₹869 ಕೋಟಿಗೆ ಸಿಕ್ಕಿದ್ದೇ ₹52 ಕೋಟಿ – ಪಾಕಿಸ್ತಾನಕ್ಕೆ ಶೇ.85% ನಷ್ಟ
ಆಟಗಾರರ ಮೇಲೆ PCB ಬರೆ

₹869 ಕೋಟಿಗೆ ಸಿಕ್ಕಿದ್ದೇ ₹52 ಕೋಟಿ – ಪಾಕಿಸ್ತಾನಕ್ಕೆ ಶೇ.85% ನಷ್ಟಆಟಗಾರರ ಮೇಲೆ PCB ಬರೆ

ಚಾಂಪಿಯನ್ಸ್ ಟ್ರೋಫಿ ಮುಗಿದು ವಾರ ಕಳೆದ್ರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಲೆಕ್ಕ ಮಾತ್ರ ಮುಗಿದಿರಲಿಲ್ಲ. ಎಷ್ಟು ಖರ್ಚಾಯ್ತು, ಎಷ್ಟು ಆದಾಯ ಬಂತು ಅಂತಾ ಕ್ಯಾಲ್ಕುಲೇಟ್ ಮಾಡ್ತಾನೇ ಇದ್ರು. ಕೊನೆಗೂ ಖರ್ಚುವೆಚ್ಚದ ರಿಸಲ್ಟ್ ಹೊರಬಿದ್ದಿದ್ದು ಪಾಕಿಸ್ತಾನಕ್ಕೆ ಅದೆಂಥಾ ಹೊಡೆತ ಬಿದ್ದಿದೆ ಅನ್ನೋದು ರಿವೀಲ್ ಆಗಿದೆ. ಟೂರ್ನಿಯಲ್ಲಿ ಒಂದೂ ಪಂದ್ಯವನ್ನ ಗೆಲ್ಲದ ಅವಮಾನದ ಜೊತೆಗೆ ನಷ್ಟದ ಮೇಲೆ ನಷ್ಟ ಅನುಭವಿಸಿದೆ.

ಇದನ್ನೂ ಓದಿ : ಇಂಡಿಯಾ ಮಾಸ್ಟರ್ಸ್ಗೆ ಚಾಂಪಿಯನ್ ಕಿರೀಟ- ಸಚಿನ್ ನಾಯಕತ್ವದಲ್ಲಿ ಜಯ

ಐಸಿಸಿ ಟೂರ್ನಿ ಅಂದ್ರೆ ಅಲ್ಲಿ ಹಣದ ಹೊಳೆಯೇ ಹರಿಯುತ್ತೆ. ಅದು ಖರ್ಚಿನ ವಿಚಾರವಾದ್ರೂ ಸರಿ. ಆದಾಯದ ವಿಚಾರವಾದ್ರೂ ಸರಿ. ಆದ್ರೆ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿದ್ದ ಪಾಕ್ ವಿಚಾರದಲ್ಲಿ ಮಾತ್ರ ಅದು ನೆರವೇರಿಲ್ಲ. 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ಆಯೋಜನೆ ಮಾಡ್ಲಾಗಿತ್ತು. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆದ್ರೂ ಕೂಡ ಆತಿಥ್ಯ ಮಾತ್ರ ಪಾಕಿಸ್ತಾನ ವಹಿಸಿತ್ತು. ಆದರೆ, ಟೂರ್ನಿಯಲ್ಲಿ ಒಂದೂ ಪಂದ್ಯವನ್ನೂ ಗೆಲ್ಲೋಕಾಗ್ದೇ ನಷ್ಟದ ಮೇಲೆ ನಷ್ಟ ಅನುಭವಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ  ಪಾಕಿಸ್ತಾನ ತಂಡ ತನ್ನ ತವರಿನಲ್ಲಿ ಆಡಿದ್ದು ಕೇವಲ ಒಂದು ಪೂರ್ಣ ಪಂದ್ಯವನ್ನು ಮಾತ್ರ. ಇಷ್ಟಕ್ಕೆ ಬರೋಬ್ಬರಿ 869 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇಷ್ಟೊಂದು ಹಣ ಖರ್ಚು ಮಾಡಿದ ಪಿಸಿಬಿ ಕೊನೆಗೆ ಶೇ.85ರಷ್ಟು ನಷ್ಟ ಅನುಭವಿಸಿದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಚಾಂಪಿಯನ್ಸ್‌ ಟ್ರೋಫಿಗಾಗಿ ಪಿಸಿಬಿಯು ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಸ್ಟೇಡಿಯಂಗಳನ್ನು ನವೀಕರಣ ಮಾಡಿತ್ತು. ಇದಕ್ಕಾಗಿ ಸುಮಾರು 58 ಮಿಲಿಯನ್ ಡಾಲರ್ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 500 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಇದು ಪಾಕಿಸ್ತಾನದ ಬಜೆಟ್‌ಗಿಂತ ಶೇಕಡಾ 50ರಷ್ಟು ಹೆಚ್ಚಾಗಿತ್ತು. ಅಲ್ದೇ ಟೂರ್ನಿಯ ಈವೆಂಟ್ ಸಿದ್ಧತೆಗಳಿಗಾಗಿ ಹೆಚ್ಚುವರಿ 40 ಮಿಲಿಯನ್ ಡಾಲರ್‌ ಅಂದ್ರೆ ಸುಮಾರು 347 ಕೋಟಿ ರೂಪಾಯಿ ಖರ್ಚು ಮಾಡಿದೆ. ಹೇಳಿ ಕೇಳಿ ಐಸಿಸಿಗೆ ಹೆಚ್ಚು ಆದಾಯ ಬರುವುದೇ ಭಾರತದ ಪಂದ್ಯದಿಂದ. ಭಾರತದ ಪಂದ್ಯಗಳು ದುಬೈನಲ್ಲಿ ನಡೆದ ಕಾರಣ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಇದ್ರ ಜೊತೆ ಪಾಕಿಸ್ತಾನ ತಂಡ ಲೀಗ್‌ನಲ್ಲಿ ಹೊರ ಬಿದ್ದ ಕಾರಣ ಪ್ರೇಕ್ಷಕರು ಪಂದ್ಯ ನೋಡೋಕೆ ಮೈದಾನಕ್ಕೆ ಬಂದಿರ್ಲಿಲ್ಲ. ಟಿಕೆಟ್ ಮಾರಾಟ ಮತ್ತು ಹೋಸ್ಟಿಂಗ್ ಹಕ್ಕುಗಳಿಂದ ಪಾಕಿಸ್ತಾನ ಕೇವಲ 52 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಈ ಮೂಲಕ ಶೇಕಡಾ 85ರಷ್ಟು ನಷ್ಟ ಅನುಭವಿಸಿದೆ.

ಐಸಿಸಿ ಟೂರ್ನಿ ಆಯೋಜನೆ ಮಾಡಿದ್ರೂ ಪಾಕಿಸ್ತಾನಕ್ಕೆ ಯಾವ ಲಾಭವೂ ಆಗ್ಲಿಲ್ಲ. ಅಲ್ದೇ ಒಂದೇ ಒಂದು ಪಂದ್ಯವನ್ನೂ ಗೆಲ್ಲದೆ ಟೂರ್ನಿಯಿಂದ ಹೊರ ಬಿದ್ದಿದ್ರು. ಹೀಗಾಗಿ  ನಷ್ಟದ ಪರಿಹಾರಕ್ಕೆ ಮುಂದಾಗಿರುವ ಪಿಸಿಬಿ ದೇಶದ ಆಟಗಾರರ ಸಂಬಳಕ್ಕೂ ಕತ್ತರಿ ಹಾಕಿದೆ. ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್ – ದೇಶೀಯ ಟಿ20 ಟೂರ್ನಮೆಂಟ್‌ನಲ್ಲಿ ಪಂದ್ಯದ ಶುಲ್ಕವನ್ನು ಶೇ.90ರಷ್ಟು ಕಡಿಮೆ ಮಾಡಲು ಮುಂದಾಗಿದೆ. ಹಾಗೇ ಒಂದು ಕಾಲದಲ್ಲಿ ಪಂಚತಾರಾ ಹೋಟೆಲ್‌ಗಳಲ್ಲಿ ತಂಗಿದ್ದ ಈ ಕ್ರಿಕೆಟಿಗರು, ಈಗ ಸಾಧಾರಣ ಬಜೆಟ್‌ನ ವಸತಿಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲದೇ ಮುಂದಿನ ಕ್ರಿಕೆಟ್‌ ಪಂದ್ಯಗಳ ಟಿಕೆಟ್‌ ಬೆಲೆಯನ್ನು ಎರಡು ಪಟ್ಟು ಹೆಚ್ಚಿಲು ಚಿಂತನೆ ನಡೆಸಿದೆ. ಒಟ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಐಸಿಸಿ ಟೂರ್ನಿ ಆಯೋಜನೆ ಹಕ್ಕು ಸಿಕ್ಕಿದ್ದಕ್ಕೆ ಖುಷಿ ಪಡ್ಬೇಕೋ ಅಥವಾ ಆಗಿರೋ ನಷ್ಟವನ್ನ ಭರಿಸೋದು ಹೆಂಗೆ ಅಂತಾ ಯೋಚನೆ ಮಾಡ್ಬೇಕೋ ಗೊತ್ತಾಗ್ದೇ ಒದ್ದಾಡ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *