ತಾಲಿಬಾನ್ ಏಟಿಗೆ ಪಾಕಿಸ್ತಾನ ಶೇಕ್ – ಗಡಿಯೇ ಬದಲಾಗುತ್ತಾ?
ಪಾಕ್ ಅಸ್ತ್ರಕ್ಕೆ ಅಫ್ಘಾನ್ ಬ್ರಹ್ಮಾಸ್ತ್ರ

ತಾಲಿಬಾನ್ ಏಟಿಗೆ ಪಾಕಿಸ್ತಾನ ಶೇಕ್ – ಗಡಿಯೇ ಬದಲಾಗುತ್ತಾ?ಪಾಕ್ ಅಸ್ತ್ರಕ್ಕೆ ಅಫ್ಘಾನ್ ಬ್ರಹ್ಮಾಸ್ತ್ರ

ಅಫ್ಘಾನ್ ಮೇಲೆ ಪಾಕ್ ದಾಳಿ ಮಾಡಿದ ನಂತ್ರ ಪಾಕಿಸ್ತಾನ ಸೇನೆ ಜೊತೆ ತಾಲಿಬಾನ್ ತಿಕ್ಕಾಟ ಬಲು ಜೋರಾಗಿದೆ. ಇದೇ ಸಮಯದಲ್ಲಿ ಸೇಡಿಗೆ ಸೇಡು ತೀರಿಸಿಕೊಳ್ಳಲು ಅಫ್ಘಾನಿಸ್ತಾನ ಪಡೆಗಳು ಮುಂದೆ ನುಗ್ಗುತ್ತಿವೆ. ಕಳೆದು ಸಾಕಷ್ಟು ದಿನಗಳಿಂದ ಪಾಕ್‌ನೊಳಗೆ ನುಗ್ಗಿ ಶತ್ರುಗಳು ಎದೆ ಸಿಳೋಕೆ ತಾಲಿಬಾನಿಗಳು ಸಜ್ಜಾಗಿದ್ದಾರೆ

ಅಫ್ಘಾನ್ & ಪಾಕ್ ಗಡಿಯಲ್ಲಿ ರಕ್ತಪಾತ!

ಪಾಕಿಸ್ತಾನ ನಡೆಸಿದ ವಾಯುದಾಳಿ & ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿರುವ ಅಫ್ಘಾನ್‌ನ ಪಡೆಗಳು, ಶತ್ರು ಪಾಳಯದ ರಕ್ತ ಹರಿಸುತ್ತಿದೆ.   ದಾಳಿ ನಡೆಸುತ್ತಿರೋ  ಅಫ್ಘಾನಿಸ್ತಾನ ಫೋರ್ಸ್ ಕಂಡು ಪಾಕಿಸ್ತಾನ ಕೂಡ ಬೆಚ್ಚಿಬಿದ್ದಿದೆ. ಪಾಕಿಸ್ತಾನ ಅರೆಸೇನಾ ಪಡೆಯ ಯೋಧರು ಈ ದಾಳಿಯನ್ನು ಕಂಡು ನಡುಗಿ ಹೋಗಿದ್ದಾರೆ. ಮತ್ತೊಂದು ಕಡೆ ಇಬ್ಬರ ನಡುವಿನ ಈ ವಾರ್ ಮತ್ತಷ್ಟು ಜೋರಾಗುವ ಸಾಧ್ಯತೆ ಹೆಚ್ಚಾಗಿದೆ. ತಾಲಿಬಾನ್ ಪಡೆಗಳು ಅಫ್ಘಾನ್ ಚೆಕ್‌ಪೋಸ್ಟ್ ಸೇರಿದಂತೆ ಗಡಿ ಪ್ರದೇಶದಲ್ಲಿ ದಾಳಿ ಮಾಡುತ್ತಿವೆ. ಇದರಿಂದ  ಪಾಕ್‌ನ ಸೈನಿಕರು ಮರಣ ಹೊಂದುತ್ತಿದ್ದು, ಅಮಾಯಕ ಜನ ಕೂಡ ಸಾವನ್ನಪ್ಪುತ್ತಿದ್ದಾರೆ ಎನ್ನಲಾಗುತ್ತಿದೆ.

ಪಾಕ್ ರಾಕೆಟ್‌ ದಾಳಿಗೆ ಅಫ್ಘಾನ್ ತಿರುಗೇಟು

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನಿ ಪಡೆಗಳು ಮತ್ತೊಮ್ಮೆ ದಾಳಿ ನಡೆಸಿವೆ. ಕಳೆದ ಗುರುವಾರ ರಾತ್ರಿ ತಾಲಿಬಾನ್ ಪಡೆಗಳ ಮೇಲೆ ಪಾಕಿಸ್ತಾನಿ ಸೈನಿಕರು ರಾಕೆಟ್‌ಗಳನ್ನು ಹಾರಿಸಿದ್ದಾರೆ.  ತಾಲಿಬಾನ್ ಪಡೆಗಳು ಸಹ ಪ್ರತ್ಯುತ್ತರವನ್ನು ನೀಡಿದೆ. ಎರಡು ಕಡೆಗಳಿಂದ ಗುಂಡಿನ ದಾಳಿ ನಡೆದಿದ್ದು, ಗಡಿ ಭಾಗದಲ್ಲಿ ರಕ್ತದೋಕುಳಿಯಾಗಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ತಾಲಿಬಾನ್ ಪಡೆಗಳು ಪಾಕಿಸ್ತಾನದ ಸೇನಾ ನೆಲೆಗಳನ್ನು ವಶಪಡಿಸಿಕೊಂಡಿದ್ದವು. ಆ ನಂತ್ರ ಪಾಕ್ ದಾಳಿ ಮಾಡೋಕೆ ಶುರುಮಾಡಿದೆ.  ದಬ್ಗಿ ಪ್ರದೇಶದಲ್ಲಿ ಪಾಕಿಸ್ತಾನಿ ಪಡೆಗಳು ಗುರುವಾರ ಮಧ್ಯಾಹ್ನ 1:30 ರ ಸುಮಾರಿಗೆ ಡ್ಯುರಾಂಡ್ ರೇಖೆಯ ಮೇಲೆ ದಾಳಿ ನಡೆಸಿವೆ ಎಂದು ಅಫ್ಘಾನ್ ಮಾಧ್ಯಮಗಳು ವರದಿ ಮಾಡಿವೆ. ಪ್ರತೀಕಾರವಾಗಿ ಸುಮಾರು 18 ಪಾಕಿಸ್ತಾನಿ ಸೈನಿಕರನ್ನ ಕೊಂದಿದ್ದು  ಮತ್ತು ಹಲವಾರು ಪೋಸ್ಟ್‌ಗಳನ್ನು ಸುಟ್ಟುಹಾಕಿದ್ದೇವೆಂದು ತಾಲಿಬಾನ್ ಹೇಳಿಕೊಂಡಿದೆ. ಟಿಟಿಪಿ ಭಯೋತ್ಪಾದಕರು ಕೂಡ ಪ್ರತಿದಾಳಿ ನಡೆಸಿ ಪಾಕಿಸ್ತಾನದ ಸೇನಾ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.ಭಯೋತ್ಪಾದಕರು ಮತ್ತು ಅಫ್ಘಾನ್ ಸೇರಿದಂತೆ ಎಲ್ಲಾರು ಪಾಕ್ ಮೇಲೆ ದಾಳಿ ಮಾಡುತ್ತಿದ್ದು, ಪಾಕ್ ಪಂಚರ್ ಆಗಿ ಹೋಗಿದೆ.

ಯುದ್ಧಕ್ಕೆ ಕಾರಣವಾಗುತ್ತಾ ಅಫ್ಘಾನ್ ಪಾಕ್ ಕಿರಿಕ್‌

ಹೌದು, ಈಗ ಅಫ್ಘಾನ್ ಮತ್ತು ಪಾಕ್ ಸಂಬಂಧ ಹದಗೆಟ್ಟು ಹೋಗಿದೆ. ದಿನ ಕಳೆದಂತೆ ದಾಳಿಗಳು ಹೆಚ್ಚುತ್ತಿದ್ದು, ಪಾಕ್‌ಗೆ ಒಂದು ಗತಿ ಕಾಣಿಸಲೇ ಬೇಕು ಅಂತ ತಾಲಿಬಾನ್ ಪಣತೊಟ್ಟಿದೆ.. ಹೀಗಾಗಿ ಪಾಕ್ ಗಡಿ ಪ್ರದೇಶದಲ್ಲಿ ದಿನ ನಿತ್ಯ ದಾಳಿ ನಡೆಸುತ್ತಿದ್ದು, ಪಾಕ್ ಒಂದು ರೀತಿಯಲ್ಲಿ ಬೆಚ್ಚಿ ಬಿದ್ದಿದೆ.  ಒಂದ್ಕಡೆ ತನ್ನ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದ್ರೆ, ತಾಲಿಬಾನ್‌ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ವೈಮಾನಿಕ ದಾಳಿ ನಡೆಸೋಕೆ ಹೋಗಿ ಸುಖಾ ಸುಮ್ಮನೆ ಅಫ್ಘಾನ್ ದ್ವೇಷವನ್ನ ಪಾಕ್ ಕಟ್ಟುಕೊಂಡಿದೆ..  ಪಾಕ್ ಪೋಸ್ಟ್ ಮತ್ತು ಸೈನಿಕರ ದಾಳಿಯಿಂದ ಪಾಕಿಸ್ತಾನ ಸಾಕಷ್ಟು ನಷ್ಟವಾಗುತ್ತಿದ್ದು, ಯಾರ ಮುಂದೆ ಕೇಳಿಕೊಳ್ಳೋಕೆ ಆಗದ ಸ್ಥಿತಿಯಲ್ಲಿ ಪಾಕಿಸ್ತಾನವಿದೆ. ರಾತ್ರೋರಾತ್ರಿ ಅಫ್ಘಾನ್ ಗಡಿ ಮೇಲೆ ದಾಳಿ ಮಾಡುತ್ತಿರುವುದಕ್ಕೆ ತಾಲಿಬಾನಿಗಳು ಮತ್ತಷ್ಟು ಸಿಟ್ಟಾಗಿದ್ದಾರೆ.. ಈಗ ನಿಧಾನವಾಗಿ ನಡೆಯುತ್ತಿರೋ ಪಾಕ್ ಮತ್ತು ಅಫ್ಘಾನ್ ಕಿರಿಕ್ , ಮುಂದೆ ದೊಡ್ಡದಾಗಿ ಎರಡು ದೇಶಗಳ ನಡುವೆ ಯುದ್ಧ ನಡೆಯೋಕೆ ಕಾರಣವಾಗುತ್ತಾ ಅಂತಾ ಚರ್ಚೆ ನಡೆಯುತ್ತಿದೆ. ತನ್ನ ಪಾಡಿದೆ ತಾನಿದ್ದ ತಾಲಿಬಾನ್ ತಂಟೆಗೆ ಹೋದ ಪಾಕ್, ತನ್ನ ಅಂತ್ಯವನ್ನ ತಾನೇ ಬರೆದುಕೊಳ್ಳುತ್ತಿದೆ.

Kishor KV