ಕರ್ನಾಟಕ ಟೀಂಗೆ KL ಕಂ ಬ್ಯಾಕ್ – ದೇವದತ್ ಪಡಿಕ್ಕಲ್ ಗೆ ಕ್ಯಾಪ್ಟನ್ಸಿ
ಪಂಜಾಬ್ ವಿರುದ್ಧ ಹೇಗಿದೆ ರಣಜಿ ಟೀಂ?

ಕರ್ನಾಟಕ ಟೀಂಗೆ KL ಕಂ ಬ್ಯಾಕ್ – ದೇವದತ್ ಪಡಿಕ್ಕಲ್ ಗೆ ಕ್ಯಾಪ್ಟನ್ಸಿಪಂಜಾಬ್ ವಿರುದ್ಧ ಹೇಗಿದೆ ರಣಜಿ ಟೀಂ?

ರೆಡ್ ಬಾಲ್ ಫಾರ್ಮೆಟ್​ನಲ್ಲಿ ದೇಶೀಯ ಪ್ರತಿಷ್ಠಿತ ಟೂರ್ನಿಯಾಗಿರೋ ರಣಜಿ ಟೂರ್ನಿಯ ಮುಂದಿನ ಪಂದ್ಯಕ್ಕೂ ಮುನ್ನ ಕರ್ನಾಟಕ ತಂಡ ಅನೌನ್ಸ್ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಕ್ಯಾಪ್ಟನ್ ಚೇಂಜ್ ಆಗಿದ್ರೆ ಕೆಎಲ್ ರಾಹುಲ್ ಕಂ ಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ : ಡೈರೆಕ್ಟ್ ಫೈನಲ್ ಟಿಕೆಟ್ ಮಿಸ್ – ಗೆಲುವಿನ ಟ್ರ್ಯಾಕ್ ತಪ್ಪಿದ್ದೆಲ್ಲಿ?

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಂಜಾಬ್ ವಿರುದ್ಧದ 2025-26ರ ರಣಜಿ ಟ್ರೋಫಿಯ ಗ್ರೂಪ್ ಸ್ಟೇಜ್​ನ ಕೊನೇ ಪಂದ್ಯಕ್ಕೆ ಟೀಂ ಅನೌನ್ಸ್ ಮಾಡಿದೆ. ಈ ತಂಡದಲ್ಲಿ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಕಂ ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗೆ ಕರ್ನಾಟಕ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸಿದ್ದರು. ಆದರೆ ಈ ಸೀಸನ್​ನಲ್ಲಿ ಯಾವುದೇ ರೆಡ್-ಬಾಲ್ ಪಂದ್ಯಗಳನ್ನು ಆಡಿಲ್ಲ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ನಂತರ ರಾಹುಲ್ ಮತ್ತು ಪ್ರಸಿದ್ಧ್ ಹೆಚ್ಚುವರಿ ವಿಶ್ರಾಂತಿ ಕೇಳಿದ್ರು. ಹೀಗಾಗಿ ಮಧ್ಯಪ್ರದೇಶ ವಿರುದ್ಧದ ಕರ್ನಾಟಕದ ಕೊನೆಯ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ರು. ಬ್ಯಾಡ್​ಲಕ್ ಅಂದ್ರೆ ಈ ಪಂದ್ಯವನ್ನು ಕರ್ನಾಟಕ 217 ರನ್‌ಗಳಿಂದ ಸೋತಿತ್ತು. ಈಗ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಇಬ್ಬರೂ ತಂಡವನ್ನ ಸೇರಿಕೊಂಡಿದ್ದಾರೆ. ಌಂಡ್ ಕ್ಯಾಪ್ಟನ್ಸಿಯೂ ಬದಲಾವಣೆ ಮಾಡ್ಲಾಗಿದೆ.

ಮಯಾಂಕ್ ಬದಲಿಗೆ ಪಡಿಕ್ಕಲ್ ಗೆ ಒಲಿದ ನಾಯಕತ್ವ!

ಇನ್ನು ಪಂಜಾಬ್ ವಿರುದ್ಧದ ಪಂದ್ಯಕ್ಕೆ ಮಯಾಂಕ್ ಅಗರ್ವಾಲ್ ಬದಲಿಗೆ ದೇವದತ್ ಪಡಿಕ್ಕಲ್ ನಾಯಕನಾಗಿ ನೇಮಕಗೊಂಡಿದ್ದಾರೆ. ಜನವರಿ 29 ರಿಂದ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಪಡಿಕ್ಕಲ್ ತಂಡವನ್ನ ಲೀಡ್ ಮಾಡ್ತಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಋತುವಿನಲ್ಲಿ ಅಗರ್ವಾಲ್ ಅವ್ರ ಬ್ಯಾಟಿಂಗ್ ಸರಾಸರಿ 33.11 ರಷ್ಟಿದ್ದರೆ, ಪಡಿಕ್ಕಲ್ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ 90.62 ರ ಸರಾಸರಿಯಲ್ಲಿ 725 ರನ್ ಗಳಿಸಿದ್ದಾರೆ. ಪಡಿಕ್ಕಲ್ ಅವರು ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಕೇವಲ 2 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರು ತಮ್ಮ ಕೆಂಪು ಚೆಂಡಿನ ನಾಯಕತ್ವಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇನ್ನು ಪಡಿಕ್ಕಲ್ 2023 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕವನ್ನು ಈ ಹಿಂದೆ ಒಂದು ಪಂದ್ಯದಲ್ಲಿ ಮುನ್ನಡೆಸಿದ್ದಾರೆ.

ಗಾಯದ ಸಮಸ್ಯೆಯಿಂದ ಕರುಣ್ ನಾಯರ್ ಔಟ್

ಇನ್ನು ಇಂಜುರಿ ಕಾರಣದಿಂದ ಕರುಣ್ ನಾಯರ್ ರನ್ನ ತಂಡದಿಂದ ಕೈಬಿಡಲಾಗಿದೆ. ಮಧ್ಯಪ್ರದೇಶ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡದ ಕರುಣ್ ನಾಯರ್ ಅವರನ್ನು ಪಂಜಾಬ್ ಪಂದ್ಯದಿಂದ ಹೊರಗಿಡಲಾಗಿದೆ. ಅನುಭವಿ ಬ್ಯಾಟ್ಸ್‌ಮನ್ ಗಾಯಗೊಂಡಿದ್ದರು. ಹಾಗೇ ಮಧ್ಯಪ್ರದೇಶ ವಿರುದ್ಧ 14 ಮತ್ತು 6 ರನ್ ಗಳಿಸಿದ್ದ ಅಭಿನವ್ ಮನೋಹರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಕರ್ನಾಟಕ ತಂಡವು ಗ್ರೂಪ್ ಬಿ ಪಾಯಿಂಟ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ತಂಡಗಳು ಮುಂದಿದ್ದು, ಸೌರಾಷ್ಟ್ರ ತಂಡಗಳು ಎರಡನೇ ಸ್ಥಾನದಲ್ಲಿರುವುದರಿಂದ, ಕೊನೆಯ ಗುಂಪು ಹಂತದ ಪಂದ್ಯವು ಕರ್ನಾಟಕಕ್ಕೆ ಗೇಮ್ ಡಿಸೈಡರ್ ಆಗಲಿದೆ. ಇನ್ನು ಕರ್ನಾಟಕ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಅನ್ನೋದನ್ನ ನೋಡೋದಾದ್ರೆ ಮಯಾಂಕ್ ಅಗರವಾಲ್, ಕೆಎಲ್ ರಾಹುಲ್, ಅನೀಶ್ ಕೆವಿ, ದೇವದತ್ತ್ ಪಡಿಕ್ಕಲ್, ಸ್ಮರಣ್ ಆರ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವೆಂಕಟೇಶ್ ಎಂ, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಎಂ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಶ್ರೀಜಿತ್ ಕೆಎಲ್, ಧ್ರುವ್ ಪ್ರಭಾಕರ್ ಸ್ಥಾನ ಪಡೆದಿದ್ದಾರೆ. ಸದ್ಯ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕಂ ಬ್ಯಾಕ್ ನಿಂದ ತಂಡದ ಸ್ಟ್ರೆಂಥ್ ಹೆಚ್ಚಾಗಿದೆ.

Shantha Kumari