ಭಾರತ ಗೆದ್ದಿದ್ದಕ್ಕೆ ಪಾಕ್ ಗೆ ಉರಿ ಟ್ರೋಫಿ ಹಸ್ತಾಂತರದ ವೇಳೆ ನಾಪತ್ತೆ
PCB ಅಧಿಕಾರಿಗಳ ಕಳ್ಳಾಟ ಬಯಲು

ಭಾರತ ಗೆದ್ದಿದ್ದಕ್ಕೆ ಪಾಕ್ ಗೆ ಉರಿ  ಟ್ರೋಫಿ ಹಸ್ತಾಂತರದ ವೇಳೆ ನಾಪತ್ತೆPCB ಅಧಿಕಾರಿಗಳ ಕಳ್ಳಾಟ ಬಯಲು

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಅಂತಿಮ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 4 ವಿಕೆಟ್​ಗಳಿಂದ ಸೋಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗೆ ಚಾಂಪಿಯನ್ ಪಟ್ಟಕ್ಕೇರಿದ ಟೀಮ್ ಇಂಡಿಯಾಗೆ ಪ್ರಶಸ್ತಿಗಳನ್ನು ಪ್ರಧಾನ ಮಾಡಿದ್ದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ.. . ಆದರೆ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಯಾವುದೇ ಅಧಿಕಾರಿ ಸಮಾರೋಪ ಸಮಾರಂಭದ ವೇಳೆ ಕಾಣಿಸಿಕೊಂಡಿಲ್ಲ.. ಬ್ಯಾಟರಿ ಹಾಕಿ ನೋಡಿದ್ರೆ ಒಬ್ಬೇ ಒಬ್ಬ ಅಧಿಕಾರಿಗಳು ಅಲ್ಲಿ ಇರಲಿಲ್ಲ.. ಸಾಮಾನ್ಯವಾಗಿ ಐಸಿಸಿ ಟೂರ್ನಿಯ ಅಂತಿಮ ಪಂದ್ಯದ ವೇಳೆ ಆಯೋಜಕ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಅಧ್ಯಕ್ಷರು ಕಾಣಿಸಿಕೊಳ್ಳುವುದು ವಾಡಿಕೆ. ಇದಾಗ್ಯೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆಯೋಜಕರಾದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಲಿ,  ಇತರೆ ಸದಸ್ಯರಾಗಲಿ ಕಾಣಿಸಿಕೊಂಡಿಲ್ಲ. ಇದುವೇ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಪಾಪ ಪಾರ್ ಭಾರತ ಗೆದ್ದಿದ್ದಕ್ಕೆ ಉರ್ಕೋಂಡು ಬಂದಿಲ್ಲ ಅನ್ನೋ ಚರ್ಚೆ ಆಗುತ್ತಿದೆ.. ಒಂದು ವೇಳೆ ಭಾರತದ ವಿರುದ್ದ ನ್ಯೂಜಿಲ್ಯಾಂಡ್ ಗೆದ್ದಿದ್ರೆ ಪಾಕ್ ಪಿಬಿಸಿ ಅಧಿಕಾರಗಳು ಬರುತ್ತಿದ್ದರು ಅನ್ಸುತ್ತೆ.. ಸ್ಟೆಡಿಯಂ ಹತ್ರನೇ ಎಲ್ಲೋ ರೂಂ ಮಾಡ್ಕೊಂಡು ಇದ್ರು ಅನ್ಸುತ್ತೆ.. ಭಾರತ ಗೆಲ್ಲುತ್ತಿದ್ದಂತೆ ಅಧಿಕಾರಿಗಳು ಅಲ್ಲೇ ಇದ್ರು ಅನ್ಸುತ್ತೆ. …

ಪಾಕಿಸ್ತಾನದಲ್ಲಿ ಫೈನಲ್ ನಡೆದಿಲ್ಲ ಅನ್ನೋ ಬೇಸರ?

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸಿದರೂ ಫೈನಲ್ ಪಂದ್ಯ ನಡೆದಿದ್ದು ದುಬೈನಲ್ಲಿ.. ಫೈನಲ್ ಮಾತ್ರ ಅಲ್ಲ ಭಾರತದ ಎಲ್ಲಾ ಪಂದ್ಯಗಳು ಕೂಡ ಭಾರತದಲ್ಲೇ ನಡೆದಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗದ ಕಾರಣ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಅದರಂತೆ ಟೀಮ್ ಇಂಡಿಯಾ ಪಂದ್ಯಗಳಿಗೆ ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಿತ್ತು. ಅಲ್ಲದೆ ಭಾರತ ತಂಡ ಫೈನಲ್​ಗೆ ತಲುಪಿಲ್ಲ ಅಂದ್ರೆ, ದುಬೈನಲ್ಲಿ ಅಂತಿಮ ಪಂದ್ಯ, ಇಲ್ಲದಿದ್ದರೆ.. ಲಾಹೋರ್​ನಲ್ಲಿ ಫೈನಲ್​ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಲೆಕ್ಕಾಚಾರಗಳು ಉಲ್ವಾ ಆಗಿತ್ತು.  ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ಗೆದ್ದು, ಸೇಮಿ ಗೆದ್ದು, ಫೈನಲ್​ಗೆ ಲಗ್ಗೆಯಿಟ್ಟಿತು. ಇತ್ತ 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆಯೋಜಿಸಿದ್ದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಫೈನಲ್ ಪಂದ್ಯದ ಆತಿಥ್ಯ ಕೈ ತಪ್ಪಿದೆ. ಅದರಂತೆ ಮಾರ್ಚ್ 9 ರಂದು ನಡೆದ ಫೈನಲ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಿತು. ಈ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇತ್ತ ಫೈನಲ್ ಪಂದ್ಯದ ಆಯೋಜನೆ ಕೈ ತಪ್ಪಿದ ಬೇಸರದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಸಮಾರೋಪ ಸಮಾರಂಭದಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಯಾವುದೇ ಸದಸ್ಯರು ಈ ಸಮಾರಂಭದಲ್ಲಿ ಕಾಣಿಸಿಕೊಳ್ಳದಿರುವುದರಿಂದ ಪಿಸಿಬಿ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಂಡರೂ ಅಚ್ಚರಿಪಡಬೇಕಿಲ್ಲ.

ಶೋಯೆಭ್ ಅಖ್ತಾರ್ ಬೇಸರ

ಪಿಸಿಬಿಯ ಯಾವುದೇ ಅಧಿಕಾರಿ ಸಮಾರೋಪ ಸಮಾರಂಭದಲ್ಲಿ  ಪಾಲ್ಗೊಂಡಿರದಿದ್ದಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಬೇಸರಗೊಂಡಿದ್ದಾರೆ. ಅದೊಂದು ವಿಶ್ವಮಟ್ಟದ ಸಮಾರಂಭವಾಗಿದ್ದು ಅದರಲ್ಲಿ ಪಿಸಿಬಿಯ ಯಾವುದೇ ಅಧಿಕಾರಿ ಪಾಲ್ಗೊಳ್ಳದೇ ಇದ್ದಿದ್ದು ಸರಿಯಲ್ಲ ಎಂದು ಅವರು ವಿಷಾದಿಸಿದ್ದಾರೆ. ಸೆಲ್ಫಿ ವಿಡಿಯೋ ಮೂಲಕ ತಮ್ಮ ಅನಿಸಿಕೆಯನ್ನು ಟ್ವಿಟರ್ ನಲ್ಲಿ ಹರಿಬಿಟ್ಟಿರುವ ಅವರು, “ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಹಿಂದೂಸ್ತಾನವು ಗೆದ್ದುಕೊಂಡಿದೆ. “ಫೈನಲ್ ಪಂದ್ಯದ ನಂತರ ನಡೆದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಒಬ್ಬೇ ಒಬ್ಬ ಪಿಸಿಬಿ ಅಧಿಕಾರಿ ಇರಲಿಲ್ಲ. ಅದೊಂದು ವಿಶ್ವಮಟ್ಟದ ಕಾರ್ಯಕ್ರಮ. ಅಲ್ಲಿ ಪಿಸಿಬಿ ಅಧಿಕಾರಿಗಳು ಇರಬೇಕಿತ್ತು. ಆದರೂ ಅವರು ಅಲ್ಲಿ ಇರದೇ ಇದ್ದಿದ್ದು ಯಾಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಪಿಸಿಬಿ ಇದಕ್ಕೆ ಸಮಜಾಯಿಷಿ ನೀಡಬೇಕು’’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ಗೆದ್ದಿದ್ದಕ್ಕೆ ಪಾಕ್‌ಗೆ ಉರಿಯಾಯ್ತಾ?

ಅಸಲಿಗೆ, ಕ್ರಿಕೆಟ್ ಅಭಿಮಾನಿಗಳು ಕೂಡ ಇದನ್ನು ಪ್ರಶ್ನೆ ಮಾಡಿದ್ದಾರೆ. “ನೀವು ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಆಯೋಜಕರು. ಆದರೆ, ಪ್ರಶಸ್ತಿ ಪ್ರದಾನ ಮಾಡುವ ವೇಳೆ ನೀವೇ ಇರದಿದ್ದರೆ ಹೇಗೆ? ಭಾರತ ಪ್ರಶಸ್ತಿ ಗೆದ್ದಿದ್ದಕ್ಕೆ ಹೊಟ್ಟೆ ಉರಿಯಾಯ್ತೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪಿಬಿಸಿ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಭಾರತದ ಮೇಲೆ ಪಿಸಿಬಿ ಮುನಿಸು ಯಾಕೆ ಗೊತ್ತೇ? 

ಅಸಲಿಗೆ, ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆಯ ಸಂದರ್ಭದಲ್ಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ತೀವ್ರ ತಿಕ್ಕಾಟ ಆರಂಭವಾಗಿತ್ತು. ಈ ಪಂದ್ಯಾವಳಿಯ ಆತಿಥ್ಯ ವಹಿಸಿದ್ದ ಪಾಕಿಸ್ತಾನಕ್ಕೆ ತಾನು ಕಾಲಿಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದ ಭಾರತ, ಪಂದ್ಯಾವಳಿಯಲ್ಲಿ ತಾನು ಆಡಲಿರುವ ಎಲ್ಲಾ ಪಂದ್ಯಗಳನ್ನು ದುಬೈಗೆ ವರ್ಗಾವಣೆ ಮಾಡಬೇಕು ಎಂದು ಹಠ ಹಿಡಿದಿತ್ತು.. ಅದಕ್ಕೆ ಪಾಕಿಸ್ತಾನ ಬಿಲ್‌ಕುಲ್‌ಒಪ್ಪಿರಲಿಲ್ಲ. ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಆಡೋ ಹಾಗಿದ್ರೆ ಆಡಲಿ, ಇಲ್ಲವೇ ಬಿಡಲಿ ಎಂಬ ಧೋರಣೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಹೊಂದಿತ್ತು. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾರತವನ್ನು ಹೊರಗಿಟ್ಟು ಚಾಂಪಿಯನ್ಸ್ ಟ್ರೋಫಿ ಮಾಡಲು ಒಪ್ಪಲಿಲ್ಲ. ಏಕೆಂದರೆ, ಭಾರತ ತಂಡ ಫೈನಲ್ ವರೆಗೂ ಹೋದರೆ ಮಾತ್ರ ಈ ಟೂರ್ನಿಯ ಜಂಟಿ ಆಯೋಜಕತ್ವದ ಹೊಣೆಗಾರಿಕೆಯನ್ನೂ ಹೊತ್ತಿರುವ ಪಿಸಿಬಿಗೆ ಲಾಭ. ಟಿವಿಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಟಿಆರ್ ಪಿ ಹಾಗೂ ಅದರಿಂದ ಬರುವ ನೇರ ಹಾಗೂ ಪರೋಕ್ಷ ಹಣ ಇತ್ಯಾದಿಗಳಿಂದಾಗಿ ಭಾರತ ಈ ಟೂರ್ನಿಯಲ್ಲಿ ಆಡಲೇಬೇಕು ಎಂದು ಐಸಿಸಿ ಪಟ್ಟು ಹಿಡಿದಿತ್ತು. ಐಸಿಸಿಯ ಈ ಪಟ್ಟಿನ ಮುಂದೆ ಪಿಸಿಬಿ ಏನೂ ಮಡೋಕೆ ಆಗಲಿಲ್ಲ..

 ಐಸಿಸಿಗೆ ಭಾರತದಿಂದಲೇ ಶೇ. 80ರಷ್ಟು ಲಾಭ

ವರ್ಷವೊಂದರಲ್ಲಿ ಐಸಿಸಿಗೆ ಬರುವ ಆದಾಯವು ಶೇ. 80ರಷ್ಟು ಭಾರತದಿಂದಲೇ ಬರುತ್ತದೆ. ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಇದ್ದರೆ ಮಾತ್ರ ಆ ಟೂರ್ನಿಯ ಆದಾಯ ನಿರೀಕ್ಷಿತ ಮಟ್ಟದಲ್ಲಿ ಬರುತ್ತದೆ. ಟೆಲಿವಿಷನ್ ನೇರ ಪ್ರಸಾರ, ಲೈವ್ ಸ್ಟ್ರೀಮಿಂಗ್, ಕಾಮೆಂಟರಿ, ಸ್ಕೋರ್ ಕಾರ್ಡ್ ಪ್ರಸಾರಕ್ಕಾಗಿ ನಾನಾ ಒಪ್ಪಂದಗಳಿಂದ ಬರುವ ಆದಾಯದ ಜೊತೆಗೆ ಭಾರತೀಯ ಕ್ರಿಕೆಟ್ ಮಂಡಳಿಯು ಶೇ. 40ರಷ್ಟು ಆದಾಯ ತನ್ನದಾಗಿಸಿಕೊಳ್ಳುತ್ತದೆ. ಹಾಗಾಗಿ, ಐಸಿಸಿಯು ಭಾರತವಿಲ್ಲದೆ ಚಾಂಪಿಯನ್ಸ್ ಟ್ರೋಫಿ ನಡೆಸುವ ಧೈರ್ಯ ಮಾಡಲೇ ಇಲ್ಲ.

ಭಾರತದಿಂದಲೇ ಪಿಸಿಬಿಗೆ ಬಿಗ್ ಶಾಕ್ 

ತಿಂಗಳುಗಟ್ಟಲೆ ನಡೆದ ಈ ಹಗ್ಗಜಗ್ಗಾಟದಲ್ಲಿ ಕಡೆಗೂ ಭಾರತದ ಹಠಕ್ಕೆ ಪಿಸಿಬಿ ಮಣಿಯಲೇಬೇಕಾಯ್ತು. ಭಾರತದ ಅಷ್ಟೂ ಪಂದ್ಯಗಳನ್ನು ದುಬೈಗೆ ವರ್ಗಾವಣೆ ಮಾಡಲಾಯಿತು. ಇದರಿಂದ ಭಾರೀ ಲಾಭದ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಲಾಭಾಂಶ ಕಡಿಮೆಯಾಯ್ತು. ಟೂರ್ನಿಯಲ್ಲಿ ಭಾರತ ಆಡುವ ಪಂದ್ಯಗಳು ದುಬೈನಲ್ಲಿ ಆಡಿಸುವುದು ನಿರ್ಧಾರವಾಯಿತು. ಮಿಕ್ಕೆಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲೇ ಆಡುವುದು ಎಂದು ತೀರ್ಮಾನವಾಯಿತು. ಭಾರತ ತಂಡದ ಜೊತೆಗೆ ಆಡುವ ತಂಡಗಳನ್ನು ಪಾಕಿಸ್ತಾನದಿಂದ ದುಬೈಗೆ ಕಳಿಸುವುದು, ಮತ್ತೆ ಆ ತಂಡಗಳನ್ನು ಟೂರ್ನಿಯ ಬೇರೆ ಪಂದ್ಯಗಳಿಗಾಗಿ ಪುನಃ ಪಾಕಿಸ್ತಾನಕ್ಕೆ ಕಳಿಸುವುದು ಇತ್ಯಾದಿಗಳಿಂದ ಟೂರ್ನಿಯಿಂದ ಪಿಸಿಬಿಗೆ ಬಂದಿದ್ದ ಆದಾಯ ಕೊಂಚ ಇಳಿಮುಖವಾಯಿತು.

ಇನ್ನು, ಭಾರತ, ಟೂರ್ನಿಯ ಫೈನಲ್ ಗೆ ಬಂದಿದ್ದರಿಂದ,  ಫೈನಲ್ ಪಂದ್ಯ ಕೂಡ ಪಾಕಿಸ್ತಾನದಿಂದ ದುಬೈಗೆ ಶಿಫ್ಟ್ ಆಯಿತು. ಇದೆಲ್ಲವೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇರುಸು ಮುರುಸು ತಂದಿದೆ. ಅದಕ್ಕಾಗಿಯೇ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆದ್ದಾಗ ಭಾರತ ತಂಡವನ್ನು ಅಭಿನಂದಿಸುವುದಕ್ಕಾಗಲೀ, ಪ್ರಶಸ್ತಿ ಸಮಾರಂಭದಲ್ಲಿ ಹಾಜರಿರುವುದಕ್ಕಾಗಲೀ ಪಿಸಿಬಿಯ ಯಾವುದೇ ಅಧಿಕಾರಿಗಳು ಹೋಗಿಲ್ಲ.. ಅರ್ಥ ಆಗೋ ಬಾಷೆಯಲ್ಲಿ ಪಾಕಿಸ್ತಾನ ಭಾರತದ ಮೇಲೆ ಚೆನ್ನಾಗಿ ಉರ್ಕೋಂಡಿದೆ.

ಪಾಕ್ ತಂಡಕ್ಕೆ ಹಿಗ್ಗಾಮುಗ್ಗಾ ಟ್ರೋಲ್

ಪಾಕಿಸ್ತಾನದ ಈ ಸ್ಥಿತಿಯನ್ನು ನೋಡಿ ನೆಟ್ಟಿಗರೆಲ್ಲ ಪಾಕ್ ತಂಡವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿತ್ತು. ಆದರೆ, ಪಾಕಿಸ್ತಾನವೇ ಚಾಂಪಿಯನ್ಸ್ ಟ್ರೋಫಿಯಲ್ಲಿಲ್ಲ. ಫೈನಲ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಫೈನಲ್ ದುಬೈನಲ್ಲಿ ನಡೆದಿದೆ. ಭಾರತ ಫೈನಲ್ ನಲ್ಲಿ ಗೆದ್ದಿದೆ, ಇದ್ದಕ್ಕೆ ಪಾಕ್ ಉರ್ಕೊಂಡಿದೆ ಎಂದು ನೆಟ್ಟಿಗರು  ಟ್ರೋಲ್ ಕಾಮೆಂಟ್ ಮಾಡುತ್ತಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಸಮಾರೋಪ ಸಮಾರಂಭದಲ್ಲಿ ಭಾರತ ಗೆದ್ದಿದ್ದಕ್ಕೆ ಪಾಕ್ ಸಿಕ್ಕಾಪಟ್ಟೆ ಉರ್ಕೋಂಡಿದೆ ಅನ್ನೋದು ಇಡೀ ವಿಶ್ವಕ್ಕೆ ಗೊತ್ತಾಗಿದೆ. ಭಾರತವನ್ನ ಎದುರುಹಾಕಿಕೊಂಡ್ರೆ ಏನಾಗುತ್ತೆ ಅನ್ನೋದ್ದಕ್ಕೆ ಹಾಗೂ ಭಾರತದ ಶಕ್ತಿ ಏನು ಅನ್ನೋದು ಪಾಕ್‌ಗೆ ಗೊತ್ತಾಗಿದೆ.. ಟೀಂ ಇಂಡಿಯಾ ಬಾಯ್ಸ್‌ ಚಾಂಪಿಯನ್ಸ್ ಟ್ರೋಫಿ ಗೆಲ್ಲೋದ್ರಾ ಜೊತೆ ನಮ್ಮ ಶತ್ರುದೇಶಕ್ಕೆ ಬರ್ನಲ್ ಭಾಗ್ಯವನ್ನ ನೀಡಿದ್ದಾರೆ..  ನೂರಾರು ಕೋಟಿ ಖರ್ಚು ಮಾಡಿ ಚಾಂಪಿಯನ್ಸ್ ಟ್ರೋಫಿ ನಡೆಸಿದ್ರು, ಪಾಕ್‌ಗೆ ಬೆಲೆ ಇಲ್ಲದಂತೆ ಆಗಿದೆ.. ಅದು ಭಾರತದಿಂದಲೇ ಅನ್ನೋದು ಪಾಕಿಸ್ತಾನಕ್ಕೆ ಉರಿ ಅಷ್ಟೇ.. ಒಟ್ನಲ್ಲಿ ನಮ್ಮ ಭಾರತ ನಮ್ಮ ಹೆಮ್ಮೆ, ಪಾಕಿಸ್ತಾನದ ಜೊತೆ ಯುದ್ಧ ಮಾಡೋಕೆ ನಮ್ಗೆ ಅಸ್ತ್ರನೇ ಬೇಕು ಅಂತಿಲ್ಲ ಅನ್ನೋದನ್ನ ಟೀಂ ಇಂಡಿಯಾ ತೋರಿಸಿಕೊಟ್ಟಿದೆ.

Kishor KV

Leave a Reply

Your email address will not be published. Required fields are marked *