ಪದ್ಮಜಾ ರಾವ್ ಗೆ 3 ತಿಂಗಳು ಜೈಲು! – ಕುಸುಮಾ ಪಾತ್ರಕ್ಕೆ ಗುಡ್‌ಬೈ?
ಭಾಗ್ಯಲಕ್ಷ್ಮೀ ಸೀರಿಯಲ್ ಕತೆ ಏನು?
ಭಾಗ್ಯಲಕ್ಷ್ಮೀ ಸಿರಿಯಲ್ ಖ್ಯಾತಿಯ ಪದ್ಮಜಾ ರಾವ್ ಯಾರಿಗೆ ಗೊತ್ತಿಲ್ಲ ಹೇಳಿ.. ಕುಸುಮಾ ಅಂತಾನೇ ಮನೆ ಮಾತಾಗಿದ್ದಾರೆ.. ಮಾತೆತ್ತಿದ್ರೆ ಈ ಕುಸುಮಾ ಅಂದ್ರೆ ಏನು ಅಂತಾ ಅಂದ್ಕೊಂಡಿದ್ದೀರಾ? ಭಾಗ್ಯ ನನ್ನ ಸೊಸೆ.. ಅನ್ನೋ ಡೈಲಾಗ್ ವೀಕ್ಷಕರ ದಿಲ್ ಕದ್ದಿದೆ.. ಅತ್ತೆ ಅಂದ್ರೆ ಕುಸುಮಾ ತರ ಇರ್ಬೇಕು.. ಕುಸುಮಾ ತರ ಇರೋ ಅತ್ತೆಯೇ ನಮಗೆ ಸಿಗ್ಲಿ ಅಂತಾ ಅದೆಷ್ಟೋ ಯುವತಿಯರು ಹೇಳ್ತಾ ಇದ್ರು.. ಸೀರಿಯಲ್‌ನಲ್ಲಿ ಒಳ್ಳೆ ಅತ್ತೆಯಾಗಿ ಗುರುತಿಸಿಕೊಂಡಿದ್ದ ನಟಿ ಪದ್ಮಜಾ ರಾವ್ ಗೆ ರಿಯಲ್ ಲೈಫ್ ನಲ್ಲಿ ವಂಚಕಿ ಅನ್ನೋ ಪಟ್ಟ ಸಿಕ್ಕಿದೆ. ಇದೀಗ ಕೇಸ್‌ವೊಂದ್ರಲ್ಲಿ ಜೈಲು ಸೇರೋ ಪರಿಸ್ಥಿತಿ ಎದುರಾಗಿದೆ.. ಹೌದು, ಕುಸುಮಾ ಅಲಿಯಾಸ್ ಪದ್ಮಜಾ ರಾವ್ ಗೆ ಕೋರ್ಟ್ ಶಿಕ್ಷೆ ನೀಡಿದೆ. ಈ ಬೆನ್ನಲ್ಲೇ ಪದ್ಮಜಾ ರಾವ್ ಜೈಲು ಸೇರಿದ್ರೆ, ಸೀರಿಯಲ್ ಕತೆ ಏನು ಅಂತಾ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಪದ್ಮಜಾ ರಾವ್‌ಗೆ ಕೋರ್ಟ್ ಶಿಕ್ಷೆ ನೀಡಿದ್ದು ಯಾಕೆ? ಏನು ಕೇಸ್? ಸೀರಿಯಲ್ ಗೆ ಪದ್ಮಾಜಾ ರಾವ್ ಗುಡ್ ಬೈ ಹೇಳ್ತಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಲಕ್ಷ್ಮೀ ಮೈಯಲ್ಲಿ ಕೀರ್ತಿ ಆತ್ಮ.. ಶ್ರೇಷ್ಠಾ ಮೇಲೂ ದೆವ್ವ ಬಂತಾ? – ಎರಡು ಸೀರಿಯಲ್.. ಭಯಾನಕ ಟ್ವಿಸ್ಟ್!!
ಅತ್ತೆ ಅಂದ ಕೂಡಲೆ ಎಲ್ಲರಲ್ಲೂ ಥಟ್ ಅಂತ ನೆನಪಾಗೋದೇ ಘಟವಾಣಿ ಅತ್ತೆ ಕ್ಯಾರೆಕ್ಟರ್. ಹಲವಾರು ಧಾರಾವಾಹಿಗಳಲ್ಲಿ ಅತ್ತೆಯರನ್ನ ಬಿಂಬಿಸಿರೋದೇ ನೆಗೆಟಿವ್ ಆಗಿ. ಆದ್ರೆ, ‘ಭಾಗ್ಯಲಕ್ಷ್ಮೀ’ ಸೀರಿಯಲ್‌ನಲ್ಲಿ ಸೊಸೆ ಭಾಗ್ಯ ಪಾಲಿಗೆ ಅತ್ತೆ ಕುಸುಮ ದೇವರು ಇದ್ದ ಹಾಗೆ. ಭಾಗ್ಯಗೆ ಸದಾ ಒಳ್ಳೆಯದ್ದನ್ನೇ ಬಯಸುವ ಅತ್ತೆ ಕುಸುಮಾ. ಸೀರಿಯಲ್‌ನಲ್ಲಿ ಈ ಪಾತ್ರಕ್ಕೆ ಸಿಕ್ಕಾಪಟ್ಟೆ ವೈಟೇಜ್ ಇತ್ತು. ಭಾಗ್ಯಗಿಂತಲೂ ಕುಸುಮಾ ಪಾತ್ರ ಸಿಕ್ಕಾಪಟ್ಟೆ ಹೈಲೈಟ್ ಆಗಿತ್ತು.. ಇದ್ರೆ ಇಂಥ ಅತ್ತೆ ಇರ್ಬೇಕು ಅನ್ನೋ ತರ ಎಲ್ಲರಿಗೂ ಮಾದರಿಯಾಗಿತ್ತು ಈ ಪಾತ್ರ.. ಸೀರಿಯಲ್‌ನಲ್ಲಿ ಅತ್ತೆ ಪಾತ್ರದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದ ನಟಿ ಪದ್ಮಜಾ ರಾವ್ ರಿಯಲ್‌ಲೈಫ್ ನಲ್ಲಿ ವಂಚನೆ ಎಸಗಿದ್ದಾರೆ ಅನ್ನೋ ಆರೋಪ ಹೊತ್ತಿದ್ದಾರೆ.
ನಟಿ ಪದ್ಮಜಾ ರಾವ್ ಪ್ರಕರಣವೊಂದ್ರಲ್ಲಿ ಸಿಲುಕಿಕೊಂಡಿದ್ದು, ಇದೀಗ ಕೋರ್ಟ್ ಶಿಕ್ಷೆ ವಿಧಿಸಿದೆ. ನಾಲ್ಕು ವರ್ಷಗಳ ಹಿಂದೆ ಹಣ ವಂಚನೆ ಆರೋಪದಲ್ಲಿ ನಟಿ ಪದ್ಮಜಾ ರಾವ್ ಅವರ ಹೆಸರು ಕೇಳಿ ಬಂದಿತ್ತು. ಈಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ. 40 ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಮಾಡಿ ವಂಚಿಸಿದ ಪ್ರಕರಣದಲ್ಲಿ ನಟಿ ಪದ್ಮಜಾ ರಾವ್ ದೋಷಿ ಎಂದು ತೀರ್ಪು ನೀಡಿರುವ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ?
2022 ರಲ್ಲಿ ಪದ್ಮಜಾ ರಾವ್, ತುಳು ಸಿನಿಮಾ ನಿರ್ದೇಶಕ ಮತ್ತು ನಟ ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ನಿರ್ಮಾಣ ಸಂಸ್ಥೆಯಿಂದ ಹಂತ ಹಂತವಾಗಿ 40 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ರು.. ಕೆಲ ಸಮಯದ ನಂತ್ರ ಕೊಟ್ಟ ಹಣವನ್ನ ಈ ಸಂಸ್ಥೆ ವಾಪಾಸ್ ಕೇಳಿದೆ.. ಆದ್ರೆ ಎಷ್ಟು ಬಾರಿ ಕೇಳಿದ್ರು, ಹಣವನ್ನ ವಂಚಿಸ್ತಾ ಬಂದಿದ್ರು.. ಕೊನೆಗೂ ಒತ್ತಡಕ್ಕೆ ಮಣಿದು ಪದ್ಮಜಾ ರಾವ್ ವೀರೂ ಟಾಕೀಸ್ ಹೆಸರಲ್ಲಿ ತನ್ನ ಬ್ಯಾಂಕ್ ಖಾತೆ ಚೆಕ್ ನೀಡಿದ್ದರು. ಆದರೆ ಖಾತೆಯಲ್ಲಿ ದುಡ್ಡಿರ್ಲಿಲ್ಲ.. ಹೀಗಾಗಿ ಆ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ ವೀರೇಂದ್ರ ಶೆಟ್ಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ JMFC 8ನೇ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ರು.. ಆದರೆ ಕೋರ್ಟ್ ಎಷ್ಟು ಸಮನ್ಸ್ ಕಳಿಸಿದರೂ ಕೂಡ, ಪದ್ಮಜಾ ರಾವ್ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿರಲೇ ಇಲ್ಲ.
ಬೇರೆ ದಾರಿ ಕಾಣದ ನ್ಯಾಯಾಲಯ ಪದ್ಮಜಾ ರಾವ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿ ಆಕೆಯನ್ನು ಬಂಧಿಸಿ ತರುವಂತೆ ಬೆಂಗಳೂರಿನ ತಲಘಟ್ಟಪುರ ಪೊಲೀಸರಿಗೆ ಆದೇಶ ನೀಡಿತ್ತು. ಆದರೆ ಪೊಲೀಸರು ಆಕೆಯನ್ನು ಬಂಧಿಸಲು ವಾಜರಹಳ್ಳಿಯ ಮನೆಗೆ ತಲುಪುವಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದ ಪದ್ಮಜಾ ರಾವ್ ಮರುದಿನ ಬೆಳಗ್ಗೆ ಮಂಗಳೂರು ನ್ಯಾಯಾಲದಲ್ಲಿ ಶರಣಾಗಿದ್ದರು. ವಿಚಾರಣೆಗೆ ಹಾಜರಾಗಿ ಆಕೆ ಬೇರೆಯದೇ ರೀತಿಯ ಹೇಳಿಕೆ ನೀಡಿದ್ದರು. ನಾನು ಸಾಲವನ್ನೇ ಪಡೆದಿಲ್ಲ ಎಂದಿದ್ದ ಅವರು, ಚೆಕ್ ನೀಡಿದ ವಿಚಾರವನ್ನೂ ಅಲ್ಲಗಳೆದಿದ್ದರು. ಜೊತೆಗೆ ನನ್ನ ಚೆಕ್ನ ಕದ್ದು ಸಹಿ ನಕಲು ಮಾಡಿದ ಆರೋಪವನ್ನು ಪದ್ಮಜಾ ರಾವ್ ಮಾಡಿದ್ದರು. ಅಲ್ಲಿಂದ ಜಾಮೀನು ಪಡೆದ ಬಳಿಕ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿತ್ತು.
ಇಷ್ಟೆಲ್ಲಾ ಆರೋಪ ಮಾಡಿದ ಪದ್ಮಜಾ ರಾವ್ ಇದಕ್ಕೆ ಸಂಬಂಧಿಸಿದಂತೆ ಕೊರ್ಟ್ನಲ್ಲಿ ಸಾಕ್ಷಿಗಳನ್ನು ಒದಗಿಸುವಲ್ಲಿ ಫೇಲ್ ಆಗಿದ್ದಾರೆ. ಇದೀಗ 4 ವರ್ಷಗಳ ಹಿಂದಿನ ಪ್ರಕರಣದ ತೀರ್ಪು ಹೊರಬಿದ್ದಿದೆ.. ಈ ಪ್ರಕರಣದಲ್ಲಿ ಪದ್ಮಜಾ ರಾವ್ ಅಪರಾಧಿ ಅಂತಾ ಕೋರ್ಟ್ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೇ 40 ಲಕ್ಷದ 17 ಸಾವಿರ ರೂಪಾಯಿಗಳನ್ನು ದೂರುದಾರ ವೀರೇಂದ್ರ ಶೆಟ್ಟಿಯವರಿಗೆ ಹಾಗೂ 3 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶ ನೀಡಿದೆ. ಇದೀಗ ನಟಿ ಪದ್ಮಜಾ ರಾವ್ ಒಟ್ಟು 40 ಲಕ್ಷದ 20 ಸಾವಿರ ರೂಪಾಯಿಯನ್ನು ಪಾವತಿಸಬೇಕು. ಒಂದು ವೇಳೆ ಪದ್ಮಜಾ ರಾವ್ ಈ ಹಣವನ್ನು ಪಾವತಿಸದಿದ್ರೆ, ಮೂರು ತಿಂಗಳ ಜೈಲು ಶಿಕ್ಷೆಯನ್ನು ಕೂಡ ಕೋರ್ಟ್ ವಿಧಿಸಿದೆ.
ನಟಿ ಪದ್ಮಜಾ ರಾವ್ ಸ್ಯಾಂಡಲ್ ವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಹಿಟ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಸೀರಿಯಲ್ ನಲ್ಲೂ ಕೂಡ ನಟಿಸಿದ್ದಾರೆ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಭಾಗ್ಯ ಲಕ್ಷ್ಮೀ ಸೀರಿಯಲ್‌ನಲ್ಲಿ ಕುಸುಮಾ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಭಾಗ್ಯ ಪಾತ್ರಕ್ಕಿಂತಲೂ ಕುಸುಮಾ ಪಾತ್ರ ಹೆಚ್ಚು ಹೈಲೈಟ್ ಆಗಿದೆ. ಇದೀಗ ನಟಿಗೆ ಜೈಲಿಗೆ ಹೋಗುವ ಸಂದರ್ಭ ಎದುರಾಗಿದೆ. ಒಂದು ವೇಳೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಪದ್ಮಜಾ ರಾವ್ ಜೈಲು ಪಾಲಾದರೆ ಅವರ ನಟನೆಯ ಪ್ರಾಜೆಕ್ಟ್‌ಗಳ ಕಥೆಯೇನು? ನಿರ್ದೇಶಕರು ಸೀರಿಯಲ್‌ನಲ್ಲಿ ಟ್ವಿಸ್ಟ್ ಕೊಟ್ಟು ಕುಸುಮಾ ಪಾತ್ರವನ್ನು ಎಂಡ್ ಮಾಡ್ಬೋದಾ? ಅಥವಾ ಹೊಸ ನಟಿಯನ್ನ ಆಯ್ಕೆ ಮಾಡ್ಬೋದಾ ಅನ್ನೋದು ಸದ್ಯಕ್ಕೆ ಅನೇಕರಿಗೆ ಕಾಡುತ್ತಿರುವ ಪ್ರಶ್ನೆ.