತ ಶಪಥ ಮಾಡಿರೋ ಅಫ್ಘಾನ್, ನಿರಂತ ಗುಂಡಿನ ದಾಳಿಯನ್ನ ನಡೆಸುತ್ತಿದೆ. ತಾಲಿಬಾನ್ ಉಗ್ರಸಂಘಟನೆಯ 2500 ಸಾವಿರಕ್ಕೂ ಹೆಚ್ಚು ಸದಸ್ಯರು ಪಾಕಿಸ್ತಾನ – ಅಘ್ಘಾನ್ ಗಡಿಯಲ್ಲಿ ಬೀಡು ಬಿಟ್ಟಿದ್ದು, ಎಲ್ಲದ್ದಕ್ಕೂ ಸಜ್ಜಾಗಿ ನಿಂತಿದ್ದಾರೆ.  ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಬಾಂಬ್‌ಗಳು,  ಮಿಷನ್‌ ಗನ್‌ಗಳನ್ನ ಸೇರಿಸಿಟ್ಟಿದ್ದಾರೆ. ಘೋಜ್‌ಗರ್ಹಿ, ಮಠ ಸಂಗರ್, ಕೋಟ್ ರಾಘ ಮತ್ತು ತಾರಿ ಮೆಂಗಲ್ ಪ್ರದೇಶಗಳಲ್ಲಿ ತಾಲಿಬಾನಿಗಳು ಅಟ್ಯಾಕ್ ಮಾಡುತ್ತಿದ್ದಾರೆ .

ತಾಲಿಬಾನಿಗಳ ಮುಂದೆ ತಲೆಬಾಗಿದ ಪಾಕ್‌

ತಾಲಿಬಾನಿಗಳ ಫಿರಂಗಿಗಳು ಮತ್ತು ಮೆಷಿನ್ ಗನ್‌ಗಳ ಮುಂದೆ ಪಾಕಿಸ್ತಾನಿ ಸೇನೆ ತಲೆಬಾಗಿದೆ. ಅಫ್ಘಾನಿಸ್ತಾನದ ತಾಲಿಬಾನ್ ಯೋಧರ ಈ ದಾಳಿಯಿಂದಾಗಿ, ಪಾಕಿಸ್ತಾನಿ ಸೇನೆಯು ತನ್ನ ಎರಡು ಗಡಿ ಪೋಸ್ಟ್‌ಗಳನ್ನು ತೊರೆದಿದೆ. ಅಷ್ಟೇ ಅಲ್ಲ, ಈ ದಾಳಿಯಲ್ಲಿ ಸುಮಾರು 19 ಪಾಕಿಸ್ತಾನಿ ಸೈನಿಕರು ಸಹ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಪಕ್ತಿಯಾ ಮತ್ತು ಖೋಸ್ಟ್ ಪ್ರದೇಶಗಳಲ್ಲಿ ಈ ಸಂಘರ್ಷ ನಡೆದಿದೆ ಎಂದು ತಾಲಿಬಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಸಂಘರ್ಷದಲ್ಲಿ, ತಾಲಿಬಾನ್ ಹೋರಾಟಗಾರರು ಪಾಕಿಸ್ತಾನದ ಚೆಕ್‌ ಪೋಸ್ಟ್‌ ಗಳ ಮೇಲೆ ದಾಳಿ ಮಾಡಿದ್ದು ಮಾತ್ರವಲ್ಲದೆ ಅವುಗಳನ್ನು ಸುಟ್ಟು ಬೂದಿ ಮಾಡಿದ್ದಾರಂತೆ.

ಮೊದಲೇ ಪಾಕ್ ಮೇಲೆ ಕೆಂಡ ಕಾರುತ್ತಿದ್ದ ಅಫ್ಘಾನ್‌ಗೆ ಪಾಕ್‌ ಏರ್‌ಸ್ಟೈಕ್ ಮಾಡಿರುವುದು ಉರಿಯುವ ಬೆಂಕಿಗೆ   ತುಪ್ಪ ಸುರಿದಂತೆ ಆಗಿದೆ.  ಪಾಕಿಸ್ತಾನ ವಾಯುಪಡೆ ನಡೆಸಿದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 51 ಜನರು ಸಾವನ್ನಪ್ಪಿದ್ದರು. ಇದಕ್ಕೆ ಪಾಕಿಸ್ತಾನ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅವತ್ತೇ ತಾಲಿಬಾನ್ ಎಚ್ಚರಿಕೆ ನೀಡಿತ್ತು..ಅದರಂತೆ ಪಾಕ್ ಮೇಲೆ ಅಫ್ಘಾನ್ ದಾಳಿ ನಡೆಸುತ್ತಿದ್ದು, ಗಡಿಯಲ್ಲಿ ರಕ್ತದೊಕುಳಿ ನಡೆಯುತ್ತಿದೆ.

Kishor KV