ಟೂರ್ನಿಯನ್ನೇ ಬಹಿಷ್ಕರಿಸುತ್ತಾ ಪಾಕಿಸ್ತಾನ? – ಚಾಂಪಿಯನ್ಸ್ ಟ್ರೋಫಿಗೆ ಮೇಜರ್ ಟ್ವಿಸ್ಟ್
ಭಾರತ ಗೆದ್ದಿದ್ದಕ್ಕೆ PAKಗೆ ಇಂಥಾ ಶಿಕ್ಷೆನಾ?
ವಿಶ್ವ ಕ್ರಿಕೆಟ್ನಲ್ಲಿ ಈಗ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹಾಟ್ ಟಾಪಿಕ್. ಭಾರತ ಮತ್ತು ಪಾಕಿಸ್ತಾನ ನಡುವಿನ ಗೊಂದಲಕ್ಕೆ ತೆರೆ ಬಿದ್ರೂ ಟಾಕ್ ಮಾತ್ರ ಕಮ್ಮಿಯಾಗಿಲ್ಲ. ಅದ್ರಲ್ಲೂ ಪಾಕ್ ಮಾಜಿ ಆಟಗಾರರೆಲ್ಲಾ ಭಾರತದ ವಿರುದ್ಧ ಉರಿದು ಬೀಳ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನೇ ಬಾಯ್ಕಾಟ್ ಮಾಡಿ ಅಂತಾ ಹೊಸ ತಗಾದೆ ತೆಗೆದಿದ್ದಾರೆ. ಏನಿದು ಪಾಕಿಗಳ ಹೊಸ ವರಸೆ? ಇನ್ಮುಂದೆ ಟೂರ್ನಿ ನಡೆಯಲ್ವಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: WTC ರೇಸ್ ನಿಂದ ಭಾರತ OUT? – 1 ಸೋಲು.. 3 ಪಂದ್ಯ.. ಸವಾಲುಗಳೆಷ್ಟು?
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಾಗ ಶುರುವಾಗಿದ್ದ ಗೊಂದಲ, ಗದ್ಧಲಗಳಿಗೆಲ್ಲಾ ಕಳೆದ ವಾರವಷ್ಟೇ ತೆರೆ ಬಿದ್ದಿದೆ. ತಿಂಗಳುಗಟ್ಟಲೆ ಮೊಂಡಾಟ ಮಾಡಿ ಕೊನೆಗೂ ಟೂರ್ನಿಯನ್ನ ಹೈಬ್ರಿಡ್ ಮಾದರಿಯಲ್ಲಿ ನಡೆಸೋಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ನೀಡಿದೆ. ಸೋ ಅಲ್ಲಿಗೆ ಕನ್ಫ್ಯೂಷನ್ಗಳೆಲ್ಲಾ ಕ್ಲಿಯರ್ ಆಯ್ತು ಅನ್ಕೊಳ್ಳುವಾಗ್ಲೇ ಪಾಕಿಸ್ತಾನದ ಮಾಜಿ ಆಟಗಾರರು ಹೊಸ ಹೊಸ ಕಾಂಟ್ರವರ್ಸಿಗಳನ್ನ ಕ್ರಿಯೇಟ್ ಮಾಡ್ತಿದ್ದಾರೆ. ಈಗ ಟೂರ್ನಿಯನ್ನೇ ಬಾಯ್ಕಾಟ್ ಮಾಡಿ ಅಂತಾ ಬಾಯಿ ಬಡ್ಕೊಳ್ಳೋಕೆ ಸ್ಟಾರ್ಟ್ ಮಾಡಿದ್ದಾರೆ.
ಬಿಸಿಸಿಐ ನಿರ್ಧಾರದಿಂದ ಉರಿದು ಬಿದ್ದಿರೋ ಪಾಕಿಸ್ತಾನ ಕ್ರಿಕೆಟರ್ಸ್!
ದಶಕಗಳ ಬಳಿಕ ಐಸಿಸಿ ಟೂರ್ನಿ ಆಯೋಜನೆಯ ಆತಿಥ್ಯ ಪಡೆದಿದ್ದ ಪಾಕಿಸ್ತಾನ ಭಾರತವನ್ನ ತನ್ನ ನೆಲಕ್ಕೆ ಕರೆಸಿಕೊಳ್ಳೋ ಯೋಜನೆಯಲ್ಲಿತ್ತು. ಆದ್ರೆ ಭಾರತ ಪಾಕಿಸ್ತಾನಕ್ಕೆ ಕಾಲಿಡಲ್ಲ ಅಂತಾ ಪಟ್ಟು ಹಿಡಿದಿತ್ತು. ಅದಕ್ಕೆ ಮೇನ್ ರೀಸನ್ನೇ ಭದ್ರತೆ. ಟೀಂ ಇಂಡಿಯಾ ಆಟಗಾರರಿಗೆ ಪಾಕಿಸ್ತಾನದಲ್ಲಿ ಸೂಕ್ತ ಭದ್ರತೆ ಸಿಗೋದಿಲ್ಲ. ಎರಡೂ ರಾಷ್ಟ್ರಗಳ ನಡುವೆ ಸಾಕಷ್ಟು ವಿಚಾರಗಳಲ್ಲಿ ವೈಮನಸ್ಸು ಇರೋದ್ರಿಂದ ನಾವು ನಮ್ಮ ಆಟಗಾರರನ್ನ ಪಾಕ್ಗೆ ಕಳಿಸಲ್ಲ ಅನ್ನೋದು ಬಿಸಿಸಿಐ ನಿರ್ಧಾರ. ಭಾರತದ ಇದೇ ನಿರ್ಧಾರ ಪಾಕ್ ನ ಹಾಲಿ ಹಾಗೂ ಮಾಜಿ ಆಟಗಾರರ ಕಣ್ಣು ಕೆಂಪಾಗಿಸಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ರಶೀದ್ ಲತೀಫ್ ಹೊಸ ಕ್ಯಾತೆ ತೆಗೆದಿದ್ದಾರೆ.
ಇನ್ಮುಂದೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಸೋದೇ ಬೇಡ!
ಕೈಲಾಗದವ್ರು ಮೈ ಪರಚಿಕೊಂಡ್ರು ಅಂತಾರಲ್ಲ ಹಾಗೆ ರಶೀದ್ ಲತೀಫ್ ಮಾತನಾಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಿನ ಹೆಜ್ಜೆ ಇಡುವ ಮೊದಲು ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನ ಬಾಯ್ಕಾಟ್ ಮಾಡಬೇಕು. ಇನ್ಮುಂದೆ ಚಾಂಪಿಯನ್ ಟ್ರೋಫಿ ನಡೆಯಬಾರದು ಎಂದಿದ್ದಾರೆ. ಅಲ್ದೇ ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲಿ ನಮ್ಮನ್ನು ಬಲಿಪಶುಗಳಾಗಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಆಗಿರಲಿ ಅಥವಾ ಐಸಿಸಿ ಆಗಿರಲಿ, ಬಿಸಿಸಿಐ ಎದುರು ಫೈಟ್ ಮಾಡೋಕೆ ಸಾಧ್ಯವಿಲ್ಲ. ಭಾರತ ಬಹಿಷ್ಕರಿಸಿದ್ರೆ, ನಾವು ಎಲ್ಲಿಗೆ ಹೋಗಿ ನಿಲ್ಲಬೇಕಾಗುತ್ತೆ ಅನ್ನೋ ಭಯ ಇದೆ. ಅದಕ್ಕಾಗಿ ಪಾಕಿಸ್ತಾನವನ್ನು ಬಲಿಪಶುಗಳಾಗಿ ಮಾಡ್ತಾರೆ. ಆದ್ದರಿಂದ ಬಿಸಿಸಿಐ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಾಕಿಸ್ತಾನ ಟೂರ್ನಿಯನ್ನ ಬಹಿಷ್ಕರಿಸಬೇಕು ಎಂದಿದ್ದಾರೆ.
ಟ್ರೋಫಿಯಿಂದ ಹಿಂದೆ ಸರಿದ್ರೆ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ!
ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನ ಪಾಕಿಸ್ತಾನದಲ್ಲೇ ನಡೆಸಬೇಕು ಅಂತಾ ಪಟ್ಟು ಹಿಡಿದು ಕೊನೆಗೆ ಹೈಬ್ರಿಡ್ ಮಾದರಿಯನ್ನ ಒಪ್ಪಿಕೊಳ್ಳೋಕೆ ಕಾರಣವೂ ಇದೆ. ಹಾಗೇನಾದ್ರೂ ಪಿಬಿಸಿ ದೌಲತ್ತು ತೋರಿ ಹಿಂದೆ ಹೆಜ್ಜೆ ಇಟ್ರೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ. ಮೊದ್ಲೇ ಆರ್ಥಿಕವಾಗಿ ದಿವಾಳಿಯಾಗಿರೋ ಪಾಕ್ ಮತ್ತಷ್ಟು ಪಾತಾಳಕ್ಕೆ ಕುಸಿಯಲಿದೆ. ಅದೂ ಸಾಲ್ದು ಅಂತಾ ಕಾನೂನು ಮೊಕದ್ದಮೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಿಷ್ಕಾರವನ್ನು ಕೂಡ ಪಿಸಿಬಿ ಎದುರಿಸಬೇಕಾಗುತ್ತದೆ. ಹೀಗಾಗಿ ಐಸಿಸಿ ಮತ್ತು ಬಿಸಿಸಿಐ ಹೈಬ್ರಿಡ್ ಮಾದರಿಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದೆ ಪಂದ್ಯಾವಳಿಯಿಂದ ಹಿಂದೆ ಸರಿಯೋದು ಪಿಸಿಬಿಗೆ ಸುಲಭದ ನಿರ್ಧಾರವಾಗಿಲ್ಲ.
ಐಸಿಸಿಯೊಂದಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿರುವ ಪಾಕ್!
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಹೊಣೆ ಪಾಕಿಸ್ತಾನಕ್ಕೆ ಅಷ್ಟು ಈಸಿಯಾಗಿ ಸಿಕ್ಕಿಲ್ಲ. ಪಾಕಿಸ್ತಾನವು ಐಸಿಸಿಯೊಂದಿಗೆ ಆತಿಥ್ಯ ಒಪ್ಪಂದಕ್ಕೆ ಸಹಿ ಹಾಕಿದೆ. ಈವೆಂಟ್ನಲ್ಲಿ ಭಾಗವಹಿಸುವ ಎಲ್ಲ ರಾಷ್ಟ್ರಗಳಂತೆ, ಐಸಿಸಿಯೊಂದಿಗೆ ಕಡ್ಡಾಯ ಸದಸ್ಯರ ಭಾಗವಹಿಸುವಿಕೆ ಒಪ್ಪಂದಕ್ಕೂ ಸಹಿ ಒತ್ತಿದೆ. ಒಂದು ಸದಸ್ಯ ರಾಷ್ಟ್ರವು ಐಸಿಸಿ ಈವೆಂಟ್ನಲ್ಲಿ ಆಡಲು ಎಂಪಿಎಗೆ ಸಹಿ ಹಾಕಿದ ನಂತರವೇ ಅದು ಐಸಿಸಿ ಈವೆಂಟ್ಗಳಿಂದ ಗಳಿಸಿದ ಆದಾಯದ ಪಾಲನ್ನು ಪಡೆಯೋಕೆ ಕ್ವಾಲಿಫೈ ಆಗುತ್ತೆ. ಅದೆಲ್ಲಕ್ಕಿಂತ ಇಂಪಾರ್ಟೆಂಟ್ ಅಂದ್ರೆ ಐಸಿಸಿ ತನ್ನ ಎಲ್ಲ ಕಾರ್ಯಕ್ರಮಗಳ ಪ್ರಸಾರ ಒಪ್ಪಂದಕ್ಕೆ ಸಹಿ ಹಾಕಿದಾಗ, ಐಸಿಸಿಯ ಎಲ್ಲ ಸದಸ್ಯರು ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ತನ್ನ ಎಲ್ಲಾ ಪಂದ್ಯಾವಳಿಗಳಲ್ಲಿ ಆಡಲು ಲಭ್ಯ ಇರ್ಬೇಕು.
2027ರವರೆಗೂ ಎರಡೂ ತಂಡಗಳಿಗೆ ಹೈಬ್ರಿಡ್ ಮಾದರಿ ಸಲ್ಯೂಷನ್!
ಭಾರತ ಪಾಕಿಸ್ತಾನಕ್ಕೆ ಕಾಲಿಡಲ್ಲ ಅಂದಿರೋದು ಪಾಕ್ಗೆ ತೀವ್ರ ಮುಖಭಂಗ ತಂದಿಟ್ಟಿದೆ. ಇದೇ ಕಾರಣಕ್ಕೆ ಮುಂದಿನ ಐಸಿಸಿ ಟೂರ್ನಿಗಳನ್ನ ಭಾರತದಲ್ಲಿ ಆಯೋಜನೆ ಮಾಡಿದ್ರೆ ನಾವೂ ಕೂಡ ಭಾರತಕ್ಕೆ ಬರಲ್ಲ ಅಂತಾ ಪಾಕಿಸ್ತಾನ ಐಸಿಸಿ ಮುಂದೆ ಡಿಮ್ಯಾಂಡ್ ಇಟ್ಟಿದೆ. ಇದಕ್ಕೆ ಐಸಿಸಿ ಕೂಡ ತಾತ್ವಿಕ್ ಒಪ್ಪಿಗೆ ನೀಡಿದೆ. 2027 ರವರೆಗೆ ಬಹುಪಕ್ಷೀಯ ಸ್ಪರ್ಧೆಗಳಲ್ಲಿ ಇದೇ ರೀತಿಯ ವ್ಯವಸ್ಥೆಗೆ ಐಸಿಸಿ ಒಪ್ಪಿಕೊಂಡಿದೆ. ಈ ಒಪ್ಪಂದದ ಪ್ರಕಾರ 2027ರ ತನಕ ಪಾಕಿಸ್ತಾನ ಐಸಿಸಿ ಟೂರ್ನಿಗಳಿಗಾಗಿ ಭಾರತಕ್ಕೆ ಪ್ರಯಾಣಿಸುವುದು ಕಡ್ಡಾಯವಾಗಿರುವುದಿಲ್ಲ. ಪ್ರಸಾರ ಒಪ್ಪಂದದ ಭಾಗವಾಗಿ, ಎಲ್ಲ ಐಸಿಸಿ ಪಂದ್ಯಾವಳಿಗಳಲ್ಲಿ ಕನಿಷ್ಠ ಒಂದು ಭಾರತ – ಪಾಕಿಸ್ತಾನ ಪಂದ್ಯವನ್ನು ನಿಗದಿಪಡಿಸಲೇಬೇಕು. ಎಲ್ಲ ದೇಶಗಳನ್ನು ಒಳಗೊಂಡ ಎಲ್ಲ ಪಂದ್ಯಗಳ ಮೌಲ್ಯವನ್ನು ಲೆಕ್ಕಹಾಕಿದ ನಂತರವೇ ಪ್ರಸಾರಕರು ಐಸಿಸಿಯೊಂದಿಗೆ ದೀರ್ಘಕಾಲೀನ ಒಪ್ಪಂದಕ್ಕಾಗಿ ಅಂದಾಜು ಬಿಡ್ ಮಾಡಿರುತ್ತಾರೆ.
ಸದ್ಯ ಪಾಕಿಸ್ತಾನ ಟೂರ್ನಿ ಆಯೋಜನೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು ಶೆಡ್ಯೂಲ್ ಕೂಡ ಫಿಕ್ಸ್ ಮಾಡಿಕೊಂಡಿದೆ. 2025ರ ಫೆಬ್ರವರಿ- ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಶೀಘ್ರದಲ್ಲಿಯೇ ಅಧಿಕೃತ ವೇಳಾಪಟ್ಟಿ ಪ್ರಕಟವಾಗಲಿದೆ. ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇಷ್ಟು ದಿನ ಹೈಬ್ರಿಡ್ ಮಾದರಿಗೆ ಸುತಾರಾಂ ಒಪ್ಪಲ್ಲ ಅಂತಾ ಹಠ ಹಿಡಿದಿದ್ದ ಪಾಕಿಸ್ತಾನ, ಬಹಿಷ್ಕಾರದ ಬೆದರಿಕೆ ಹಿಂಪಡೆದು, ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿದೆ. ಇಷ್ಟಾದ್ರೂ ಪಾಕ್ ಆಟಗಾರರು ಮಾತ್ರ ತಮ್ಮ ನಾಲಗೆ ಹರಿಬಿಡೋದನ್ನ ಮಾತ್ರ ನಿಲ್ಲಿಸಿಲ್ಲ. ಬಟ್ ಯಾರು ಏನೇ ಮಾತಾಡಿದ್ರೂ ಎಷ್ಟೇ ವಿರೋಧಿಸಿದ್ರೂ ವಿಶ್ವ ಕ್ರಿಕೆಟ್ನ ದೊಡ್ಡಣ್ಣ ಬಿಸಿಸಿಐ ಮುಂದೆ ತಲೆಬಾಗಲೇ ಬೇಕು. ಇದೇ ಪರಿಸ್ಥಿತಿಯೇ ಪಾಕಿಗಳ ಬಾಯಿಗೆ ಬೆಂಕಿ ಇಟ್ಟಂತಾಗಿದೆ ಅಷ್ಟೇ.