17 ಆಟಗಾರರು, 60 ರೂಮ್‌ಗಳು ಬುಕ್ – ಶೋಕಿ ಪಾಕ್ ಟೀಮ್‌ಗೆ ಉಗಿದಿದ್ಯಾರು?
ಕಳಪೆ ಆಟ, ಅಮೆರಿಕಾ ಟ್ರಿಪ್, ಜಾಲಿ ಜಾಲಿ…

17 ಆಟಗಾರರು, 60 ರೂಮ್‌ಗಳು ಬುಕ್ – ಶೋಕಿ ಪಾಕ್ ಟೀಮ್‌ಗೆ ಉಗಿದಿದ್ಯಾರು?ಕಳಪೆ ಆಟ, ಅಮೆರಿಕಾ ಟ್ರಿಪ್, ಜಾಲಿ ಜಾಲಿ…

ದೇಶ ದೀವಾಳಿಯಾಗಿದ್ರೂ ಭಾರತದ ಮೇಲೆ ಹೊಟ್ಟೆಕಿಚ್ಚಲ್ಲೇ ಬದುಕುವ ಪಾಕಿಸ್ತಾನ್ ಟೀಮ್ ಟಿ20 ವಿಶ್ವಕಪ್‌ಗೂ ಮುನ್ನ ಕೊಚ್ಚಿಕೊಂಡ ಬಡಾಯಿಗಳಿಗೆ ಲೆಕ್ಕ ಇಡಲು ಸಾಧ್ಯವಿಲ್ಲ ಬಿಡಿ. ಬಂಡಲ್ ಪಾಕ್ ದೇಶಕ್ಕೆ ಕಪ್ ಗೆಲ್ಲೋದು ಗುರಿಯೇ ಅಲ್ಲ. ನಾವೇನಿದ್ರೂ ಭಾರತ ತಂಡವನ್ನು ಬಗ್ಗು ಬಡಿಯಬೇಕು. ಭಾರತ ಟೀಮ್ ನಮ್ಮ ಮುಂದೆ ಮಂಡಿಯೂರಿದ್ರೆ ನಾವು ಕಪ್ ಗೆದ್ದಂಗೆ ಅಂತಾ ಪುಂಖಾನುಪುಂಖಾವಾಗಿ ಪುಂಗಿ ಊದಿದ್ದೇ ಊದಿದ್ದು. ಆದ್ರೀಗ ಇದೇ ಪುಂಗಿ ಪಾಕ್ ಕ್ರಿಕೆಟ್ ಮಂಡಳಿಯ ಕಣ್ಣುರಿ ಹೆಚ್ಚು ಮಾಡಿದೆ. ಪಾಕ್ ಪ್ರಜೆಗಳ ಹೊಟ್ಟೆಯುರಿಯನ್ನೂ ಜಾಸ್ತಿ ಮಾಡಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಬಲಿಷ್ಠ ಟೀಮ್ ಇಂಡಿಯಾ ಬಿಡಿ, ಕ್ರಿಕೆಟ್ ಶಿಶುಗಳ ಎದುರು ಕೂಡಾ ಗೆಲ್ಲಲಾಗದೇ ಪಾಕಿಸ್ತಾನದ ಗೂಡು ಸೇರಿಕೊಂಡಿದ್ದಾರೆ ಪಾಕ್ ಕ್ರಿಕೆಟರ್ಸ್. ಇದ್ರ ಮಧ್ಯೆ ಅಮೇರಿಕಕ್ಕೆ ಹೋಗಿದ್ದು ಕ್ರಿಕೆಟ್ ಆಡಲು ಅಲ್ಲ, ಟ್ರಿಪ್‌ಗೆ ಹೋಗಿ ಜಾಲಿ ಮಾಡಲು ಅನ್ನೋ ಗಂಭೀರ ಆರೋಪ ಪಾಕ್ ತಂಡದ ಮೇಲೆ ಬಂದಿದೆ. ಕುಂತ್ರು ನಿಂತ್ರು ಟ್ರೋಲ್ ಆಗೋ ಬಾಬರ್ ಟೀಮ್ ಈಗ ಮತ್ತೊಂದು ಸುತ್ತಿನ ಮುಖಭಂಗ ಎದುರಿಸ್ತಿದೆ. ಈ ಪಾಕ್ ಪುಂಗಿ ಜೊತೆಗೆ ಜಾಲಿ ಮಾಡಿದ ಬಾಬರ್ ಟೀಮ್ ಗೆ ಎದುರಾಗಿರೋ ಸಂಕಷ್ಟಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೊಹ್ಲಿಗೆ ಪಂದ್ಯಶ್ರೇಷ್ಠ ಕೊಟ್ಟಿದ್ದೇ ತಪ್ಪಾ? – KING ಆಟಕ್ಕೆ ಸ್ಟ್ರೈಕ್ ರೇಟ್ ವಿವಾದ

ಟಿ20 ವಿಶ್ವಕಪ್‌ಗೆ ವಿಶ್ವದ ದೊಡ್ಡಣ್ಣನ ನಾಡಿಗೆ ಕಾಲಿಟ್ಟ ಪಾಕಿಸ್ತಾನ ಟೀಮ್ ಡಿಸೈನ್ ಡಿಸೈನ್ ರೈಲ್ ಬಿಟ್ಟಿದ್ದು ನಿಮ್ಗೂ ಗೊತ್ತಿದೆ. ಕಪ್ ಪಾಕಿಸ್ತಾನ ಟೀಮ್ ಟಾರ್ಗೆಟ್ ಅಲ್ವೇ ಅಲ್ಲ, ನಾವೇನಿದ್ರೂ ಅಮೇರಿಕಾಕ್ಕೆ ಬಂದಿದ್ದೇ ಭಾರತ ಟೀಮ್ ಸೊಕ್ಕಡಗಿಸಲು ಅಂದಿದ್ದ ಬಾಬರ್ ಆಂಡ್ ಬಾಯ್ಸ್ ಕಲರ್ ಕಲರ್ ಕಾಗೆ ಹಾರಿಸಿದ್ರು. ಟೀಮ್ ಇಂಡಿಯಾ ಫ್ಯಾನ್ಸ್ ಮಾತ್ರ ಮ್ಯಾಚ್ ಮುಗೀಲಿ ಆಮೇಲೆ ಮಾತಾಡ್ತೀವಿ ಅಂತಾ ಟೈಮ್‌ಗಾಗಿ ಕಾಯ್ತಾನೇ ಇದ್ರು. ಪಾಕ್ ಕ್ರಿಕೆಟರ್ಸ್ ಒಂದೆಡೆಯಾದ್ರೆ ಪಾಕ್ ಪ್ರಜೆಗಳು ಉರಿಸಿದ್ದು ನೋಡ್ಬೇಕಿತ್ತು. ನಮ್ಮ ಟೀಮ್ ಕಪ್ ಗೆಲ್ಲುತ್ತೆ, ಅದ್ರ ಜೊತೆಗೆ ಭಾರತವನ್ನು ಮನೆಗೆ ಕಳಿಸೋದೇ ನಮ್ಮ ಟೀಮ್ ಗುರಿ. ಇದಕ್ಕಾಗಿ ಹಗಲು ರಾತ್ರಿ ಪ್ರಾರ್ಥನೆ ಬೇರೇ ಮಾಡ್ತಿದ್ರು. ಆದ್ರೆ, ನಮ್ ಟೀಮ್ ಇಂಡಿಯಾ ಎಲ್ಲಿ, ಪಾಕಿಸ್ತಾನದ ಬಾಲಂಗೋಚಿಗಳು ಎಲ್ಲಿ. ಬಾಬರ್‌ ಅಂತೂ ಮೊದ್ಲೇ ಪಾಕಿಸ್ತಾನದ ವಿರಾಟ್ ಕೊಹ್ಲಿ ಅಂತಾ ಹೇಳಿಸಿಕೊಂಡು ಮೆರೆದಾಡಿದ್ದೂ ಗೊತ್ತಿದೆ. ವಿರಾಟ್ ಕೊಹ್ಲಿಗೆ ಅದ್ಯಾವ ಸೀಮೆಯಲ್ಲಿ ಬಾಬರ್ ಸರಿಸಮಾನ ಅಂತಾ ಅದ್ಯಾರಿಗೆ ಅನಿಸಿದೆಯೋ. ಇರ್ಲಿ ಬಿಡಿ. ಅಮೆರಿಕಾಕ್ಕೆ ಬಂದಿದ್ದೇ ಸಾಧನೆ ಬಿಟ್ರೆ ಮೊದಲ ಸುತ್ತಿನಲ್ಲೇ ಹೀನಾಯ ಸೋಲುಗಳೊಂದಿಗೆ ಪಾಕ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತ್ತು.

ಅಸಲಿಗೆ ಈ ಪಾಕಿಸ್ತಾನ ಟೀಮ್ ನಿಜಕ್ಕೂ ಅಮೆರಿಕಾಕ್ಕೆ ಬಂದಿದ್ದು ಕ್ರಿಕೆಟ್ ಆಡೋದಕ್ಕಾ, ಇಲ್ವಾ ಫ್ಯಾಮಿಲಿ ಜೊತೆ ಟ್ರಿಪ್ ಮಾಡಿ ಜಾಲಿ ಮಾಡೋದಕ್ಕಾ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್ಸ್ ಪ್ರಶ್ನೆ ಮಾಡಿದ್ದಾರೆ. ತವರಿನಲ್ಲಿ ಹಾಗೆ ಮಾಡ್ತೀವಿ ಹೀಗೆ ಮಾಡ್ತೀವಿ ಅಂತಾ ಜಂಭಕೊಚ್ಚಿಕೊಂಡು ಬಂದಿದ್ದೇನೋ ನಿಜ. ಹೀಗಿ ಆಟಿಟ್ಯೂಡ್ ತೋರಿಸಿದ್ರೆ ತಾನೇ ಪಾಕ್ ಕ್ರಿಕೆಟ್ ಮಂಡಳಿ ಕೂಡಾ ಶಹಬ್ಬಾಸ್ ಅನ್ನೋದು. ಮೊದ್ಲೇ ದೇಶ ದಿವಾಳಿಯಾಗಿದೆ. ಜನರ ಆರ್ಥಿಕ ಸ್ಥಿತಿ ಅಯ್ಯೋ, ಅಮ್ಮಾ ಅನ್ನೋ ರೀತಿಯಿದೆ. ಇದ್ರ ಮಧ್ಯೆ ಪಾಪದ ಜನ 10 ವರ್ಷ ಖರ್ಚು ಮಾಡುವ ದುಡ್ಡನ್ನ ಪಾಕಿಸ್ತಾನದ ಕ್ರಿಕೆಟರ್ಸ್ ಮತ್ತು ಫ್ಯಾಮಿಲಿಗೆ ಸುರಿದಿರುವ ರೀತಿಗೆ ಪಾಕ್ ನೆಲದಲ್ಲಿ ಆಕ್ರೋಶ ವ್ಯಕ್ತವಾಗಿದೆ.  ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಮಾತ್ರವಲ್ಲ, ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಕ್ಕೆ ಅನೇಕ ಟೀಕಾಸ್ತ್ರಗಳು ಎದುರಾಗಿದ್ವು. ಆದ್ರೀಗ ಕೇಳಿ ಬಂದ ಆರೋಪ ಪಾಕ್ ಆರ್ಥಿಕ ಸ್ಥಿತಿಯ ಮಟ್ಟಿಗೆ ಗಂಭೀರವಾಗಿಯೇ ಇದೆ. ಪಾಕ್ ತಂಡದ ಮಾಜಿ ಆಟಗಾರ ಅತೀಕ್-ಉಝ್-ಝಮಾನ್ ಭಾರತ ತಂಡದ ಪ್ರದರ್ಶನವನ್ನು ಶ್ಲಾಘಿಸಿ, ಪಾಕಿಸ್ತಾನ್ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಮಾತನಾಡಿರುವ ಅತೀಕ್, ನಮ್ಮವರು ನಾಯಕತ್ವಕ್ಕಾಗಿ ಕಿತ್ತಾಡುತ್ತಿದ್ದರೆ, ಭಾರತ ತಂಡವು ವಿಶ್ವಕಪ್ ಎತ್ತಿ ಹಿಡಿದು ಆನಂದಬಾಷ್ಫ ಸುರಿಸಿದ್ದಾರೆ. ಭಾರತ ತಂಡವನ್ನು ರೋಹಿತ್ ಶರ್ಮಾ ಯಾವ ರೀತಿಯಾಗಿ ಮುನ್ನಡೆಸಿದ್ದಾರೆ ಎಂಬುದನ್ನು ಪಾಕ್ ತಂಡ ನೋಡಿ ಕಲಿಯಬೇಕು. ನಿಜಕ್ಕೂ ಅವರು ಕ್ಲಾಸ್ ಲೀಡರ್ ಎಂದು ಹಾಡಿ ಹೊಗಳಿದ್ದಾರೆ. ಪಾಕ್ ತಂಡದ ಪ್ರದರ್ಶನ ಹೇಗಿತ್ತು ಎಂಬುದನ್ನು ನೀವೇ ನೋಡಿ, ಈ ಬಾರಿ ಪಾಕಿಸ್ತಾನ್ ಕ್ರಿಕೆಟ್ ಆಡಲು ಹೋಗಿದ್ದರು ಎಂದು ನನಗಂತು ಅನಿಸಿಲ್ಲ. ಏಕೆಂದರೆ ಯುಎಸ್​ಎನಲ್ಲಿ ಪಾಕಿಸ್ತಾನದ 17 ಆಟಗಾರರಿಗೆ 60 ರೂಮ್​ಗಳನ್ನು ಬುಕ್ ಮಾಡಿಕೊಂಡಿದ್ದರು. ತಮ್ಮ ಕುಟುಂಬದೊಂದಿಗೆ ರಜಾ ಕಳೆಯಲು ಅವರು ಟಿ20 ವಿಶ್ವಕಪ್​ಗೆ ತೆರಳಿದ್ದರು. ಅದರಂತೆ ಅಮೆರಿಕ ಸುತ್ತಾಡಿಕೊಂಡು ಬಂದಿದ್ದಾರೆ ಅಷ್ಟೇ ಎಂದು ಅತೀಕ್ ಝಮಾನ್ ವ್ಯಂಗ್ಯವಾಡಿದ್ದಾರೆ.

ಅಷ್ಟೇ ಅಲ್ಲದೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇನ್ನೇದಾರೂ ಭಾರತವನ್ನು ನೋಡಿ ಕಲಿಯಬೇಕು. ಅವರ ತಂಡದ ಆಯ್ಕೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಮ್ಮಲ್ಲಿ ಆಟಗಾರರು ಅರ್ಹತೆಗಿಂತ ಆತ್ಮೀಯತೆಯ ಮೇಲೆ ಆಯ್ಕೆಯಾಗುತ್ತಿದ್ದಾರೆ ಎಂದು ಪಿಸಿಬಿ ವಿರುದ್ಧ ಅತೀಕ್ ಝಮಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅತೀಕ್ ಅವರ ಹೇಳಿಕೆಯು ವೈರಲ್ ಆಗಿದ್ದು, ಪಾಕ್ ಕ್ರಿಕೆಟ್ ಪ್ರೇಮಿಗಳು ಮತ್ತು ಮಾಜಿ ಕ್ರಿಕೆಟರ್ಸ್ ಈ ಮಾತನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಪಾಕ್ ಕ್ರಿಕೆಟರ್ಸ್ ಸಾಕಷ್ಟು ಡ್ರಾಮಾ ಮಾಡುತ್ತಿದ್ದಾರೆ. ನಾವು ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ತಂಡದ ಜೊತೆ ಒಬ್ಬ ಕೋಚ್ ಮತ್ತು ಮ್ಯಾನೇಜರ್ ಇದ್ದರು. ಇಬ್ಬರೂ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಆದರೆ ಈಗ ತಂಡದಲ್ಲಿರುವ 17 ಆಟಗಾರರ ಜೊತೆಗೆ 17 ಅಧಿಕಾರಿಗಳು ಇದ್ದಾರೆ. ಅವರೆಲ್ಲರಿಗೂ 60 ಕೊಠಡಿಗಳನ್ನು ಕಾಯ್ದಿರಿಸಬೇಕು. ಇದು ನಿಮಗೆ ತಮಾಷೆಯೇ? ವಿಶ್ವಕಪ್‌ನಂತಹ ಮೆಗಾ ಟೂರ್ನಮೆಂಟ್‌ಗಳಿಗೆ ನಿಮ್ಮ ಬಂಧು ಬಾಂಧವರೆಲ್ಲರನ್ನೂ ಕರೆದೊಯ್ಯುವ ಅಗತ್ಯವೇನು? ಪಂದ್ಯಗಳ ವೇಳೆ ಪತ್ನಿಯರ ಜೊತೆ ಪ್ರವಾಸಕ್ಕೆ ಹೋಗುವುದು ಅಭ್ಯಾಸವಾಗಿ ಹೋಗಿದೆ. ಆದ್ರೆ, ಮನೆಯಲ್ಲಿರೋ ಎಲ್ಲರೂ ನಿಮ್ಮೊಂದಿಗೆ ಇದ್ದರೆ ಆರ್ಥಿಕ ಪರಿಸ್ಥಿತಿಯ ಗತಿಯೇನು? ಅವಕಾಶ ಸಿಕ್ಕರೆ ಸಾಕು, ಹೊರಗಡೆ ಊಟ ಮಾಡುತ್ತಾ ಫೋಟೋ, ವಿಡಿಯೋ ಮಾಡಿಕೊಳ್ಳಲು ಸಮಯ ಹೋಗ್ತಿದೆ. ಈ ರೀತಿಯ ಸಂಸ್ಕೃತಿ ಪಾಕ್ ತಂಡದಲ್ಲಿ ಇರಲಿಲ್ಲ. ಇದು ಕೆಟ್ಟ ಸಂಸ್ಕೃತಿಯಾಗಿದೆ, ತಂಡದಲ್ಲಿ ಶಿಸ್ತಿನ ಕೊರತೆಯಿದೆ. ಪ್ರತಿ ವರ್ಷ ಕೋಟಿ ಕೋಟಿ ಸಂಬಳ ಪಡೆಯುತ್ತೀರಿ, ಆದರೆ ಪ್ರದರ್ಶನ ಮಾತ್ರ ಶೂನ್ಯವಾಗಿದೆ’ ಎಂದು ಪಾಕ್‌ನ ಮಾಜಿ ಕ್ರಿಕೆಟರ್ಸ್ ತಂಡವನ್ನು ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ.

ಪಾಕ್ ಮಾಜಿ ಆಟಗಾರರ ಈ ಸಿಟ್ಟಿಗೆ ಕಾರಣವೂ ಇದೆ ಬಿಡಿ. ಪಾಕ್ ಪ್ರಜೆಗಳ ಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ. ಆಟಗಾರರ ದರ್ಬಾರ್ ನೋಡಿದ್ರೆ ಇದೆಲ್ಲಾ ಬೇಕಿತ್ತಾ ಅನ್ಸುತ್ತೆ. ಆದ್ರೆ, ಅವ್ರು ಪಾಕಿಸ್ತಾನಿಗಳು ಬಿಡಿ, ವೈರಿಗಳನ್ನ ಬಗ್ಗು ಬಡಿಯಲು ಆರಕ್ಕೇರಲು ಸೈ, ಮೂರಕ್ಕಿಳಿಯಲು ಸೈ. ಅವ್ರಿಗೆ ಭಾರತ ಸೋಲಬೇಕು ಅಷ್ಟೇ. ಅವ್ರು ಎಷ್ಟೇ ಬಾಯಿಬಡ್ಕೊಂಡ್ರು ನಮ್ ಟೀಮ್ ಇಂಡಿಯಾನ ಸೋಲಿಸಲು ಸಾಧ್ಯವಾಗದ ಮಾತು ಅನ್ನೋದೇ ಸತ್ಯ.

Shwetha M

Leave a Reply

Your email address will not be published. Required fields are marked *