WTCಯಲ್ಲಿ ಪಾಕ್ ನಂ.2 – ಒಂದೇ ಪಂದ್ಯದಲ್ಲಿ ಏನಿದು ಲೆಕ್ಕಾಚಾರ?
ನಿಲ್ಲದ ನೋ ಶೇಕ್ ಹ್ಯಾಂಡ್ ಗೇಲಿ

WTCಯಲ್ಲಿ ಪಾಕ್ ನಂ.2 – ಒಂದೇ ಪಂದ್ಯದಲ್ಲಿ ಏನಿದು ಲೆಕ್ಕಾಚಾರ?ನಿಲ್ಲದ ನೋ ಶೇಕ್ ಹ್ಯಾಂಡ್ ಗೇಲಿ

ಏಷ್ಯಾಕಪ್ ಫೈನಲ್​ನಲ್ಲಿ ಸೋಲು.. ಐಸಿಸಿ ವುಮೆನ್ಸ್ ವಿಶ್ವಕಪ್​ನಲ್ಲಿ ಬೆಂಬಿಡದ ಬ್ಯಾಡ್​ಲಕ್. ಗಾಂಚಾಲಿ ಮಾಡ್ಕೊಂಡು ರೋಸ್ಟ್ ಆಗ್ತಿರೋ ಪ್ಲೇಯರ್ಸ್. ಬರೀ ಸ್ಯಾಡ್​ ಮೂಡ್​ನಲ್ಲೇ ಇದ್ದ ಪಾಕಿಸ್ತಾನಿಯರಿಗೆ ಕೊನೆಗೂ ಸೆಲೆಬ್ರೇಟ್ ಮಾಡೋಕೆ ಒಂದು ರೀಸನ್ ಸಿಕ್ತು. ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಟೀಂ ವಿನ್ ಆಗಿದೆ. ಇದೊಂದು ಗೆಲುವು ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರವನ್ನೇ ಉಲ್ಟಾಪಲ್ಟಾ ಮಾಡಿದೆ. ಮತ್ತೊಂದ್ಕಡೆ ಭಾರತದ ನೋ ಶೇಕ್ ಹ್ಯಾಂಡ್ ನಿರ್ಧಾರವನ್ನ ಆಫ್ರಿಕನ್ನರು ಟೀಸ್ ಮಾಡಿದ್ದಾರೆ.

ಇದನ್ನೂ ಓದಿ : ಬಿಗ್‌ ಬಾಸ್‌ ಮನೆಯಲ್ಲಿ ಗೆಜ್ಜೆ ಸದ್ದು – ರಾತ್ರೋರಾತ್ರಿ ಮನೆಯಿಂದ ಹೊರ ಬಂದ ಸ್ಪರ್ಧಿಗಳು!

ಐಸಿಸಿಯ ಪರ್ಮನೆಂಟ್ ಮೆಂಬರ್​ಶಿಪ್ ಪಡೆದಿರೋ ರಾಷ್ಟ್ರಗಳ ಪ್ರತಿಯೊಂದು ಟೆಸ್ಟ್ ಪಂದ್ಯಗಳೂ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಯಾಕಂದ್ರೆ 2025-27ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್​ನಲ್ಲಿ ಯಾವಾಗ ಬೇಕಿದ್ರೂ ಟ್ವಿಸ್ಟ್ ಪಡ್ಕೊಳ್ಳಬಹುದು. ಇಷ್ಟು ದಿನ ಪೈಪೋಟಿಯಲ್ಲೇ ಇಲ್ಲದ ಪಾಕಿಸ್ತಾನ ತಂಡ ಒಂದೇ ಪಂದ್ಯದಲ್ಲಿ ಟಾಪ್ 2ಗೆ ಬಂದಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಡಿಯಲ್ಲಿ ಆಡ್ತಿರೋ ಈ ಸರಣಿಯಲ್ಲಿ ಪಾಕಿಸ್ತಾನ ಸೌತ್ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದೆ.

ಸೌತ್ ಆಫ್ರಿಕಾ ವಿರುದ್ಧ 93 ರನ್ ಗಳಿಂದ ಗೆದ್ದ ಪಾಕ್!

ವೈಟ್ ಬಾಲ್ ಸಿರೀಸ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲನ್ನೇ ಕಂಡಿದ್ದ ಪಾಕಿಸ್ತಾನ ಸದ್ಯ ಸೌತ್ ಆಫ್ರಿಕಾ ವಿರುದ್ಧ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಮೊದಲ ಪಂದ್ಯವನ್ನ ಗೆದ್ದಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನ್ಲಿ 378 ರನ್‌ ಕಲೆ ಹಾಕಿತು. ಮೊದಲ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಟೋನಿ ಡಿ ಜೋರ್ಜಿ ಅವರ ಶತಕದ ನೆರವಿನಿಂದ 269 ರನ್‌ಗಳಿಗೆ ಆಲೌಟ್ ಅಯಿತು. ಎರಡನೇ ಇನಿಂಗ್ಸ್‌ನಲ್ಲಿ ಪಾಕ್‌ 167 ರನ್‌ಗೆ ಅಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 183 ರನ್‌ ಸೇರಿಸಿ ಸೋಲು ಕಂಡಿತು. ಈ ಮೂಲಕ ಪಾಕ್ ತಂಡ ಮೊದಲ ಪಂದ್ಯವನ್ನ 93 ರನ್ ಗಳಿಂದ ಗೆದ್ದುಕೊಳ್ತು. ಹಾಗೇ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲೂ ಟಾಪ್-2ಗೆ ಬಂದಿದೆ.

ಆಡಿದ್ದೇ ಒಂದು ಪಂದ್ಯ.. ಎರಡನೇ ಸ್ಥಾನಕ್ಕೆ ಜಿಗಿದ ಪಾಕ್!

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-27ರ ಸಾಲಿನ ಮೊದಲ ಪಂದ್ಯದಲ್ಲೇ ಪಾಕ್ ಎರಡನೇ ಸ್ಥಾನಕ್ಕೆ ಬಂದಿದೆ. ಅಂದ್ರೆ ಈ ರೇಸ್​ನಲ್ಲಿ ಆಡಿರುವ 1 ಪಂದ್ಯ ಗೆದ್ದ ಪಾಕ್‌ ಗೆಲುವಿನ ಶೆಕಡಾವಾರು ನೂರಕ್ಕೆ ನೂರರೊಂದಿಗೆ ಎರಡನೇ ಸ್ಥಾನವನ್ನು ಪಡೆದಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೂರಕ್ಕೆ ಮೂರು ಪಂದ್ಯಗಳನ್ನ ಗೆದ್ದು ಫಸ್ಟ್ ಪ್ಲೇಸ್​ನಲ್ಲಿದೆ. ಇನ್ನು ಶ್ರೀಲಂಕಾ ತಂಡ ಮೂರನೇ ಪ್ಲೇಸ್​ನಲ್ಲಿದೆ. ಹಾಗೇ ಈ ಲಿಸ್ಟ್​​ನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ ಆಡಿದ 7 ಪಂದ್ಯಗಳಲ್ಲಿ 4 ಜಯ, 2 ಸೋಲು, 1 ಡ್ರಾ ಸಾಧಿಸಿದ್ದು, ಗೆಲುವಿನ ಶೇಕಡಾವಾರು 61.90 ಆಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನ ಅಂಕ ಪಟ್ಟಿಯನ್ನು ಗೆಲುವಿನ ಪರ್ಸೆಂಟೇಜ್​ ಮೇಲೆ ನಿರ್ಧಾರ ಮಾಡಲಾಗುತ್ತೆ. ಇನ್ನು ಭಾರತ ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಇಲ್ಲೂ ಕೂಡ ವೈಟ್ ವಾಶ್ ಸಾಧನೆ ಮಾಡಿದ್ರೆ ಅಂಕಪಟ್ಟಿಯಲ್ಲಿ ಮೇಲೆ ಜಿಗಿತ ಕಾಣಬಹುದು.

ಭಾರತವನ್ನ ಕೆಣಕಿದ ಪಾಕ್ ಮಾಜಿ ಕ್ರಿಕೆಟರ್ಸ್!

ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಪಾಕಿಸ್ತಾನದ ಮಾಜಿ ಆಟಗಾರರು ಭಾರತವನ್ನ ಅನಗತ್ಯವಾಗಿ ಟೀಸ್ ಮಾಡಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ರಾಮಿಜ್ ರಾಜಾ ಮತ್ತು ಆಮೀರ್ ಸೊಹೈಲ್ ಏಷ್ಯಾ ಕಪ್ 2025ರಲ್ಲಿ ಭಾರತ ತಂಡ ನಡೆಸಿದ್ದ ನೋ ಹ್ಯಾಂಡ್ ಶೇಕ್ ಪಾಲಿಸಿ ಬಗ್ಗೆ ಟೀಕಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದು ಫ್ಯಾಶನ್ ಆಗುತ್ತಿದೆ ಎಂದು ನಾಲಗೆ ಹರಿಬಿಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ ಉಭಯ ತಂಡಗಳು ಕೈಕುಲುಕಿದಾಗ, ಭಾರತದ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಇತ್ತೀಚೆಗೆ ಇದು ಒಂದು ಫ್ಯಾಶನ್‌ ನಂತೆೆ ಬೆಳೆಯುತ್ತಿದೆ ಎಂದು ಆಮೀರ್ ಸೊಹೈಲ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮಿಜ್ ರಾಜಾ, “ಹೌದು ಇದು ಕೈ ಮೀರುತ್ತಿದೆ” ಎಂದರು. “ಕೈಕುಲುಕುವುದು ಒಂದು ಉತ್ತಮ ಸಂಪ್ರದಾಯ. ಕ್ರಿಕೆಟ್ ಎಂದರೆ ಟ್ರಡಿಷನಲ್.. ಸಜ್ಜನಿಕೆ ಮತ್ತು ನ್ಯಾಯೋಚಿತ ಆಟ. ದಕ್ಷಿಣ ಆಫ್ರಿಕಾ ತಂಡವು ವಿವೇಚನೆಯಿಂದ ಇರುವುದು ಮುಖ್ಯ ಎಂದಿದ್ದಾರೆ. ಈ ಮೂಲಕ ಭಾರತದ ನೋ ಶೇಕ್ ಹ್ಯಾಂಡ್ ನಿರ್ಧಾರವನ್ನ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ಬುಧವಾರವಷ್ಟೇ ಆಸ್ಟ್ರೇಲಿಯಾ ತಂಡದ ಆಟಗಾರರು ಕೂಡ ಭಾರತದ ಹಸ್ತಲಾಘವ ನಿರಾಕರಣೆಯನ್ನು ಟೀಕಿಸಿದ್ರು.

Shantha Kumari