PAK ಆಟಗಾರನ ಗಾಂ*ಜಾ ಗಮ್ಮತ್ತು! – ನಶೆಯಲ್ಲಿ T-20WC ಆಡಿದ್ದ ನವಾಜ್
ICCಯಿಂದ 3 ತಿಂಗಳ DATA ಡಿಲೀಟ್

ವಿಶ್ವಕ್ರಿಕೆಟ್ನಲ್ಲಿ ಪಾಕಿಸ್ತಾನ ಟೀಂ ಟ್ರೋಲ್ ಆಗೋದು, ಶೇಪ್ ಔಟ್ ಆಗೋದು ಹೊಸದೇನು ಅಲ್ಲ. ಅದ್ರಲ್ಲೂ ಪಾಕಿಸ್ತಾನದ ಆಟಗಾರರು ಮಾಡೋ ಅವಾಂತರಗಳು ಒಂದಲ್ಲ. ಈಗ ಅಲ್ಲಿನ ಸ್ಟಾರ್ ಆಲ್ರೌಂಡರ್ ಮಾಡಿರೋ ಕಿತಾಪತಿಗೆ ಇಡೀ ಮ್ಯಾನೇಜ್ಮೆಂಟ್ ತಲೆ ತಗ್ಗಿಸುವಂತಾಗಿದೆ. ಐಸಿಸಿ ಕೂಡ ಸರಿಯಾಗೇ ಚಮಕ್ ಕೊಟ್ಟಿದೆ.
ಇದನ್ನೂ ಓದಿ : ಭಾರತ ಸೋತ್ರೂ ಗೆದ್ದ ಬುಮ್ರಾ – ಬ್ಯಾಟಿಂಗ್ ವೀಕ್ ನೆಸ್ ಮತ್ತೆ ರಿವೀಲ್
2026ರ ಟಿ-20 ವಿಶ್ವಕಪ್ ಮುಗ್ದು ನಾಲ್ಕು ತಿಂಗಳಾಯ್ತು. ಭಾರತ ಚಾಂಪಿಯನ್ ಆಗಿ ಈಗ ಎಲ್ಲಾ ತಂಡಗಳು ಬೇರೆ ಬೇರೆ ಸಿರೀಸ್ನಲ್ಲಿ ಬ್ಯುಸಿಯಾಗಿದೆ. ಆದ್ರೆ ಅದೇ ವಿಶ್ವಕಪ್ ವೇಳೆ ಪಾಕಿಸ್ತಾನದ ಆಟಗಾರನೊಬ್ಬ ಗಾಂಜಾ ನಶೆಯಲ್ಲಿ ತೇಲಿರೋದು ಈಗ ಗೊತ್ತಾಗಿದೆ. ಪಾಕಿಸ್ತಾನದ ಆಲ್ರೌಂಡರ್ ಮೊಹಮ್ಮದ್ ನವಾಜ್ ಡೋಪಿಂಗ್ ನಿಯಮಗಳನ್ನು ಮೀರಿರೋದು ದೃಢಪಟ್ಟಿದೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ.
ಭಾರತ-ಶ್ರೀಲಂಕಾ ಜಂಟಿ ಆಯೋಜನೆಯಲ್ಲಿ ಐಸಿಸಿ ಟಿ20 ವಿಶ್ವಕಪ್ 2026 ಪಂದ್ಯಾವಳಿಯನ್ನ ಆಯೋಜನೆ ಮಾಡಲಾಗಿತ್ತು. ಇದೇ ಟೂರ್ನಮೆಂಟ್ನಲ್ಲಿ ಡೋಪಿಂಗ್ ಪರೀಕ್ಷೆ ಮಾಡಿದಾಗ ನವಾಜ್ ತಪ್ಪಿತಸ್ಥ ಅನ್ನೋದು ದೃಢಪಟ್ಟಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ನವಾಜ್ ಇಡೀ ಟೂರ್ನಿಯಲ್ಲಿ ಪಾಕಿಸ್ತಾನ ತಂಡದಲ್ಲೇ ಆಡಿದ್ದರು. ಫೆಬ್ರವರಿ 7 ರಂದು ಕೊಲಂಬೊದಲ್ಲಿ ನಡೆದ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಟಿ20 ವಿಶ್ವಕಪ್ 2026 ಪಂದ್ಯದ ನಂತರ ಮೊಹಮ್ಮದ್ ನವಾಜ್ ಅವರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು. ಇದು ಟೂರ್ನಮೆಂಟ್ನಲ್ಲಿ ಪಾಕಿಸ್ತಾನದ ಮೊದಲ ಪಂದ್ಯವಾಗಿತ್ತು. ಪರೀಕ್ಷೆಯಲ್ಲಿ ಗಾಂಜಾ ಸೇವನೆಯಿಂದ ಉತ್ಪತ್ತಿಯಾಗುವ ‘ಕಾರ್ಬಾಕ್ಸಿ-ಟಿಎಚ್ಸಿ’ ಎಂಬ ನಿಷೇಧಿತ ಮಾದಕ ದ್ರವ್ಯ ಪತ್ತೆಯಾಗಿದೆ. ವರದಿ ಬಂದ ಮೇಲೆ 32 ವರ್ಷದ ಮೊಹಮ್ಮದ್ ನವಾಜ್ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದ್ರೆ ಮ್ಯಾಚ್ ಟೈಮಲ್ಲಿ ಪರ್ಫಾಮೆನ್ಸ್ಗಾಗಿ ಇದನ್ನ ತಗೊಂಡಿಲ್ಲ. ಪಂದ್ಯಾವಳಿ ಇಲ್ಲದ ಸಮಯದಲ್ಲಿ ಮನರಂಜನೆಗಾಗಿ ಬಳಸಿದ್ದಾಗಿ ಹೇಳಿದ್ದಾರೆ. ಹೀಗಾಗಿ ಐಸಿಸಿ ಅವರ ಮೇಲೆ ಡೋಪಿಂಗ್ ನಿಯಮ ಉಲ್ಲಂಘನೆ ಆರೋಪದಲ್ಲಿ ಮೂರು ತಿಂಗಳ ನಿಷೇಧ ಹೇರಿದೆ. ಈ ನಿಷೇಧವು ಮೇ 1, 2026 ರಿಂದ ಜಾರಿಯಲ್ಲಿರುತ್ತದೆ. ಹಾಗೇ ಮೂರು ತಿಂಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುವುದಾಗಿ ತಿಳಿಸಿದೆ. ಐಸಿಸಿ ಡೋಪಿಂಗ್ ವಿರೋಧಿ ನಿಯಮಗಳ ಪ್ರಕಾರ, ಫೆಬ್ರವರಿ 7 ರಿಂದ ಮೇ 1, 2026ರವರೆಗೆ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳಲ್ಲಿ ನವಾಜ್ ಅವರ ಎಲ್ಲಾ ದಾಖಲೆಗಳನ್ನು ರದ್ದುಗೊಳಿಸಲಾಗಿದೆ. ಇದರರ್ಥ, ಈ ಅವಧಿಯಲ್ಲಿ ಅವರು ಗಳಿಸಿದ ಯಾವುದೇ ರನ್ಗಳು ಮತ್ತು ವಿಕೆಟ್ಗಳನ್ನು ಅವರ ಒಟ್ಟು ವೃತ್ತಿಜೀವನದ ಅಂಕಿಅಂಶಗಳಿಂದ ತೆಗೆದುಹಾಕಲಾಗುತ್ತದೆ. ಈ ಸಮಯದಲ್ಲಿ ನವಾಜ್ ಒಟ್ಟು 7 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 15 ರನ್ಗಳನ್ನು ಗಳಿಸಿ 7 ವಿಕೆಟ್ಗಳನ್ನು ಪಡೆದಿದ್ದಾರೆ. ಆದ್ರೆ ನಿಯಮದ ಪ್ರಕಾರ ಈ ಎಲ್ಲಾ ಅಂಕಿಅಂಶಗಳನ್ನ ಅವ್ರ ಕೆರಿಯರ್ ರೆಕಾರ್ಡ್ಸ್ನಿಂದ ಡಿಲೀಟ್ ಮಾಡಲಾಗುತ್ತೆ. ಒಟ್ನಲ್ಲಿ ಪಾಕಿಸ್ತಾನಿ ಪ್ಲೇಯರ್ಸ್ ಆನ್ಫೀಲ್ಡ್ನಲ್ಲಿ ಪ್ರದರ್ಶನ ನೀಡದೆಯೇ ಪಾಕಿಸ್ತಾನ ತಂಡಕ್ಕೆ ಭಾರವಾಗಿದ್ದಾರೆ. ಅದು ಸಾಲ್ದು ಅಂತಾ ಬೇಡದೇ ಇರೋ ಕೆಲಸಗಳನ್ನೂ ಮಾಡಿ ತಂಡದ ಮರ್ಯಾದೆ ತೆಗೀತಿದ್ದಾರೆ.

ನೋಡಿರಿ
