UAE ವಿರುದ್ಧ ಪಾಕ್‌ಗೆ ಗೆಲುವು – ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ

UAE ವಿರುದ್ಧ ಪಾಕ್‌ಗೆ ಗೆಲುವು – ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ

ಸಹಿಬ್ದಾಝಾ ಫರ್ಹಾನ್‌ (73 ರನ್‌) ಅರ್ಧಶತಕ ಹಾಗೂ ಉಸ್ಮಾನ್‌ ತಾರಿಖ್‌ (27ಕ್ಕೆ 3) ಅವರ ಸ್ಪಿನ್‌ ಮೋಡಿಯ ಸಹಾಯದಿಂದ ಪಾಕಿಸ್ತಾನ  ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌  ಟೂರ್ನಿಯ ಪಂದ್ಯದಲ್ಲಿ ಯುಎಸ್‌ಎ (USA) ವಿರುದ್ಧ 32 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಸಲ್ಮಾನ್‌ ಆಘಾ ನಾಯಕತ್ವದ ಪಾಕಿಸ್ತಾನ ತಂಡ, ಸತತ ಎರಡನೇ ಗೆಲುವು ಪಡೆಯುವ ಮೂಲಕ  A ಗುಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು. ಇನ್ನು ಯುಎಸ್‌ಎ ತಂಡ ಸತತ ಎರಡನೇ ಸೋಲು ಅನುಭವಿಸಿ ನಿರಾಶೆ ಅನುಭವಿಸಿತು.

ಮಂಗಳವಾರ ಇಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 191 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಯುಎಸ್‌ಎ, ಶುಭಮನ್‌ ರಂಜನೆ (51), ಶಹನ್‌ ಜಹಂಗೀರ್‌ (49 ರನ್‌) ಹಾಗೂ ಮಿಲಿಂಗ್‌ ಕುಮಾರ್‌ (29) ಅವರ ಹೋರಾಟದ ಹೊರತಾಗಿಯೂ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಗೆ ಸೀಮಿತವಾಯಿತು. ಆ ಮೂಲಕ ಸತತ ಎರಡನೇ ಸೋಲು ಒಪ್ಪಿಕೊಂಡಿತು.

ಇದನ್ನೂ ಓದಿ: ಇನ್ಮುಂದೆ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವಂತಿಲ್ಲ! – ರೂಲ್ಸ್‌ ಬ್ರೇಕ್‌ ಮಾಡಿದ್ರೆ ಫೈನ್‌ ಫಿಕ್ಸ್!‌

ಯುಎಸ್‌ಎ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಶುಭಮ್‌ ರಂಜನೆ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಅವರು ಆಡಿದ 30 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 51 ರನ್‌ ಗಳಿಸಿ ತಂಡವನ್ನು ಗೆಲುವಿನ ಆಸೆಯನ್ನು ಜೀವಂತವಾಗಿಸಿದ್ದರು. ಇವರ ಜೊತೆಗೆ ಆರಂಭದಲ್ಲಿ ಶಹನ್‌ ಜಹಂಗೀರ್‌ ಅವರು ಕೂಡ 34 ಎಸೆತಗಳಲ್ಲಿ 49 ರನ್‌ ಗಳಿಸಿದ್ದರು. ಮಿಲಿಂದ್‌ ಕುಮಾರ್‌ ಕೂಡ 22 ಎಸೆತಗಳಲ್ಲಿ 29 ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಆದರೂ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಪರ ಉಸ್ಮಾನ್‌ ತಾರಿಖ್‌ 3 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಪಾಕಿಸ್ತಾನ ತಂಡ, ಸಹಿಬ್ದಾಝಾ ಫರ್ಹಾನ್‌ (73 ರನ್‌) ಹಾಗೂ ಬಾಬರ್‌ ಆಝಮ್‌ (46 ರನ್‌) ಅವರ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಯುಎಸ್‌ಎ ತಂಡಕ್ಕೆ 191 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಫರ್ಹಾನ್‌ ಮತ್ತು ಆಝಮ್‌ ಜೊತೆಗೆ ಕೊನೆಯಲ್ಲಿ ಶದಾಬ್‌ ಖಾನ್‌ 12 ಎಸೆತಗಳಲ್ಲಿ 30 ರನ್‌ ಸಿಡಿಸಿದ್ದರು.

Kishor KV

Leave a Reply

Your email address will not be published. Required fields are marked *