ಬಾಂಗ್ಲಾ ಬೆನ್ನಿಗೆ ನಿಂತ ಪಾಕ್ – ಅಡಕತ್ತರಿಯಲ್ಲಿ ಸಿಲುಕಿತಾ BCCI?
ICC ಅಧ್ಯಕ್ಷ ಜೈ ಶಾ ನಿರ್ಧಾರವೇನು?

ಐಪಿಎಲ್ನಿಂದ ಮುಸ್ತಫಿಜುರ್ ರೆಹಮಾನ್ರನ್ನ ಕೈಬಿಟ್ಟಿದ್ದೇ ಬಿಟ್ಟಿದ್ದು.. ಅಲ್ಲಿಂದ ಶುರುವಾದ ಕಿಡಿ ಈಗ ಟಿ-20 ವಿಶ್ವಕಪ್ ಹೆಸ್ರಲ್ಲಿ ಕಾಡ್ಗಿಚ್ಚಾಗಿ ಹಬ್ಬಿಕೊಳ್ತಿದೆ. ಭಾರತದಲ್ಲಿ ನಾವು ಪಂದ್ಯಗಳನ್ನೇ ಆಡಲ್ಲ.. ವೆನ್ಯೂ ಚೇಂಜ್ ಮಾಡಿ ಅಂತಾ ಐಸಿಸಿ ಬೆನ್ನು ಬಿದ್ದಿರೋ ಬಾಂಗ್ಲಾಗೆ ಪಾಕಿಸ್ತಾನದ ಸಪೋರ್ಟ್ ಕೂಡ ಸಿಕ್ಕಿದೆ.
ಇದನ್ನೂ ಓದಿ : ಸ್ಮೃತಿ Vs ಕೌರ್.. ಗೆಲ್ಲೋದ್ಯಾರು – RCB & MIನ ವೀಕ್ ನೆಸ್ ಏನು?
ಫೆಬ್ರವರಿ 7 ರಿಂದ ಟಿ-20 ವಿಶ್ವಕಪ್ ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನ ಆಯೋಜನೆ ಮಾಡ್ತಿವೆ. ಅನೌನ್ಸ್ ಆಗಿರೋ ಶೆಡ್ಯೂಲ್ ಪ್ರಕಾರ ಪಾಕಿಸ್ತಾನ ಮಾತ್ರ ತನ್ನೆಲ್ಲಾ ಪಂದ್ಯಗಳನ್ನ ಲಂಕಾದಲ್ಲಿ ಆಡ್ಬೇಕು ಌಂಡ್ ಉಳಿದೆಲ್ಲಾ ಟೀಮ್ಗಳು ಭಾರತದಲ್ಲೇ ಮ್ಯಾಚ್ಗಳನ್ನ ಆಡ್ಬೇಕಿದೆ. ಆದ್ರೆ ಬಾಂಗ್ಲಾದೇಶ ಕೂಡ ಈಗ ನಾವು ಭಾರತಕ್ಕೆ ಕಾಲಿಡಲ್ಲ.. ನಮ್ಮ ಪಂದ್ಯಗಳನ್ನೂ ಬೇರೆಡೆ ಶಿಫ್ಟ್ ಮಾಡಿ ಅಂತಾ ಐಸಿಸಿಗೆ ಪತ್ರ ಬರೆದಿದ್ದಾರೆ. ಆದ್ರೆ ಇದಕ್ಕೆ ಐಸಿಸಿ ಕ್ಯಾರೇ ಎಂದಿರಲಿಲ್ಲ. ಭಾರತದಲ್ಲೇ ಪಂದ್ಯಗಳನ್ನ ಆಡಿ ಇಲ್ದಿದ್ರೆ ಬಿಡಿ ಅಂತಾ ಖಡಕ್ ಸಂದೇಶ ಕೊಟ್ಟಿತ್ತು. ಆದ್ರೆ ಈಗ ಬಾಂಗ್ಲಾದೇಶ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.
ಪಂದ್ಯಗಳನ್ನು ಶಿಫ್ಟ್ ಮಾಡುವಂತೆ ಐಸಿಸಿಗೆ 2ನೇ ಪತ್ರ!
ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸಿ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಎರಡನೇ ಭಾರಿಗೆ ಪತ್ರ ಬರೆದಿದೆ. ಮೊದಲ ಬಾರಿಗೆ ಪತ್ರದ ವೇಳೆ ಭದ್ರತಾ ಕಾರಣಗಳಿಂದ ಸ್ಥಳಾಂತರ ಮಾಡುವಂತೆ ಕೇಳಿತ್ತು. ಈ ವೇಳೆ ಯಾವ ರೀತಿಯ ಭದ್ರತಾ ಸಮಸ್ಯೆ ಎದುರಾಗಬಹುದು. ಎಂದು ಪ್ರಶ್ನಿಸಿತ್ತು. ಹಾಗೇ ಬಿಸಿಸಿಐ ಕಡೆಯಿಂದ ಉನ್ನತ ಮಟ್ಟದ ಭದ್ರತೆಗೆ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ನೀವು ಅಲ್ಲಿಯೇ ಪಂದ್ಯಗಳನ್ನ ಆಡಬಹುದೆಂದಿತ್ತು. ಇದಕ್ಕೆ ಎರಡನೇ ಪತ್ರದಲ್ಲಿ ರೀಸನ್ಸ್ ಕೊಟ್ಟಿರೋ ಬಾಂಗ್ಲಾ, ನಮ್ಮ ದೇಶದ ಆಟಗಾರನನ್ನು ಐಪಿಎಲ್ ಟೂರ್ನಿಯಿಂದ ಹೊರಹಾಕುವ ಮೂಲಕ ಬಿಸಿಸಿಐ ಅವಮಾನ ಮಾಡಿದೆ. ಹೀಗಾಗಿ ಭಾರತದಲ್ಲಿ ಆಡುವುದು ಇದು ಕೇವಲ ಭದ್ರತಾ ಸಮಸ್ಯೆಯಲ್ಲ ಮಾತ್ರ ಅಲ್ಲ. ನಮ್ಮ ದೇಶದ ಘನತೆಯ ವಿಷಯವೂ ಆಗಿದೆ. ಭಾರತವು ಬಾಂಗ್ಲಾದೇಶವನ್ನು ಅವಮಾನಿಸಿದೆ. ಈ ಅವಮಾನದ ಕಾರಣ ನಮ್ಮ ತಂಡ ಭಾರತದಲ್ಲಿ ಆಡಬಾರದು ಎಂದು ಉಲ್ಲೇಖ ಮಾಡಿದೆ. ಇನ್ನು ಬಾಂಗ್ಲಾದ ನಿಲುವಿಗೆ ಪಾಕಿಸ್ತಾನ ಕೂಡ ಸಪೋರ್ಟ್ ಮಾಡ್ತಿದೆ. ಬಾಂಗ್ಲಾದೇಶದ ನಿರ್ಧಾರ ಕರೆಕ್ಟ್ ಇದೆ. ಭಾರತದಲ್ಲಿ ಪಂದ್ಯಗಳನ್ನ ಆಡೋದು ಸೇಫ್ ಅಲ್ಲ. ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದಿದೆ. ಹೀಗಾಗಿ ಮುಂದಿನ ಎರಡು ದಿನಗಳಲ್ಲಿ ಬಿಸಿಬಿಯ ಮನವಿಯನ್ನ ಐಸಿಸಿ ಪರಿಶೀಲಿಸಲಿದ್ದು ಸದಸ್ಯರ ಅಭಿಪ್ರಾಯದಂತೆ ತೀರ್ಮಾನ ತೆಗೆದುಕೊಳ್ತಾರೆ. ಅಲ್ಲದೇ ಐಸಿಸಿ ಅಧ್ಯಕ್ಷ ಜಯ್ ಶಾ ಆಗಿರೋದ್ರಿಂದ ಏನೇ ನಿರ್ಧಾರಕ್ಕೆ ಬಂದ್ರು ಅದು ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡುತ್ತೆ. ಌಕ್ಚುಲಿ ಈ ವಿಚಾರ ಇಷ್ಟು ದೊಟ್ಟ ಮಟ್ಟದಲ್ಲಿ ಸದ್ದು ಮಾಡೋ ಮುನ್ನವೇ ಬಿಸಿಸಿಐ ಸ್ವಲ್ಪ ಸ್ಮಾರ್ಟ್ ಮೂವ್ ಮಾಡ್ಬೋದಿತ್ತು. ಯಾಕಂದ್ರೆ ಭಾರತದಿಂದಲೇ ಜನ್ಮ ತಾಳಿರೋ ಬಾಂಗ್ಲಾದಂತ ಪುಟ್ಟ ದೇಶ ಈಗ ಭಾರತದಲ್ಲೇ ಬಂದು ಆಡಲ್ಲ ಅಂದಾಗ ವಿಶ್ವಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗುತ್ತೆ. ಸೇಫ್ಟಿ ಬಗ್ಗೆ ಚರ್ಚೆ ಶುರುವಾಗುತ್ತೆ.
ಭಾರತಕ್ಕೆ ಎದುರಾಗ್ತಿರೋ ಪ್ರಶ್ನೆಗಳು!
ಐಪಿಎಲ್ ನಿಂದ ಮುಸ್ತಫಿಜುರ್ ಕೈಬಿಡುವ ಮುನ್ನ ಟೈಂ ಬೇಕಿತ್ತು
ಏಕಾಏಕಿ ಕೈಬಿಟ್ಟಿದ್ರಿಂದ ಅವಮಾನಕ್ಕೊಳಗಾದ ಬಾಂಗ್ಲಾ ತಗಾದೆ
ಟಿ-20 ವಿಶ್ವಕಪ್ ಗಾಗಿ ಭಾರತಕ್ಕೆ ಬರಲ್ಲ ಎಂದು ಐಸಿಸಿಗೆ ಪತ್ರ
ಐಪಿಎಲ್ ಕಿಡಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ತಟ್ಟುವ ಯೋಚನೆ
ಮುಂದಿನ ದಿನಗಳಲ್ಲಿ ದೊಡ್ಡ ಟೂರ್ನಿ ಆಯೋಜನೆ ಟೈಮಲ್ಲಿ ಅಪಸ್ವರ
ಕಾಮನ್ ವೆಲ್ತ್, ಒಲಿಂಪಿಕ್ಸ್ ನಂಥ ಇವೆಂಟ್ಸ್ ಆಯೋಜನೆಗೂ ಹೊಡೆತ
ಇಲ್ಲಿ ಪಾಕಿಸ್ತಾನವನ್ನ ಭಾರತಕ್ಕೆ ನಾವು ಬಿಟ್ಕೊಳಲ್ಲ ಅನ್ನೋದ್ರಲ್ಲಿ ಸಾಲಿಡ್ ರೀಸನ್ಸ್ ನಮ್ಮಲ್ಲಿ ಇದೆ. ಯಾಕಂದ್ರೆ ಪಾಕಿಗಳು ಭಾರತದೊಳಗೇ ಬಂದು ಹೀನಕೃತ್ಯಗಳನ್ನ ಎಸಗುತ್ತಾರೆ. ಸೇಫ್ಟಿ ಪರ್ಪಸ್ ಅನ್ಕೊಂಡು ನಾವು ಅವ್ರ ರಾಷ್ಟ್ರಕ್ಕೆ ಹೋಗದೇ ಇರೋದು ಅವ್ರನ್ನೂ ಬಿಟ್ಟುಕೊಳ್ಳದೇ ಇರೋದು ಒಳ್ಳೆ ನಿರ್ಧಾರ. ಆದ್ರೀಗ ಬಾಂಗ್ಲಾದ ವಿಚಾರ ಸ್ವಲ್ಪ ಬೇರೆಯದ್ದೇ ಇತ್ತು. ಮುಂದಿನ ದಿನಗಳಲ್ಲಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿ ಕಾಣಬಹುದು. ಸೋ ಕ್ರೀಡೆಯಲ್ಲಿ ಭಾರತ ಕೂಡ ಮುಂದಿರೋದ್ರಿಂದ ಸ್ಪೋರ್ಟ್ಸ್ ಕಲ್ಚರ್ ಬೇಸಿಸ್ ಮೇಲೆ ಹ್ಯಾಂಡಲ್ ಮಾಡಬಹುದಿತ್ತೋ ಏನೋ. ಸದ್ಯಕ್ಕಂತೂ ದೊಡ್ಡ ಮಟ್ಟದಲ್ಲೇ ಚರ್ಚೆಯಾಗ್ತಿದೆ.

ನೋಡಿರಿ

