ಭಾರತ ವಿರುದ್ದ ಗೆದ್ದರೆ ಜಿಂಬಾಬ್ವೆಯ ಯುವಕನೊಂದಿಗೆ ಮದುವೆ: ಪಾಕ್ ನಟಿ

ಭಾರತ ವಿರುದ್ದ ಗೆದ್ದರೆ ಜಿಂಬಾಬ್ವೆಯ ಯುವಕನೊಂದಿಗೆ ಮದುವೆ: ಪಾಕ್ ನಟಿ

ಟಿ-20 ವಿಶ್ವಕಪ್ ನಲ್ಲಿ ಭಾರತ ಹಾಗೂ ಜಿಂಬಾಬ್ವೆ ನಡುವಣ ಪಂದ್ಯ ಮೆಲ್ಬರ್ನ್ ನಲ್ಲಿ ನ. 6 ರಂದು ನಡೆಯಲಿದೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಪಾಕಿಸ್ತಾನ ಮೂಲದ ನಟಿ ಸೆಹರ್ ಶಿನ್ವಾರಿ, ಭಾರತದ ವಿರುದ್ದ ಜಿಂಬಾಬ್ವೆ ಗೆದ್ದರೆ ಆ ದೇಶದ ಯುವಕನ್ನು ಮದುವೆಯಾಗುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:  ಟ್ವಿಟರ್ ನಲ್ಲಿ ತಾಂತ್ರಿಕ ದೋಷ: ಬಳಕೆದಾರರಿಗೆ ತೊಂದರೆ

ಕೆಲವು ದಿನಗಳ ಹಿಂದೆ ಪಾಕಿಸ್ತಾನ ವಿರುದ್ದ ಭಾರತ ಗೆದ್ದರೆ ತಮ್ಮ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದಾಗಿ ಟ್ವೀಟ್  ಮಾಡಿದ್ದರು. ಬಳಿಕ ಭಾರತ ಪಾಕಿಸ್ತಾನ ವಿರುದ್ದ ರೋಚಕ ಗೆಲುವು ಸಾಧಿಸಿತ್ತು. ಆದರೆ ಸೆಹರ್ ತಮ್ಮ ಮಾತಿನಂತೆ ನಡೆದುಕೊಂಡಿರಲಿಲ್ಲ.

ಈ ಕುರಿತು ಕ್ರಿಕೆಟ್ ಅಭಿಮಾನಿಗಳು ಟ್ರೋಲ್ ಮಾಡಿದ್ದು, ಪಾಕಿಸ್ತಾನ ವಿರುದ್ದ ಭಾರತ ರೋಚಕ ಗೆಲುವು ದಾಖಲಿಸಿತ್ತು. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈಗ ಮದುವೆ ವಿಚಾರದಲ್ಲೂ ಹೀಗಾಗಲಿದೆ ಎಂದು ಟ್ರೋಲ್ ಮಾಡಿದ್ದಾರೆ.

suddiyaana