ಕಾಶ್ಮೀರಕ್ಕಾಗಿ ಯುದ್ಧಕ್ಕೂ ಸಿದ್ಧ – ಮತ್ತೆ ಭಾರತ ಕೆಣಕಿದ ಪಾಕ್
ಉ*ಗ್ರರರ ಮೇಲೆ ಮುನೀರ್‌ಗೆ ಲವ್

ತಿನ್ನೋಕೆ ಅನ್ನ ಇಲ್ಲದೇ ಪರದಾಡುತ್ತಿರೋ ಪಾಕಿಸ್ತಾನ ಬಾಡಿಯಿ ಕೊಚ್ಚಿಕೊಳ್ಳುವುದ್ದನ್ನ ಮಾತ್ರ ಬಿಡುತ್ತಿಲ್ಲ. ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್, ಮತ್ತೆ ಭಾರತವನ್ನ ಕೆಣಕೋ ಕೆಲಸ ಮಾಡಿದ್ದಾನೆ. ಪದೇ ಪದೇ ಕಾಶ್ಮೀರ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದಾನೆ. ಈ ಹಿಂದೆ ಪಾಕ್ ಮತ್ತು ಭಾರತ ರಾಷ್ಟ್ರಗಳು ಯುದ್ಧ ಮಾಡುವ ಮುನ್ನ ಮುನೀರ್, ಕಾಶ್ಮೀರವು ಪಾಕ್‌ನ ರಕ್ತನಾಳ ಎಂದು ಹೇಳಿ ಉಗ್ರರನ್ನು ಪ್ರಚೋದಿಸಿದ್ದರು. ಆಮೇಲೆ ಪಹಲ್ಗಾಮ್ ದಾಳಿ ನಡೆದಿತ್ತು. ಈಗ ಉಗ್ರವಾದವನ್ನು ಸಮರ್ಥಿಸಿಕೊಂಡಿರುವ ಮುನೀರ್, ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ಕಾನೂನು ಬದ್ಧ ಹೋರಾಟ ಎಂದು ಅಸೀಮ್ ಮುನೀರ್ ಬಣ್ಣಿಸಿದ್ದಾರೆ. ಅಲ್ಲದೇ ಪಾಕಿಸ್ತಾನ ಎಂದಿಗೂ ಕಣಿವೆಯ ಜನರ ಪರವಾಗಿರಲಿದೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ : PAK ಎದೆ ಸೀಳೋಕೆ ಅಗ್ನಿ-5 ರೆಡಿ – ಭಾರತಕ್ಕೆ ಬಂಕರ್ ಬಸ್ಟರ್ ಬಲ!
ಕರಾಚಿಯ ಪಾಕಿಸ್ತಾನ ನೌಕಾ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮುನೀರ್, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದನ್ನು ಭಯೋತ್ಪಾನೆ ಎಂದು ಲೇಬಲ್ ಮಾಡಲಾಗುತ್ತಿದೆಯೋ ಅದು ಭಯೋತ್ಪಾದನೆಯಲ್ಲ. ಬದಲಿಗೆ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ‘ಕಾನೂನುಬದ್ಧ ಹೋರಾಟ’ವಾಗಿದೆ ಎಂದು ಹೇಳಿದ್ದಾರೆ. ‘ಪಾಕಿಸ್ತಾನ ಯಾವಾಗಲೂ ಕಾಶ್ಮೀರಿಗಳೊಂದಿಗೆ ನಿಂತಿದ್ದು, ಅದನ್ನು ಮುಂದುವರಿಸುತ್ತದೆ. ಕಾಶ್ಮೀರದ ಜನರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿರುವವರೇ ಈ ಹೋರಾಟ ಮತ್ತಷ್ಟು ಉಲ್ಬಣಗೊಳ್ಳಲು ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.
ಸೋತ್ರು ಬಡಾಯಿ ಕೊಚ್ಚಿಕೊಂಡ ಪಾಕ್
ಇದೇ ವೇಳೆ ಮಾತನಾಡಿದ ಮುನೀರ್, ಭವಿಷ್ಯದಲ್ಲಿ ಭಾರತ ನಮ್ಮ ಮೇಲೆ ದಾಳಿ ಮಾಡಿದರೆ, ಅದಕ್ಕೆ ‘ಸೂಕ್ತ’ ಉತ್ತರ ನೀಡಲಾಗುವುದು, ‘ಭವಿಷ್ಯದಲ್ಲಿ ಭಾರತ ಪಾಕಿಸ್ತಾನದ ಮೇಲೆ ಯಾವುದೇ ರೀತಿಯಲ್ಲಿ ದಾಳಿ ಮಾಡಿದರೆ, ಅದಕ್ಕೆ ನಿಖರವಾದ ಮತ್ತು ತ್ವರಿತ ಪ್ರತಿಕ್ರಿಯೆ ನೀಡಲಾಗುವುದು. ಪಾಕಿಸ್ತಾನವು ಇದನ್ನು ಮೊದಲು ಎರಡು ಬಾರಿ ಮಾಡಿದೆ. ಮೊದಲನೆಯದು 2019ರಲ್ಲಿ, ಬಾಲಕೋಟ್ ವಾಯುದಾಳಿಯನ್ನು ವಿಫಲಗೊಳಿಸಿದಾಗ ಮತ್ತು ಎರಡನೆಯದಾಗಿ ಇತ್ತೀಚಿನ ಆಪರೇಷನ್ ಸಿಂಧೂರ್’ ನಲ್ಲಿ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.
ಇನ್ನೂ ಭಾರತದ ದಾಳಿಗೆ ತಕ್ಕ ಪ್ರತಿದಾಳಿ ನಡೆಸುವ ಮೂಲಕ ಪಾಕಿಸ್ತಾನ ತನ್ನ ಸಾಮರ್ಥ್ಯವನ್ನು ತೋರಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡರ್ ಹೇಳಿದ್ದಾರೆ. ಪರಮಾಣು ಸಾಮರ್ಥ್ಯವನ್ನೇ ಮುಂದಿಟ್ಟುಕೊಂಡು ಭಾರತವು ಯುದ್ಧಕ್ಕೆ ಪ್ರಚೋದನೆ ನೀಡಿದರೆ, ಪಾಕಿಸ್ತಾನವೂ ತಕ್ಕ ಉತ್ತರ ನೀಡಲು ಸಮರ್ಥವಾಗಿದೆ. ಭಾರತವು ಪಾಕಿಸ್ತಾನವನ್ನು ಬೆದರಿಸಲು ಮತ್ತು ಒತ್ತಡ ಹೇರಲು ಸಾಧ್ಯವಿಲ್ಲ ಎಂಬುದು 4 ದಿನಗಳ ಸಂಘರ್ಷದ ಫಲಿತಾಂಶದಿಂದ ಬಯಲಾಗಿದೆ ಎಂದು ಹೇಳಿದ್ದಾರೆ. ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿ ಪಾಕಿಸ್ತಾನ ತನ್ನ ಹಕ್ಕುಗಳನ್ನು ಭದ್ರಪಡಿಸಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ಒಪ್ಪಂದಗಳನ್ನು ಭಾರತ ಉಲ್ಲಂಘನೆ ಮಾಡುತ್ತಿರುವುದನ್ನು ಜಗತ್ತಿಗೆ ತೋರಿಸಲು ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ನೋಡಿರಿ

