BCCI ಎಡವಟ್ಟಿಗೆ ಫುಲ್ ಟ್ರೋಲ್ – AFG Vs NZ.. ಮ್ಯಾಚ್ ನಡೆಯಲ್ವಾ?
ಮೈದಾನ, ಟಾಯ್ಲೆಟ್ ವಿವಾದಗಳೆಷ್ಟು?

BCCI ಎಡವಟ್ಟಿಗೆ ಫುಲ್ ಟ್ರೋಲ್ – AFG Vs NZ.. ಮ್ಯಾಚ್ ನಡೆಯಲ್ವಾ?ಮೈದಾನ, ಟಾಯ್ಲೆಟ್ ವಿವಾದಗಳೆಷ್ಟು?

ಟೀಂ ಇಂಡಿಯಾದ ಸ್ಟಾರ್ ಆಟಗಾರರು ಸೇರಿದಂತೆ ಕ್ರಿಕೆಟಿಗರೆಲ್ಲಾ ದುಲೀಪ್ ಟ್ರೋಫಿಯಲ್ಲಿ ಬ್ಯುಸಿಯಾಗಿದ್ದಾರೆ. ಸೆಪ್ಟೆಂಬರ್ 19ರಿಂದ ಶುರುವಾಗಲಿರುವ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಪ್ಲೇಯಿಂಗ್ 11 ಅನೌನ್ಸ್ ಆಗಿದೆ. ಸೋ ಆಟಗಾರರೆಲ್ಲಾ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇದ್ರ ನಡುವೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಭಾರತ ಆತಿಥ್ಯ ವಹಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಗ್ರೇಟರ್ ನೋಯ್ಡಾ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ ಮೈದಾನದಲ್ಲಿ ಪಂದ್ಯ ನಡೀಬೇಕಿತ್ತು. ಆದರೆ ಪಂದ್ಯ ಆರಂಭವೇ ಆಗಿಲ್ಲ. ಅಷ್ಟೇ ಯಾಕೆ ಟಾಸ್ ಕೂಡ ಆಗಿಲ್ಲ. ಇದೇ ಕಾರಣಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ಪಂದ್ಯ ಯಾಕೆ ನಡೀತಿಲ್ಲ..? ಬಿಸಿಸಿಐ ಟ್ರೋಲ್ ಆಗ್ತಿರೋದೇಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಾಗಮಂಗಲ ಗಲಭೆ ಕೇಸ್‌ – ಅಂಗಡಿ ಮುಗ್ಗಟ್ಟುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಹೆಚ್‌ಡಿಕೆ

ಬಿಸಿಸಿಐ ಫುಲ್ ಟ್ರೋಲ್!

ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಟೆಸ್ಟ್ ಪಂದ್ಯ ಆಡಲು ಭಾರತಕ್ಕೆ ಆಗಮಿಸಿವೆ. ಕಿವೀಸ್​ ತಂಡದ ವಿರುದ್ಧ ಆತಿಥ್ಯ ವಹಿಸಲು ಭಾರತವು ನೋಯ್ಡಾದ ವಿಜಯ್ ಸಿಂಗ್ ಪಥಿಕ್ ಸ್ಟೇಡಿಯಂ ಅನ್ನು ಅಫ್ಘಾನಿಸ್ತಾನಕ್ಕೆ ನೀಡಿತ್ತು. ಈ ಪಂದ್ಯ ಸೆಪ್ಟೆಂಬರ್ 9 ರಿಂದ 13 ರವರೆಗೆ ನಡೆಯಬೇಕಿತ್ತು. ಆದರೆ ಪಂದ್ಯ ಮಾತ್ರ ಶುರುವೇ ಆಗಿಲ್ಲ. ಅದಕ್ಕೆ ಕಾರಣ ಮಳೆ. ಹೌದು ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದಿತ್ತು. ಸದ್ಯಕ್ಕೆ ಮಳೆ ಇಲ್ಲದಿದ್ರೂ ಕ್ರೀಡಾಂಗಣದ ಔಟ್ ಫೀಲ್ಡ್ ತೇವಗೊಂಡಿದೆ. ಅಫ್ಘಾನಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವಣ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತವು ಆತಿಥ್ಯವಹಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಫ್ಘಾನಿಸ್ತಾನಕ್ಕೆ ನ್ಯೂಝಿಲೆಂಡ್ ತಂಡ ತೆರಳದಿರುವುದು. ತಾಲಿಬಾನಿಗಳ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಪಂದ್ಯವಾಡಲು ನ್ಯೂಝಿಲೆಂಡ್ ಹಿಂದೇಟು ಹಾಕಿದೆ. ಹೀಗಾಗಿ ಅಫ್ಘಾನಿಸ್ತಾನ್ ಭಾರತವನ್ನು 2ನೇ ಹೋಮ್ ಗ್ರೌಂಡ್ ಆಗಿ ಆಯ್ಕೆ ಮಾಡಿಕೊಂಡಿತು. ಅದರಂತೆ ಗ್ರೇಟರ್ ನೋಯ್ಡಾ ಮೈದಾನ ಆಯ್ಕೆಯಾಗಿತ್ತು. ಅದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಬಿಸಿಸಿಐ ಮೂರು ಸ್ಟೇಡಿಯಂಗಳ ಆಯ್ಕೆ ನೀಡಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಹಾಗೂ ಗ್ರೇಟರ್ ನೋಯ್ಡಾದಲ್ಲಿನ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ಪಂದ್ಯವನ್ನು ಆಯೋಜಿಸಬಹುದು ಎಂದು ತಿಳಿಸಲಾಗಿತ್ತು. ಆದರೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನೋಯ್ಡಾವನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಗ್ರೇಟರ್ ನೋಯ್ಡಾ ಕಾಂಪ್ಲೆಕ್ಸ್ ಸೇಡಿಯಂ ದೆಹಲಿಗೆ ಹತ್ತಿರದಲ್ಲಿರುವುದು. ಕಾಬೂಲ್​ನಿಂದ ದೆಹಲಿಗೆ ಬಂದಿಳಿದ ಆಟಗಾರರು ನೇರವಾಗಿ ಗ್ರೇಟರ್ ನೋಯ್ಡಾಗೆ ತೆರಳಬಹುದು ಎಂಬ ಉದ್ದೇಶದೊಂದಿಗೆ ಈ ಸ್ಟೇಡಿಯಂ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೀಗ ಮಳೆಯ ಕಾರಣ ಸಮಸ್ಯೆ ಎದುರಾಗಿದೆ. ಈ ಸ್ಟೇಡಿಯಂ ಅಂತಾರಾಷ್ಟ್ರೀಯ ಪಂದ್ಯವಾಡಲು ಸೂಕ್ತವಾಗಿದ್ದರೂ, ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿಲ್ಲ. ಇತ್ತ ಮಳೆ ಬರುವ ನಿರೀಕ್ಷೆಯಲ್ಲಿರದ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನೋಯ್ದಾ ಸ್ಟೇಡಿಯಂ ಅನ್ನು ಆಯ್ಕೆ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಮೈದಾದನ ಫೋಟೋಗಳು ವೈರಲ್ ಆಗಿದ್ದು, ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.

ಒಂದ್ಕಡೆ ಮೈದಾನದ ಸುದ್ದಿ ಬಿಸಿಸಿಐಗೆ ಬಾರೀ ಮುಖಭಂಗ ಉಂಟು ಮಾಡಿದ್ರೆ ಮತ್ತೊಂದ್ಕಡೆ ಗ್ರೇಟರ್ ನೋಯ್ಡಾ ಸ್ಪೋರ್ಟ್ಸ್ ಸ್ಟೇಡಿಯಂ ಕಾಂಪ್ಲೆಕ್ಸ್‌ನ ಸಿಬ್ಬಂದಿಗೆ ಸಂಬಂಧಿಸಿದ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. ಈ ಸ್ಟೇಡಿಯಂನ ಸಿಬ್ಬಂದಿ ವಾಶ್‌ರೂಮ್‌ನ ವಾಶ್ ಬೇಸಿನ್‌ನಲ್ಲಿ ಪಾತ್ರೆಗಳನ್ನು ತೊಳೆಯುತ್ತಿರುವ ಪೋಸ್ಟ್ ಅದು. ಟಾಯ್ಲೆಟ್​ ಬೇಸಿನ್‌ನಲ್ಲಿ ಪಾತ್ರೆಗಳನ್ನು ತೊಳೆಯಲಾಗುತ್ತಿದೆ. ಹೀಗಾಗಿ ಆಟಗಾರರು ಮತ್ತು ಮಾದ್ಯಮ ಸಿಬ್ಬಂದಿಗೆ ನೀಡುವ ಊಟದ ವಿಚಾರವಾಗಿ ಅಪಸ್ವರ ಕೇಳಿ ಬಂದಿತ್ತು. ಅಲ್ದೇ ವಿದ್ಯುತ್‌ ಫ್ಯಾನ್‌ಗಳಿಂದ ಮೈದಾನ ಒಣಗಿಸುತ್ತಿರುವ ಫೋಟೋಗಳು ಕೂಡಾ ವೈರಲ್‌ ಆಗಿದ್ದವು. ಒಟ್ನಲ್ಲಿ ಎರಡು ದಿನ ಮಳೆ ಬಾರದಿದ್ದರೂ ಪಂದ್ಯ ಆರಂಭವಾಗದಿರುವುದು ಮಾತ್ರ ಕ್ರೀಡಾಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.  ಇಷ್ಟೆಲ್ಲಾ ಆದ್ರೂ ಆಫ್ಘನ್ ಕ್ರಿಕೆಟ್ ಮಂಡಳಿ ಮಾತ್ರ ಬಿಸಿಸಿಐ ಪರ ಬ್ಯಾಟ್ ಬಿಸಿದೆ. ಭಾರತದಲ್ಲಿ ಮಳೆಗಾಲ ಇದೆ. ಇದ್ರಿಂದ ಅವರ ದೇಶೀಯ ಪಂದ್ಯಗಳ ಮೇಲೂ ಪರಿಣಾಮ ಬೀರಿದೆ ಎಂದು ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದುಕೊಂಡಿದೆ.

Shwetha M

Leave a Reply

Your email address will not be published. Required fields are marked *