2 ಪಂದ್ಯ.. 2 ಶತಕ – ನಂ.3ಗೆ ನಾನಿದ್ದೇನೆಂದ DDP
ಲಂಕೆಯಲ್ಲಿ ಪಡಿಕ್ಕಲ್ ಪರಾಕ್ರಮ

ಕೊಲಂಬೊದಲ್ಲಿ ನಡೆಯುತ್ತಿರೋ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಪಂದ್ಯದಲ್ಲೂ ಕನ್ನಡಿಗ ದೇವದತ್ ಪಡಿಕ್ಕಲ್ ಸೂಪರ್ ಡೂಪರ್ ಪ್ರದರ್ಶನ ನೀಡಿದ್ರು. ಸತತ ಎರಡನೇ ಪಂದ್ಯದಲ್ಲೂ ಶತಕ ಬಾರಿಸಿದ್ದಾರೆ. ಡಿಡಿಪಿಯ ಇದೇ ಪ್ರದರ್ಶನ ಟೀಂ ಮ್ಯಾನೇಜ್ಮೆಂಟ್ನಲ್ಲಿ ಹೊಸ ಚರ್ಚೆ ಹುಟ್ಟಿಸಿದೆ.
ಇದನ್ನೂ ಓದಿ : ಬೌಲರ್‌ಗೆ ಹೆಲ್ಮೆಟ್‌ನಲ್ಲಿ ಗುದ್ದಿದ ಜೈಸ್ವಾಲ್‌ಗೆ ಶಿಕ್ಷೆ ಏನು? – ಯಶಸ್ವಿ ವೃತ್ತಿಜೀವನಕ್ಕೆ ಸಂಕಷ್ಟ..?
ಶ್ರೀಲಂಕಾ ನೆಲದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಅಬ್ಬರ ಕಂಟಿನ್ಯೂ ಆಗಿದೆ. ಗಾಲೆ ಟೆಸ್ಟ್‌ನಲ್ಲಿ 167 ರನ್ ಸಿಡಿಸಿ ಪಂದ್ಯಶ್ರೇಷ್ಠರಾಗಿದ್ದ ಪಡಿಕ್ಕಲ್, ಕೊಲಂಬೊ ಟೆಸ್ಟ್‌ನಲ್ಲೂ ಮೊದಲ ಇನ್ನಿಂಗ್ಸ್ ನಲ್ಲೇ ಶತಕ ಸಿಡಿಸಿ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೆಂಚುರಿ ಬಾರಿಸಿದ್ದಾರೆ. ಟೀಂ ಇಂಡಿಯಾದ ನಂಬರ್-3 ಸ್ಥಾನಕ್ಕೆ ತಾನೇ ರೈಟ್ ಪರ್ಸನ್ ಎಂಬ ಸಂದೇಶವನ್ನೂ ನೀಡಿದ್ದಾರೆ.
ನಂಬರ್ 3 ಗೆ ಪರ್ಫೆಕ್ಟ್ ಪ್ಲೇಯರ್ ಪಡಿಕ್ಕಲ್!
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಕನ್ನಡಿಗ ದೇವದತ್ತ ಪಡಿಕ್ಕಲ್ ಪಾಲಿಗೆ ಬರೀ ಸರಣಿಯಲ್ಲ.. ತನ್ನೊಳಗಿನ ಸಾಮರ್ಥ್ಯವನ್ನ ಸಾಬೀತುಪಡಿಸೋಕೆ ಸಿಕ್ಕ ಪ್ಲಾಟ್ ಫಾರಂ. ಗಾಲೆಯಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 167 ರನ್‌ಗಳ ಭರ್ಜರಿ ಇನ್ನಿಂಗ್ಸ್ ಅಡಿದ್ದ ಪಡಿಕ್ಕಲ್ ಈಗ ಕೊಲಂಬೊದಲ್ಲೂ ಸೆಂಚುರಿ ಸಿಡಿಸಿದ್ದಾರೆ. ಆರಂಭದಲ್ಲೇ ಎರಡು ಬಾರಿ ಕ್ಯಾಚ್ ಕೈಚೆಲ್ಲಿದ ಶ್ರೀಲಂಕಾ ಫೀಲ್ಡರ್‌ಗಳು ಆಮೇಲೆ ದುಬಾರಿ ಬೆಲೆ ತೆರ ಬೇಕಾಯ್ತು. ಆದ್ರೆ ಆ ಅವಕಾಶವನ್ನು ಪಡಿಕ್ಕಲ್ ಮಾತ್ರ ಕೈಚೆಲ್ಲಲಿಲ್ಲ. ಕೂಲ್ ಅಂಡ್ ಕಾಂ ಆಗಿಯೇ ಬ್ಯಾಟಿಂಗ್ ಮಾಡಿದ ಎಡಗೈ ಬ್ಯಾಟರ್ ಪಡಿಕ್ಕಲ್ ಶ್ರೀಲಂಕಾದ ಬೌಲರ್‌ಗಳನ್ನ ಚಾರ್ಜ್ ಮಾಡಿದ್ರು. 168 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 117 ರನ್ ಬಾರಿಸಿದ್ರು. ಕೊನೆಗೆ ಕೇಶರ ನುವಾಂತ ಅವರ ಬೌಲಿಂಗ್‌ನಲ್ಲಿ ಬೌಲ್ಡ್ ಆದ್ರೂ, ಆಗಲೇ ಭಾರತದ ಇನ್ನಿಂಗ್ಸ್‌ಗೆ ಭದ್ರ ಬುನಾದಿ ಹಾಕಿದ್ದರು.
ಟಾಪ್ ಆರ್ಡರ್ ನಲ್ಲಿ ಪಡಿಕ್ಕಲ್ ಶಕ್ತಿ!
ಅಷ್ಟಕ್ಕೂ ಇಲ್ಲಿ ಪಡಿಕ್ಕಲ್ ಪರ್ಫಾಮೆನ್ಸ್ ಭಾರತದ ರನ್ ಸುನಾಮಿಗೆ ಭದ್ರಬುನಾದಿ ಹಾಕ್ತಿದೆ. ಒಂದ್ಕಡೆ ಓಪನರ್ ಗಳಾದ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಬೇಗನೇ ಪೆವಿಲಿಯನ್‌ಗೆ ಸೇರಿದ್ರೂ ಇನ್ನೊಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಪಡಿಕ್ಕಲ್ ಮಾತ್ರ ಕ್ರೀಸ್ ಕಚ್ಚಿ ನಿಂತು ಇನ್ನಿಂಗ್ಸ್ ಆಡಿದ್ರು.. ಶುಭಮನ್ ಗಿಲ್ ಜೊತೆ ಒಳ್ಳೆ ಪಾಟ್ನರ್ಶಿಪ್ ಬಳಿಕ ರಿಷಭ್ ಪಂತ್ ಜೊತೆಗೂ ತಂಡದ ಮೊತ್ತವನ್ನು ಹೆಚ್ಚಿಸಿದರು. ಪಡಿಕ್ಕಲ್ ಔಟಾಗುವ ವೇಳೆಗೆ ಭಾರತ 281 ರನ್ ಗಳಿಸಿತ್ತು. ಇದೇ ಕಾರಣಕ್ಕೆ ಮೊದಲ ದಿನದಾಟದಲ್ಲಿ ಭಾರತ ಒಳ್ಳೆ ರನ್ಸ್ ಕಲೆ ಹಾಕೋಕೆ ಪಡಿಕ್ಕಲ್ ಅವ್ರ ಬ್ಯಾಟಿಂಗೇ ಮುಖ್ಯವಾಗಿತ್ತು. ಸದ್ಯ ಗಾಲೆಯಲ್ಲಿ 167, ಕೊಲಂಬೊದಲ್ಲಿ 117 ರನ್ ಗಳಿಸಿರೋ ಪಡಿಕ್ಕಲ್ ಎರಡು ಟೆಸ್ಟ್ ಪಂದ್ಯ ಗಳಲ್ಲಿ ಎರಡು ಶತಕ ಬಂದಿದೆ. ನಂಬರ್-3 ಸ್ಥಾನಕ್ಕೆ ಯಾರು ಬೆಸ್ಟ್ ಬ್ಯಾಟರ್ ಆಗ್ತಾರೆ ಅಂತಾ ಉತ್ತರ ಹುಡುಕುತ್ತಿದ್ದ ಟೀಂ ಇಂಡಿಯಾಗೆ ನಾನಿದ್ದೇನೆ ಅಂತ ಬ್ಯಾಟ್‌ನಲ್ಲೇ ಉತ್ತರ ಕೊಟ್ಟಿದ್ದಾರೆ.

ನೋಡಿರಿ

