ಪಾಪಿ ಪಾಕಿಸ್ತಾನಕ್ಕೆ ಬೆಲೆ ಏರಿಕೆ ಬಿಸಿ – ರಾತ್ರೋರಾತ್ರಿ 1 ಲೀ. ಪೆಟ್ರೋಲ್ ಗೆ 22. 20 ರೂ ಹೆಚ್ಚಳ!

ಪಾಪಿ ಪಾಕಿಸ್ತಾನಕ್ಕೆ ಬೆಲೆ ಏರಿಕೆ ಬಿಸಿ – ರಾತ್ರೋರಾತ್ರಿ 1 ಲೀ. ಪೆಟ್ರೋಲ್ ಗೆ 22. 20 ರೂ ಹೆಚ್ಚಳ!

ಇಸ್ಲಾಮಾಬಾದ್: ಪಾಪಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪುತ್ತಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿ ಷರತ್ತುಗಳಂತೆ ಭಾರೀ ಪ್ರಮಾಣದಲ್ಲಿ ತೈಲಬೆಲೆಯನ್ನು ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬುಧವಾರ ರಾತ್ರೋ ರಾತ್ರಿ ದಿಢೀರ್ ಏರಿಕೆ ಕಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಟರ್ಕಿ, ಸಿರಿಯಾದ ತುಂಬೆಲ್ಲಾ ಸತ್ತವರ ವಾಸನೆ – ಭೂಕಂಪವಾಗಿ 10 ದಿನಗಳ ಬಳಿಕವೂ ಸಹಾಯಕ್ಕಾಗಿ ಮೊರೆ! 

ಪಾಕ್ ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 250 ರೂ ಇತ್ತು. ಬುಧವಾರ ರಾತ್ರಿ ತೈಲ ಬೆಲೆ  ದಿಢೀರ್ ಏರಿಕೆಯಾಗಿದ್ದು, 1 ಲೀಟರ್ ಪೆಟ್ರೋಲ್ ಗೆ 22.20 ರೂ. ಹೆಚ್ಚಳ ಮಾಡಿದ್ದು,  ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಠ 272 ರೂ.ಗಳಿಗೆ ತಲುಪಿದೆ. ಇದೇ ರೀತಿ ಹೈಸ್ಪೀಡ್ ಡೀಸೆಲ್ ಬೆಲೆ 17.20 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 280 ರೂ.ಗೆ ಹೆಚ್ಚಳವಾಗಿದೆ. ಸೀಮೆ ಎಣ್ಣೆ ಬೆಲೆ 12.90 ರೂ. ಹೆಚ್ಚಿಸಿದ್ದು ಪ್ರತಿ ಲೀಟರ್‌ಗೆ 202.73 ರೂ.ಗಳಿಗೆ ಮಾರಾಟವಾಗುತ್ತಿದೆ. ಜೊತೆಗೆ ಲಘು ಡೀಸೆಲ್ ಬೆಲೆ 9.68 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ 196.68 ರೂ.ಗಳಿಗೆ ಮಾರಾಟವಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಈ ನಿಯಮ ಜಾರಿಗೆ ಬಂದಿವೆ. ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಅಪಮೌಲ್ಯದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಸದ್ಯ ಎಎಂಎಫ್ ಕಠಿಣ ನಿಯಮಗಳ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಆತಂಕಪಟ್ಟಿದ್ದಾರೆ.

suddiyaana