ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ದಾಳಿ – ಕಾರವಾರ ಕದಂಬ ನೌಕಾ ನೆಲೆಯಲ್ಲಿ ಯುದ್ಧಕ್ಕೆ ಸಜ್ಜಾಗುತ್ತಿರುವ ನೌಕೆಗಳು

ಪಹಲ್ಗಾಮ್ ದಾಳಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಅಮಾಯಕರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕರನ್ನು ಸೆದೆ ಬಡೆಯಲು ಭಾರತ ತುದಿಗಾಗಲಲ್ಲಿ ನಿಂತಿದೆ. ಭಯೋತ್ಪಾದಕರನ್ನು ಬೆಂಬಲಿಸ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಈಗಾಗಲೇ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ಹತ್ಯೆ ಬೆನ್ನಲ್ಲೇ ಕೇಂದ್ರ ಸರ್ಕಾರ ಮಿಲಿಟರಿ ಆಪರೇಷನ್‌ಗೆ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ:RCB Vs DC.. ರಿವೇಂಜ್ ಟಾಸ್ಕ್.. ಗೆದ್ರೆ ನಾವೇ ಟೇಬಲ್ ಟಾಪರ್ಸ್ – ಬಲಿಷ್ಠ ತಂಡಗಳಲ್ಲಿ ಯಾರಿಗೆ ಪ್ಲಸ್?
ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಹೈಯಸ್ಟ್ ಸ್ಟೇಟ್ ಆಫ್ ರೆಡಿನಸ್ ಅಲರ್ಟ್ (ರೆಡ್ ಅಲರ್ಟ್) ನೀಡಲಾಗಿದ್ದು, ನೌಕಾ ನೆಲೆ ಸಿಬ್ಬಂದಿಗಳಿಗೆ ರಜೆಯನ್ನು ಮೊಟಕುಗೊಳಿಸಲಾಗಿದೆ. ಯುದ್ಧ ಹಡಗುಗಳು ಹಾಗೂ ಸಬ್ ಮೆರಿನ್‌ಗಳು ಪಾಕಿಸ್ತಾನದ ಗಡಿಗೆ ತೆರಳಲು ಸಿದ್ಧವಾಗಿವೆ. ಕಾರವಾರ ನೌಕಾ ನೆಲೆಯಲ್ಲಿ ಐಎನ್‌ಎಸ್ ವಿಕ್ರಾಂತ್ ಹಾಗೂ ಐಎನ್‌ಎಸ್ ವಿಶಾಕ ಪಟ್ಟಣಮ್ ಸಬ್ ಮೆರಿನ್‌ಗಳಾದ ಕಾಂಡೇರಿ, ಕರಂಜ್‌ಗಳು ಸಿದ್ಧವಾಗಿವೆ.
ಅರಬ್ಬೀ ಸಮುದ್ರದ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಡಿಗೆ ತೆರಳಲು ಸನ್ನದ್ಧವಾಗಿದ್ದು, ಫ್ಲಾಗ್ ಆಫೀಸರ್‌ಗಳ ಸೂಚನೆಗೆ ಕಾಯುತ್ತಿವೆ. ಇನ್ನು ಕಾರವಾರ ಕದಂಬ ನೌಕಾನೆಲೆಯೇ ಬೇಸ್ ಮಾಡಿಕೊಂಡಿರುವ ವಿಶ್ವದ ಅತೀ ದೊಡ್ಡ ಏರ್ ಕ್ರಾಪ್ಟ ನೌಕೆ ಎಂಬ ಹೆಸರು ಪಡೆದಿರುವ ಐಎನ್‌ಎಸ್ ವಿಕ್ರಮಾದಿತ್ಯ ಹಡಗು ಕೊಚ್ಚಿಯ ರಿಪೇರಿ ಯಾರ್ಡ್‌ನಲ್ಲಿದ್ದು ಯದ್ಧಕ್ಕೆ ತೆರಳಲು ಸಿದ್ಧಪಡಿಸಲಾಗುತ್ತಿದೆ. ಮೇ ಮೊದಲ ವಾರದಲ್ಲಿ ಅರಬ್ಬೀ ಸಮುದ್ರದ ಗಡಿಗೆ ತೆರಳಲಿದೆ.
ಸದ್ಯ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಐಎನ್‌ಎಸ್ ಸುಭದ್ರ, ಐಎನ್‌ಎಸ್ ಜ್ಯೋತಿ, ಐಎನ್‌ಎಸ್ ವಿಶಾಕಪಟ್ಟಣಂ, ಸಬ್ ಮೆರಿನ್‌ಗಳಾದ ಕಾಂಡೇರಿ, ಕರಂಜ್‌ಗಳು ಅರಬ್ಬೀ ಸಮುದ್ರದ ಪಂಜಾಬ್ ಪ್ರಾಂತ್ಯದ ಗಡಿ ಭಾಗಕ್ಕೆ ತೆರಳಲು ಅಣಿಯಾಗಿದೆ.