ಭಾರತ ಸೋಲಿಸೋದೇ REAL ಟಾಸ್ಕ್ – ಪಾಕಿಸ್ತಾನ್ ತಂಡಕ್ಕೆ ಪ್ರಧಾನಿ ವಾರ್ನಿಂಗ್   

ಭಾರತ ಸೋಲಿಸೋದೇ REAL ಟಾಸ್ಕ್ – ಪಾಕಿಸ್ತಾನ್ ತಂಡಕ್ಕೆ ಪ್ರಧಾನಿ ವಾರ್ನಿಂಗ್   

ಚಾಂಪಿಯನ್ಸ್ ಟ್ರೋಫಿ ಮಹಾಕದನಕ್ಕೆ ಇನ್ನೊಂದೇ ವಾರ ಬಾಕಿ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿದ್ದು ಪಾಕಿಸ್ತಾನ ಆತಿಥ್ಯವನ್ನ ವಹಿಸಿಕೊಂಡಿದೆ. ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದ್ದು, ಭಾರತದ ಪಂದ್ಯಗಳು ಮಾತ್ರ ದುಬೈನಲ್ಲಿ ನಡೆಯಲಿವೆ. ಫೆಬ್ರವರಿ 19ರಿಂದ ಟೂರ್ನಿ ಆರಂಭವಾಗಲಿದ್ದು ಫೆಬ್ರವರಿ 23ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಇದೇ ಮ್ಯಾಚ್​ ಬಗ್ಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕಿಡಿ ಹೊತ್ತಿಸೋ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಫ್ರಾನ್ಸ್​ನಲ್ಲಿ ನರೇಂದ್ರ ಮೋದಿ –  ಭಾರತೀಯರಿಂದ ಅದ್ಧೂರಿ ಸ್ವಾಗತ   

ಚಾಂಪಿಯನ್ಸ್ ಟ್ರೋಫಿಯಲ್ಲಿ 8 ರಾಷ್ಟ್ರಗಳು ಭಾಗಿಯಾಗಿದ್ದು ಎಲ್ಲರ ಗುರಿಯೂ ಟ್ರೋಫಿ ಗೆಲ್ಲೋದೇ ಆಗಿದೆ. ಆದ್ರೆ ಪಾಕಿಸ್ತಾನ ಮಾತ್ರ ಟ್ರೋಫಿಗಿಂತ ಭಾರತವನ್ನ ಸೋಲಿಸೋದೇ ಗುರಿ ಆಗ್ಬೇಕು ಅಂತಾ ಅಲ್ಲಿನ ಪ್ರಧಾನಿಯೇ ಕರೆ ಕೊಟ್ಟಿದ್ದಾರೆ. ಪಾಕಿಸ್ತಾನ ತಂಡವು ಕೇವಲ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ನ್ನು ಗೆಲ್ಲುವ ಗುರಿ ಇಟ್ಟುಕೊಳ್ಬೇಡಿ. ಫೆಬ್ರವರಿ23ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸುವ ನೈಜ ಕರ್ತವ್ಯದತ್ತ ಗಮನಹರಿಸಬೇಕು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಪಾಕ್‌ ತಂಡಕ್ಕೆ ಕರೆ ನೀಡಿದ್ದಾರೆ. ಭಾರತ ತಂಡದ ವಿರುದ್ಧ ನಮ್ಮ ಆಟಗಾರರು ಸಾಲಿಡ್ ಪರ್ಫಾಮೆನ್ಸ್ ನೀಡಬೇಕು.  ಸಾಂಪ್ರದಾಯಿಕ ಎದುರಾಳಿಯನ್ನು ಐಸಿಸಿ ಪಂದ್ಯಾವಳಿಯಲ್ಲಿ ಸೋಲಿಸುವುದೇ ನಮಗೆ ಮುಖ್ಯವಾಗ್ಬೇಕು. ಇದೇ ನಿಮಗಿರೋ ಟಾಸ್ಕ್. ಈ ಕರ್ತವ್ಯ ನಿರ್ವಹಣೆಯಲ್ಲಿ ಇಡೀ ರಾಷ್ಟ್ರವೇ ನಿಮ್ಮ ಬೆನ್ನಿಗೆ ನಿಂತಿದೆ ಎಂದಿದ್ದಾರೆ.

ಇಲ್ಲಿ ಯಾರು ಏನೇ ಹೇಳಿದ್ರೂ ಎಲ್ಲಾ ವಿಚಾರಗಳಲ್ಲೂ ಪಾಕಿಸ್ತಾನಕ್ಕಿಂತ ಭಾರತ ಒಂದು ಕೈ ಮುಂದೆಯೇ ಇದೆ. ಕ್ರಿಕೆಟ್​ನಲ್ಲೂ ಕೂಡ ಅದನ್ನ ಬಿಡಿಸಿ ಹೇಳ್ಬೇಕಿಲ್ಲ. 2021ರಲ್ಲಿ ದುಬೈನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವು ಭಾರತ ತಂಡವನ್ನು ಕೊನೆಯ ಬಾರಿಗೆ ಸೋಲಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ನಡೆದ ಯಾವುದೇ ಐಸಿಸಿ ಈವೆಂಟ್‌ನಲ್ಲೂ ಪಾಕಿಸ್ತಾನವು ಭಾರತದ ವಿರುದ್ಧ ಜಯ ಸಾಧಿಸಿಲ್ಲ. ಇದೀಗ 2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತವೇ ಗೆಲ್ಲುವ ಫೇವರೆಟ್ ಟೀಂ ಎನಿಸಿಕೊಂಡಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಹಲವು ವಿಚಾರಗಳಲ್ಲಿ ಮನಸ್ತಾಪಗಳು ಇರೋದ್ರಿಂದ ಭಾರತ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ಕ್ಕಾಗಿ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ. ಹೀಗಾಗಿ ಭಾರತ ತಂಡದ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿದೆ. ಅದರಂತೆ ಫೆಬ್ರವರಿ 23ರಂದು ಭಾರತ-ಪಾಕಿಸ್ತಾನ ನಡುವೆ ದುಬೈನಲ್ಲಿ ಪಂದ್ಯ ನಡೆಯಲಿದೆ. ಪಾಕಿಸ್ತಾನವು ಹಾಲಿ ಚಾಂಪಿಯನ್ ಆಗಿ ಈ ಬಾರಿಯ ಚಾಂಪಿಯನ್ಸ್‌ ಟೂರ್ನಿಯನ್ನು ಆಡ್ತಿದೆ. 29 ವರ್ಷಗಳ ಬಳಿಕ ಪಾಕಿಸ್ತಾನ ಐಸಿಸಿಯ ಪಂದ್ಯಾವಳಿಗಳನ್ನು ಆತಿಥ್ಯ ವಹಿಸಿದ್ದು ಗೆಲ್ಲೋ ಉತ್ಸಾಹದಲ್ಲಿದೆ.

Shantha Kumari